Wednesday, December 29, 2010

ಹಾಟ್,ಫ್ಲಾಟ್ ಅಂಡ್ ಕ್ರೌಡೆಡ್" (part 1)

ನೀವು ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸುವಾಗ ಒಂದು ದೃಶ್ಯ ಗಮನಿಸಿರಬಹುದು,ಅದು ಕಡಿದಾದ ರಸ್ತೆಯಲ್ಲಿ ಕಷ್ಟಪಟ್ಟು ಸಂಚರಿಸುವ ವಾಹನಗಳು,ಪರದಾಡುವ ಪಾದಾಚಾರಿಗಳು ,ದೂಳು ಹೊಗೆಯನ್ನೇ ಉಸಿರಾಡುತ್ತಿರುವ ಮಹಾಜನತೆ. ಅವರ ಈ ಸ್ತಿತಿಗೆ ಕಾರಣ ಮೆಟ್ರೋ ಕಾಮಗಾರಿ. ಇದರ ಕೃಪೆಯಿಂದ ಅಗಲವಾದ ರಸ್ತೆಗಳು ಉಪಯೂಗವಿಲ್ಲದನ್ತಾಗಿವೆ. ಇಂದಿನ ಬೆಂಗಳೂರಿಗರಿಗೆ ಮೆಟ್ರೋ ಬೇಡವಾಗಿರಬಹುದು. ಆದರೆ ಮೆಟ್ರೋ ಸಜ್ಜಾಗುತ್ತಿರುವುದು ನಾಳಿನ ಬೆಂಗಳೂರಿಗರಿಗಾಗಿ. ಅಂದರೆ ನಾಳೆ ಇಲ್ಲಿಗೆ ಬರುವ ಸಹಸ್ತ್ರಾರು ವಲಸಿಗರಿಗೆ. ಬಿಹಾರಿನ ಬಡಗಿಗಳಿಗೆ ,ಒರಿಸ್ಸಾದ ಪೈಂಟರ್ ಗಳಿಗೆ,ಪಂಜಾಬಿನ ಕಮ್ಮಾರರಿಗೆ, ಅಂಗಡಿ ಮಾಡುವ ಮಾರವಾಡಿಗಳಿಗೆ,ಬಂಗಾರದ ಗಿರವಿ ಅಂಗಡಿ ಇಡುವ ಮಲೆಯಾಳಿಗಳಿಗೆ,ಧ್ವನಿಯಿಲ್ಲದ ಕನ್ನಡಿಗರ ಮೇಲೆ ಕರುಣೆ ತೋರಿ ಕನ್ನಡ ಚಿತ್ರಗಳಿಗೆ ಹಿನ್ನೆಲೆ ಧ್ವನಿ ನೀಡಲು ಬರುವ ಗಾಯಕರಿಗೆ,ಸುಲಭ ಶೌಚಾಲಯ ಕಾಯಲು ಬಂದು ಪಾನಿಪುರಿ ಅಂಗಡಿ ಇಡುವ ಉತ್ತರ ಪ್ರದೇಶದ ಭಯ್ಯಗಳಿಗೆ,ಬಾಂಬೆ, ದೆಹಲಿಗಳಲ್ಲಿ ಅಪರಾಧಗಳನ್ನೆಸಗಿ ಬೇoಗಲೂರಿನಲ್ಲಿ ತಲೆಮರೆಸಿಕೊಂಡಿರುವ ಕ್ರಿಮಿನಲ್ಗಳಿಗೆ,ಹೀಗೆ ಮುಂತಾದವರಿಗೆ ಸಾಕಷ್ಟು ಸ್ಸ್ಥಳಾವಕಾಶ ಮಾಡಿಕೊಡುವ ಉದ್ದೇಶದಿಂದ ಮೆಟ್ರೋ ಸಜ್ಜಾಗುತ್ತಿದೆ. ಇಂದು ಬೆಂಗಳೂರಿಗರು ಎಂದು ಕರೆಸಿಕೊಳ್ಳುತ್ತಿರುವ ಜನ ಅಂದು ದೂಳು ,ಹೊಗೆ ಕುಡಿದು ಸತ್ತೆ ಹೋಗಿರುತ್ತಾರೆ.ರಸ್ತೆಗಳನ್ನು ಅಗಲಮಾಡುವ ತರಾತುರಿಯಲ್ಲಿ. ಹೊಸ ಬಡಾವಣೆ ,ಫ್ಲಾಟ್ ಗಳನ್ನು ನಿರ್ಮಿಸುವ ಬರದಲ್ಲಿ ಹಲವಾರು ಬಡ ಬೆಂಗಳೂರಿಗರನ್ನು ಈಗಾಗಲೇ ಎತ್ತಂಗಡಿ ಮಾಡಲಾಗಿದೆ. ಬೆಂಗಳೂರಿಗರನ್ನು ಕಾಡುವ ಮುಖ್ಯ ಸಮಸ್ಯೆ ಎಂದರೆ ದೂಳು, ಹೊಗೆ ಮತ್ತು ಕಾನೂನು. ಎಷ್ಟೂ  ಜನ ಇಲ್ಲಿ ಮನೆಕಟ್ಟಿಕೊಂಡು ಆರಾಮವಾಗಿದ್ದರು. ಈಗ ಅವರು ಮನೆ ಮುಂದೆ ವಾಹನ ನಿಲ್ಲಿಸಿದರೆ ಟ್ರಾಫಿಕ್ ಪೊಲೀಸರು ಜುಲ್ಮಾನೆ ವಿಧಿಸುತ್ತಾರೆ. ಕೆಲವರ ಮನೆ ಮುಂದಿನ ರಸ್ತೆಗಳು ಒನ್ ವೇ ಆಗಿದೆ. ಆದುದರಿಂದ ಅವರು ಸ್ವಂತಮನೆಗಳಿಗೆ ಸುತ್ತಿಬಳಸಿ ಓಡಾಡಬೇಕು, ಪೆಟ್ರೋಲ್ ಉಳಿಸಬೇಕೆಂದರೆ ಕದ್ದೋಡಾಡಬೇಕು!. ನಮಗೆ ಗೊತ್ತಿಲ್ಲದಂತೆಯೇ ನಾವು ಕ್ರಮೇಣ ಅಪರಾಧಿಗಳಾಗುವ ಪ್ರಕ್ರಿಯೆಯೇ ಒಂದು ಸೋಜಿಗ. ಕೃಪೆ: ನಮ್ಮ ಸಂವಿಧಾನ!. ನಮ್ಮ ಊರುಗಳೇ ನಮಗೆ ಬಂಧನ."ತಿಲಕಾಷ್ಟ ಮಹಿಷ ಬಂಧನ" ಎಂಬಂತೆ ಇದು ಒಂಥರಾ ಬಂಧನ. ಹೇಳಿಕೊಳ್ಳಲು ಆದಾಗ ,ಬಿಡಲು ಆಗದ ವಿಚಿತ್ರ ಸ್ತಿತಿ. ಇಲ್ಲಿಗೆ ಬರುವ ವಿಭಿನ್ನ ಜನಸ್ತೋಮದ ನಿರ್ವಾಹಣೆಯ ಅನಿವಾರ್ಯತೆ ,ಹಾಗೂ ಆಡಳಿತಾತ್ಮಕ ಸಂಕೀರ್ಣತೆಗಳಿಂದಾಗಿ ಈ ನಗರವನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ತೀರ್ಮಾನ ಕೈಗೊಂಡರೂ ಅಚ್ಚರಿ ಇಲ್ಲ. ಇರಲಿ ಬಿಡಿ, ಆಡಳಿತಾತ್ಮಕ ಉದ್ದೇಶಗಳಿಗಾಗಿ ಹಾಗೂ ಜನರ ಒಳಿತಿಗಾಗಿ ಸರ್ಕಾರ ಕೈಗೊಳ್ಳುವ ಎಲ್ಲ ನಿರ್ಧಾರಗಳೂ ಸ್ವಾಗತಾರ್ಹವೇ. ಭಾಷೆ,ಬಣ್ಣ,ಜಾತಿ,ಧರ್ಮ  ..