ಇಚ್ಚೀಚೆಗೆ ದೃಶ್ಯ ಮಾಧ್ಯಮಗಳ ಸಂಖ್ಯೆಜಾಸ್ತಿಯಾಗುತ್ತಿರುವುದಿಂದಲೋ ಏನೋ ನಮಗೆ ನಾಗ ಸಾಧುಗಳು ಹೆಚ್ಚೆಚು ಕಂಡುಬರುತ್ತಿದ್ದಾರೆ. ನಿಗೂಡ ವಿಷಯಗಳ ಬಗ್ಗೆ,ಅಧ್ಯಾತ್ಮಿಕ ರಹಸ್ಯಗಳ ಬಗ್ಗೆ,ಮಾಟ,ಮೋಡಿ,ಮಂತ್ರ,ತಂತ್ರ,ಭಾನಾಮತಿ,ಕಾಶ್ಮೊರಾ ಇತ್ಯಾದಿಗಳ ಬಗ್ಗೆ ಸೀರಿಯಲ್ ಮಾಡುವವರು ಸ್ವಲ್ಪ ಸ್ಪೆಷಲ್ ಎಫೆಕ್ಟ್ ಇರಲಿ ಅಂತ ಈ ನಾಗ ಬಾಬಾಗಳು ಕುಂಭ ಸ್ನಾನಕ್ಕೆ ನಡೆದು ಬರುವ ಕ್ಲಿಪ್ಪಿಂಗ್ ಸೇರಿಸುತ್ತಾರೆ. ನಾಗ ಸಾಧುಗಳು ಯಾವುದೇ ನಿಗೂಡ ಜಗತ್ತಿನ ವಕ್ತಾರರಲ್ಲ. ಶ್ರೀ ಶಂಕರಾಚಾರ್ಯರು ಶುರುಮಾಡಿದ ಹಿಂದೂ ಪಂಥಗಳಲ್ಲಿ ಇದು ಒಂದು. ಜೈನ ದಿಗಂಬರರು ನಂಬುವ ಸಿದ್ದಾಂತಗಳು ಹಿಂದುಧರ್ಮದವೇ ಎಂದು ಸಾದಿಸುವುದಕ್ಕಾಗಿ ಈ ಪಂಥವನ್ನು ಸೃಷ್ಟಿ ಮಾಡಲಾಯಿತು. ಅಂದರೆ ಕೆಲವೊಮ್ಮೆ ಎದುರಾಳಿ ಕಂಪನಿ ಉತ್ಪಾದಿಸುವ ಪ್ರಾಡಕ್ಟ್ ಗೆ ಸಮನಾಂತರ ಪ್ರಾಡಕ್ಟ್ ಮಾರ್ಕೆಟ್ ಗೆ ಬಿಡುತ್ತಾರಲ್ಲ ಹಾಗೆ. ಈ ನಾಗ ಸಾಧುಗಳದ್ದು ಅಧ್ವೈತ ಉಪಾಸನೆ. ಬಹಳ ಪ್ಲೈನ್ ಫಿಲಾಸಫಿ. ಇವರಿಗೂ,ಅಘೋರಿಗಳಿಗೂ,ನಾಥಪಂಥದವರಿಗೂ ಯಾವೂದೇ ರೀತಿಯ ಸಂಭಂದವಿಲ್ಲ. ಕುಂಭಮೇಳದ ಸಂಧರ್ಭದಲ್ಲಿ ಮಾತ್ರ ಒಟ್ಟೊಟ್ಟಿಗೆ ಕಂಡು ಬರುತ್ತಾರಷ್ಟೇ. ಈ ಪಂಥಕ್ಕೆ ದಕ್ಷಿಣಕನ್ನಡದ ನಾಗಾರಾಧನೆಯೊಂದಿಗಾಗಲಿ,ಇಂದಿನ ನಾಗಾಲ್ಯಾಂಡ್ ನೊಂದಿಗಾಗಲಿ ಯಾವುದೇ ಲಿಂಕ್ ಇಲ್ಲ. ನಗ್ನತೆಯನ್ನು ತೋರಿಸಿ ಹಣ ಮಾಡ್ಕೊಳ್ಳುವ ಮೀಡಿಯಾದವರ ಅದಮ್ಯ ತೆವಲಿಗೆ ಇಂದು ನಾಗ ಬಾಬಗಳು ಬಲಿಪಶುಗಳಾಗುತಿದ್ದಾರೆ. ಸಾಮಾಜದ ಸೈಡ್ ಲೈನಿನಲ್ಲಿ ಅವರಪಾಡಿಗೆ ಇದ್ದವರಿಗೆ ಇಂದು ಸಮಾಜದ ವಿಮರ್ಶೆಗೆ ಗುರಿಯಾಗುವ ಅನಿವಾರ್ಯತೆ ಎದುರಾಗಿದೆ. 'ನಿರಂಕುಶವಾದವನ್ನು ಪ್ರತಿಪಾದಿಸುವವನು ಏಕೆ ಆಸ್ತಿಕರ ವಕಾಲತ್ತು ವಹಿಸುತ್ತಿದ್ದಾ'ನೆ ಎಂದು ವಿಸ್ಮಯಗೊಳ್ಳಬೇಡಿ. ನಾನು ಬೆತ್ತಲೆ ತಿರುಗುವ ಹಕ್ಕನ್ನು ಸಮರ್ಥಿಸಿಕೊಳ್ಳಲು ಇಷ್ಟೆಲ್ಲಾ ಪೀಠಿಕೆಹಾಕುತಿದ್ದೇನೆ.ನಿಮ್ಮನ್ನು ಉದ್ದಾರ ಮಾಡುತ್ತೇವೆ ನಿಮಗೆ ಶಿಕ್ಷಣ ಕೊಡುತ್ತೇವೆ ನಿಮಗೆ ಆಸ್ಪತ್ರೆ ಕಟ್ಟಿಸುತ್ತೇವೆ ಎಂದು ನಮ್ಮ ಬೆ೦ಬತ್ತಿ ಪೀಡಿಸುವ ಸಾಧುಗಲಿಗಿಂತಲೂ ಅವರಷ್ಟಕ್ಕೆ ಅವರಿರುವ ನಾಗ ಸಾಧುಗಳೇ ಎಷ್ಟೋ ವಾಸಿ. ನಮ್ಮ ಸುತ್ತಲೂ ನಡೆಯುವ ವೈಚಿತ್ರ್ಯಗಳನ್ನು ನೋಡಿ ಜೀರ್ಣಿಸಿಕೊಳ್ಳುವ ಶಕ್ತಿಯನನ್ನು ಬೆಳೆಸಿಕೊಳ್ಳುವಂತೆ ಎಲ್ಲರನ್ನೂ ಬೇಡಿಕೊಳ್ಳುತ್ತೇನೆ. ನಮ್ಮ ಜನರಿಗೆ ಜೀರ್ಣಶಕ್ತಿ ಕಡಿಮೆ. ಅಕ್ಕಪಕ್ಕದ ವೈವೀದ್ಯತೆಗಳಿಂದ ಅನಗತ್ಯವಾಗಿ ವಿಚಲಿತರಾಗುತ್ತೇವೆ. ಈ ಸ್ವಭಾವ ನಾವು ಇಂದು ರೂಡಿಸಿಕೊಂಡದ್ದಲ್ಲ. ಅನಾದಿಕಾಲದಿಂದಲೂಇವು ನಮ್ಮಲಿ ಇದ್ದವೇ. ನಮ್ಮ ಪೂರ್ವಜರ ವರ್ತನೆಯ ಬಗ್ಗೆ ವಿದೇಶಿ ಪ್ರವಾಸಿ ಅಲ್ ಬೆರೂನೀ ಹಿಂದೆಯೇ ಬರೆದಿಟ್ಟಿದ್ದ.
ಆದರೂ ನಾವು "ಅನೇಕತೆಯಲ್ಲಿ ಏಕತೆ" ಎನ್ನುವ ಸಿದ್ದಾಂತ ಫಾಲ್ಲೋ ಮಾಡುವ ಬಗ್ಗೆ ಎದೆತಟ್ಟಿಕೊಳ್ಳುತೀವಲ್ಲ. ಅದು ಹೇಗೆ ?ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿದೆ. ಉತ್ತರ ಬಹಳ ಸುಲಭ. ಇಂದು ನಮ್ಮ ಸಂಸ್ಕೃತಿಗೆ ಅನೇಕತೆಯ ಮೆರುಗು ತಂದು ಕೊಟ್ಟಿರುವ ಯಾವುದೇ ಅಂಶವನ್ನು ಭಾರತೀಯರು ಅವರಾಗೇ ಸ್ವಾಗತಿಸಿಲ್ಲ. ಅಥವಾ ಅವರಾಗೇ ವಿದೇಶಗಳಿಗೆ ಹೋಗಿ,ತೆಗೆದುಕೊಂಡು ಬಂದು ಅಳವಡಿಸಿಕೊಂಡಿಲ್ಲ.. ಬದಲಿಗೆ ಅವೆಲ್ಲಾ ನಮ್ಮ ಸಂಸ್ಕೃತಿಯಲ್ಲಿ ಬಲವಂತವಾಗಿ ತುರುಕಲ್ಪಟ್ಟದ್ದು. ನಾವು ತುರುಕರೊಂದಿಗೆ ಹೋರಾಡಿದೆವು. ಆದರೆ ಅವರು ನಮನ್ನು ಗೆದ್ದು ಅವರ ಸಂಸ್ಕೃತಿಯ ಕೆಲವು ಅಂಶಗಳನ್ನು ಇಲ್ಲಿ ತುರುಕಿದರು. ಬ್ರಿಟಿಷರನ್ನು ವಿರೋದಿಸಿದೆವು.ಅವರು ಸಹ ನಮನ್ನು ಬಡಿದು ನಮಗೆ ಐರೋಪ್ಯ ಸಂಸ್ಕೃತಿ ಕಲಿಸಿದರು. ಬಡಿಸಿಕೊಂಡ ನಂತರ "ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ" ಎಂಬಂತೆ ಅವುಗಳಿಂದ ನಮ್ಮ ಸಂಸ್ಕೃತಿ ಶ್ರೀಮಂತವಾಯಿತು ಎಂದು ಬೊಗಳೆ ಬಿಡುತ್ತೇವೆ.. ಯಾವುದನ್ನೂ ನಾವು ಪುಗಸಟ್ಟೆ ಸ್ವೀಕಾರಮಾಡಿದವರಲ್ಲ. ಪ್ರತಿಯೊಂದು ತಂತ್ರಜ್ಞಾನವನ್ನು ಅಳವಡಿಸು ಬಗ್ಗೆಯೂ ಹಲವರು ಕೊಂಕು ತೆಗೆಯುತ್ತಾರೆ. ಅನಿವಾರ್ಯ ಎನ್ನಿಸಿದಾಗ "ಇದು ಹೊಸ ಅವಿಷ್ಕಾರವೇನಲ್ಲ.ಇದರ ಉಲ್ಲೇಖ ನಮ್ಮ ಮಹಾಭಾರತದಲ್ಲೂ ಇತ್ತು"ಎನ್ನುತ್ತಾ ಅದಕ್ಕೆ ಕುಂಕುಮ ಹಚ್ಚಿ ,ಲಿಂಬೆಹಣ್ಣು ಕಟ್ಟಿ ಉಪಯೋಗಿಸಲಾರಮ್ಬಿಸುತ್ತೇವೆ. ನಮ್ಮ ಅರ್ಥದಲ್ಲಿ 'ಅನೇಕತೆಯಲ್ಲಿ ಏಕತೆ" ಅಂದರೆ "ತಮ್ಮ ವೈಶಿಷ್ಟ್ಯ ಗಳನ್ನು ಕಳೆದುಕೊಂಡು ಏಕತೆಯತ್ತ ತುಡಿಯುತ್ತಿರು ಪ್ರಕ್ರಿಯೆ". ಜನರು ಈ ಪ್ರಕ್ರಿಯೆಯನ್ನು ಹೇಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಜನರ ಹೇರ್ ಸ್ಟೈಲ್ ನೋಡಿ. 70ನೇ ದಶಕದಲ್ಲಿ ನೋಡಿ ಎಲ್ಲಾ ಹಿಪ್ಪಿ ಕಟ್. ಡ್ರೆಸ್ ಎಲ್ಲಾ ಬೆಲ್ ಬಾಟಮ್. ಹ್ಯಾ೦ಡಲ್ ಬಾರ್ ಮೀಸೆ. ಈಗ ಎಲ್ಲಾ ಶಾರ್ಟ್ ಕಟ್ ಕೂದಲು,ಎಲ್ಲಾ ಶೇವ್ ಮಾಡಿದ ಮುಖ .ಕಾಲರ್ ,ಒಂದು ಪಾಕೆಟ್ ಇರುವ ಶರ್ಟ್,ಎಡ ಕೈಗೆ ವಾಚು ಇತ್ಯಾದಿ ...ಎಲ್ಲಾ ಏಕತಾನತೆ. 70 ರ ದಶಕದ ಸ್ಟೈಲ್ ಈ ದಶಕದಲ್ಲಿ ಸಾಧ್ಯವಿಲ್ಲ. ಈ ದಶಕದ ಸ್ಟೈಲ್ ಆಗ ಯಾರು ಮಾಡುತ್ತಿರಲಿಲ್ಲ.ಅಂದರೆ ಒಂದೇ ರೀತಿ ಇರಬೇಕೆನ್ನುವ ತುಡಿತ ಎಲ್ಲರಲ್ಲಿಯೂ ಇರುತ್ತದೆ. ಕಾಲೇಜು ಹುಡುಗರು ಸ್ವಲ್ಪ ರೆಬೆಲ್ ಆಗಿ ಈ ಸಂಪ್ರದಾಯವನ್ನು ಮುರಿಯುವ ಪ್ರಯತ್ನ ಮಾಡುತ್ತಾರೆ. ನಿಮ್ಮ ಮನೆಯಲ್ಲಿ ಯಾವುದಾದರೂ ಸಮಾರಂಭ ನಡೆದಿದೆ ಎಂದಿಟ್ಟುಕೊಳ್ಳಿ...ಆಗ ಯಾರಾದರೂ ಹುಡುಗರು ವಿಚಿತ್ರ ರೀತಿ ಹೇರ್ ಸ್ಟೈಲ್,ಡ್ರೆಸ್ ಹಾಕಿ ಓಡಾಡುತಿದ್ದರೆ ಅವರ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿರುತ್ತೇ ಎಂಬುದನ್ನು ಸ್ಟಡಿ ಮಾಡಿ. ಅವರು ಟೀಕೆಯ ಕೇಂದ್ರಬಿಂದು ಗಳಾಗಿಬಿಡುತ್ತಾರೆ.ಆದುದರಿಂದ ವಿಶೇಷವಾದ ವೇಷಬೂಷಣ ದರಿಸುವವರಿಗೆ ಸ್ಕಾಲರ್ಶಿಪ್ ನೀಡಬೇಕು ಎಂಬ ಯೋಜನೆ ಮಾಡಬೇಕೆಂದಿದ್ದೇನೆ. ಹಿಂದೆ ಜಾತಿಪದ್ಧತಿ ಯನ್ನು ದಿಕ್ಕರಿಸುವ ಉದ್ದೇಶದಿಂದ ಪ್ರೊ.ಕೆ.ರಾಮದಾಸ್ ರಂತಹವರು ಲೋಹಿಯಾ ಬೊದನೆಯ ಪ್ರಕಾರ ಜಾತಿವಿನಾಶ ಚಳವಳಿ ಆರಂಬಿಸಿ ಅಂತರ್ಜಾತಿಯ ವಿವಾಹಗಳನ್ನು ಮಾಡಿಸಿದರು. ಅದು ಎರಡು,ಮೂರು ದಶಕಗಳ ಹಿಂದಿನ ಮಾತು. ಬಹುಷಃ ಅದರ ಮುಂದಿನ ಹಂತ ಎಂದರೆ ವಿವಾಹ ಗಳನ್ನೇ ದಿಕ್ಕರಿಸಿ ಸಹಬಾಳ್ವೆ ನಡೆಸುವುದು. ಅದು ಬೌದಿಕ ಕ್ರಾಂತಿ.ಇದು ಮಾನಸಿಕ ಕ್ರಾಂತಿ. ಅಂದರೆ ಪ್ರೀತಿ,ವಿಶ್ವಾಸ,ದಯೆ,ದಾಕ್ಷಿಣ್ಯ ಇತ್ಯಾದಿ ಭಾವನೆಗಳು ಮಾನವನ ಕೃತಕ ಬೆಂಬಲದ ಅನುಪಸ್ತಿತಿಯಲ್ಲಿಯೂ ಬೆಸೆದುಕೊಳ್ಳಬಲ್ಲವು ಎಂಬುದನ್ನು ಇವು ಎತ್ತಿ ತೋರಿಸಿಕೊಡುತ್ತವೆ.ಇಂದು ನಾನು "ಕರ್ಮವೀರ"ಎಂಬ ಕರ ಪತ್ರ(ಮೇ ೨೦೧೦) ನೋಡಿದೆ. ಅದರಲ್ಲಿ ಅವಿವಾಹಿತ ಸಹಜೀವನದಿಂದ ಬಗ್ಗೆ ಹಲವಾರು ಜನ ಸಾಮೂಹಿಕವಾಗಿ ಗೋಳಾಡಿ ಊಳಿಟ್ಟಿದ್ದಾರೆ.ಇವರ ಪ್ರಕಾರ ಅವಿವಾಹಿತರಿಗೆ ನಮ್ಮ ಸಮಾಜ ಸಪ್ಪೋರ್ಟ್ ಮಾಡುವುದಿಲ್ಲ.ಅದು ನಮ್ಮ ಸಂಪ್ರದಾಯವಲ್ಲ. ಅಂದರೆ ಇವರ ಸಪ್ಪೋರ್ಟ್ ಪಡೆಯಬೇಕಾದರೆ ಅವರು ಇವರ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕು.ಆವಾಗ ಮಾತ್ರ ಇವರ ಮಾನವ ಸಹಜ ಗುಣಗಳಾದ ಪ್ರೀತಿ,ಕರುಣೆ ಇತ್ಯಾದಿ ಅವರೆಡೆಗೆ ತಿರುಗುತ್ತದ್ದೆ. ಕೊಡು-ಕೊಳ್ಳು ಎಂಬ ಶುದ್ದ ವ್ಯಾಪಾರಿ ಮನೋಬಾವದ ದೋರಣೆ ಹೊಂದಿರುವ ಸಂಪ್ರದಾಯವು ಸತ್-ಸಂಪ್ರದಾಯ ಎನಿಸಿಕೊಳ್ಳಲು ಹೇಗೆ ಸಾಧ್ಯ?. ನಿಷ್ಕಲ್ಮಶ ಪ್ರೀತಿಗೋ,ಈ ರೀತಿ ವ್ಯಾಪಾರಿ ಮನೋಬಾವದ ಪ್ರೀತಿಗೂ ಇರುವ ಅಜಗಜಾಂತರ ಎದ್ದುಕಾಣುತಿಲ್ಲವೇ?. ನಾನು ಇಲ್ಲಿ ಹೇಳಲು ಹೊರಟಿರುವುದು ಸಾರ್ವತ್ರಿಕ ಅಸಹನೆಯ ಬಗ್ಗೆ. ಈ ಸಾರ್ವತ್ರಿಕ ಅಸಹನೆಯನ್ನು ಹೇಗೆ ಬಲತ್ಕಾರದ ಮೂಲಕ ಬದಲಾಯಿಸಲಾಯಿತು ಎಂದು ವಿವರಿಸುವ ಮೂಲಕ ಸಾರ್ವತ್ರಿಕ ಆಶಯಗಳು ಸಾತ್ವಿಕ ನೆಲೆಗಟ್ಟನ್ನು ಹೊಂದಿಲ್ಲ ಎಂಬ ಸತ್ಯವನ್ನು ಇಲ್ಲಿ ವಿಷದಪಡಿಸುತಿದ್ದೇನೆ.
ಈಗ ಆರಂಬಿಸಿದ ವಿಷಯಕ್ಕೆ ಹಿಂತಿರುಗೋಣ. ನಾಗಸಾಧು ಪೂರ್ಣ ನಗ್ನಾವಸ್ತೆಯಲ್ಲಿಯೇ ಬಂದ ಎಂದಿಟ್ಟುಕೊಳ್ಳಿ, ನೀವೇಕೆ ಆತನ ಜನನೇಂದ್ರಿಯದ ಕಡೆಯೇ ದೃಷ್ಟಿ ಹಾಯಿಸಬೇಕು?. ಆತ ಬೆತ್ತಲಾದ ಕೂಡಲೇ ಆತನ ದೇಹದ ಇತರ ಬಾಗಗಳು ಅದೃಷ್ಯವಾಗುತ್ತದೆಯೇ?. ನಮ್ಮ ಸದ್ಗ್ರುಹಸ್ತೆಯೋಬ್ಬರು ದೊರದರ್ಶನದ ಈ ದೃಶ್ಯಗಳನ್ನು ಕಂಡು ಸಿಡಿಮಿಡಿ ಗೊಂಡು ಸಾಧುಗಳಿಗೆ ಹಿಡಿಶಾಪ ಹಾಕುತಿದ್ದರು. ಅವರು ಮಾಡುವ ಪೂಜವಿಧಾನಗಳನ್ನು ,ಸ್ತೋತ್ರಗಳನ್ನು,ಸೌಂದರ್ಯ ಲಹರಿಯನ್ನು ಬರೆದ ಮಹಾಶಯನೇ ಇವರ ಕರ್ತೃ ಎಂಬ ಜ್ಞಾನ ಅವರಿಗಿಲ್ಲ.ಆದರೆ ಅಗತ್ಯ ಎನಿಸಿದರೆ ಕಣ್ಣನ್ನು ರೆಪ್ಪೆಗಳಿಂದ ಮುಚ್ಚಿಕೊಳ್ಳುವ ವ್ಯವಸ್ತೆಯನ್ನು ಆ ದೇವರು (?) ಇವರಿಗೆ ಮಾಡಿಕೊಟ್ಟಿದ್ದಾನೆ. ಆ ಸೌಲಭ್ಯವನ್ನು ಬಳಸಿಕೊಳ್ಳದೆ ಇನ್ನೊಬ್ಬರ ಬೆತ್ತಲೆ ದೇಹವನ್ನು ನಾಲಿಗೆಯಿಂದ ಮುಚ್ಚುವ ವ್ಯರ್ಥ ಪ್ರಯತ್ನಕ್ಕೆ ಇವರು ಮುಂದಾಗುತ್ತಾರೆ. ಬೆತ್ತಲೆ ಮನುಷ್ಯ ಎಂದರೆ ನಡೆದಾಡುವ ಜನನಾಂಗ ಎಂದುಕೊಳ್ಳುತ್ತಾರೆ.ಆ ದೇಹದಲ್ಲಿ ಒಂದು ಹೃದಯ,ಒಂದು ಮೆದುಳು,ಎರಡು ಸದೃಡ ತೋಳುಗಳು ಸಹ ಇರುತ್ತವೆಂದು ಅರ್ಥಮಾಡಿಕೊಳ್ಳುವುದಿಲ್ಲ.ಒಬ್ಬ ಬೆತ್ತಲಾದ ಕೂಡಲೇ ಅವನು ಸಂಬೋಗಕ್ಕೆ ಸಿದ್ದವಾಗಿದ್ದಾನೆ ಎಂದು ಹೇಳಲಾಗದು. ಪಾಪ,'ಬಟ್ಟೆಯೊಂದಿಗೆ ಸ್ನಾನಕ್ಕೆ ಇಳಿದರೆ ಬಟ್ಟೆ ವದ್ದೆಯಾಗುತ್ತದೆ' ಎಂಬ ಸದುದ್ದೇಶ ಇಟ್ಟುಕೊಂಡು ಬಂದರೆ ಟಿ.ವಿ.ಗಳು ಅವರನ್ನು "ತಾಂತ್ರಿಕ್ ಸೆಕ್ಸ್"ನೊಂದಿಗೆ ಲಿಂಕ್ ಮಾಡುವುದೇ?.ನಗ್ನತೆಯನ್ನು ಸಂಬೋಗದೊಂದಿಗೆ ರಿಲೇಟ್ ಮಾಡಬೇಡಿ,ಸ್ನಾನದೊಂದಿಗೆ ರಿಲೇಟ್ ಮಾಡಿ ಎಂಬ ಸಂದೇಶ ಸಾರಲು ತನ್ಮೂಲಕ ಜನರ ಕಾಮವಿಕಾರವನ್ನು ಹೋಗಲಾಡಿಸಲು ವಿಪಲ ಯತ್ನ ನಡೆಸುತ್ತಲೇ ಬಂದಿದ್ದಾರೆ. ಶ್ರೀ ಶಂಕರ ಸಹ ಸಮಾಜಕ್ಕೆ ಇದೆ ಸಂದೇಶ ಕೊಡಲು ಪ್ರಯತ್ನಿಸಿ ಸೋತು ಹೋದರೋ ಏನೋ. ಒಟ್ಟಾರೆ ನಮ್ಮ ಪ್ರಯತ್ನದಿಂದ ಸಮಾಜವೇನಾದರೂ(ಏನಾದರೂ) ಬದಲಾದರೆ (ಸಿಕ್ಕಾಬಟ್ಟೆ ಸೆಖೆ ತಾಳಲಾರದೆ,ನೂರಾರು ಜನ ಎಂ.ಜಿ .ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ಮಾಡುವಂತಹಾ ಕಾಲ ಬಂದರೆ ) ಅವರು(ಗುರುಹಿರಿಯರು) ಹೇಳುವುದಿಷ್ಟೇ "ಶ್ರೀ ಶಂಕರಾಚಾರ್ಯರು ಈ ಬದಲಾವಣೆಗೆ ನೂರಾರು ವರ್ಷದ ಕೆಳಗೇ ನಾಂದಿಹಾಡಿದ್ದರು. ಏಲ್ಲಾ ಅವರ ಆಶಿರ್ವಾದ!!!!! |
No comments:
Post a Comment