Sunday, December 19, 2010

ದೇವಾಲಯಗಳಿಂದ ಹೊರಬರಲು ಐನೂರು ವರುಷ......

ರಾಜರ ಕಾಲದಿಂದಲೂ ಬಡಜನರನ್ನು ಮೂಸಿಯೂ ನೋಡದಿದ್ದ ದೇವರ ಮಕ್ಕಳೆಲ್ಲಾ ಬೀದಿಗಿಳಿದಿದ್ದಾರೆ.


ಅವರ ಗುರಿ ನಮ್ಮ ದೇಶದ ಜಾತೀಯತೆ ನಿರ್ಮೂಲನ ಮಾಡುವುದು!. ಬಡವರ ಗುಡಿಸಲಿಗೆ ಹೋಗಿ ಉಣ್ಣುವುದು ಇತ್ಯಾದಿ ಮಾಡುವ ಮಥಾದಿಪತಿಗಳು ಆಗಾಗ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಾರೆ.

ಇವರಿಗೆ ಈಗ ದಲಿತರ ಬಗ್ಗೆ ವಿಶೇಷ ಆಸಕ್ತಿ. ಏಕೆ ಗೊತ್ತೇ?

ಅದೊಂದು ರೀತಿಯ “customer retension strategy”.

ಮೊದಲೆಲ್ಲಾ ಒಳಗೆ ಬಿಡಿ ಎಂದರೆ ದೇವಸ್ಥಾನದೊಳಕ್ಕೆ ಬಿಡುತ್ತಿರಲಿಲ್ಲ. ಈಗ ಬನ್ನಿ, ಬನ್ನಿ ಅಂತಾ ಕೈಮುಗಿದು ಕರೆಯುತಿದ್ದಾರೆ.

ನಿಜ, ಈಗಲೂ ಜನಜಂಗುಳಿ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಈ ರೀತಿ ಹೋಗುವವರ ಪ್ರಬೇದ ಬೇರೆಯಾಗಿದೆ. ಹಿಂದೆ ಮಾಂಸ ತಿನ್ನುವ ಮಂದಿ ದೇವಾಲಯಗಳಲ್ಲಿ ಸ್ವಾಗತಾರ್ಹರಾಗಿರಲಿಲ್ಲ. ಆದರೆ ಈಗ ಹೆಚ್ಚಿನ ದೇವಸ್ಥಾನಗಳ ಹುಂಡಿ ತುಂಬುವವರು ಅದೇ ಮಾಂಸ ತಿನ್ನುವ ಮಂದಿ!. ಯಾವ ಪತ್ರಿಕೆ ನೋಡಿ, ದೇವರಿಗೆ ಕಿರೀಟ ನೀಡುವುದು...ಹಾರ ನೀಡುವುದು ಇದೆ ನವ ಶ್ರೀಮಂತ ಸಮೂಹ. ಈ ಗುಂಪಿಗೆ ಹೊಸಹೊಸ ಜನರನ್ನು, ಅದರಲ್ಲೂ ವಿಶೇಷವಾಗಿ ಊರ್ಧ್ವಮುಖಿಯಾಗಿರುವ,ಪ್ರಗತಿಹೊಂದಲು ಆರಂಬಿಸಿರುವ ಹಿಂದುಳಿದ ವರ್ಗಗಳನ್ನು ಸೇರಿಸಿಕೊಂಡು ಬಿಟ್ಟರೆ ಹುಂಡಿಗಳು, ಆರತಿ ತಟ್ಟೆಗಳು ಜಣ ಜಣ ಅನ್ನುತ್ತವೆ ಅನ್ನುವುದು ಈ ಧಾರ್ಮಿಕ ನಾಯಕರ ಲೆಕ್ಕಾಚಾರ. ಹಿಂದೆ ಸಿಕ್ಕಾಪಟ್ಟೆ ಕೊಟ್ಟು, ಕೈಸುಟ್ಟು ಕೊಂಡ ಹಳೆಭಕ್ತರು ಬಿಟ್ಟು ಹೋದರೂ ಹೊಸ ಭಕ್ತರಿಂದ ಆ ಜಾಗ ತುಂಬಿಸಿಕೊಳ್ಳುವ ಮುಂದಾಲೋಚನೆ. ಇನ್ನು ದೇವರನ್ನು,ಭಕ್ತಿಯನ್ನು ಮಾರುವ ಪ್ರೈವೇಟ್ ಕೇಂದ್ರಗಳೂ ಇವೆ. ಎಲ್ಲಿ ತಮ್ಮ ಬಿಸಿನೆಸ್ಸ್ (ದೇವಾಲಯ) ಮುಜಾರಾಯಿ ಇಲಾಖೆ ವಶಪಡಿಸಿ ಕೊಳ್ಳುತ್ತದೋ ಎಂಬ ಭಯ ಈ ಭಕ್ತಿಯ ವ್ಯಾಪಾರಿಗಳಿಗಿದೆ.ಅದಕ್ಕಾಗಿ, ಹುಂಡಿಗೆ ಬಿದ್ದ ಕೋಟ್ಯಾಂತರ ರೂಪಾಯಿಯಲ್ಲಿ ಒಂದು ಚಿಕ್ಕ ಬಾಗವನ್ನು ಧರ್ಮಕಾರ್ಯಗಳಿಗೆ ಉಪಯೋಗಿಸುತ್ತಾರೆ. ಈ ಮೂಲಕ ಜನರ ಕಣ್ಣಿಗೆ ಮಂಕುಬೂಧಿ ಎರಚುತ್ತಾರೆ. ಧರ್ಮ ಅಪಾಯದಲ್ಲಿದೆ ಎಂಬ ಕೂಗು ಹಾಕುತ್ತಾರೆ. ಅದುದರಿಂದ ಈಗ ಜಾತಿ ಜಾತಿಗಳಲ್ಲಿ ಮಠಗಳು,ಗುರುಪೀಠಗಳು ಆರಂಭವಾಗಿದೆ. ಇವರು ಎಲ್ಲಾ ಸಮಾರಂಭಗಳಿಗೂ ಹಾಜರಾಗಿ ಉಪದೇಶ ಮಾಡಿ ನಾವೆಲ್ಲಾ ವಿದ್ಯಾವಂತರಾಗಬೇಕು ಎಂದು ಕರೇ ಕೊಡುತ್ತಾರೆ. ನಂತರ ವಿದ್ಯಾರ್ಚನೆಯಲ್ಲಿ ಸರಸ್ವತಿಯ ಮಹಿಮೆಯನ್ನು ನಮ್ಮ ಮನಸ್ಸಿನಲ್ಲಿ ಬಿತ್ತುತ್ತಾರೆ. ನಾವು ವಿದ್ಯಾವಂತರಾಗುತ್ತೆವೋ ಇಲ್ಲವೋ ,ನಮ್ಮ ಖರ್ಚಿನಲ್ಲಿ/ಹೆಸರಿನಲ್ಲಿ ಒಂದು ಆಶ್ರಮ,ಒಂದು ಎಂಜಿನಿಯರಿಂಗ್/ಮೆಡಿಕಲ್ ಕಾಲೇಜ್ ,ಒಂದು ದೇವಸ್ಥಾನ ಓಪನ್ ಆಗುತ್ತೆ. ಆದರೆ ಅಲ್ಲಿ ವಿಧ್ಯಾವಂತರಾಗುವುದು ನಮ್ಮ ಜಾತಿಯ,ರಾಜ್ಯದ,ಧರ್ಮದ ಬಡ ಜನ ಅಲ್ಲ, ಡೊನೇಶನ್ ಕೊಡುವ ತಾಕತ್ತಿರುವ ಹೊರರಾಜ್ಯದ,ಹೊರದೇಶದ ಮಂದಿ!. ನಿಮಗಾಗಿ ಏನೂ ಇಲ್ಲಾ ಅಂತಾ ಕೊರಗದಿರಿ ಇದ್ದೆ ಇದಿಯಲ್ಲಾ ದೇವಸ್ಥಾನ!.! ಭಜನೆಮಾಡಲು!.



ಭಕ್ತಿ ಸಂತರಿಂದ ಚಳುವಳಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ನಾವು ದೇವಾಲಯಗಳಿಂದ ಹೊರಬರಲು ಸುಮಾರು ಐನೂರು ವರುಷಗಳೇ ಸಂದಿವೆ. ಈಗ ನಾವು ಮತ್ತೆ ಮರಳಿ ದೇವಾಲಯಕ್ಕೆ ಹೋಗಿ ಬಂಧಿಯಾಗುವುದು ಎಷ್ಟು ಸರಿ?

1 comment:

Anonymous said...

ಗಣಪತಿ ಸಚ್ಚಿದಾನಂದನ ಕಿಲಾಡಿತನ.
ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಗಣಪತಿ ಸಚ್ಚಿದಾನಂದ ಎಂಬಾತ ವೆಂಕಟೇಶನ ಗುಡಿ ಕಟ್ಟಿಸಿದ್ದಾರೆ. ನಾನು ಹೋದಾಗ ನೋಡುತ್ತೇನೆ. ಪೂಜಾರಿಗಳು ಖಾಲಿ ಆರತಿ ತಟ್ಟೆಯ ಮುಂದೆ ಹ್ಯಾಪು ಮೋರೆ ಹಾಕಿ ಕುಂತಿದ್ದಾರೆ!. ಜನರನ್ನು ನೋಡಿದ ಕೂಡಲೇ ಕಿರೀಟದಂತಹ ವಸ್ತುವನ್ನು ಹಿಡಿದುಕೊಂಡು ಅದನ್ನು ತಲೆಗೆ ತಾಗಿಸಲು ಉತ್ಸಾಹದಿಂದ ಪುಟಿದುನಿಲ್ಲುವ ಪೂಜಾರಿಗಳು ಪಾಪ, ಹೀಗೇಕಾದರು? ಎಂದು ಆಲೋಚಿಸುತ್ತ ತೀರ್ಥ ತಗೊಳ್ಳಲು ಹತ್ತಿರ ಹೋದಾಗ ಅದರ ರಹಸ್ಯ ತಿಳಿಯಿತು. ಆ ದೇವಾಲಯದ ಹುಂಡಿಯನ್ನು ಆರತಿ ತಟ್ಟೆಯಂತೆ ಡಿಸೈನ್ ಮಾಡಲಾಗಿದೆ. ಪಕ್ಕದ್ದಲ್ಲಿ ಪೂಜಾರಿಗಳು ಕೂರುವ ಜಾಗ. ತೀರ್ಥ ತಗೊಳ್ಳೋ ಆತುರದಲ್ಲಿ ಅಬ್ಯಾಸಬಲದಿಂದ ಸಡನ್ ಆಗಿ ನೀವು ಚಿಲ್ಲರೆ ಹಾಕಿಬಿಟ್ಟರೆ ಅದು ಜಾರಿ ಸೀದಾ ಸಚ್ಚಿದಾನಂದನ ಹುಂಡಿ ಸೇರುತ್ತದೆ ! ಎಲಾ ನನ ಮಗನೇ...ಇಷ್ತಿಲ್ಲದೆ ಜಗದ್ಗುರು ಆಗುತ್ತಿದ್ದೇಯಾ... ಅಂದ್ಕೊಂಡೆ ...
ಸಚ್ಚಿದಾನಂದ ನನ್ನ ನೆಲ ಕದ್ದಿದ್ದಾನೆ ಅಂತಾ ಪಕ್ಕದ ಜಮೀನಿನ ಅನಿಲ್ ಕುಮಾರ್ ಎಂಬಾತ ಈ ಸ್ವಾಮೀಜಿಯನ್ನು ಜೈಲಿಗೆ ಕಳಿಸಿದ್ದಾಗ ಇಲ್ಲಿನ ಪೂಜಾರಿಗಳಿಗಂತೂ ಹಾಲು ಕುಡಿದಷ್ಟು ಖುಷಿಯಾಗಿರಬೇಕು!