ಮುಂತಾದ ಕ್ಷುಲ್ಲಕ ಕಾರಣಗಳನ್ನು ಮುಂದೊಡ್ಡಿ ಬಹುಸಂಖ್ಯಾತರ ಇಚ್ಚೆಗೆ ವಿರುದ್ಧವಾಗಿ ಹೋಗುವುದು ತಪ್ಪು ಎಂದು ನನಗೂ ಗೊತ್ತಿದೆ. ಜನಮತದ ಮೇಲೆ ಹೋದರೆ ನಾವು ಬೆಂಗಳೂರನ್ನು ಕನ್ನಡ ಮಾತೃಭಾಷೆ ಹೊಂದಿರುವವರ ನೆಲೆಬೀಡು ಎಂದು ಪರಿಗಣಿಸುವಲ್ಲಿ ಕೆಲವು ತಾಂತ್ರಿಕ ದೋಷಗಳನ್ನು ಎದುರಿಸುತ್ತೇವೆ.ಈ ಭಾರಿ ಬೆಂಗಳೂರನ್ನು ವಿಧಾನಸಭೆಯಲ್ಲಿ ಮತ್ತು ಬಿಬಿಎಂಪಿ(ಮಹಾನಗರ ಪಾಲಿಕೆ)ಯಲ್ಲಿ ಪ್ರತಿನಿಧಿಸುವ ಚುನಾಯಿತ ಸದಸ್ಯರಲ್ಲಿ ಹೆಚ್ಚಿನವರು ಕನ್ನಡೇತರ ಮಾತೃಭಾಷೆಯವರು!. ಇರಲಿ, ಅದು ಜನಗಳ ಆಯ್ಕೆ, ಬೆಂಗಳೂರಿನ ಜನರ ಆಯ್ಕೆಯನ್ನು ಮೈಸೂರಿನಲ್ಲೋ ,ಮಂಗಳೂರಿನಲ್ಲೋ ಕುಳಿತಿರುವ ಬುದ್ಧಿಜೀವಿಗಳು ಟೀಕೆ ಮಾಡುವುದು ಅಧಿಕ ಪ್ರಸಂಗಿತನವಾಗುತ್ತದೆ. ನಾವು ಚರ್ಚಿಸುತ್ತಿರುವುದು ಜನರ ಬದುಕಿನ ಬಗ್ಗೆ, ಕೆಲವು ನಗರ ವಾಸಿಗಳು ಕಾಂಕ್ರೀಟ್ ನ ಚಕ್ರವ್ಯೂಹದಲ್ಲಿ ಬಂಧಿಯಾಗಿ ಸಾಯುತ್ತಿರುವ ಬಗ್ಗೆ. ಈ ದೇಶದ ಪ್ರಗತಿ ಕೇವಲ ಕೆಲವೇ ಊರುಗಳಲ್ಲಿ ಕೇಂದ್ರೀಕೃತವಾಗುತ್ತಾ ಅಲ್ಲಿ ಸ್ಥಳೀಯಯರು ವಿವಿಧ ರೀತಿಯ ಕಷ್ಟಗಳಿಗೀಡಾಗುವಂತಹಾ ಪ್ರಸಂಗದ ಬಗ್ಗೆ. ಈ ಬಗ್ಗೆ ಥಾಮಸ್ ಫ್ರೈಡ್ಮ್ಯಾನ್ ಎಂಬುವರು ಬರೆದಿರುವ "ಹಾಟ್,ಫ್ಲಾಟ್ ಅಂಡ್ ಕ್ರೌಡೆಡ್" ಎಂಬ ಪುಸ್ತಕ ನೆನಪಿಗೆ ಬರುತ್ತಿದೆ. ಈ ಬಗ್ಗೆ ಮುಂದಿನ ಭಾಗದಲ್ಲಿ ಬರೆಯುತ್ತೇನೆ. 

No comments: