Wednesday, December 29, 2010

ಚಿತ್ರರಂಗ ಮತ್ತು ರಾಜಕೀಯ.



ಇಂದಿನ ಟ್ರೆಂಡ್ ಎಂದರೆ "ನೀನು ಕದ್ದಿದ್ದಿಯ" ಎಂದರೆ 'ನಾನೊಬ್ಬನೇ ಕಳ್ಳನಲ್ಲ , ಅವರೆಲ್ಲ ಕದ್ದಿಲ್ಲವೇ, ಅವರನ್ನೇಕೆ ಯಾರೂ ಕೇಳುವುದಿಲ್ಲ? ಎಂದು ಸವಾಲು ಹಾಕುತ್ತಾರೆ'. ಇಂದು ಇಂದು ನಿನ್ನೆ ಶುರುವಾದ ಟ್ರೆಂಡ್ ಅಲ್ಲ. ಇಂತಹ statement ಗಳನ್ನು ಜನ ಒಪ್ಪುವಂತೆ ಮಾಡಲು ಚಿತ್ರರಂಗ ಕೂಡ ಅಹೋರಾತ್ರಿ ಪ್ರಯತ್ನ ಪಟ್ಟಿದೆ. ಹಿಂದೆ ಎಂಬತ್ತನೇ ದಶಕದಲ್ಲಿ ಬರುತಿದ್ದ ಆಕ್ಷನ್ ಕಥೆಗಳ ಚಿತ್ರಗಳು ಹಿಂಸೆಯನ್ನು ವೈಭವೀಕರಿಸುತಿತ್ತು. ಕೌಬಾಯ್ ರೀತಿಯ ಉಡುಪು ತೊಟ್ಟು ಕುದುರೆಯಲ್ಲಿ ಬಂದು ಜನರನ್ನು ದೋಚುವುದು,ಕೊಲ್ಲುವುದು ಆ ನಂತರ ದೋಚಿದ ಒಂದು ಚಿಕ್ಕ ಭಾಗವನ್ನು ಜನರಿಗೆ ಹಂಚುವುದು. "ಕದ್ದ ಪಾಪ ,ಹಂಚಿ ತಿಂದ ಪರಿಹಾರ " ಎಂಬ ವಿಷಯ ಜನರ ಮನಸ್ಸಿಗೆ ನಾಟಿ ಹೋಯಿತು. ಆ ನಂತರ ರಾಜಕಾರಣಿಗಳು ಇದನ್ನೇ ಜೀವನ ಶೈಲಿಯನ್ನಗಿಸಿಕೊಂಡರು. ಶಾಸಕರಾದ ಕೂಡಲೇ ಸರ್ಕಾರಿ ಜಮೀನನ್ನು,ಹಣವನ್ನು ಕೊಳ್ಳೆ ಹೊಡೆದು ಅದರಲ್ಲಿ ಒಂದಿಷ್ಟು ದುಡ್ಡನ್ನು ಕಲ್ಯಾಣ ಮಂಟಪ ಕಟ್ಟಿಸುವುದಕ್ಕೋ,ಊರಿನ ಜನಕ್ಕೆ ಊಟ ಹಾಕುವುದಕ್ಕೋ ,ಬಡಬಗ್ಗರಿಗೆ ಹಂಚುವುದಕ್ಕೋ ವಿನಿಯೋಗಿಸತೊಡಗಿದರು. ಹೀಗೆ ಜನರ ಪ್ರೀತಿ ಗಳಿಸಿ ನಾಯಕರು ಎನಿಸಿಕೊಂಡರು. ಆದರೆ ದೋಚುವುದು ಅವರಿಗೆ ಅಭ್ಯಾಸವಾಗಿ ಹೋಯಿತು. ಸಾರ್ವಜನಿಕರಿಗೆಂದು ಸರ್ಕಾರ ರೂಪಿಸುವ ಯೋಜನೆಗಳಲ್ಲಿ ದುಡ್ಡು ಹೊಡೆಯಲು ಆರಂಬಿಸಿದರು. ಚಿಕ್ಕಪುಟ್ಟ ವಿಷಯಗಳಲ್ಲೆಲ್ಲಾ ಕಮಿಷನ್ ಕೀಳಲಾರಮ್ಬಿಸಿದರು. ಅವರಿಗೆ ಅದು ಅನಿವಾರ್ಯ ವಾಗಿತ್ತು ಕೂಡ. ಊರಿನಲ್ಲಿ ಊರಹಬ್ಬ ಮಾಡುವವರಿಂದ ಹಿಡಿದು ಗಣಪತಿ ಕೂರಿಸುವವರವರೆಗೆ ಎಲ್ಲರಿಗೂ ಹಣ ಕೊಡಬೇಕಿತ್ತು. ಪರಿಸ್ತಿತಿ ಹೀಗೇ ಇರಬೇಕಾದರೆ ಇನ್ನು ಒಂದು ಟ್ರೆಂಡು ಆರಂಭವಾಯಿತು ಚಿತ್ರರಂಗದಲ್ಲಿ. ಈ ಬಾರಿ ಜನರನ್ನು ವಂಚಿಸುವವರನ್ನು ಹೀರೋ ಗಳೆಂದು ಬಿಂಬಿಸುವ ಟ್ರೆಂಡ್ . ಕಳ್ಳ-ಮಲ್ಲ, ಯಾರಿಗೂ ಹೇಳ್ಬೇಡಿ ...ಗೋಲ್ ಮಾಲ್ ರಾಧಾಕೃಷ್ಣ ...ಇತ್ಯಾದಿ. ಈ ಗೋಲ್ಮಾಲ್ ಸೀರಿಸ್ ಬಹುಶ ಅತ್ಯಂತ ಕೆಟ್ಟದಾಗಿತ್ತು. ಇವುಗಳ ನಾಯಕ ಅನಂತ್ ನಾಗ್ ಜನರನ್ನು ವಂಚಿಸುತಿದ್ದ ಪರಿ ನೋಡಿ ಪ್ರೇಕ್ಷಕರೆಲ್ಲರೂ ಕೇಕೆ ಹಾಕಿ ನಗುತಿದ್ದರು. ಜನರ ಮನಸ್ಸು ವಂಚಕರ ಬಗ್ಗೆ ಎಷ್ಟು insensitive ಆಯಿತು ಎಂದರೆ ವಂಚಕನೆ ಅವರ ಮನಸ್ಸಿನಲ್ಲಿ ಒಂಥರಾ ಹೀರೋ ಆದ. ಈ ಚಿತ್ರಗಳಲ್ಲೇ ನಾಯಕ ನಟ ಎಲ್ಲರಿಗೂ ಮೋಸ ಮಾಡಿ ಅದನ್ನು ಎದೆತಟ್ಟಿ ಸಮರ್ಥಿಸಿಕೊಳ್ಳುತಿದ್ದ.ಇದಕ್ಕೆ ಬೆಳ್ಳಿಪರದೆ ಸಾಲದು ಅಂತ ಕಿರುತೆರೆಯಲ್ಲಿ ಸಹ ಇಂತಹ ಕತಾಹಂದರದ ಸೀರಿಯಲ್ ಗಳು ಮೂಡಿಬರತೊಡಗಿದವು. ಫಣಿ ರಾಮಚಂದ್ರ ಎಂಬುವವನು ಎಂತೆಂತದೋ ಕೀಳು ಅಭಿರುಚಿಯ ತಲೆಚಿಟ್ಟು ಹಿಡಿಸುವ ಸೀರಿಯಲ್ ಗಳನ್ನು ಮಾಡಿ "ಹಾಸ್ಯ"ಎಂಬ ಲೆಬಲ್ನಲ್ಲಿ ಪ್ರಸಾರಮಾಡತೊಡಗಿದ. ಶಾಲಾ ವಿಧ್ಯಾರ್ಥಿಗಳನ್ನು, ದಂಪತಿಗಳನ್ನು, ನಿರುದ್ಯೋಗಿಗಳನ್ನು ,ಪ್ರೇಮಿಗಳನ್ನು ,ಅವರನ್ನು ,ಇವರನ್ನು ಒಟ್ಟಾರೆ ಕಷ್ಟದಲ್ಲಿರುವವರನ್ನು ,ಪ್ರಮಾಣಿಕರನ್ನು ಹಂಗಿಸುವುದೇ ಇದರ ಮುಖ್ಯ ಉದ್ದೇಶವಾಗಿತ್ತು. ಆ ಜನರೇಶನ್ ಇಂತಹ ಚಿತ್ರಗಳನ್ನು ನೋಡುತ್ತಲೇ ಬೆಳೆಯಿತು 18 ವಯಸ್ಸಿಗೆ ಓಟು ಹಾಕುವ ಹಕ್ಕು.ಇಂತಹವರ ಓಟಿನಿಂದ ಬರುವವರು ಹೇಗಿರುತ್ತಾರೆ ? ಎಂಬತ್ತು -ತೊಂಬತ್ತನೆಯ ದಶಕದಲ್ಲಿ ತೋಳಗಳನ್ತಿದ್ದ ರಾಜಕೀಯ ನಾಯಕರು 21 ನೆ ಶತಮಾನದಲ್ಲಿ ನರಿಗಳನ್ತಾದರು.
ಈಗ ನಮ್ಮ ಮುಖ್ಯಮಂತ್ರಿಯ ಮೇಲೆ ಬ್ರಷ್ಟಚಾರದ ಆರೋಪ ಬಂದರೆ 'ನಾನು ಮಾಡಿಲ್ಲ 'ಅಂತ ಅವನು ಹೇಳುವುದಿಲ್ಲ. ಬದಲಾಗಿ ನಾನೇನು ಯಾರೂ ಮಾಡದೆ ಇರೋದನ್ನು ಮಾಡಿಲ್ಲ ಎನ್ನುತ್ತಾನೆ!.
ಈ ಎಲ್ಲಾ ವಿದ್ಯಾಮಾನಗಳನ್ನು ನೋಡಿದರೆ ಇವು ಸಮಾಜದ ಮೇಲೆ ಚಿತ್ರರಂಗದಿಂದ ಆಗುತ್ತಿರುವ ಫಲಶ್ರುತಿ ಅಂತಲೇ ಅನ್ನಬಹುದು.

No comments: