Friday, April 16, 2010

ಸದ್ಗುರುವಿಗೆ ಜೈ ಹೋ (Part-3)

ದಿನಾಂಕ: ೩-೩-೩೦೧೦ ,ಮೀಡಿಯಾಗಳ ಟಿ ಅರ್ ಪಿ ಸಡನ್ ಆಗಿ ಏರಿತು.ಎಲ್ಲರೂ ಟಿ.ವಿ ಚಾನಲ್ ಚೇಂಜ್ ಮಾಡಿ ಮಾಡಿ ಶ್ರೀ ಶ್ರೀ ಶ್ರೀ ಪರಮಹಂಸ ನಿತ್ಯಾನಂದನ ದರ್ಶನ ಮಾಡಲು ಉದ್ಯುಕ್ತರಾದವರೇ.ಟಿ.ವಿ ಯವರೂ ಸಹ ಈ ದೃಶ್ಯವನ್ನೂ ನಿರಂತರವಾಗಿ ಪ್ರಸಾರ ಮಾಡಿ ಶ್ರೀಗಳ ಧರಮಕಾರ್ಯಕ್ಕೆ ತಾವು ಒಂದಿಷ್ಟು ಅಳಿಲು ಸೇವೆ ಸಲ್ಲಿಸಿ ಕೃತಾರ್ಥರಾದರು. ಟಿ.ವಿ ಚಾನೆಲ್ ಗಳಿಗಿದು ಒಂದು ರೀತಿಯ ಜೀವದಾನ. ನೋಡುವವರು ಗತಿಯಿಲ್ಲದೇ,ಬಡವರು ಅವರ ಮನೆಯ ಸಮಸ್ಯೆಗಳನ್ನು ಜಗತ್ತಿನ ಮುಂದೆ ಚರ್ಚಿಸುತ್ತಾ,ಕಿತ್ತಾಡುವಂತೆ ಮಾಡುತ್ತಾ ಅದರಿಂದ ಹಣಗಳಿಸುವ ಸ್ತಿತಿಗೆ ಬಂದಿದ್ದವು ಈ ಟಿ.ವಿ.ಚಾನಲ್ಗಳು.ಇನ್ನುಳಿದಂತೆ ಯಾವುದೇ ಹಳ್ಳಿಗೆ ನುಗ್ಗಿ,ಅಲ್ಲಿನ ಜನರ ದಡ್ಡತನವನ್ನೇ ಒಂದು ನಿಗೂಡ ರಹಸ್ಯವೆಮ್ಬಂತೆ ಬಿಂಬಿಸಿ ಪ್ರೇಕ್ಷಕರನ್ನು ವಂಚಿಸುವುದು, ಜನರನ್ನು ಮಲಗಿಸಿ, ಅವರು ನಿದ್ದೆಯಲ್ಲಿ ಮಾತಾಡಿದ್ದನ್ನು ಅವರ ಪೂರ್ವಜನ್ಮದ ವೃತಾಂತವೆಂದು ನಂಬಿಸುವುದು, ದಿನಬೆಳಗಾದರೆ ಕವಡೆ ಜ್ಯೋತೀಷಿಗಳನ್ನು ಛೂ ಬಿಟ್ಟು ಜನರನ್ನು ಹೆದರಿಸುವುದು, ಬ್ಯೂಟಿ ಸಲಹೆ ಅಂತ ಕಪ್ಪಗಿರುವವರನ್ನು ಬೆಳ್ಳಗೆ ಮಾಡುವ ಪ್ರಯೋಗಗಳನ್ನು ತೋರಿಸುವುದು,ಕೊನೆಗೆ ಒಂದು ಕಣ್ಣಿರಿನ ಚಲನಚಿತ್ರ ಹಾಕಿ ಜನರನ್ನು ಅಳಿಸಲು ಪ್ರಯತ್ನಿಸುವುದು ಇವು ಟಿ ವಿ ಗಳ ದೈನಂದಿನ ಚಟುವಟಿಕೆ.ಹೀಗೆ ಜನರ ಮನಸ್ಸಿನ ಮೇಲೆ ಇವರು ದಿನಾ ಅತ್ಯಾಚಾರ ಮಾಡುತ್ತಲೇ ಇದ್ದರೂ ನೋಡುವವರ ಸಂಖ್ಯೆ ಕ್ಷೀಣಿಸುತ್ತಲೇ ಇತ್ತು. ಆಗ ನಡೆಯಿತು ನೋಡಿ ಶ್ರೀಗಳ ಪವಾಡ. ಶ್ರೀ ನಿತ್ಯಾನಂದ ರೂಮಿನ ಬಾಗಿಲು ಹಾಕಿ ಬಟ್ಟೆ ಬಿಚ್ಚಿದ್ದೆ,ಬಿಚ್ಚಿದ್ದು. ಟಿ ಆರ್.ಪಿ ರೇಟಿಂಗ್ ಊರ್ಧ್ವಮುಖವಾಯಿತು!. ಸ್ವಾಮಿಗಳನ್ನು ತೆಗಳುವ ನೆಪದಲ್ಲಿ ಜನ ಅದನ್ನು ಪದೇ,ಪದೇ ನೋಡಿ ಆನಂದಿಸಿದರು. ಸೊ ಕಾಲ್ಡ್ ಗೃಹಿಣಿಯರು ತಮಗೆ ಕಾಮದ ಬಗ್ಗೆ ಏನೂ ಗೊತ್ತಿಲ್ಲಾ ಎಂಬಂತೆ ನಿತ್ಯಾನಂದನನ್ನು ತೆಗಳಿದ್ದೆ ತೆಗಳಿದ್ದು.ತಾವು ಮಾಡಿದರೆ ಒಪ್ಪು,ಅವನು ಮಾಡಿದರೆ ತಪ್ಪು ಎನ್ನುವ ಅಭಿಪ್ರ್ರಾಯ ಅವರಲ್ಲಿ ಇದ್ದಂತಿತ್ತು. ಇವರ್ಯಾರಿಗೂ ಸಂಬೋಗದ ಅನುಭವ ಇಲ್ಲವೇ?.ಬೇಕಾದರೆ ಸರ್ವೆ ಮಾಡಿ ನೋಡಿ.ಯಾವುದೇ ನಿರ್ಧಿಷ್ಟ ಅವಧಿಯ ಅಂಕಿ-ಸಂಖ್ಯೆ ಕ್ರೋಡಿಕರಿಸೋಣ. ಆ ಅವಧಿಯಲ್ಲಿ ಸ್ವಾಮೀ ಹೆಚ್ಚು ಬಾರಿ ಮಾಡಿರುತ್ತಾನೋ,ಇವರುಗಳು ಹೆಚ್ಚು ಬಾರಿ ಸಂಭೋಗ ಮಾಡಿರುತಾರೋ?.ಈ ಬಗ್ಗೆ ಅವರ್ಯಾರೂ ಮಾತಾದುವುದಿಲ್ಲ.ಯಾಕೆಂದರೆ point ಅದಲ್ಲ. ಒಂದು ಮಾತ್ರ ಮೀಸಲಾದ ಹಕ್ಕನ್ನು ಕಾವಿ ಅಪಹರಿಸಿದ ಬಗ್ಗೆ ಅವರಿಗೆ ಅಪಾರ ವ್ಯಥೆ ಇದ್ದಂತೆ ಕಂಡುಬರುತ್ತಿತ್ತು. ಇವರು ಉಗಿದಿದ್ದು ಖಾವಿಯ ಮೇಲೆ ಬಹಳ ಚೆನ್ನಾಗಿ ಕಾಣುತಿತ್ತು. ಬೇಕಾಗಿತ್ತಾ,ಇವರಿಗೆ ಈ ಪಾಡು. ಅಸಲಿಗೆ ಕರೀಮಣಿ ಎಂಬುದನ್ನು ಕಂಡುಹಿದಿದಿದ್ದೆ ಈ ಮಠಗಳು.(ಇದು ವಿಶ್ವದಾದ್ಯಂತ ಇರುವ ಎಲ್ಲಾ ಧರ್ಮಗಳಿಗೆ ಅನ್ವಯಿಸುತ್ತದೆ).ಯಾವಾಗ ತಮ್ಮಲ್ಲಿರುವ ಜ್ಞಾನಬಂಡಾರ ನಿರುಪಯುಕ್ತ ಎಂದು ಕಂಡುಬಂದಾಗ ಅವರು ಆರಂಬಿಸಿದ ಕೆಲಸ ಎಂದರೆ,ಕಾಡಿನಿಂದ ನಾಡಿಗೆ ಬಂದು ಔಷಧಿ ಕೊಡುವುದು,ಪುಸ್ತಕ ಮಾರುವುದು,ಕರಿಮಣಿ ಹಂಚುವುದು ...,ಇತ್ಯಾದಿ. ಹೀಗೆ ಪರಮಾರ್ಥದಲ್ಲಿ ಅನ್ನ ಕಾಣದೇ ಮಾಮೂಲೀ ಜನರ ಕೆಲಸಕ್ಕೆ ಲಗ್ಗೆ ಇಟ್ಟ ಇವರು ತಮ್ಮ ಬಟ್ಟೆಯಿಂದಾಗಿ ಇತರರಿಂದ ಪ್ರತ್ಯೇಕವಾಗಿ ಕಂಡುಬರುತ್ತಾರೆ. ಪಾರಮಾರ್ಥಿಕ ಗುರಿಗಳಿಂದ ವಿಮುಖರಾಗಲು,ಮೆತ್ತಗೆ ಮುಖ್ಯವಾಹಿನಿಗೆ ಸೇರಿಕೊಳ್ಳಲು ಯಾವ ಯಾವ ಮಾರ್ಗಗಳನ್ನು ಹಿಡಿಯಬಹುದೋ ಅವೆಲ್ಲವನ್ನೂ ಅನ್ವೇಷಣೆ ಮಾಡಿದ್ದಾರೆ. ಇವರ ಎಷ್ಟು ಜನಕ್ಕೆ ದೇವರನ್ನು ತೋರಿಸಿದರು ಎಂಬುದಕ್ಕೆ ಇವರಬಳಿ statistics ಇಲ್ಲ.ಆದರೆ ಎಷ್ಟು ಜನಕ್ಕೆ ಮದುವೆ ಮಾಡಿಸಿದ್ದಾರೆ, ಡಿಗ್ರೀ ಮಾರಿದ್ದಾರೆ ಎಂಬ ಬಗ್ಗೆ satistics ಇದೆ. ಈ ಧರ್ಮಗಳನ್ನ ಮಾರುವ ಏಜೆನ್ಸಿ ಗಳಲ್ಲಿ ಧರ್ಮ ವಿಕ್ರಯವಾಗುತ್ತಿಲ್ಲ.ಅದೇನಿದ್ದರು ಕಾಮ್ಪ್ಲಿಮೆಂಟರಿ complimentary) needabahudaada ಸರಕು ಅಷ್ಟೇ. ಆದುದರಿಂದಲೇ ಅವರು ಸಂಭಂದಗಳನ್ನು ಮಾರುವ ಕೆಲಸವನ್ನು monopoly ಮಾಡಿಕೊಂಡಿದ್ದಾರೆ. ನಮ್ಮ ಏಜೆನ್ಸಿಯಿಂದ ಲೈಸೆನ್ಸ್ ಪಡೆಯದಿದ್ದರೆ ನಿಮ್ಮ ಸಂಭಂದವೇ ಅಸಿಂದು ಎಂದು ಪರೋಕ್ಷ ಕಾನೂನು ಮಾಡಿಕೊಂಡಿದ್ದಾರೆ!.



ನಾವು ಜ್ಞಾನಕ್ಕಾಗಿ ತಪಸ್ಸು ಮಾಡುತ್ತೇವೆ ಎನ್ನುವವರು ಜಗತ್ತಿನ ಸೊಂಟದ ಕೆಳಗಿನ ವಿಚಾರಗಳನ್ನೂ ನಾವೇ ನಿರ್ವಹಿಸುತ್ತೇವೆ,ನಾವು ಸಾಮೂಹಿಕ ಮದುವೆ ಮಾಡಿಸುತ್ತೇವೆ ಎಂದು ನಾಚಿಕೆ ಇಲ್ಲದೆ ಇಂತಹ ಸಮಾರಮ್ಬಗಳಲ್ಲಿ ಬಹಿರಂಗವಾಗಿ ಬಾಗವಹಿಸಿ ಆಶಿರ್ವಚನ ನೀಡುತ್ತಾರೆ. ಹಾಗೇ ಆಶಿರ್ವಚನ ನೀಡಲು ಸಂಸಾರದ ಬಗ್ಗೆ ನಿಮಗೆ ಯಾವ ಅನುಬವವಿದೆ?,ತಾವೇ ಸಂಸಾರ ನಡೆಸದೆ ಇನ್ನೊಬ್ಬನಿಗೆ ಉಪದೇಶ ಮಾಡುವದು ಎಷ್ಟು ಸರಿ ಎಂದು ಯಾರೂ ಕೇಳುವುದಿಲ್ಲ.ಅನುಭವ ಪಡೆಯುವುದು ಜ್ಞಾನನ್ವೇಷಿಯ ಪರಮ ಗುರಿ ಹಾಗು ಹಕ್ಕು.ಆದರೆ ಆ ಅನುಭವ ಪಡೆಯಲು ಹೋದರೆ ಗೂಸಾ ಗ್ಯಾರೆ೦ಟಿ!. ಸಂಸಾರದ ಬಗ್ಗೆ Practical ಜ್ಞಾನ ಇಲ್ಲದೆ ಇರುವುದರಿಂದಾಗಿ ಅವರು ನಮಗೆ ನೀಡುವ ಮಾಹಿತಿ/ಸಲಹೆಗಳು ಸಂಪೂರ್ಣವಾಗಿ ಸರಿಯಾಗಿರುವುದಿಲ್ಲಾ,ಆದುದರಿಂದ ಇಂತಹ ಸಮಾರಂಬದಲ್ಲಿ “ಶ್ರೀ“ ಮಾಡುವ ಭಾಷಣವನ್ನು timepass ಎಂದು ಪರಿಗಣಿಸಬಹುದೇ ವಿನಃ ಗಂಭೀರವಾಗಿ ಪರಿಗಣಿಸಬಾರದು. ಪರೀಕ್ಷೆಗೆ ಹೋಗುವ ಹುಡುಗ ಉತ್ತರ ಗೊತ್ತಿಲ್ಲದ ಪ್ರಶ್ನೆಗೆ ಒಟ್ಟಾರೆ ಯಾವುದೋ ಒಂದು ಕಾಗಕ್ಕ-ಗುಬ್ಬಕ್ಕನ ಕಥೆ ಬರೆಯುವಂತೆ ಈ ಸಂತರ ಅವರವರ ಮೂಗಿನ ನೇರಕ್ಕೆ ಏನೋ ಒಂದು ಹೇಳುತ್ತಾರೆ.ಎಲ್ಲರಿಗೂ ಶಿಕ್ಷಣ ಮುಖ್ಯ ಎನ್ನುತ್ತಾರೆ.ಏಕೆಂದರೆ ಅವರದೇ ಶಿಕ್ಷಣ ಸಂಸ್ತೆಗಳಿರುತ್ತವಲ್ಲಾ!.ಎಲ್ಲರೂ ಗುರು/ಹಿರಿಯರ ಮಾತು ಕೇಳಿ ಎನ್ನುತ್ತಾರೆ.ಏಕೆಂದರೆ ಅವರ tribe survive ಆಗಬೇಕಲ್ಲಾ!. ಮದುವೆಯಾದ ನಂತರ ಒಂದಿಬ್ಬರು ಮಕ್ಕಳು ಆದನಂತರ ಪತಿ ಪತ್ನಿಯರು ಸಂಪೂರ್ಣವಾಗಿ ಬ್ರಹ್ಮಚರ್ಯವನ್ನು ಪಾಲಿಸಬೇಕು,ಪರಸ್ಪರರನ್ನು ಸಹೋದರ –ಸಹೋದರಿಯರಂತೆ ಭಾವಿಸಬೇಕು ಎಂದು ಒಬ್ಬ ಬಹಳ ಹೆಸರು ಮಾಡಿರುವ ಒಬ್ಬ ಗುರುಗಳು ಅಪ್ಪಣೆ ಕೊಡಿಸಿದ್ದಾರೆ!.ಇವರ ಉಪದೇಶಗಳನ್ನು ಪಾಲಿಸುತ್ತಾ ಹೋದರೆ ಕಷ್ಟಪಟ್ಟು ಗಳಿಸಿದ ತುತ್ತೂ ಬಾಯಿಗೆ ಇಲ್ಲದಂತಾಗುತ್ತದೆ ಎಂಬುದು ಜನರ ಸುಪ್ತ ಮನಸ್ಸಿಗೆ ಗೊತ್ತಿದೆ.ಯಾಕೆಂದರೆ ಜನ್ಮ ಜನ್ಮಾತರದಿಂದಲೂ ಜನರು ಧಾರ್ಮಿಕ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ.ಆದುದರಿಂದ ಗೂಳಿ ಬಿದ್ದರೆ ಆಳಿಗೊಂದು ಕಲ್ಲು ಎಂದು ಗುರುಗಳನ್ನು ಹಣಿಯುತ್ತಾರೆ .ಒಟ್ಟಾರೆ ಎಲ್ಲಿ ಬೆಂಕಿ ಬಿದ್ದರೂ ಚಳಿ ಕಾಯಿಸಿಕೊಳ್ಳಲು ಜನ ಇದ್ದೆ ಇರುತ್ತಾರೆ.


ತಮ್ಮ ಸ್ವಾರ್ಥಕ್ಕಾಗಿ,ತಾವು ಸೃಷ್ಟಿಸಿದ ಕಳಪೆ ಸರಕುಗಳನ್ನು ಮಾರಲಿಕ್ಕಾಗಿ ಅಧ್ಯಾತ್ಮಿಕ ಜಗತ್ತು ಹಲವು ಪದ್ದತಿಗಳನ್ನು,ಮೂಢನ೦ಬಿಕೆಗಳನ್ನು ಸೃಷ್ಟಿಸಿ ಲಾಗಾಯ್ತಿನಿಂದಲೂ ಚಲಾವಣೆ ಮಾಡುತ್ತಾ ಬಂದಿವೆ. ಇಂದು ಇವರುಗಳೇ ಸಾಕಿದನಾಯಿಗಳು ಇವರನ್ನೇ ಕಚ್ಚಲು ಬಂದಿದೆ ಎಂದಾದರೆ ಅದಕ್ಕೆ ಇವರುಗಳೇ ಹೊಣೆಗಾರರು. ಅಧ್ಯಾತ್ಮಿಕ ಜಗತ್ತಿನ ಗಿಲೀಟಿನ ಬೋಧನೆಗಳ ಹಿಂದಿರುವ ದುರುದ್ದೇಶಗಳು, ಲಾಭಕೋರತನ,ಅಸತ್ಯ ಮುಂತಾದುವುಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕಾಗಿದೆ.ಧಾರ್ಮಿಕತೆಯ ವಿಷಾನಿಲಾದಿಂದ ಹೊರಬಂದು ಸ್ವಚ್ಚ ಗಾಳಿ ಸೇವಿಸುವ,ತನ್ಮೂಲಕ ಸ್ವತಂತ್ರ ಚಿಂತನೆಗಳನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪಡುವುದು ಈ ಕಾಲಕ್ಕೆ ನಮ್ಮಿಂದ ಸಾಧ್ಯವೇ?


ತುಳುನಾಡಿನ 'ಬೂತ' !


Thursday, April 15, 2010

ಹುಚ್ಚು!

ಇತ್ತೀಚಿಗೆ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ ಪ್ರಕಾಶ್ರವರು ಬರೆದ ಒಂದು ಪುಸ್ತಕ ಲೈಬ್ರೆರಿಯಲ್ಲಿ ಓದಲು ಸಿಕ್ಕಿತು. ಹೀಗೆ ಕಣ್ಣಾಡಿಸಿದೆ.ಅದರಲ್ಲಿ ಅವರು ಕುಮಾರಗಂಧರ್ವ ಎಂಬುವ ಪ್ರಸಿದ್ದ ಹಿಂದೂಸ್ತಾನಿ ಹಾಡುಗಾರರ ಮಗನ ಬಗ್ಗೆ ಒಂದು ಕಿರು ಲೇಖನ ಬರೆದಿದ್ದರು. ಆತ ಬಹಳ talented ಹಾದುಗಾರನೆಂದೂ,ಈಗ ಮತಿಬ್ರಮಣೆಯಾಗಿ ತಿರುಗುತ್ತಾ ಇದ್ದಾನೆಂದೂ ಬರೆದಿದ್ದರು. ಒಬ್ಬ ಬುದ್ದಿಶಾಲಿ ವ್ಯಕ್ತಿ ಅಥವಾ ಪ್ರತಿಭಾನ್ವಿತ ವ್ಯಕ್ತಿ ಯಾಕೆ ಇಂತಹಾ ಮಾನಸಿಕ ಖಾಯಿಲೆಗೆ ತುತ್ತಾಗುತ್ತಾನೆ?ಎಂಬ ಪ್ರಶ್ನೆ ಚಿಂತನಾ ಯೋಗ್ಯ ಎನ್ನಿಸುತ್ತಿದೆ.ಏಕೆಂದರೆ ತಪ್ಪು ಸರಿ ಗಳಬಗ್ಗೆ ವಿವೇಚಿಸುವ, ತನಗೆ ಸರಿ ಎಂಬುದನ್ನು ಆಯ್ಕೆ ಮಾಡುವ ಶಕ್ತಿಯನ್ನ್ನು ಆರೋಗ್ಯವಂತ ಮನಸ್ಸು ಹೊಂದಿರುತ್ತದೆ.ಇದರ ಹೊರತಾಗಿಯೂ ಅವರಿಗೆ ಹುಚ್ಚೇಕೆ ಹಿಡಿಯುತ್ತದೆ?.


ಇದಕ್ಕೆ ಮುನ್ನ ‘ಹುಚ್ಚು’ಎಂಬುದರ ಮಾನದಂಡಗಳೇನು? ಎಂಬುದನ್ನು ನಾವು ಯೋಚಿಸಬೇಕು.


ಹಿಟ್ಲರ್ ನಮ್ಮ ಸಮಾಜದಲ್ಲಿ ಮಿನ್ಚುತಿದ್ದಾಗ ಸುಮ್ಮನಿದ್ದ ಜನ ಅವನ ಸತ್ತ ಮೇಲಷ್ಟೇ ‘ಅವನೊಬ್ಬ ಹುಚ್ಚ್ ಎನ್ನುವಷ್ಟು ದೈರ್ಯ ತೋರಿದರು. ಹುಚ್ಚು ಯಾರಿಗಿಲ್ಲ. ನಮ್ಮ ಮೇಲಿನ ಅಧಿಕಾರಿಗಳಿಗಿಲ್ಲವೇ? ನಮ್ಮ ಮಾಸ್ತರುಗಳು /proffessor ಗಳಿಗಿಲ್ಲವೇ? ಆದರೆ ಅವರುಗಳು ಹುಚ್ಚು ಎಂಬುದರ ಪರಿಭಾಷೆಯಿಂದ ತಮ್ಮನ್ನು ತಾವು ಹೊರತುಪಡಿಸಿಕೊಂಡಿದ್ದಾರಷ್ಟೇ. ಶ್ರೀ ರಾಮಕೃಷ್ಣ ಪರಮಹಂಸರು ಹೇಳುತ್ತಿದ್ದರು”ಈ ಪ್ರಪಂಚದಲ್ಲಿ ಎಲ್ಲರೂ ಹುಚ್ಚರೆ.ಕೆಲವರು ದೇವರ ಬಗ್ಗೆ,ಕೆಲವರು ಹಣದ ಬಗ್ಗೆ,ಕೆಲವರು ಹೆಣ್ಣಿನ ಬಗ್ಗೆ ಹುಚ್ಚರಾಗಿದ್ದರಷ್ಟೇ”.


ಕುಮಾರಗಂಧರ್ವರವರ ಪುತ್ರನ ಬಗ್ಗೆ ಹಿಂದೆ Times of India ಯಲ್ಲಿಯೂ ಓದಿದ ನೆನಪು. http://timesofindia.indiatimes.com/india/Kumar-Gandharvas-son-found-begging/articleshow/4537328.cms
ಹಲವು ಪ್ರತಿಭಾನ್ವಿತರು ಕೂಡ ಹೀಗೆ ಹುಚ್ಚಿನ ಸ್ತಿತಿಯಲ್ಲಿ ಪತ್ತೆಯಾಗುವ ಘಟನೆಗಳು ಪತ್ರಿಕೆಯಲ್ಲಿ ಆಗಾಗ ಬರುತ್ತಲೇ ಇರುತ್ತವೆ.


ಆತ ಅಧ್ಭುತ ಹಾದುಗಾರನಾಗಿದ್ದನಂತೆ. ಆದರೆ ಅವನಿಗೆ ಕುಡಿತದಂತಹ ಕೆಲವು ಹವ್ಯಾಸಗಳಿದ್ದವಂತೆ. ಬೀದಿಗೆ ಬಿದ್ದ ದಿನಗಳಲ್ಲಿ ಅವನಿಗೆ ಒಂದಿಷ್ಟು ಕುಡಿಸಿ ಬಿಟ್ಟರೆ ಸಾಕು. ಜನ ಅಚ್ಚರಿಪಡುವಷ್ಟು ಚೆನ್ನಾಗಿ ಹಾಡುತಿದ್ದನಂತೆ!. ಇತ್ಯಾದಿ..ಇತ್ಯಾದಿ..


ಬಹಳಷ್ಟು ಹಾಡುಗಾರರು/ಕಲಾವಿದರು/ಪ್ರತಿಬಾನ್ವಿತರು ಕುಡಿಯುತ್ತಾರೆ.ಹಲವು ಆಸಕ್ತಿಯನ್ನು ಹೊಂದಿರುತ್ತಾರೆ. ಈ ಹವ್ಯಾಸಗಳೇ ಅವರನ್ನು ಸದಾ ಒಳಗಿಂದ ಉತ್ತೇಜಿಸುತ್ತಾ,ಆತನನ್ನು ಒಳ್ಳೆಯ ಸಾಧನೆ ಮಾಡುವಂತೆ ಪ್ರೇರೆಪಿಸುವುತ್ತವೆಯೇ ಹೊರತು,ಅವರು ಗೋಡೆ ಮೇಲೆ ತೂಗುಹಾಕಿರುವ motivating ಚಿತ್ರಗಳು,ಪೂರವ ಜನಮದ ಪುಣ್ಯ,ಆಶೀರ್ವಾದ ಯಾವುದೂ ಅಲ್ಲ.


ತನ್ನ ಹವ್ಯಾಸಗಳನ್ನು ಮೆಲ್ಲಗೆ ಪೂರೈಸಿಕೊಂಡು,ಸಮಾಜದ ಮಾನದಂಡಗಳನ್ನೂ ಈಡೇರಿಸುವಂತೆ ನಟಿಸುತ್ತಾ balanced ಜೀವನ ಸಾಗಿಸುವವರು ಸಮಾಜದಲ್ಲಿ ಯಶಸ್ವೀ ವ್ಯಕ್ತಿ ಎನಿಸಿಕೊಳ್ಳುತ್ತಾರೆ ಕೆಲವೊಮ್ಮೆ.ಅವರ ಅಭ್ಯಾಸಗಳು ಬಹಿರಂಗವಾಗಿ ಸಮಾಜದ ಮರ್ಯಾದಸ್ತ(?) ಜನ (ಹೊಟ್ಟೆಯುರಿಯಿಂದ) ಚೀರಾಡತೊಡಗಿದಾಗ ,ಒಂದು ಕ್ಷಮಾಪಣೆ ಬಿಸಾಕಿಯೋ,ಸ್ವಲ್ಪ ದಿನ low profile ಇದ್ದೋ ಮತ್ತೆ ಜನರು ಎಲ್ಲವನ್ನೂ ಮರೆತಮೇಲೆ ಮರಳಿ ವೇದಿಕೆಗೆ ಬರುತ್ತಾರೆ.


ಆದರೆ ಹಾಗೆ ಬದುಕಲು ಸಾಧ್ಯವಿಲ್ಲದವರಿಗೆ,idea ಇಲ್ಲದವರರಿಗೆ,ಸಾಮಾಜಿಕ ಕಟ್ಟುಪಾಡುಗಳಿಂದ ಬಂದಿಯಾಗಿರುವವರಿಗೆ ಹುಚ್ಚು ಹಿಡಿಯುತ್ತದೆ. ಅಥವ ಅವರು ಹುಚ್ಚರು ಎಂಬ ಪರಿಭಾಷೆ ಯೊಳಗೆ ಬರುತ್ತಾರೆ.


ಪ್ರತಿಬಾವಂತರಿಗೆ ಹಿಡಿಯುವ ಹುಚ್ಚು ಸಮಾಜದ ರೋಗಗ್ರಸ್ತ ಮನಸ್ತಿತಿಯ ಕೈಗನ್ನಡಿಯಷ್ಟೇ.
ಸಮಾಜದಲ್ಲಿ ಮಾನದಂಡಗಳನ್ನು ನಿಗದಿಪಡಿಸಲು ಪ್ರಯತ್ನಿಸುವ ಹೇಡಿಗಳೇ ನಿಜವಾದ ಹುಚ್ಚರು!.


ನಾನು ಗಮನಿಸಿದ ಇನ್ನೂ ಒಂದು ಅಂಶ ಇದೆ. ಯಾವುದೇ ಒರಿಜಿನಲ್ ಪ್ರತಿಭೆಇರುವವನನ್ನು observe ಮಾಡಿ.ಅವನ ವ್ಯಕ್ತಿತ್ವದಲ್ಲಿ ಒಂದಿಷ್ಟು ಹುಚ್ಚು ಇದ್ದೆ ಇರುತ್ತದೆ. ಅದೇ ಹಿಂದಿನದನ್ನು ಬಾಯಿಪಾಟ ಮಾಡಿ ಪಾಠ ಮಾಡುವವರಲ್ಲಿ, ನನ್ನಂತರಹದವರಲ್ಲಿ,ಹಿಂದಿನದನ್ನು ಉಳಿಸಬೇಕು ಎಂದು ಚೀರಾಡುವವರಲ್ಲಿ,ಸಮಾಜ ಹೀಗೇ ಇರಬೇಕು ಎಂದು ಬೋದಿಸುತ್ತಾ ಓದಾಡುವವರಲ್ಲಿ ಯಾವುದೇ ರೀತಿಯ original talent ಇರುವುದಿಲ್ಲ. ಅವರಲ್ಲಿ ‘ಔಟ್ ಒಫ್ ಬಾಕ್ಸ್’ಯೋಚನೆಗಳನ್ನು ,ಮಾಡುವ ಶಕ್ತಿ ಇರುವುದಿಲ್ಲ. ಅವ್ರಿಗೆ ಒಂದು ಟ್ರಾಕ್ ಹಾಕಿಕೊಟ್ಟಾಗ ಮಾತ್ರ ತಲೆ ಜೋರಾಗಿ ಓಡುತ್ತದೆ. ಇದೊಂದು ರೀತಿಯ “ಹೌಸ್ ವೈಫ್”ಮೆಂಟಾಲಿಟಿ. ಒಂತರಾ “ಕೂಪ ಮಂಡೂಕ ನ್ಯಾಯ”ದಂತೆ!...




Thursday, April 1, 2010

ಬನ್ನಿ...ಪೋರ್ಕ್ ಸವಿಯಿರಿ!!

ಹಿಂದೆ ಕೋಳಿಜ್ವರ ಬಂದಾಗ ನಿಮಗೆ ನೆನಪಿರಬಹುದು. ಮೊದಲಿಗೆ ಒಂದಷ್ಟು ಕೊಳಿಗಳನ್ನು ಸಾಯಿಸಿ ಹೊಂಡ ತೋಡಿ ಹೂಳಲಾಯಿತು. ಸ್ವಲ್ಪ ದಿನ ಆದ ಮೇಲೆ ಕೋಳಿ ತಿಂದರೆ ಯಾವುದೇ ತೊಂದರೆ ಇಲ್ಲ ಎಂದು ಪೇಪರ್,ಟಿ.ವಿ. ರೇಡಿಯೋ ಮುಂತಾದ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಯಿತು. ಮೈಸೂರಿನಲ್ಲಿ ಕೋಳಿ ಸಾಕಣೆದಾರರ ಸಂಘದವರು ಕೋಳಿಯ ವಿವಿಧ ಭಕ್ಷ್ಯಗಳ ಮೇಳ ಏರ್ಪಡಿಸಿ ಪುಕ್ಸಟ್ಟೆ ಹಂಚಿದರು.ಆಗ ನೂಕು ನುಗ್ಗಲಾಗಿ,ಲಾಟಿಚಾರ್ಜ್ ಮಾಡಿ ಜನರನ್ನು ಚದುರಿಸಬೇಕಾಯಿತು.




ಆಶ್ಚರ್ಯವೆಂದರೆ ಸ್ವೈನ್ ಫ್ಲು ಬಂದು ಹೋಗಿ ಇಷ್ಟು ದಿನ ಆದರೂ ಪೋರ್ಕ್(ಹಂದಿ ಮಾಂಸ) ತಿನ್ನುವುದು ಸೇಫ್ ಅಂತಾ ಯಾರೂ ಪ್ರಚಾರ ಮಾಡುತಿಲ್ಲಾ ಯಾಕೆ?.ಕೊಡಗು,ಚಿಕ್ಕಮಗಳೂರು,ಹಾಸನ ಕಡೆಎಲ್ಲ ಬಹಳ ಹಿಂದಿನ ಕಾಲದಿಂದಲೂ ಜನ ಹಂದಿ ಮಾಂಸ ತಿನ್ನುತಾರೆ.(ಕಾಡ೦ದಿಯೋ,ಊರ೦ದಿಯೋ ಯಾವುದೂ ಒಂದು).


ಹಂದಿ ಮಾಂಸ ತಿನ್ನದೇ ಅದರ ಸ್ವಾದ ಸವೀ ಬೇಕಂದ್ರೆ ತೇಜಸ್ವಿಯವರ ಕೆಲವು ಕಥೆಗಳನ್ನೂ ಓದಬೇಕು.


ಕರ್ವಾಲೋ ದಲ್ಲಿ ಮಂದಣ್ಣ ‘ಚರ್ಬಿಯೇ ಕೊಬ್ಬರಿಯಷ್ಟು’ ದಪ್ಪವಿರುವ ‘ಪಿಗ್ಮಟನ್’ಅನ್ನು ಚೀಲದಲ್ಲಿ ಹಾಕಿಕಿಕೊಂಡು ತರುವ ದೃಶ್ಯ, ಪ್ಯಾರನಿಗೆ ಅದನ್ನು ನೋಡಿ ಆಸೆಯಾಗುವ ದೃಶ್ಯ ನೆನಪಿಗೆ ಬರುತ್ತದೆ.


ಇನ್ನು ಬೇರೊಂದು ಕಥೆಯಲ್ಲಿ ಶ್ರೀ ರಾಮ್ಅವರ ನಾನ್-ವೆಜ್ ಪ್ರಿಯತೆಯ ವರ್ಣನೆ ರಸವತ್ತಾಗಿದೆ.


ಈಗ ಕಾಡುಹಂದಿ ಎಲ್ಲಿ ಸಿಗುತ್ತೆ?,ಜನ ಊರ್ ಹಂದಿಗೆ ಶಿಫ್ಟ್ ಆಗಿದ್ದಾರೆ.ಹಂದಿ ಗಲೀಜು ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಫಾರಂ ಹಂದಿಗಳಿಗೆ ಗಲೀಜು ಸಿಗುವುದಿಲ್ಲ.ಅವು ಪಶು ಆಹಾರ ತಿಂದು ಚೆನ್ನಾಗಿ ಕೊಬ್ಬಿರುತ್ತದೆ. ಹಾಗೆ ನೋಡಿದರೆ ನಾವು ತಿನ್ನುವ ತರಕಾರಿ ಗಳಿಗೆ ಸಹ ಕೆಲವು ರೀತಿಯ ಗೊಬ್ಬರ ಹಾಕಿರುತ್ತಾರೆ. ಸಿಟಿಯಲ್ಲಿ ಸಿಗುವ ಸೊಪ್ಪನ್ನು ಸೀವೇಜ್ ನೀರಿನಲ್ಲಿ ಬೆಳೆದಿರುತ್ತಾರೆ. ಹ್ಯುಮನ್ ಕಾಂಪೋಸ್ಟ್ ಗೊಬ್ಬರದ ಬಗ್ಗೆಯೂ ಮೂಗುಮುರಿಯುವರಿದ್ದಾರೆ. ಕೆಲವರು ಕಾಡುಹಂದಿ ಯಾವಾಗಲು ಒಳ್ಳೆಯ ಆಹಾರವನ್ನೇ ಸೇವಿಸುತ್ತದೆ.ಒಳ್ಳೆ ಬತ್ತದ ಎಳೆ ಪೈರುಗಳನ್ನು ತಿನ್ನುತ್ತದೆ ಆದುದರಿಇಂದ ಅದು ಬಹಳ ಶುದ್ದ ವಾದದ್ದು ಅಂತಾ ವಾದಿಸುತ್ತಾರೆ.ಅಂದರೆ ಮಡಿಯಲ್ಲಿ ಇದ್ದವರೂ ಸಹ ಕಾಡುಹಂದಿ ತಿನ್ನಬಹುದು ಅಂತಾಯಿತು!!!.


ಅಷ್ಟಕ್ಕೂ ಪೋರ್ಕ್ ಬಹಳ ತಂಪು ಇರುತ್ತದಂತೆ.ಕುಡಿತ ಹೀಟ್ ಅಂತೆ!.ಒಂದಕ್ಕೊಂದು ಸಕ್ಕತ್ತಾಗಿ ಬ್ಯಾಲನ್ಸ್ ಆಗುತ್ತಂತೆ!.ಪೋರ್ಕ್ ಗೆ ಬ್ರಾಂಡಿ ಒಳ್ಳೆ ಕಾಂಬಿನೇಷನ್ ಅಂತೆ. ಯಾಕೆಂದರೆ ಬ್ರಾಂಡಿ ಸಿಕ್ಕಾಪಟ್ಟೆ ಹೀಟ್ ಅಂತೆ. ಅದಕ್ಕೆ ನೆಗಡಿ ಆದವರಿಗೆ ಒಂದೆರಡು ಚಮಚ್ ರಾ ಬ್ರಾಂಡಿ ಕುಡಿಸಿದರೆ ನೆಗಡಿ ಹೋಗುತ್ತದಂತೆ!. ಇಲ್ಲಿನ ಬಿಸಿ/ಉಷ್ಣ ಹವೆಗೆ,ಹೀಟು....ಹೀಟು ...ಅಂತಾ ಸಾಯುವರಿಗೆ ಪೋರ್ಕ್ ಒಳ್ಳೆ ಆಹಾರ.


ನನಗೆ ಇಂಟರ್ನೆಟ್ ನಲ್ಲಿ ಸರ್ಕುಲೇಟ್ ಆಗುತಿರುವ ಒಂದು ಇ-ಮೇಲ್ ಬಂದಿದೆ. ಅದರ ಪ್ರಕಾರ ಹಂದಿ ಮಾಂಸದಲ್ಲಿ ಹುಳವಿರುತ್ತದಂತೆ.ಹಸಿ ಮಾಂಸವನ್ನ ಕೋಕಾ ಕೋಲಾ ದಲ್ಲಿ ಮುಳುಗಿಸಿದರೆ ಹುಳಗಳು ತಕಪಕ ಅಂತಾ ಹೊರಗೆ ಬರುತ್ತವಂತೆ!. ಕೆಲವರು ‘ಅದೆಲ್ಲಾ ಸುಳ್ಳು’ಎಂದು ಎಂದು ಎಗ್ರಾಡಿದರು.ಇನ್ನು ಕೆಲವರು ಅದಕ್ಕೆ ಹೇಳುವುದು ಮಾಂಸವನ್ನು ಕ್ಲೀನಾಗಿ ತೊಳೆದು ಚೆನ್ನಾಗಿ ಬೇಯಿಸಬೇಕು,ಹಾಗು ಹೀಗೂ ಹುಳು ಹೊಟ್ಟೆ ಸೇರಿದ್ದರೆ ಏನೂ ಹೆದರಬೇಕಿಲ್ಲ. ಚೆನ್ನಾಗಿ ಎಣ್ಣೆ(Rum)ಹಾಕಿದರೆ ಮುಗಿಯಿತು,ವರ್ಮ್ಸ್ ಫಿನಿಶ್ ಎಂದರು.


ಗೋಹತ್ಯ ನಿಷೇದ ಕಾಯ್ದೆ ಬಂದರೆ ಬಡವರಿಗೆಲ್ಲಾ ಕಡಿಮೆ ಬೆಲೆಯ ಪೌಷ್ಟಿಕತೆ ಕೈಗೆಟುಕದಂತಾಗುತ್ತದೆ ಎಂದು ಕೆಲವು ಜೀನ್ಸ್ ಪ್ಯಾಂಟಿನವರು ಚೀರಾಡುತಿದ್ದಾರೆ. ಬಟ್, ಅವರಿಗೆ ಪೋರ್ಕ್ ನ ಸ್ವಾದಿಷ್ಟ ತಿನಿಸುಗಳ ಬಗ್ಗೆ ಪರಿಚಯ ಇದ್ದಂತಿಲ್ಲ. ಚೀಪ್& ಬೆಸ್ಟ್ !. ಎಲ್ಲಾ ಬಡವರಿಗೂ ಕೈಗೆಟುಕುತ್ತದೆ.ಅದರ ಸಾಕಾಣಿಕೆ ಬಗ್ಗೆ ಸರ್ಕಾರವೇ ಪ್ರಚಾರ ಮಾಡಬೇಕು. ಯಾಕೆ?,ಕೋಳಿಗೆ,ಮೊಟ್ಟೆಗೆ ಪ್ರಚಾರ ನೀಡಿಲ್ಲವೇ?


‘ಬುದ್ಧ’ಕೂಡ ಪೋರ್ಕ್ ಸೇವಿಸಿದ್ದ ಎಂದು ಪಾಲಿ ಪುಸ್ತಕಗಳು ಹೇಳುತ್ತವೆ. ಅದು ಪಾಲಿ ಪುಸ್ತಕಗಳಲ್ಲ.ಪೋಲಿ ಪುಸ್ತಕಗಳು ಎಂದು ಜಗಳಕ್ಕೆ ಬರಬೇಡಿ. ಪೋಲಿ ಪುಸ್ತಕಗಳಲ್ಲಿ ಹಂದಿ ಮಾಂಸದ ವರ್ಣನೆಯನ್ನ ನಾನು ನನ್ನ ಸರ್ವೀಸಿನಲ್ಲೇ ನೋಡಿಲ್ಲ. ಮೇಲಾಗಿ ಬುದ್ದನನ್ನು ಕೆಲವರು ಅವತಾರಗಳ ಲಿಸ್ಟ್ ಗೆ ಸೇರಿಸಿದ್ದಾರೆ. ಸೊ, ಅವನೇ ಪೋರ್ಕ್ ರೆಕಮೆಂಡ್ ಮಾಡಿದ್ದ ಅನ್ತಾಯಿತಲ್ಲಾ.(ಈ ಬಗ್ಗೆ ಇತಿಹಾಸತಜ್ನರಲ್ಲಿ ಸ್ವಲ್ಪ ಗಲಿಬಿಲಿ ಇದೆ,ಕೆಲವರು ‘ಶಕ್ರ ಮದ್ದವ’ಅಂದರೆ ಪೋರ್ಕ್ ಅಲ್ಲ.ಒಂದು ಬಗೆಯ ಅಣಬೆ ಎನ್ನುತ್ತಾರೆ).


ಈಗೀಗ ಉತ್ತರ ಬಾರತೀಯರು ಬೆಂಗಳೂರಿನಲ್ಲಿ ಹೆಚ್ಚಾಗಿರುವುದರಿಂದ ಹೋಟೆಲಿನಲ್ಲಿ ಪೋರ್ಕ್ ನ ರೇಟ್ ಹೆಚ್ಚಾಗಿದಿಯಂತೆ. ಅಂದಹಾಗೆ ಪೋರ್ಕ್ ಪೌಷ್ಟಿಕಾಂಶದ ಗಣಿಯಂತೆ.ಆದರೆ ಇದರಲ್ಲಿ ಕೊಲೆಸ್ತೋರಲ್ ಸ್ವಲ್ಪ ಹೆಚ್ಚು.ಇದರಲ್ಲಿ ತಿಯಮಿನ್ ಅಂಶ ಇತರ ಮಾಂಸಗಳಿಗಿಂಥಾ ಹೆಚ್ಚಿರುತ್ತದಂತೆ. ಸೊ, ದಪ್ಪಗಿರುವವರು ಇದರ ಚರ್ಬಿ ತಿನ್ನದಿರುವುದು ಒಳ್ಳೆಯದು.


ಅಷ್ಟಕ್ಕೋ ಇಷ್ಟ ಇಲ್ಲದವರಿಗೆ ತಿನ್ನಿ,ತಿನ್ನಿ ಅಂತಾ ಬಲವಂತ ಮಾಡಿ ತಿನ್ನಿಸಿ ಎಂದು ನಾನೇನು ಹೇಳುತ್ತಿಲ್ಲ.ನಾನು ಉಣ್ಣುವ ಮುನ್ನ ರಕ್ತಾಪಾತ ಆಗಲೇ ಬೇಕು..ನನಗೆ ಮಾಂಸವೇ ಬೇಕು,ಮಾಂಸ ಇಲ್ಲದಿದ್ದರೆ ನಾವು ಸತ್ತೆ ಒಗುತ್ತೇವೆ ಎಂದರೆ ತಗೊಳಪ್ಪಾ,ಇದನ್ನೂ ಟೇಸ್ಟ್ ನೋಡು ಎನ್ನಬಹುದಷ್ಟೇ.


ಸರ್ವಜ್ಞನೇ ಹೇಳಿಲ್ಲವೇ? “ಬಾಡು ತಿಂಬಾತಂಗೆ.......
ಹೆಚ್ಚು ರುಚಿ,ಕಡಿಮೆ ಬೆಲೆ(?) ಆದುದರಿಂದ ಇದು ಎಲ್ಲ ವರ್ಗಗಳ ಕೈಗೆಟುಕುತ್ತದೆ.ಮುಂದಿನದಿನಗಳಲ್ಲಿ ಪೋರ್ಕ್ ಎಲ್ಲಾ ಮಾಂಸಾಹಾರಿಗಳನ್ನು ಒಂದುಗೂಡಿಸುವ ವಾಹಕವಾಗಬಹುದು.ಮುಂದಿನದಿನಗಳಲ್ಲಿ ಇದರಿಂದಲೇ ರಾಷ್ಟ್ರೀಯ ಭಾವೈಖ್ಯ ಮೂಡಿದರೂ ಅಚ್ಚರಿಯಿಲ್ಲ!


ಪೋರ್ಕ್ ಹೇಗೆ ಮಾಡುವುದೆಂದು ಕೆಳುತ್ತಿರಾ..ಇಲ್ಲಿದೆ ನೋಡಿ ಕೆಲವು ಲಿಂಕ್ಗಳು ...ಜಾಣಮರಿ...ಮಾಡಿ ಸವಿ...
http://hubpages.com/hub/How-To-Make-Delicious-Indian-Pork-Vindaloo
http://www.astray.com/recipes/?show=Indian%20pork%20with%20honey
http://www.pigonaspit.com/india.php

ಗುರುಗಳೂ...ಡೈಲಾಗ್ ಗಳೂ ...



ಈ ಪ್ರಸಂಗವನ್ನ ನಾನು ಶಡಕ್ಷರಿಯವರ ಆಣಿಮುತ್ತಿನಲ್ಲಿ ನಾನು ಓದಿದ್ದು,” ಚಿನ್ಮಯಾನಂದರು ಮುಂಬೈಗೆ ಹೋಗಿದ್ದಾಗ ಅವರಿಗೆ ನೆಗಡಿಯಾಯಿತಂತೆ.ಅವರು ಅದಕ್ಕೆ ವೈದ್ಯನ ಬಳಿ ಮಾತ್ರೆ ತೆಗೆದುಕೊಳ್ಳುವುದನ್ನು ನೋಡಿ ಯಾರೋ ನನ್ನಂತಹ ಕಿಡಿಗೇಡಿ ಲಾಯರ್ ಒಬ್ಬ ಅವರನ್ನು ಕೇಳಿದನಂತೆ ‘ನೀವ್ಯಾಕೆ ದೇವರನ್ನು ಕೇಳಿ ನೆಗಡಿ ವಾಸಿಮಾಡಿಕೊಳ್ಳಬಾರದು’ ಅಂತ. ಅದಕ್ಕೆ ಅವರೆಂದರಂತೆ “ನಿನಗೆ ಏನಾದರೂ ವ್ಯಾಜ್ಯ ಇದ್ದಾರೆ ನೇರವಾಗಿ ಸುಪ್ರಿಂ ಕೋರ್ಟ್ಗೇ ಹೋಗುತ್ತಿಯಾ?,ಎಂಟಾಣೆ ಮಾತ್ರೆಯಲ್ಲಿ ಗುಣವಾಗುವ ಕಾಯಿಲೆಗೆ ಸರ್ವಶಕ್ತ ಬಗವಂತನನ್ನೇಕೆ ಕಾಡಬೇಕು?” ಇತ್ಯಾದಿ,ಇತ್ಯಾದಿ..........zzzzzzzzzz

ಅದೇನೋ ತರ್ಕಬದ್ದವಾದ ಮಾತೆ!...ಅದು ವಕೀಲನ ಬಾಯಿ ಮುಚ್ಚಿಸಿತು. ಆದರೆ ಕೇಶವಪ್ರಸಾದ್ ಬಾಯಿ?.


“ನೆಗಡಿಯೇನೋ ವಾಸಿ ಮಾಡಬಹುದು ಬಿಡಿ,ನಿಮ್ಮ ಖಾಯಿಲೆಗೆ ಎಂಟಾಣೆ ಮದ್ದಿನ ಪರಿಣಾಮ ಆಗದೆ ನೀವು ಪರಂಧಾಮವನ್ನೈಯುವ ಸ್ತಿತಿ ಬಂದಾಗಲಾದರೂ ಬಗವಂತನ ಮೊರೆ ಹೋಗಿ ಪ್ರಾಣ ಉಳಿಸಿಕೊಳ್ಬಹುದಲ್ಲ, ಭಕ್ತ ಮಾರ್ಕಂಡೆಯನಂತೆ. ಯಾಕೆಂದರೆ ಜಗತ್ತನ್ನೇ ಉದ್ದಾರ ಮಾಡುವ ಗುರುತರ ಜವಾಬ್ಧಾರಿ ಗುರುವಿನ ಮೇಲಿರುತ್ತದಲ್ಲಾ. ಸ್ವಲ್ಪ ಭಗವಂತನನ್ನು ಕೇಳಿ ನೋಡಿ ,ನಿಮಗಾಗಿ ಅಲ್ಲದಿದ್ದರೂ ನಮ್ಮಂತಹ ಶಿಷ್ಯಕೋಟಿ ಗಾಗಿಯಾದರೂ ..........

ಗುರುಗಳು ಹಾಗೆಲ್ಲಾ ಸ್ವಾರ್ಥಕ್ಕಾಗಿ ವರ ಬೇಡುವುದಿಲ್ಲ. ಅವರಲ್ಲಿ ಶತಾಯುಷಿಗಳಾದವರಿಗಿಂತಲೂ ಅರ್ಜೆಂಟ್ ಅರ್ಜೆಂಟ್ ಆಗಿ ಹೋದವರೇ ಹೆಚ್ಚು....,ಇದಕ್ಕೆ ಕಾರಣ ದೇವರಿಗೆ ಅವರ ಮೇಲಿನ ಪ್ರೀತಿ.ಅದಕ್ಕೆ ಅವರನ್ನು ಅಷ್ಟು ಬೇಗ ಕರೆಸಿಕೊಳ್ಳುತ್ತಾನೆ. ಈ ಅವಿವೇಕಿ ಕೇಶವಪ್ರಸಾದ್ ತಿಳಿಯದೆ ತಲೆಹರಟೆ ಮಾಡುತ್ತಾನೆ, ಕ್ಷಮಿಸಿಬಿಡಿ, ಪ್ಲೀಸ್.


ಗುರುವಿನ ‘ಪವರ್’ ಯಾವುದರಲ್ಲಿರುತ್ತದೆ ಗೊತ್ತಾ. ಸಮಯೋಚಿತ ಡೈಲಾಗ್ ಹೊಡೆದು ಶಿಷ್ಯನ ಬಾಯಿಮುಚ್ಚಿಸುವುದರಲ್ಲಿರುತ್ತದೆ.


ಹೀಗೊಂದು ಸಂಬಾಷಣೆ ಓದಿದ್ದು ನೆನಪಾಗುತ್ತಿದೆ.”ಒಂದು ದಿನ U.G.ಕೃಷ್ಣಮೂರ್ತಿ ರಮಣ ಮಹರ್ಷಿಯನ್ನ ನೋಡಲು ಹೋಗಿದ್ದರಂತೆ. ಯು.ಜಿ. ಕೇಳಿದರಂತೆ “ನಾನು ಕೇಳಿದ್ದನು ಕೊಡಬಲ್ಲಿರಾ?,


ರಮಣ-ನಾನು ಕೊಡಬಲ್ಲೆ. ನೀನು ತೆಗೆದು ಕೊಳ್ಳಬಲ್ಲೆಯಾ ?.... ಅಷ್ಟೇ ಸಂಭಾಷಣೆ ನಡೆದಿದ್ದು ಇವರಿಬ್ಬರ ಮಧ್ಯೆ. ಮರಳಿ ಬಂದು ಬಿಟ್ಟರಂತೆ ಯು.ಜಿ.


ಸರಿ ನನಗೆ ತೆಗೆದು ಕೊಳ್ಳುವ ಸಾಮರ್ಥ್ಯವನ್ನೇ ಕೊಡಿ ಎನ್ನಬಹುದಿತ್ತು. ಆದರೆ ಇವನು ಏನನ್ನು ಕೊಡಬಲ್ಲ ಎಂಬ ಅನುಮಾನ ಬಂದಿರಬೇಕು ಯು.ಜಿ ಗೆ.


ಬರಿ,ಅಸಂಬದ್ದ ಮಾತುಗಳು..ಒಗಟುಗಳು,ದಾರಿತಪ್ಪಿಸುವ ಲೆಚ್ಚರ್ ಗಳು.



ದೇಹದ ಅಜರಾಮರತೆಯ ಬಗ್ಗೆ ನಮ್ಮಲ್ಲಿ ಹಲವು ಕಲ್ಪನೆಗಳಿವೆ. ಈ ಕುರಿತು ಓಶೋ ಒಂದು ಕಡೆ ಬರೆದಿದ್ದು ನೆನಪಾಗುತ್ತಿದೆ.,ಅದನ್ನು ತುರ್ಜುಮೆ ಮಾಡದೆ cut & paste ಮಾಡಿದ್ದೇನೆ.

I know about Sri Aurobindo, because he himself was teaching his whole life that his special work was to give methods to people to attain physical immortality. All old teachers have taught you spiritual immortality; that's not a big problem, because the spiritual element in you is already immortal.
He used to say, "I am doing the real thing. The physical body, which is not immortal, I am going to make it immortal." And one day he died...

The chief disciple, "the Mother" of the Sri Aurobindo ashram, finally found a solution to it. She said, "He is not dead, he has gone into deep samadhi, the deepest that anyone has ever gone. He will wake up again - he is simply asleep."

So they made a marble grave for him, with all the comforts, because he was just sleeping and one day he was going to wake up...Then years passed, but he did not knock from the grave. People started suspecting, but the mother was over ninety, and she was still preaching physical immortality...



