Tuesday, March 30, 2010

ದೇವರಿಗೂ ರಾಹುಕಾಲದ ಭಯ?

ನಮ್ಮ ಕಚೇರಿಯ ಬ್ರಷ್ಟರೆಲ್ಲಾ ಸೇರಿ ಆಫೀಸಿನಲ್ಲಿಯೇ ಒಂದು ಪೂಜೆ ಇಟ್ಟುಕೊಂಡಿದ್ದರು. ೧೨ ಗಂಟೆಯೊಳಗೆ ಆಗಬೇಕು,ಆಮೇಲೆ ರಾಹುಕಾಲ ಎಂದು ಅರ್ಜೆಂಟ್ ಮಾಡುತಿದ್ದರು. ಹೇಗಿದೆ ನೋಡಿ ತಮಾಷೆ..ದೇವರಿಗೂ ರಾಹುವಿನ ಭಯ!.

ಅಥವಾ....

ರಾಹು ಕಾಲದಲ್ಲಿ ಪೂಜೆ ಮಾಡಿದರೆ ಅದರ ಫಲ ಸಿಗೋದಿಲ್ಲಾ ಎಂಬ ಕಾರಣಕ್ಕೆ ಇರಬಹುದು.


ಪಲಾಪ್ಹೇಕ್ಷೆ ಬಿಟ್ಟು ಪೂಜೆಮಾಡು, ಹತ್ತರಷ್ಟು ಫಲ ಸಿಗುತ್ತೆ ಎನ್ನುತ್ತಲೇ,ಈ ಕಡಯಿಂದ ಪಲ ದೊರಕುವಂತಹ technical adjustment ಮಾಡಿಕೊಳ್ಳುವ ಇವರ ವೈಖರಿ ಮೆಚ್ಚಬೇಕ್ಕಾದೆ!


Sunday, March 28, 2010

NAVYANTA ನವ್ಯಾಂತ

ಮುಂಜಾವಿನ ಕೆಲವು ಚಿಂತನೆಗಳು -

ಭಟ್ಟ೦ಗಿತನದ ವೈಭವೀಕರಣ

ನಮ್ಮ ಶಾಲೆಯ ಪಟ್ಯ ಪುಸ್ತಕದಲ್ಲಿ ಒಂದು ಕಥೆ ಇತ್ತು.ಅದು ತೆನಾಲಿ ರಾಮಕೃಷ್ಣ ನೆಂಬ ಆಸ್ಥಾನ ವಿದೂಷಕ ನೊಬ್ಬ ಹಸಿದ ಬೆಕ್ಕಿಗೆ ಬಿಸಿ ಹಾಲು ಕುಡಿಸುವ ಕಥೆ. ನಮ್ಮ ಮೇಸ್ಟ್ರು ಅದೊಂದು ಅಪ್ರತಿಮ ಹಾಸ್ಯ ಸನ್ನಿವೇಶವೆಂಬಂತೆ ಅದನ್ನು ಬಹಳ ರಸವತ್ತಾಗಿ ಬಣ್ಣಿಸುತಿದ್ದ. ಅದನ್ನು ಕೇಳಿದ ಮಂಜ ಮತ್ತು ರವಿ ತಾವು ಅಂತಹ ಪ್ರಯೋಗ ಮಾಡುವ ಬಗ್ಗೆ ಮಾತಾಡಿಕೊಳ್ಳುತಿದ್ದರು.ಅವರು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ತಂದರು ಎಂದು ಗೊತ್ತಿಲ್ಲ. ಆ ಕಾಲದಲ್ಲಿ ಪಟ್ಯಪುಸ್ತಕ ಸೆಟ್ ಮಾಡಿದ ಮೂರ್ಖ ಬಡ್ಡಿಮಕ್ಕಳಿಗೆ ತೆನಾಲಿ ರಾಮನ ಆ ಕಥೆಯೇ ಸಿಗಬೇಕೆ?. ಇದರಲ್ಲಿ ಹಾಸ್ಯಕ್ಕೆ ಹೊರತಾಗಿ ನಾವು ಗಮನಿಸಬೇಕಾದ ಹಲವು ಅಂಶಗಳಿವೆ.ಒಂದನೆಯದು ಆ ಬೆಕ್ಕಿನ ಹಸಿವು ಮತ್ತು ಮೂಕವೇದನೆ,ಅದರ ಬಗ್ಗೆ ಕಥಾನಾಯಕ ತೋರುವ ಉಡಾಫೆತನ . (ಪೂರ್ಣಚಂದ್ರ ತೇಜಸ್ವಿಯವರ ಯಾವುದೋ ಕೃತಿಯಲ್ಲಿ,ಬಹುಶಃ ಅಣ್ಣನ ನೆನಪು ಇರಬೇಕು,ಅವರು ಮಿತ್ರರೊಂದಿಗೆ ಸೇರಿ ಬೀದಿ ನಾಯನ್ನು ಡಾಬರ್ಮನ್ ಮಾಡಲು ಹೋಗಿ ಅದರ ಬಾಲವನು ಕತ್ತರಿಸಿ ಹಾಕುವ ಸನ್ನಿವೇಶವಿದೆ)
ಎರಡನೆಯದು ಸ್ಪರ್ಧೆಯಲ್ಲಿ ನೇರವಾಗಿ ಬಾಗವಹಿಸಿ ಗೆಲ್ಲಲಾರದೆ ರಾಮಕೃಷ್ಣ ಆಯ್ದು ಕೊಳ್ಳುವ ವಾಮಮಾರ್ಗ. ಇದನ್ನು ನೀತಿಕಥೆ ಎಂದು ಬಿಂಬಿಸುವ ನಮ್ಮ ಶಿಕ್ಷಣತಜ್ಞರ ಮನೋವಿಕೃತಿ!.
ಇದರಲ್ಲಿ ಕೇಶವಪ್ರಸಾದ್ ಗೇ ಕಾಣುವುದು ಕ್ರೌರ್ಯ ಮತ್ತು ಸಂವೇದನಾಶೀಲತೆಯ ಕೊರತೆ. ಈ
ಸನ್ನಿವೇಶವನ್ನ ಕೂಡ ಮಕ್ಕಳಿಗೆ ಕರುಣೆಯನ್ನು,ಪ್ರೀತಿಯನ್ನು,ದಯೆಯನ್ನು ಬೋಧಿಸಲು ಬಳಸಬಹುದಿತ್ತು.
ತೆನಾಲಿ ರಾಮಕೃಷ್ಣ ಕಾಲಿಕಾ ದೇವಿಯಿಂದ ಅಪಾರ ಬುದ್ದಿಶಕ್ತಿಯ (?) ವರ ಪಡೆದ ಮೇಲೆ ಅದನ್ನು ಯಾವುದೇ ಒಳ್ಳೆಯ ರೀತಿಯಲ್ಲಿ ಬಳಸುವುದಿಲ್ಲ. ಬದಲಿಗೆ ರಾಜನನ್ನು ಹೊಗಳುತ್ತಾ, ರಾಜಾಶ್ರಯ ಪಡೆದು ಬಟ್ಟ೦ಗಿತನ ಮೆರೆಯುತ್ತಾನೆ. ಆಸ್ತಾನದಲ್ಲಿ ಒಂದಿಬ್ಬರು ಗೂದಚಾರರನ್ನು ಪತ್ತೆಹಚ್ಚಲು ನೆರವಾಗುತ್ತಾನೆ ಎಂಬುದನ್ನು ಬಿಟ್ಟರೆ ವಿಜಯನಗರ ಸಾಮ್ರಾಜ್ಯ ಕಟ್ಟುವಲ್ಲಿ ಇವರ ಕೊಡುಗೆ ಏನೇನು ಇಲ್ಲಾ. ಬೀರಬಲ್ಲನಾದರೂ ಅಕ್ಬರನಿಗೆ ಆಡಳಿತದಲ್ಲಿ ಒಂದಿಷ್ಟು ಸಹಾಯ ಮಾಡುತಿದ್ದ. ಸೇನಾಧಿಕಾರಿಯಾಗಿಯೂ ಕೆಲಸ ಮಾಡಿದ್ದ. NWFP ಪ್ರಾಂತ್ಯದಲ್ಲಿ ಆದ ಬುಡಕಟ್ಟು ಜನರ ದಂಗೆಯನ್ನ ಹತ್ತಿಕ್ಕಲು ಬೀರಬಲ್ಲನ ನಾಯಕತ್ವದಲ್ಲಿ ಸೇನೆ ಕಳುಹಿಸಲಾಯಿತು. ಆ ಕಾಳಗದಲ್ಲಿ ಆತ ಮರಣವನ್ನಪ್ಪುತ್ತಾನೆ.

ಒಂದು ಸಾಮ್ರಾಜ್ಯದ ಉನ್ನತಿಗೆ ಮೂಲಾಧಾರವೆಂದರೆ ಅದರ ಆರ್ಥಿಕತೆ ಮತ್ತು ಅದರ ಸೇನಾಬಲ. ಆದರೆ ಆ ಕಾಲದ ವರ್ತಕರ ಬಗ್ಗೆಯಾಗಲಿ,ಸಾಧಾರಣ ಸೈನಿಕರ ಬಗ್ಗೆಯಾಗಲಿ ಅಷ್ಟೇನೂ ಸಾಹಿತ್ಯಗಳು ಕಂಡು ಬರುವುದಿಲ್ಲ. ಅವೇನಿದ್ದರು ಶಿಷ್ಟ ಸಮಾಜಕ್ಕೆ ರುಚಿಸದ ಲಾವಣಿಗಳಲ್ಲಿ,ಅಲ್ಲಿ ಇಲ್ಲಿ ಕಂಡು ಬರುವ ವೀರಗಲ್ಲು,ಮಾಸ್ತಿಕಲ್ಲುಗಳಲ್ಲಿ ಮೂಡಿವೆಯಷ್ಟೆ.

ಆದರೆ ರಾಜನ ಆಸ್ತಾನ ಸೇರಿಕೊಂಡು ಅವನನ್ನು ತಮ್ಮ ವಿದ್ವತ್ತಿನಿಂದ ,ತಮ್ಮ ಹೊಗಳುವ ಸಾಮರ್ಥ್ಯದಿಂದ ರಾಜನ (ಇಲ್ಲದ)ಗುಣಗಳ ಪ್ರಶಂಸೆ ಮಾಡಿಕೊಂಡು ಅದರಬಗ್ಗೆ ಕಾವ್ಯಗಳನ್ನು ರಚಿಸುತ್ತಾ,ಅಥವಾ ವ್ಯಾಕರಣದ ಬಗ್ಗೆಯೋ,ಒಗಟುಗಳ ಬಗ್ಗೆಯೋ ಚರ್ಚಿಸುತ್ತಾ ರಾಜನ ಕಾಲಹರಣ ಮಾಡಿ ಅವನಿಂದ ಒಳ್ಳೊಳೆಯ ಉಡುಗೊರೆಗಳನ್ನು ಕಿತ್ತುಕೊಳ್ಳುತಿದ್ದರು. ಅತ್ತ ರಾಜ ಯುದ್ದದಲ್ಲಿ ಸತ್ತ ಸುದ್ದಿ ಕೇಳುತಿದ್ದಂತೆ ಬೆಲೆಬಾಳುವ ವಸ್ತುಗಳನ್ನೆಲ್ಲಾ ಮೂಟೆ ಕಟ್ಟಿಕೊಂಡು ರಾಜದಾನಿಯಿಂದ ಪರಾರಿಯಾಗುವುದು ಮತ್ತು ಇನ್ನೊಬ್ಬ ರಾಜನ ಆಸ್ಥಾನ ಸೇರಿಕೊಳ್ಳುವುದು!. ಆದರೆ ಯಾವುದೇ ಸಾಮ್ರಾಜ್ಯದ ಉನ್ನತಿಯ ಹಿಂದೆ ಇರುವುದು ತಮ್ಮದೇ ಶ್ರಮವೆಂದು ಈ ಬುದ್ದಿಜೀವಿಗಳು ಬಿಮ್ಬಿಸಿಕೊಳ್ಳುತ್ತಾರೆ. ಈ ಜನರ ವಂಶಾವಳಿ ಇಂದಿಗೂ ಜೀವಂತವಾಗಿದೆ. ಇನ್ಸ್ಟಿಟ್ಯೂಟ್ ಆಫ್ ಆ ಸ್ಟಡಿ.., ಈ ಸ್ಟಡಿ...,advanced study...etc ಮುಂತಾಗಿ ಸಂಸ್ತೆಗಳನ್ನು ಸರ್ಕಾರಿ ಹಣಕಾಸಿನ ನೆರವಿನಿಂದ ಕಟ್ಟಿಕೊಂಡು ತಾವುಗಳು ಸರ್ಕಾರಕ್ಕೆ ‘policy making’ ನಲ್ಲಿ ನೆರವಾಗುವ ‘Think Tank’ಗಳೆಂದು ಓಡಾಡುತ್ತಾರೆ. ಸಲಹಾ ಸಮಿತಿಗಳನ್ನು ರಚಿಸುವುದೇ ಯಾವುದೇ ಹಾಗು ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದು ಸರ್ಕಾರಕ್ಕೆ ಸಲಹೆ ನೀಡಿ ಆ ಸಮಿತಿಗಳ ಸದಸ್ಯರಾಗುತ್ತಾರೆ. ಯಾವುದೇ ಸಮಿತಿಯ ಸಲಹೆಗಳನ್ನೂ ನೋಡಿ,ಅದರಲ್ಲಿ ಯಾವುದೇ ಪರಿಹಾರ ಇರುವುದಿಲ್ಲ.ಉದಾಹರಣೆಗೇ ಆರ್ಥಿಕ ಸಮಿತಿಗಳನ್ನು ನೋಡಿ ..ಅವರು ಕೊಡುವ ಸಲಹೆ ಗಳೆಂದರೆ .....”ಬೆಲೆ ಹೆಚ್ಚಿಸಿ, ಸಬ್ಸಿಡಿ ಗಳನ್ನು ತೆಗೆಯಿರಿ,” ಇತ್ಯಾದಿ. ಈ ಮಾರ್ವಾಡಿ ಮನೋವೃತ್ತಿಯ ಸಲಹೆ ನೀಡಲು ಅವರೇ ಆಗಬೇಕೆ?, ಇಲ್ಲಿ ಅವರಿಗೆ ಕೆಲಸ ಕೊಡದಿದ್ದರೆ ವಿದೇಶಕ್ಕೆ ಹೋಗುತ್ತಾರಂತೆ!
ಒಟ್ಟಾರೆ ನಮ್ಮ ದೇಶದಲ್ಲಿ ಸಮಿತಿಗಳು,ಕಮಿಟಿಗಳು,ತಜ್ಞ ಸಂಸ್ತೆಗಳು ರಿಟೈರ್ಡ್ ನಾಯಿಗಳ ಆಶ್ರಯ ಧಾಮಗಳಾಗಿ ಪರಿಣಮಿಸಿವೆ. ಇವರ ಸಲಹೆಗಳನ್ನು ತೆಗೆದುಕೊಳ್ಳದೆ ಪುಡಾರಿಗಳು ದೇಶವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿರುವುದು ಜನಸಾಮಾನ್ಯನ ಅದೃಷ್ಟವೆಂದೇ ಹೇಳಬಹುದು....,

ಅಂತೂ ತೆನಾಲಿ ರಾಮನ ಪಳೆಯುಳಿಕೆಗಳು ಈಗಲು ನಮ್ಮ ನಡುವೆ ಇರುವುದು ನಮ್ಮ ಪಟ್ಯ ಪುಸ್ತಕಗಳನ್ನೂ ಸೆಟ್ ಮಾಡುವುದು,ಪೇಪೆರ್ ವ್ಯಾಲುವೇಷನ್ ಮಾಡುವುದು ನಮ್ಮ ದುರದೃಷ್ಟ

Friday, March 26, 2010

ದಾಸರಿಂದ ಹರಿನಿಂದೆ !!!!

ಆರು ಬದುಕಿದರಯ್ಯ ಹರಿ ನಿನ್ನ ನಂಬಿ ll
ತೋರು ಈ ಜಗದೊಳಗೆ ಒಬ್ಬರನು ಕಾಣೆ ll
ಕರಪತ್ರದಿಂದ ತಾಮ್ರದ್ವಜನ ತಂದೆಯ l
ಕೊರಳ ಕೊಯ್ಸಿದೆ ನೀನು ಕುಂದಿಲ್ಲದೆ ll
ಮರುಳನಂದದಿ ಪೋಗಿ ಬ್ರುಗುಮುನಿಯ ಕಣ್ಣ ಒಡೆದೆ!
ಅರಿತು ತ್ರಿಪುರಾಸುರರ ಹೆಂಡಿರನು ಬೆರೆದೆ ll 1 ll 
ಕಲಹ ಬಾರದ ಹಾಗೇ ಕರ್ಣನನು ನೀ ಕೊಂದೆ l 
ಸುಲಭದಲಿ ಕೌರವರ ಮನೆಯ ಮುರಿದೆ ll
ನೆಲನ ಬೇಡುತ ಪೋಗಿ ಬಳಿಯ ತನುವನು ತುಳಿದೆ l
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ ll2ll
ತಿರಿದುಂಬ ದಾಸರ ಕೈಲಿ ಕಪ್ಪವನು ಕೊಂಬೆ l
ಗರುಡ ವಾಹನ ನಿನ್ನ ಚರಿಯವನರಿಯೇ ll
ದೊರೆ ಪುರಂದರ ವಿಠಲ ನಿನನ್ನು ನಂಬಿದರೆ l
ತಿರುಪೆಯೂ ಹುಟ್ಟಲೊಲ್ಲದು ಕೇಳೋ ಹರಿಯೆ  ll3ll  
                             -ಪುರಂದರದಾಸರು 

Tuesday, March 23, 2010

ಸದ್ಗುರುವಿಗೆ ಜೈ ಹೋ(Part-2)



ಕುವೆಂಪು ಸಾಹೇಬರು ಒಂದು ಕಡೆ ಈ quotation  ಹೇಳಿದ್ದಾರೆ " ಹಿಂದೆ ಗುರು ಇದ್ದ,ಮುಂದೆ ಗುರಿ ಇತ್ತು " ಅಂತ. ಆದರೆ ಅವರು ಇದನ್ನು ಯಾವರ್ಥದಲ್ಲಿ ಹೇಳಿದ್ದಾರೆ ಅನ್ನೋದನ್ನು ಅಡಿಟಿಪ್ಪಣಿಯಲ್ಲಿ ಹೇಳಿದ್ದರೆ ಚೆನ್ನಾಗಿತ್ತು.ಯಾಕೆಂದರೆ ಕೇಶವಪ್ರಸಾದ್ ಹೇಳುವುದು"ಮುಂದೆ 'ಉರಿ' ಇತ್ತು.ಹಿಂದೆ 'ಕುರು' ಇತ್ತು" ಅಂತ!.
ಯಾಕೆಂದ್ರೆ ಆ "ಹಿಂದೆ" ಎನ್ನಬಹುದಾದಂತಹ ಕಾಲಗಟ್ಟದಲ್ಲಿ ನಮ್ಮ ದೇಶದ ಸಹಸ್ತ್ರಾರು ಮಂದಿಗೆ ಇದ್ದದು ಬರೀ ಕಷ್ಟ ,ಕಾರ್ಪಣ್ಯಗಳೇ. ಈ ದೇಶದ ಸೆಕೆ,ಬರಗಾಲ,ಮಳೆಯ ಜೊತೆ ಸದಾ ಜೂಜಾಟದಂತಹ ರೈತಾಪಿ ಬದುಕಿನ 'ಉರಿ' ಒಂದೆಡೆಯಾದರೆ ಇತ್ತ ಜೀತಪದ್ದತಿ,ಜಾತಿಪದ್ದತಿ,ದೇವರು,ದಿಂಡರು ಎಂಬ 'ಕುರು' ಅವನನ್ನು ಕುಳಿತು ವಿಶ್ರಾಂತಿ ಪಡೆದು ಕೊಳ್ಳಲೂ ಬಿಡದಂತಹ ಸನ್ನಿವೇಶವಿತ್ತು. ಆ ದಾರಿಯಲ್ಲಿ ಹೋಗುವ ಪ್ರತಿಯೊಬ್ಬ ಆಕ್ರಮಣಕಾರರು,ರಾಜ ಮಹಾರಾಜರು,ಸಾಮಾನ್ಯರನ್ನು ಸುಲಿದು ಅವರ ಊರಿಗೆ,ಗುಡಿಸಲುಗಳಿಗೆ ಬೆಂಕಿ ಹೆಟ್ಟುತಿದ್ದರು. ಉಳಿದಿದ್ದನ್ನು ನಮ್ಮ ರಿಷಿ,ಮುನಿಗಳು ಬಿಕ್ಷೆಯ ಹೆಸರಲ್ಲಿ ದೊಚುತಿದ್ದರು. ಆ 'ಹಿಂದೆ' ಇದ್ದದು ಇದ್ದವರ ದಬ್ಬಾಳಿಕೆಯೇ ಹೊರತು ಗುರು ,ಗುರಿ ಯಾವುದೂ ಅಲ್ಲ. ಗುರುವನ್ನು ನಂಬಿ ಗುರಿ ಇಟ್ಟವನು ಹೆಬ್ಬೆಟ್ಟನ್ನೇ ಕಳೆದುಕೊಳ್ಳುತಿದ್ದ ಕಾಲವದು!(ಏಕಲವ್ಯ).ದ್ರೋಣ ಅಂದಿನ typical ಗುರು!. ಅತ್ತ ರಾಜ ಹಾಗೇ ದೋಚಿದರೆ ಇತ್ತ ದಟ್ಟ ಕಾನನಗಳ ನಡುವೆ ಪರ್ಣಕುಟಿಗಳಲ್ಲಿ ವಾಸಿಸುವ ರಿಷಿ,ಮುನಿಗಳು ಸುಮ್ಮನಿರುತ್ತಾರೆಯೇ?. ಅಕ್ಷರವೇ ಇವರ ಆಯುಧ.ಆಗಾಗ ರಾಜನ ಆಸ್ತಾನಕ್ಕೆ, ,ಉರು,ಕೇರಿಯ ಗುಡಿಗಳಿಗೆ ದಾಳಿಇಟ್ಟು ದೋಚುವುದೇ ಇವರ ಕೆಲಸ. ಹೊರಗಡೆ ಬ್ರಹ್ಮಚಾರಿಗಳಂತೆ ,ಸಿದ್ದರಂತೆ,ಸಂತರಂತೆ ಮಿಂಚುತಿದ್ದ ಇವರುಗಳಿಗೆ ಕಾಡಿನಲ್ಲಿ ಪರ್ಣಕುಟಿಗಳಲ್ಲಿ ಸಂಸಾರಗಳಿದ್ದವು!. ಆಗಾಗ ಇಲ್ಲಿಗೆ ಬಂದು ಹೋಗುವ ಇಂದ್ರನತಹವರು ಇದ್ದಾರೆ. ಮೈಯೆಲ್ಲಾ ಮೀನಿನ ವಾಸನೆ ಹೊಡಿಯುತಿದ್ದ ಹೆಣ್ಣಾದರೂ ಸರಿ,ದೋಣಿ ದಾಟಿಸುವಾಗ ಸಮಯ ನೋಡಿ ಗರ್ಬವನ್ನು ಅನುಗ್ರಹಿಸುವ ಸದ್ಬುದ್ದಿಯೂ ಪರಾಶರರಂತಹ  ಪರಮ ವಿರಕ್ತರಿಗಿತ್ತು!.
ಇವರುಗಳ ಬುದ್ದಿಶಕ್ತಿಗಳು,ಆತ್ಮಜ್ಞಾನ ಮುಂತಾದವು ಸಾಮಾನ್ಯಜನಗಲಿಗಿಂತ ಹೆಚ್ಚೇನೂ ಇರಲಿಲ್ಲ ಎಂಬುದು ಪುರಾಣ

 ಕಥೆಗಳನ್ನು ಓದಿದರೆ ತಿಳಿಯುತ್ತದೆ.ಋಷಿ ಗಲೆನ್ನಿಸಿಕೊಂಡ ಇವರು ಅರಿಷಡ್ವರ್ಗಗಳ ಮುಷ್ಟಿಯಲ್ಲಿ ಸಿಕ್ಕಿ ಬಾಧೆ ಪಡುತಿದ್ದವರೇ! .
 ರೇಣುಕಾ  "ಕಾಮ"ದಿಂದ ಪ್ರೇರೇಪಿತಳಾಗಿ  ತಪ್ಪು ಮಾಡಿದ್ದಾಳೆ ಎಂಬುದು "ಕ್ರೋಧ"ದಿಂದ ಪ್ರೇರೇಪಿತನಾಗಿರುವ
ಜಮದಗ್ನಿಯ ವಾದ. ತಾನೊಬ್ಬ ದೊಡ್ಡ ತಪಸ್ವಿ ಎಂಬ "ಮದ"ದಿಂದ ಆಕೆಗೆ ಮರಣದಂಡನೆ ವಿಧಿಸುತ್ತಾನೆ.ಅರಿಷಡ್ವರ್ಗಗಳ
ಮುಷ್ಟಿಯಲ್ಲಿ ಬಂಧಿತರಾಗಿದ್ದ ಜಮದಗ್ನಿ  ,ದೂರ್ವಾಸರಂತಹವರಿಗೆ ಮಹರ್ಷಿಗಳೆಂದು ಕರೆಸಿಕೊಳ್ಳುವ ಯೋಗ್ಯತೆ ಉಂಟೆ? ಎಂಬುದು ಕೇಶವ ಪ್ರಸಾದ್ ರ ಪ್ರಶ್ನೆ.

ಅಥವಾ ಇಂತಹಾ ಗುಣ ದೋಷಗಳನ್ನು ಹೊಂದಿದವರನ್ನು ಮಹರ್ಷಿಗಳೆಂಬ ಪಟ್ಟ ನೀಡಿರುವ ಲೇಖಕರ ಬುದ್ಡಿಮತ್ತೆ 
ಎಂತಹದು? ಒಂದೋ ಅವರುಗಳು ಅಜ್ಞಾನಿಗಳಾಗಿರಬೇಕು ಅಥವಾ ಪೂರ್ವಾಗ್ರಹಪೀಡಿಟರಾಗಿರಬೇಕು.ಒಟ್ಟಾರೆ ಇಷ್ಟೆಲ್ಲಾ 
ಐಬು ಗಳಿದ್ದರೂ ಋಷಿಗಳು ಪೂಜರ್ಹರು.ಒಳ್ಳೆಯ ಗುಣಗಳನ್ನು ಹೊಂದಿದ್ದ ಬಲಿ ಚಕ್ರವರ್ತಿ ಮಾತ್ರ ವಧೆಗೆ ಅರ್ಹ!. 
ಸಂಬೋಗಸುಖದಲ್ಲಿರುವ ಶಿವನೂ ಕೂಡಲೇ ಹಾಸಿಗೆಯಿಂದ ಓಡಿಬಂದು ನಮಸ್ಕರಿಸಬೇಕು ಎಂಬ ತೆವಲನ್ನು ಹೊಂದಿದ್ದ 
ದೂರ್ವಾಸ ಮಹಾ ಜ್ಞಾನಿ!.

ಒಟ್ಟಾರೆಯಾಗಿ ಈ ಗುರುಕುಲಗಳು ವಿಕೃತ ಮನಸ್ಸಿನ ಜನಗಳಿಂದ ತುಂಬಿ ತುಳುಕುತ್ತಿತ್ತು. ಇಂದು ಒಬ್ಬ ಮಾತ್ರ ನಿತ್ಯಾನಂದ 
ಅಂದು ಇದ್ದವರೆಲ್ಲ ನಿತ್ಯಾನಂದರೆ!!



ಆದುದರಿಂದಲೇ ಇರಬೇಕು ರಾಕ್ಷಸರು ಈ ಋಷಿಮುನಿಗಳ ಆಶ್ರಮಕ್ಕೆ ನುಗ್ಗಿ ಅವರನ್ನು ಅಟ್ಟಾಡಿಸಿ ಹೊಡೆಯುತಿದ್ದುದು!.
 ಈ ವಿದ್ಯೆ ಎಂಬ ಆಯುಧ ಹಿಡಿದು ಜಟಾಜೂಟದಾರಿಗಳಾಗಿದ್ದವರೆಲ್ಲಾ  ವೈರಾಗ್ಯದ ಮಾರ್ಗ ಹಿಡಿದವರಲ್ಲ. ಕಾಮಸೂತ್ರ 
ಬರೆದ ವಾತ್ಸಾಯನ,ನಾಟ್ಯಶಾಸ್ತ್ರ ಬರೆದ ಭರತ ಇವರ್ಯಾರೂ "ಮುನಿಗಳು" ಎಂಬುದಕ್ಕೆ ಇವರೇ ರಚಿಸಿರುವ ಪರಿಭಾಷೆಯೊಳಗೆ ಬರುವುದಿಲ್ಲ. ಈ ಕಾಡಿನಲ್ಲಿ ಅಡಗಿಕೊಂಡ ಒಬ್ಬೊಬ್ಬನದೂ ಒಂದೊಂದು ವೇಷ!. ಕುಣಿಯುವ ನವಿಲಿಗೆ ಯಾವ ಶಾಸ್ತ್ರ?,ಹಾಡುವ ಕೊಗಿಲಿಗೆ ಯಾವ ಶಾಸ್ತ್ರ?.ಆದರೆ  ಪ್ರಪಂಚದಲ್ಲಿರುವ ಎಲ್ಲ್ಲಾ ಮಾನವ ಚಟುವಟಿಕೆಯನ್ನೂ ತಮ್ಮ monopolyಮಾಡಿಕೊಳ್ಳಬೇಕು ಎಂಬ ಅದಮ್ಯ ತೆವಲು ಈ ಗುರು'ಕುಲ'ದ್ದು!. ಅದಕ್ಕಾಗೆ ಈ ಎಲ್ಲಾ ಶಾಸ್ತ್ರಗಳ ರಚನೆ.ಎಲ್ಲವು ನಮ್ಮ ಲೇಖನಿಯಿಂದಲೇ ಹುಟ್ಟಿದ್ದು.ಇವನ್ನೆಲ ದೇವರು ಕನಸಿನಲ್ಲ್ಲಿ ಬಂದು ಹೇಳಿದ ,ನಾವು ಬರೆದಿತ್ತೆವು ಎಂದು ಎಲ್ಲಾ  ವಿಷಯಗಳ ಮೇಲೆ copyright ಪಡೆಯುವ ಹುನ್ನಾರ.ಶಾಸ್ತ್ರಿಯ ಸಂಗೀತಕ್ಕೆ ಅಷ್ಟೊಂದು ಹೊತ್ತಿಗೆಗಳಿದ್ದರೂ  ಅದು ಜನರ ಮನಸನ್ನು ರಂಜಿಸುವುದಿಲ್ಲ.ತಾನಸೇನ ದೀಪ ಉರಿಸಿದ್ದ.ಇನ್ನೊಬ್ಬ ಮಳೆ ಬರಿಸಿದ್ದಾ ಎಂಬ ಎಸ್ಟೋ ಕಥೆಗಳನ್ನು ಕಟ್ಟಿದರೂ  ಜನರ ಮನಸ್ಸನ್ನು ರಂಜಿಸುವುದರಲ್ಲಿ ಇವು ಬಾವಗೀತೆ,ಜಾನಪದಗೀತೆ,ಕ್ಯಾಬರೆ ಹಾಡುಗಳಿಗಿಂತಲೂ ಹಿಂದೆ ಬಿದ್ದಿವೆ. ಈಗ ಈ ಶಾಸ್ರೀಯ ಸಂಗೀತದಿಂದ ರೋಗ ವಾಸಿಮಾಡಬಹುದು ಇದು ಬೇರೆ ಬೇರೆ ರೀತಿಯ "waves" create ಮಾಡುತ್ತವೆ ಎಂಬ ಪುಕಾರು ಹಬ್ಬಿಸಲಾಗುತ್ತಿದೆ!.ಜೊತೆಗೆ ಇದು 'scientific",ಇದನ್ನು ಪಾಶಿಮಾತ್ಯ ವಿಜ್ಞಾನಿಗಳು ಒಪ್ಪುತಾರೆ  ಎಂಬ ಪಿಳ್ಳೆನೆವ ಬೇರೆ!. actually  ಅಮೆರಿಕಾದಲ್ಲಿನ ಕಂಪೆನಿಯೊಂದು ಕ್ಲಾಸ್ಸಿಕಲ್  ಧ್ವನಿ ಸುರುಳಿಗಳ ಮಾರಾಟ ಹೆಚ್ಚಿಸಿಕೊಳ್ಳಲು ರೂಪಿಸಿದ ಪ್ರಚಾರ ತಂತ್ರವಿದು. wagner ನ ಸಂಗೀತ ಕೇಳಿದರೆ I Q ಉತ್ತಮ ಗೊಳ್ಳುತ್ತದೆ, ಬಾರೋಕ್ ನ  ಸಂಗೀತ ಕೇಳಿದರೆ ಏಕಾಗ್ರತೆ ಹೆಚ್ಚುತ್ತದೆ ಎಂಬ ಗಿಣಿ ಪಾಠವನ್ನೇ ನಮ್ಮ trainer ಗಳು ಹೇಳುತ್ತಾರೆ. ಮಕ್ಕಳನ್ನು ಮಾರ್ಕ್ಸ್ ನ  ಫ್ಯಾಕ್ಟರಿಗಳಂತೆ ಬೆಳೆಸುವ ಪೋಷಕರು Wagner,Boroque ಸಂಗೀತ ಕೇಳಿಸಿದ್ದೇ ಕೇಳಿಸಿದ್ದು!.ಸಾಲದು ಅಂತ ನಮ್ಮ ಕೊಳಲು,ತಂಬೂರಿ,ವೀಣೆಯ ಸಂಗೀತಗಾರರು ನಾವೇನು ಕಮ್ಮಿ ಎನ್ನುತ್ತಾ CD ಮಾರಿದ್ದೇ,ಮಾರಿದ್ದು!. ಈ ಬಾರೋಕ್ ,ವಾಗ್ನೆರ್ ಸಂಗೀತದ ಹಿಂದಿರುವ "ವೈಜ್ಞಾನಿಕ (!) ಸುಳ್ಳುಗಳನ್ನು ಹಲವು ಸಂಶೋದಕರು ಬಹಿರಂಗಪಡಿಸಿದ್ದಾರೆ. ಬೇಕೆಂದರೆ ಅಂತರ್ಜಾಲವನ್ನೊಮ್ಮೆ ಜಾಲಾಡಿ ನೋಡಿ.  ಈ ಶಾಸ್ತ್ರಿಯ ಸಂಗೀತದಿಂದ ಏನಿಲ್ಲವೆಂದರೂ ನಿದ್ದೆ ಒಂದು ಬರುತ್ತದೆ ಅಂತ ನಾನು ಗ್ಯಾರಂಟೀ ಕೊಡಬಲ್ಲೆ. "ನಿದ್ದೆ" ಅಂದರೆ ನಗಬೇಡಿ .ಇದು ನಮ್ಮ ದೇಶದ ಗುರುಗಳು ಮಾರುವ ಒಂದು ಯಶಸ್ವೀ product. . ಎಲ್ಲಾ ಗುರುಗಳು ಪಶಿಮಾತ್ಯರಿಗೆ ಹೇಳುವುದಿಷ್ಟೇ.' ನಿಮ್ಮಲ್ಲಿ ದುಡ್ಡು ಇದೆ,ಆದರೆ ನಿಮಗೆ ಮನಶಾಂತಿ ಇಲ್ಲ .ನಿಮಗೆ ತೃಪ್ತಿ ಇಲ್ಲ. ಅದನ್ನು ನಮ್ಮಿಂದ ಖರಿದಿಸಿ ಅಂತ. ಅವರು ಭಜನೆ ,ಧ್ಯಾನ ಮಾಡುತಾ ನಿದ್ದೆ ಹೋದ ಕೂಡಲೇ ಅವರ ಪರ್ಸ್ ಗಾಯಬ್!. ನಂತರ ಅವರೆಲ್ಲ ಬಂದು ಇಲ್ಲಿ ಪರಿಸರ ಹಾಳು ಮಾಡುತಾರೆ,ಸಂಸ್ಕೃತಿ ಕೆಡಿಸುತ್ತಾರೆ ಎಂದು ಹೇಳಿ ಅವರನ್ನು ಓದ್ದೊಡಿಸುವುದು ಇದ್ದೆ ಇದೆಯಲ್ಲಾ!  .ಕಬ್ಬನ್ನು ಚೆನ್ನಾಗಿ  ರಸತೆಗೆದು ಬಿಸಾಡುವುದು ಇದೇ ಗುರು ಮಹಿಮೆ! ಜೈ ಗುರುದೇವ.
ಅಂದು,ಇಂದು ಎಲ್ಲಾ ಕಾಲದಲ್ಲಿಯೂ ಬೆಲೆಬಾಳುವ ವಸ್ತು ಎಂದರೆ "ಸಮಯ".ಬಹುಶಃ ಎಲ್ಲಾ ಜನರಿಗೂ ಪ್ರಕೃತಿ ಸಮಾನವಾಗಿ ಹಂಚಿರುವ ವಸ್ತುವೆಂದರೆ ಈ ಸಮಯವೊಂದೇ. ಅದಕ್ಕೆ ಗುರುಗಳಿಗೆ ಹೊಟ್ಟೆಯುರಿ. ಅಮಾಯಕರಿಂದ ಈ ಸಮಯವನ್ನೂ ಹೊಡೆಯಲು ಹೊಂಚು ಹಾಕಿದರು ಗುರುರಾಯ &ಕಂಪನಿ. ಆಶ್ರಮ ಗಳಲ್ಲಿ ಕುಳಿತು ದೊಡ್ಡ ದೊಡ್ಡ ಗ್ರಂಥಗಳನ್ನು ಬರೆದರು. ಬೂಮಿಯ ಸಮಸ್ಯೆಗಳಿಗೆ ಸ್ವರ್ಗದಿಂದ ಮದ್ದು ತರಿಸಿದರು! ಪ್ರತಿಯೊಂದು ಕೃತಿ ಬರೆದಾಗ ಅದರ ಕೊನೆಗೆ 'ಪಲಶ್ರುತಿ' ಅಂತ ಒಂದನ್ನು ಸೇರಿಸುತ್ತಾರೆ. ಅದು ಆಗುತ್ತದೋ ಇಲ್ಲವೂ ಗೊತ್ತಿಲ್ಲ,ಆದರೆ ಗುರುವಿನ 'ಪಲಾಹಾರ' ಕ್ಕೆ ದಾರಿ ಮಾತ್ರ ಕಂಡಿತ ಆಗುತ್ತದೆ. ಎಲ್ಲಾ ದೇವರಿಗೂ ಸಹಸ್ತ್ರ ನಾಮಗಳಿವೆ .ಅವನ್ನು ಓದಿ ಮುಗಿಸುವಾಗ ಒಂದು ಗಂಟೆ ಆಗುತ್ತದೆ. ಅದನ್ನು "ತ್ರಿಸಂಧ್ಯ"ವೂ  ಓದಬೇಕಂತೆ!. (ಈ ನರಸಯ್ಯನೂ ಯಾವೂದೋ ಒಂದು ಸಹಸ್ರನಾಮ ಓದಿರಬೇಕು,ಕೊನೆಗೆ ವಾಗ್ದೇವಿ ತನಗೊಲಿದ್ದಿದ್ದಾಳೆ ಎಂಬ ಬ್ರಮೆಯಲ್ಲಿ ಬಾಯಿಗೆ ಬಂದಂತೆ ಮಾತಾಡಿ ತನ್ನ ಮಾತಿಗೆ ತಾನೇ ತಲೆದೂಗುತ್ತಾನೆ!) ಒಟ್ಟಾರೆ ಅವನಿಗೆ ೩ ಗಂಟೆ  ನಷ್ಟ!. ಶಿಸ್ಯನ ನಷ್ಟ ,ಗುರುವಿನ ಲಾಭ!. ಶಿಷ್ಯರನ್ನ ಸುಲಿಯುವ ಇನ್ನೊಂದು ಉಪಾಯವೆಂದರೆ ಅವರು ಒಳ್ಳೊಳೆ ದ್ರವ್ಯಗಳನ್ನು ಒಟ್ಟುಮಾಡುವಂತೆ  ಹೇಳುವುದು.ಅವರ ಮುಂದೆಯೇ ಏನೇನೂ ಅಸಂಬದ್ದ ಮಂತ್ರ ಹೇಳುತ್ತಾ ಅವುಗಳನ್ನೂ ಬೆಂಕಿಗೆ ಸುರಿದು ಬಿಡುವುದು. ಈ ಅನೈತಿಕ ಚಟುವಟಿಕೆಯನ್ನು ಅವರು 'ಯಜ್ಞ'ಎಂದು ಕರೆಯುತ್ತಾರೆ.ಒಟ್ಟಾರೆ ಶಿಸ್ಯರು ಬಲಶಾಲಿಗಳಾಗದಂತೆ ನೋಡಿಕೊಳ್ಳುವುದರಲ್ಲೇ  ಪ್ರಾಚಿನ ಗುರುವಿನ ಯಶಸ್ಸು ಅಡಗಿತ್ತು. ನೀನು ಫಸ್ಟ್ rank ಬರಬೇಕು ಎಂದರೆ ಒಂದೇ ಓದಬೇಕು ,ಅಥವಾ ಇನ್ನೊಬ್ಬ ಓದದಂತೆ ನೋಡಿಕೊಳ್ಳಬೇಕು.ನಮ್ಮ ಗುರು ಪರಂಪರೆ ಅನುಸರಿಸಿದ್ದು ಎರಡನೇ ಮಾರ್ಗ!.ಇದು ಇಲ್ಲಿನ bureaucracy ಯ 'ಗುರು' ಗಳಿಗೂ ಅನ್ವಯಿಸುತ್ತದೆ. 
 
ನಮ್ಮ  ಗುರುಗಳಿಗೆ  ಜ್ಞಾನೋದಯವಾದ ಕೂಡಲೇ ಅವರು ಮಾಡುವ ಕೆಲಸವೆಂದರೆ ಜನ ಸಮೂಹದತ್ತ  ಓಡುವುದು. ಇವರಿಗೆ ಎಲ್ಲಾ ಜನ ದಾರಿ ತಪ್ಪಿದಂತೆಯೇ ಕಾಣುತ್ತಾರೆ. ಅವರನ್ನು ಉದ್ದಾರ ಮಾಡಲು ಮಾರ್ಗ ವೆಂದರೆ  ಶಾಲೆ ತೆರೆಯುವುದು.ಅದೂ ಸರ್ಕಾರಿ ಸಿಲಬಸ್ ಪಾಲಿಸುವ ,ಅಂಗೀಕೃತ,ಅನುದಾನ ಸಹಿತವಾದ ಶಾಲೆಯೇ ಆಗಬೇಕು. ಅಲ್ಲಿ ಗುರುವಿನ ಬೊದನೆ ಊಟಕ್ಕೆ ಉಪ್ಪಿನ ಕಾಯಿ ಇದ್ದಂತೆ. ಮುಖ್ಯವಾದದ್ದು ಸಿಲಬಸ್!. ಪಾಪ ,ಗುರುವಿನ ಸಂದೇಶ ಸಾರಲು ಬೇರೆ ಮಾರ್ಗವೇ ಇಲ್ಲ. ಎಲ್ಲಾ ತೊರೆದೇವು ಎಂದು ಕಾವಿ ಹಾಕಿದವರು ಬಸವಳಿದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಸುತ್ತುವುದು ನೋಡಬೇಕು!. ಹಣದ ಬಗ್ಗೆ ಇವರ ವ್ಯಾಮೋಹ ಪ್ರಾಪಂಚಿಕರಿಗಿಂತಲೂ ಹೆಚ್ಚೇನೂ ಎನಿಸದಿರದು. ಮೆಡಿಕಲ್,ಇಂಜಿನೀರಿಂಗ್ ಕಾಲೇಜು ತೆಗೆಯದಿದ್ದರೆ ಅವನ ಗುರುಪೀಠಕ್ಕೆ ಅವಮಾನವಲ್ಲವೇ ?. ಅವರು ಜ್ನನೋದಯದಿಂದ ಪಡೆದ ಜ್ಞಾನ,ಗುರು ಮುಖೇನ ಪಡೆದ ಜ್ಞಾನ ಅವರ ಆಶ್ರಮದ ಬಚ್ಚಲ ಕಮೋಡ್ ಹಾಕುವಷ್ಟೂ ಬೆಲೆ ಬಾಳುವುದಿಲ್ಲ ಎಂಬ ಜ್ಞಾನೋದಯವೇ ನಮ್ಮ ಮಹಾಪುರುಷರ ಶಿಕ್ಷಣ ಮೇಧ ಯಜ್ನ್ನಕ್ಕೆ ಮುಖ್ಯಕಾರಣ.ಆದುದರಿಂದಲೇ ತಾಂತ್ರಿಕ ಶಿಕ್ಷಣದತ್ತ ದಾವಂತ. ಅದುದರಿನ್ದಲ್ಲೇ ಗುರುವಿನ ಮಾತು ಕೇಳಿ ಕಾಡಿಗೆ ಹೋಗಿ  ಅಲ್ಲಿ ಜ್ಞಾನೋದಯವಾಯಿತು ಎಂದು ಓಡಿ ಬಂದು ಸಮಾಜಕ್ಕೆ ಗಂಟು ಬೀಳುವುದು! 
ಇಲ್ಲಿ ನನಗೆ ಶಂಕರ ಮೊಕಾಶಿ ಪುಣೆಕರ್ ಅವರ "ಗುರು ವಿನ ಹಾಡು ನೆನಪಾಗುತ್ತದೆ.


"ಏನು ಬಣ್ಣಿಸಲಿ ಗುರುರಾಯನ ಮಹಿಮೆ ಏನು ಬಣ್ಣಿಸಲಿ



ನ್ಯಾಯ ಹಚ್ಚುತ ಪಾಲು ಕೊಡಿಸಿದನು ಗುರುರಾಯ


ಹುಚ್ಚು ಬಿಡಿಸುವ ದೆವ್ವ ಬಿಡಿಸಿದನು ಗುರುರಾಯ


ಪಾದ ತೊಳೆದಗೆ ಕೆಸರು ಸಿಡಿಸಿದನು ಗುರುರಾಯ.................etc etc


(ನಾನು "ಗುರು"ಎಂದು ಹೇಳಿರುವುದು ಬರಿ ಇಲ್ಲಿನ ಶಿಕ್ಷಕರನ್ನಲ್ಲ.ಈ ಮನೋರೋಗಿಗಳು ಎಲ್ಲಾ ಬೂಖಂಡದಲ್ಲೂ ಇದ್ದಾರೆ. ಇಉರೋಪಿನ ಪಾದ್ರಿಗಳೂ ,ಉತ್ತರ ಏಶಿಯಾದ ಸೂಫಿಗಳೂ ,ಆಫ್ರಿಕಾದ 'ಶಮನ್'ಗಳು ...ಅಷ್ಟೇ ಏಕೆ ..ನಮ್ಮ ಕೆಲವು  ಮೂರ್ಖ ಮೇಲಾಧಿಕಾರಿಗಳು...ಮೇಲ್ಕಂದವರನ್ನು ನಂಬುವ ಕೆಲ ಪೋಷಕರು....ಎಲ್ಲರೂ.
 ಅಂದರೆ ಬೋದಿಸುವ ತೆವಲಿರುವ ಎಲ್ಲಾ ಜನರನ್ನೂ ಈ ಪರಿಬಾಷೆ ಕವರ್ ಮಾಡುತ್ತದೆ."ನಾನು ಸರಿ ,ನೀನು ತಪ್ಪು" ಎಂಬ ಖಾಯಿಲೆ ಇರುವ ಹಳೆ XXರ್ಸಿ ಗಳೆಲ್ಲರೂ ಒಂದು ರೀತಿಯ "ಗುರು"ಗಳೇ. ಗುರುತ್ವ ಎಂದರೆ ಎಲ್ಲವನ್ನೂ ಇತರರ expense ನಲ್ಲಿ ಗಿಟ್ಟಿಸಿಕೊಳ್ಳ ಬೇಕೆನ್ನುವ ಒಂದು ಬ್ರಷ್ಟ ಮನಸ್ತಿತಿ.)


Thursday, March 11, 2010

ಮಹಿಳಾ ಮೀಸಲಾತಿ ವಿಧೇಯಕ



ಮಹಿಳಾ ಮೀಸಲಾತಿ ವಿಧೇಯಕ ಎಂಬುದು ಒಂದು ಅಸಂಬದ್ದ ವಿಧೇಯಕ .ಇದು ಈಗಾಗಲೇ ರಾಜಕೀಯದಲ್ಲಿ ಮಿಂಚುತ್ತಿರುವ ಮತ್ಸದಿಗಳ ಹೆಂಡತಿಯರು,ಮಕ್ಕಳು,ಸೊಸೆಯಂದಿರನ್ನು ರಾಜಕೀಯಕ್ಕೆ ತರುವ ಹುನ್ನಾರವಿದು.ಹೀಗೆ ಮೀಸಲಾತಿಯಲ್ಲಿ ಆಕೆಯಾದ ಚುನಾಯಿತ ಮಹಿಳೆ ಪ್ರತಿನಿಧಿಸುವುದು ಅವರ ಕುಟುಂಬವನ್ನ,ಜನಾಂಗವನ್ನು, ಕ್ಷೇತ್ರವನ್ನು ಹೊರತು ಸಾಮಾನ್ಯ ಮಹಿಳಾ ಸಂಕುಲವನ್ನಲ್ಲ.


ನಿಯಮಗಳನ್ನು ರಚಿಸುವವರು ಎಂಥಹಾ ಮೂರ್ಖ ರಾಗಿರುತ್ತಾರೆ ಎಂಬುದನ್ನು ಕೇಶವಪ್ರಸಾದ್ ಬಹಳ ಹತ್ತಿರದಿಂದ ನೋಡಿ ತಿಳಿದವರು. ಉದಾಹರಣೆ: ದ್ವಿಚಕ್ರ ವಾಹನದಲ್ಲಿ ಹಿಂದಿನ ಸೀಟಿನಲ್ಲಿ ಕುಳಿತವರೂ ಹೆಲ್ಮೆಟ್ ಧರಿಸಬೇಕು ಎಂದು ಕಾನೂನು ಮಾಡಲು ಹೊರಟಿದ್ದರು.ಜನ ಮುಖಕ್ಕೆ ಉಗಿದ ಮೇಲೆ ಈ ಅಂಶವನ್ನ ನಿಯಮದಿಂದ ಕೈಬಿಡಲಾಯಿತು.


ಭಾರತದಲ್ಲಿ ಜಾತಿಗಳ,ಧರ್ಮಗಳ ನಡುವೆ ಇರುವಂತೆ ಗಂಡು ,ಹೆಣ್ಣುಗಳ ನಡುವೆ ಅಂಥಹ ತಾರತಮ್ಯವೇನೂ ಇಲ್ಲ. ಇಲ್ಲಿ ಹೆಣ್ಣು ಒಂದು ಜನಾಂಗದ/ಕುಟುಂಬದ ಅವಿಬಾಜ್ಯ ಅಂಗವಷ್ಟೇ. ಹೆಣ್ಣಿನ ಸ್ವಂತಂತ್ರವನ್ನೂ ಯಾವ ಧರ್ಮವೂ,ಜಾತಿಯೂ,ನ್ಯಾಯಾಧಿಶನೂ ಒಪ್ಪುವುದಿಲ್ಲ.ಏಕೆಂದರೆ ಸಮಾಜದಲ್ಲಿ ಹೆಣ್ಣಿನ ಬಗ್ಗೆ ಒಂದು ಪೂರ್ವಗ್ರಹವಿದೆ.ಹೆಣ್ಣು ಏನೇ ಆದರೂ basically ಅವಳು ‘ಹೆರುವ ಯಂತ್ರ’ಎಂಬುದನ್ನು ನಿರಾಕರಿಸಲು ಯಾವುದೇ V.I.P.ಯೂ ಸಿದ್ದನಿಲ್ಲ. ತಾಯಿ ಮಗನನ್ನು ಬೆಂಬಲಿಸುತ್ತಾಳೆಯೇ ಹೊರತು ಸೊಸೆಯನ್ನಲ್ಲ. ಒಂದು ವೇಳೆ ತಾರತಮ್ಯ ನಿವಾರಿಸುವ ಉದ್ದೇಶದಿಂದ ಮೀಸಲಾತಿ ಕೊಡಬೇಕಿದ್ದರೆ ಇಲ್ಲೋ ದಲಿತ,ಅಲ್ಪಸಂಖ್ಯಾತ ಮಹಿಳೆಯರಿಗೆ ಒಳಮೀಸಲಾತಿನೀಡಬೇಕಾಗಿತ್ತು. ಕೊನೆಪಕ್ಷ ಸಲಿಂಗ ಕಾಮಿ (lesbians) ಗಳಿಗಾದರೂ ಮೀಸಲಾತಿ ನೀಡಬೇಕಿತ್ತು ಎಂಬುದು ಕೇಶವಪ್ರಸಾದ್ ಅಭಿಪ್ರಾಯ!!!

Wednesday, March 10, 2010

ಸದ್ಗುರುವಿಗೆ ಜೈ ಹೋ !!!

ಈ ಮಾರ್ಚ್ ತಿಂಗಳು ಒಂದು ಆಧ್ಯಾತ್ಮಿಕ ಕ್ರಾಂತಿ ನಡೆದದ್ದು ನೋಡಿದೆವು. ಒಂದಲ್ಲ ಎರಡು !.ಒಂದನೆಯದು ಶ್ರೀ ಶ್ರೀ ಶ್ರೀ ನಿತ್ಯಾನಂದ ಎಂಬ ಜಗದ್ಗುರುವಿನಿಂದಾಗಿ ಸಾವಿರಾರು ಶಿಷ್ಯರಿಗೆ ಜ್ಞಾನೋದಯವಾಯಿತು.
ಇನ್ನೊಂದು ಉತ್ತರ ಪ್ರದೇಶದಲ್ಲಿ ಕೃಪಾಳು ಮಹಾರಾಜ್ ಎಂಬ ಸಂತನ ಆಶ್ರಮದಲ್ಲಿ ಪ್ರಸಾದ ಪಡೆಯಲು ಹೋಗಿ ,ಅಲ್ಲಿ ನೂಕುನುಗ್ಗಲು ಸಂಭವಿಸಿ ಆತನ ೬೫ ಭಕ್ತರು ಪರಂದಾಮ ಸೇರಿದರು. ಇಷ್ಟು ಜನ ಸತ್ತರೂ ಸಾರ್ವಜನಿಕರು ,ಮಾದ್ಯಮಗಳು ಕೃಪಾಳು ಮಹಾರಾಜನ ಬಗ್ಗೆಯಾಗಲ್ಲಿ,ಆಶ್ರಮ,ದೇವಾಲಯಗಳ mismanagement ಬಗ್ಗೆಯಾಗಲಿ ಸೊಲ್ಲೆತ್ತಲಿಲ್ಲ. ಅವರ ಕಣ್ಣು ಕುಕ್ಕಿದ್ದು ನಿತ್ಯಾನಂದನ ಆಸ್ತಿ ಹಾಗು ಆತನ ಪ್ರಣಯ ಪ್ರಸಂಗ. ಆದರೆ ಕೇಶವಪ್ರಸಾದ್ ಪ್ರಕಾರ ಇದು ನಿತ್ಯಾನಂದನ ವಿಫಲ್ಯವಲ್ಲ. ಇದು ಆತ ಬೋದಿಸುತಿದ್ದ ತತ್ವಗಳ ವಿಫಲ್ಯ.ದೇವರಾಗಿ ಕಾಣುತಿದ್ದ ನಿತ್ಯಾನಂದ ಈಗ ಮನುಷ್ಯನಂತೆ ಕಾಣುತಿದ್ದಾನೆ.ಜನರು ಒಳ್ಳೊಳ್ಳೆ ಬಕ್ಷ್ಯ ,ಬೋಜ್ಯಗಳನ್ನು ಗುರುವಿಗೆ ನೀಡುತ್ತಾರೆ.ಗುರುವಿಗೆ 'ಜಠರ'ಇದೆ ಎಂದು ಒಪ್ಪುವ ಜನ ಆತನಿಗೆ 'ಜನನಾಂಗವೂ' ಇದೆ ಎಂದು ಕೆ ಒಪ್ಪುವುದಿಲ್ಲ?!
 ಸಾವಿರಾರು ವರ್ಷಗಳಿಂದ ಬೋದಿಸಲ್ಪಡುವ ತತ್ವಜ್ಞಾನವೆಂಬ ಸುಳ್ಳಿನ ಕಂತೆಗಳನ್ನು ಶ್ರೀ ಶ್ರೀ ಪರಮಹಂಸ ನಿತ್ಯಾನಂದ ತನ್ನದೇ ಆದ ರೀತಿಯಲ್ಲಿ ಪ್ಯಾಕೇಜ್ ಮಾಡಿ ಮಾರಿದ.ಯೆಶಸ್ವಿಯಾದ. ಆಸ್ತಿಮಾಡಿದ.ಮಜಾಮಾಡಿದ. ಅದನ್ನು ನಂಬಿದವರು ಎಂದಿನಂತೆ ಮಂಗಗಳಾದರು. ಈಗ ಮೈ ಪರಚಿಕೊಳ್ಳುತಿದ್ದಾರೆ.
ಈ ‘ಗುರುತ್ತ್ವ’ ಎಂಬ ಪರಿಕಲ್ಪನೆಯೇ ಅನೈತಿಕವಾದಂತಹುದು ಎನ್ನುತ್ತಾರೆ ಕೇಶವಪ್ರಸಾದ್ .ಮನುಷ್ಯನ ಮನಸಿನಲ್ಲಿ ಮೇಲು-ಕೀಳು ಎಂಬ ಭಾವನೆಯನ್ನು ಬಿತ್ತುವುದು,ಆ ಮೂಲಕ ಜನಕೋಟಿಯ ಶೋಷಣೆಗೆ ವೇದಿಕೆ ಸಿದ್ದಪಡಿಸುವುದು ಇದರ ಉದ್ದೇಶ. ನೀನು ದಡ್ಡ ,ನಾನು ತಿಳಿದವನು! ನನ್ನ ಸೇವೆ ಮಾಡಿ ಸಾರ್ಥಕತೆಯನ್ನು ಪಡೆ ಎನ್ನುತ್ತಾನೆ ಗುರು.
“ಶೋಷಣೆ”ಎಂದರೆ ಜನರ ಅಜ್ಞಾನವನ್ನ ತಮ್ಮ ಸ್ವಾರ್ಥಸಾದನೆಗೆ ಬಳಸಿಕೊಳ್ಳುವುದು. ಈ “ಗುರು ಪರಂಪರೆ”ಮಾಡುವುದು ಅದನ್ನೇ..ಆದುದರಿಂದಲೇ ಹಿಂದೆ ರಾಜ ಮಹಾರಾಜರು ಋಷಿಮುನಿಗಳನ್ನು ಉತ್ಸವ ಮೂರ್ತಿಗಳಾಗಿ ಜನರಿಗೆ ತೋರಿಸುತಿದ್ದುದು.ಅದಕ್ಕೆ ಪ್ರತಿಯಾಗಿ ಅವರು ರಾಜನ ಬಗ್ಗೆ ಜನರ ಮನಸ್ಸಿನಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುತಿದ್ದುದು.
“ಗುರುವನ್ನು ನಂಬಿ, ಗುರುವನ್ನು ನಂಬಿ ಎಂಬ ಕೂಗನ್ನು ಶತಮಾನಗಳಿಂದ ಬೇರೆಬೇರೆ ಬರಹಗಾರರ ,ಹಾಡುಗಾರರ ಮೂಲಕ ನಮ್ಮ ತಲೆಗೆ ವ್ಯವಸ್ತಿತವಾಗಿ ತುಂಬಲಾಗುತ್ತಿದೆ. ಉದಾ :“ಗುರುವಿನ ಗುಲಾಮನಾಗುವ ತನಕ....”ಹಿಂದೆ ಗುರುವಿದ್ದ... ಇತ್ಯಾದಿ .
ಒಟ್ಟಾರೆ, ಮೌಡ್ಯ ಬಿತ್ತುವ ಉದ್ಯಮ ಇಂದು ಒಬ್ಬ ಸಮರ್ಥ ಸೇಲ್ಸ್ ಮ್ಯಾನ್ ಒಬ್ಬನನ್ನು ,ಒಬ್ಬ ಸೇನಾನಿಯನ್ನ ಕಳೆದು ಕೊಂಡಿದೆ.ಇದು ಜನಸಾಮಾನ್ಯರ ವಿಜಯ. ಕೇಶವಪ್ರಸಾದ್ ಹೇಳುವಂತೆ ನಾವು ಅಸಹ್ಯ ಪಡಬೇಕಿರುವುದು ಶ್ರೀ ಶ್ರೀ ಶ್ರೀ ನಿತ್ಯಾನಂದನ ಬಗ್ಗೆಯಲ್ಲ. ನೂರಾರು ವರ್ಷಗಳ ಹಿಂದೆ ಇಂತಹಾ ಬೋದನೆಗಳನ್ನು ಮಾಡಿ ,ಯಾವುದೇ ಹಗರಣಗಳಲ್ಲಿ ಸಿಕ್ಕಿಬೀಳದೆ ,ಸತ್ತು ಗೋರಿಯಿಂದಲೇ ಜನರ ನಂಬಿಕೆಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವವರ ಬಗ್ಗೆ.


ಶ್ರೀ ಶ್ರೀ ಯವರಿಂದ ಆದ ಜ್ಞಾನೋದಯವನ್ನು ಜನ ಸರಿಯಾಗಿ ಬಳಸಿಕೊಂಡು ಮುಂದೆ ಬೇರೆ ಯಾವುದೇ ಗುರುವಿಗೆ ಮಣೆ ಹಾಕದೆ ಇರುವುದು ಒಳ್ಳೆಯದು.