Then one day she died. And it was very difficult for the believers, because the believers had some investment; their investment was their own immortality...


I said, "But how long will it take? By that time you will all be dead! Even if they come.... You just go and open the grave, and you will know that it is no longer sleep. There are only skeletons, stinking of death, not the fragrance of immortality.


ಹಾಗೆಂದ ಮಾತ್ರಕ್ಕೆ ಇಂತಹಾ ಚೇಷ್ಟೆಗಳಲ್ಲಿ ಓಶೋ ಹಿಂದೆಬಿದ್ದಿಲ್ಲ.ಇವರ “ಫ್ರಂ ಸೆಕ್ಸ್ ಟು ಸೂಪರ್ಕಾಂಕ್ಶಿಯಸ್”ಎಂಬ ಪುಸ್ತಕದಲ್ಲಿ ಬ್ರಹ್ಮಚರ್ಯದ ಬಗ್ಗೆ ಸನಾತನಿಗಳ ನಂಬಿಕೆಯನ್ನ ಲೇವಡಿ ಮಾಡುವ ಈತ “ಬುಕ್ ಆಫ್ ಮೆಡಿಟೆಷನ್ “ನಲ್ಲಿ (ಇದು ವಿಜ್ಞಾನ ಭೈರವ ತಂತ್ರಕ್ಕೆ ಇವನ ಭಾಷ್ಯ) ಲೈಂಗಿಕ energy ಯಾವ ರೀತಿ ತಲೆಗೆ ಏರಿ ಓಜಸ್ ಆಗುತ್ತದೆ ಎಂಬುದನ್ನ ರಸವತ್ತಾಗಿ ವರ್ಣಿಸುತ್ತಾನೆ. ಯಾವುದು ಸರಿ?ಯಾವುದು ತಪ್ಪು?.

 
ಇಂತಹ ವಿರೋಧಾಭಾಸಗಳು ಹೆಚ್ಚಿನ ಸಂತರಲ್ಲಿ ಕಂಡುಬರುತ್ತದೆ. ಅವರನ್ನೇ ಕೇಳಿದರೆ ಏನಾದರೂ ಉಡಾಫೆ ಉತ್ತರ ಕೊಡುತ್ತಾರೆ.ಇವರು ಎನೆಂದರೂ ಅವರ ಶಿಷ್ಯರು ಚಪ್ಪಾಳೆ ಹೊಡೆಯುತ್ತಾರೆ.ನಂತರ ಶಿಷ್ಯರೇ ಅದಕ್ಕೊಂದು ಅರ್ಥ ಕಟ್ಟಿ ಭಾಷ್ಯ ಬರೆಯುತ್ತಾರೆ.


ಇವರ ಸಂಭಾಷಣೆಗಳು ಯಾವಾಗಲೂ ಅಸಂಬದ್ದವಾಗಿರುತ್ತವೆ. ಈ ತತ್ವಜ್ಞಾನಿಗಳು ಇನ್ನೂ ಚೊರೆ...ಅವರದು ತಲೆಕೆಡಿಸುವ ತಂತ್ರ.ಉದಾ:ನಿಷ್ಷ್ಯಬ್ದವನ್ನ ಆಲಿಸು....ಮೌನದೊಂದಿಗೆ ಮಾತನಾಡು...ಅಸ್ತಿತ್ವವೇ ದೇವರು...ಮುಂತಾದ ಅಪ್ರಾಯೋಗಿಕ ವಿಷಯಗಳ ಬಗ್ಗೆ ಪುಟಗಟ್ಟಲೆ ಬರೆಯುತ್ತಾರೆ....ಪುಸ್ತಕಕ್ಕೆ ಹಾಕಿದ ದುಡ್ಡು ಹೇಗೂ ವೇಷ್ಟಾಗೊದಲ್ಲದೆ ತಲೆನೋವಿನ ಮಾತ್ರೆಗೆ ಇನ್ನಷ್ಟು ಖರ್ಚಾಗುತ್ತದೆ. ಜೊತೆಗೆ ಇಂತಹ ಅಸಂಬದ್ದ ವಿಚಾರಗಳನ್ನು ಪರಸ್ಪರ ಕೊರೆದುಕೊಳ್ಳಲು “ಸತ್ಸಂಗಗಳು” ಎಂದು ಮಾಡಿಕೊಳ್ಳುತ್ತಾರೆ. ಬೇರೆ ಬೇರೆ ಗುರುಗಳದೂ ಬೇರೆ ಬೇರೆ ಸಂಘಗಳಿವೆ. ಇವರೆಲ್ಲರನ್ನೂ ಒಂದೇ ಸಂಘಕ್ಕೆ ಸೇರಿಸಿದರೆ ಹೊಡೆದಾಟವೇ ಆಗಬಹುದು!..ಯಾಕೆಂದರೆ ಎಲ್ಲರಿಗೂ ಅವರ ಮಾರ್ಗವೇ ಸರಿ ಅಲ್ಲವೇ. ಯೆಲ್ಲದಕ್ಕೋ ಇಲ್ಲಿ ಗುರು ಸಿಗುತ್ತಾರೆ. ಅವರ ಫಿ ಕಟ್ಟಲು ಮತ್ತು ನಂಬಿ ಕೆಡಲು ನೀವು ತಯಾರಿರಬೇಕಷ್ಟೇ.



ಹೌದು ಸ್ವಾಮೀ, ಕೆಲವು ಗುರುಗಳು ಬೋದಿಸುವ ವಿದ್ಯೆಗಳು ಒಂದೇ ,ಯರಡೆ?, ನಾನು ಚಿಕ್ಕವನಿದ್ದಾಗ ತುಂಬಾ ತೆಳ್ಳಗಿದೆ. ಯಾರೋ ಹೇಳಿದರು,ಹಠ ಯೋಗ ಮಾಡು, ಬರೀ ದಪ್ಪಗೆ ಆಗುವುದೇನು ಮಹಾ, ಅಷ್ಟ ಸಿದ್ದಿಗಳೂ ಸಿಗುತ್ತವೆ’ಎಂದರು. ಹಠ ಯೋಗ ಮಾಡಿ ಸಿದ್ದಿ ಪಡೆದರೆ ಚಠ ಬೋಗ ಗಳನ್ನೆಲ್ಲಾ ಸುಲಭವಾಗಿ ಈಡೇರಿಸಿಕೊಳ್ಳಬಹುದಲ್ಲಾ ಎಂದುಕೊಂಡು ಯೋಗ ಕ್ಲಾಸ್ ಸೇರಿದೆ. ಅಲ್ಲಿಯ ಗುರು ಯಾವಾಗ ನೋಡಿದರೂ ಬಲಕ್ಕೆ ವಾಲಿಕೊ೦ಡೋ,ಎಡಕ್ಕೆ ವಾಲಿಕೊಂಡೋ, ತಲೆಮೇಲೆ ನಿಂತುಕೊಂಡೋ ಇರುತಿದ್ದ. ಇವನು ಯೋಗ ಮಾಡುವ ಫೋರ್ಸ್ ನೋಡಿ, ಇವ ಕಮ್ಮಿಯೆಂದರೂ ಒಂದು ಸಾವಿರ ವರ್ಷ ಬದುಕುತ್ತಾನೆ ಎಂದುಕೊಂಡೆ. ಮೊನ್ನೆ ಪೇಪರ್ ನಲ್ಲಿ ನೋಡುತ್ತೇನೆ, ಅವನು ತೊಂಬತ್ತಕ್ಕೆ ಡಮಾರ್. ಅವನ ಪ್ರಾಯದ ಜಿಮ್ಮಿ ಕಾರ್ಟರ್ ವಿಸ್ಕಿ ಕುಡುಕೊಂಡು ಆರಾಮಾಗಿದ್ದಾನೆ.....


ಅಧ್ಯಾತ್ಮಿಕ ಜಗತ್ತಿನ ಮೇಲಿನ ನನ್ನ ಅಸಂಖ್ಯ ಆರೋಪಗಳು ಇನ್ನೂ ಅಪೂರ್ಣವಾಗಿರುವ ಕಾರಣ ಈ ಲೇಖನ ಇನ್ನೂ ಮುಂದುವರೆಯುತ್ತದೆ.