Tuesday, March 9, 2010

Swamis and Scandals

 courtecy:Yahoo News---9/3/2010

Swami Paramhansa Nityanand: The founder of the Nityanand mission, which claims to have 1,000 branches across 33 countries, has been untraceable since certain Tamil TV channels recently aired a video which allegedly shows him in a compromising position with a Tamil actress. Nityanand, who has ashrams in Tamil Nadu, Karnataka and Puducherry, hails from Tamil Nadu and has a sprawling ashram in Bidadi, 30 km from Bangalore. He claims to lead a worldwide movement for meditation and peace. Lenin Karuppan, a former disciple, has said that he shot the video to expose the swami. Lenin has alleged that his life has been under threat from the swami, adding that he also suspected foul play behind the death of a woman inmate a year ago. In the complaint filed with Chennai City Police Commissioner T Rajendran, Lenin, who claimed to be an inmate of the ashram in Bangalore since 2006, said the swami used to lure young women devotees claiming that he was the reincarnation of Lord Krishna.
Anup Kumar Sahay: A self-proclaimed godman in Ghaziabad, he was booked on Sunday for abducting his cousin. According to a complaint filed by Subha Srivastava, mother of the victim, the accused along with his brother Ashok Kumar Sahay abducted her daughter Priyanka Srivastava on February 15. The self-proclaimed godman has been booked under sections 363, 313 and 366 of the IPC which pertain to kidnapping and forcing a woman to undergo abortion without her will.
Kripaluji Maharaj: Ram Kripal Tripathi aka Kripaluji Maharaj, at whose ashram near Pratapgarh in UP 63 people died in a stampede last week, was charged with kidnapping and rape in two cases in Nagpur in 1991. He was acquitted after the witnesses turned hostile. He was arrested in 2007 after a Guyanese woman in South Trinidad filed a rape case against him.
Sant Swami Bhimanand Ji Maharaj Chitrakoot Wale: Shiv Murti Dwivedi alias Sant Swami Bhimanand Ji Maharaj Chitrakoot Wale (39), a self-styled godman, was arrested by the Delhi Police last month on charges of operating a high-profile sex racket involving former airhostesses and students.
Asaram Bapu: Two minor boys of the Asaram Ashram-run gurukul in Ahmedabad were found dead in the Sabarmati riverbed two days after they mysteriously went missing from the gurukul in February 2008. The police booked Asaram Bapu in a criminal case pertaining to attempt to murder last year in December on the basis of a complaint filed by Raju Chandak, a former disciple of Asaram. Chandak was shot at by two persons on December 5 and he sustained injuries on his chest and shoulders. Chandak alleged that he was targeted at the behest of Asaram, as he had testified before the D K Trivedi Commission probing into the death of the two boys.
Jayendra Saraswati: The influential Kanchi math Shankaracharya was arrested by the Tamil Nadu Police in Mehboobnagar in Andhra Pradesh in November 2004 in connection with the murder of a former accountant of the math.
Santosh Madhavan: The temple priest-turned-astrologer wanted by the Interpol - was arrested in Alappuzha in May 2008. Apart from a Rs 50 lakh fraud case that has a Dubai-based businesswoman as the complainant, Madhavan, who had turned himself into Swami Amritachaitanya presiding over a posh ashram and flaunting high connections in the state's political circle and the bureaucracy, was also charged with raping a 15-year-old girl repeatedly.
Premananda: Also known as Trichy Sai Baba, he was awarded life imprisonment in 1994 for two terms on the charges of multiple criminal offences including rape and murder. Premananda, who reportedly had powerful supporters in the AIADMK, had not only raped many of the inmates of his ashram at Trichy but also carried out crude medical terminations of some of the consequent pregnancies with the help of a couple of associates. He was also charged with the murder of an engineer who had opposed the nefarious activities at the ashram.

Monday, March 8, 2010

ಅರಿಷಡ್ವರ್ಗಗಳ ಮುಷ್ಟಿಯಲ್ಲಿ .....

ರೇಣುಕಾ "ಕಾಮ"ದಿಂದ ಪ್ರೇರೇಪಿತಳಾಗಿ  ತಪ್ಪು ಮಾಡಿದ್ದಾಳೆ ಎಂಬುದು "ಕ್ರೋಧ"ದಿಂದ ಪ್ರೇರೇಪಿತನಾಗಿರುವ ಜಮದಗ್ನಿಯ ವಾದ. ತಾನೊಬ್ಬ ದೊಡ್ಡ ತಪಸ್ವಿ ಎಂಬ "ಮದ"ದಿಂದ ಆಕೆಗೆ ಮರಣದಂಡನೆ ವಿಧಿಸುತ್ತಾನೆ.ಅರಿಷಡ್ವರ್ಗಗಳ  ಮುಷ್ಟಿಯಲ್ಲಿ ಬಂಧಿತರಾಗಿದ್ದ ಜಮದಗ್ನಿ  ,ದೂರ್ವಾಸರಂತಹವರಿಗೆ ಮಹರ್ಷಿಗಳೆಂದು ಕರೆಸಿಕೊಳ್ಳುವ ಯೋಗ್ಯತೆ ಉಂಟೆ? ಎಂಬುದು ಕೇಶವ ಪ್ರಸಾದ್ ರ ಪ್ರಶ್ನೆ.
ಅಥವಾ ಇಂತಹಾ ಗುಣ ದೋಷಗಳನ್ನು ಹೊಂದಿದವರನ್ನು ಮಹರ್ಷಿಗಳೆಂಬ ಪಟ್ಟ ನೀಡಿರುವ ಲೇಖಕರ ಬುದ್ಡಿಮತ್ತೆ ಎಂತಹದು? ಒಂದೋ ಅವರುಗಳು ಅಜ್ಞಾನಿಗಳಾಗಿರಬೇಕು ಅಥವಾ ಪೂರ್ವಾಗ್ರಹಪೀಡಿಟರಾಗಿರಬೇಕು.
ಆದುದರಿಂದಲೇ ಇರಬೇಕು ರಾಕ್ಷಸರು ಈ ಋಷಿಮುನಿಗಳ ಆಶ್ರಮಕ್ಕೆ ನುಗ್ಗಿ ಅವರನ್ನು ಅಟ್ಟಾಡಿಸಿ ಹೊಡೆಯುತಿದ್ದುದು!..

ಒಟ್ಟಾರೆ ಅಜ್ಜಿಕಥೆಗಳಲ್ಲಿ ವಿಶ್ವಾಸವಿರಿಸುವ ಬದಲು ಈ ಕಾಲಕ್ಕೆ ಪ್ರಸ್ತುತವಾದ ಕಥೆಗಳನ್ನು ಓದುವುದು ಉತ್ತಮ .

Wednesday, March 3, 2010

ತೆಲಂಗಾಣದ ಬಗ್ಗೆ ಒಂದೆರಡು ಅನಿಸಿಕೆಗಳು.

ತೆಲಂಗಾಣದ ಬಗ್ಗೆ ಸಂಬಂದ ಇಲ್ಲದವರೆಲ್ಲಾ ಅವರವರ ಮೂಗಿನ ನೇರಕ್ಕೆ ಅವರವರ ಅಭಿಪ್ರಾಯ ಹೇಳುತಿದ್ದಾರೆ.ನಾನು ಕೂಡ ಒಂದೆರಡು ಲೈನು ಏಕೆ ಬರೆಯಬಾರದು ಎನ್ನಿಸಿತು ಕೇಶವಪ್ರಸಾದ್ ಗೆ. ಬರೆಯೋಣ ಎಂದು ಅಖಾಡಕ್ಕೆ ಜಿಗಿದೇಬಿಟ್ಟ. ತೆಲಂಗಾಣ ಆದರೂ,ಆಗದಿದ್ದರೂ ಕೇಶವಪ್ರಸಾದ್ ಪಡೆದು ಕೊಳ್ಳುವುದು/ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ಆ ಪ್ರದೇಶದ ಜನಕ್ಕೆ ಹೊಸ ನಾಡೊಂದು ಸಿಕ್ಕಂತಾಗುತದೆ. ಹಾಗಂತ ಉಳಿದವರು ಏನನ್ನೂ ಕಳೆದು ಕೊಳ್ಳುವುದಿಲ್ಲ. ಇತ್ತ ತೆಲಂಗಾಣದ ಜನ ಹೊಸ ರಾಜ್ಯ ಕೇಳಿದರೆ ,ಅತ್ತ ಉಳಿದ ಜನ ಅಖಂಡ ಆಂಧ್ರ ಉಳಿಸಿಕೊಳ್ಳುವ ಚಳವಳಿ ಆರಂಬಿಸಿದ್ದಾರೆ. ಹೊಸ ರಾಜ್ಯ ಪಡೆಯುವುದು ಅಥವಾ ಆಂಧ್ರದ ಬಾಗವಾಗಿ ಮುಂದುವರಿಯುವುದು ಆ ಪ್ರದೇಶದ ಜನತೆ ನಿರ್ಧರಿಸಬೇಕೇ ಹೊರತು ನಮ್ಮ ನಿಮ್ಮಂತಹ ದೊಣ್ಣೆ ನಾಯಕರು ನಿರ್ಧರಿಸುವುದಲ್ಲ. ಪ್ರತ್ಯೇಕತೆಯ ಘರ್ಜನೆ ತೆಲಂಗಾಣದಲ್ಲಿ ಮಾತ್ರವಲ್ಲ, ಗುಜರಾತಿನ ಸೌರಾಷ್ಟ್ರ, ಮಹಾರಾಷ್ಟ್ರದ ವಿಧರ್ಭಾ, ಬಿಹಾರದ ಮಿಥಿಲಾ, ಉ ಪ್ರ ದ ಹರೀತ್ ಪ್ರದೇಶ್ ಮುಂತಾದ ಕಡೆಯೆಲ್ಲಾ ಕೇಳಿಬರುತ್ತಿದೆ.  ಹೊಸರಾಜ್ಯಗಳ ಸೃಷ್ಟಿಯನ್ನು ವಿರೋಧಿಸುವವರು ಮುಂದಿಡುವ ವಾದವೆಂದರೆ "ಒಬ್ಬರಿಗೆ ಕೊಟ್ಟರೆ ಎಲ್ಲರಿಗೂ ಕೊಡಬೇಕಾಗುತ್ತದೆ!". ನನ್ನ ಪ್ರಶ್ನೆ "ಕೊಟ್ಟರೆ ನೀವು ಕಳೆದು ಕೊಳ್ಳುವುದು ಏನನ್ನು?.
 ಬ್ರಿಟಿಷರೂ ಕೇಳಿದ್ದು ಇದೆ ಪ್ರಶ್ನೆ. ಯಾಕೆ ಕೊಡಬೇಕು?,constitutional reforms ಮಾಡುತಿದ್ದೇವಲ್ಲ?, ಏನು ಬೇಕೋ ಕೇಳಿ ,ಕೊಡುತ್ತೇವೆ ,ಆದರೆ 'ಸ್ವತಂತ್ರ' ಒಂದನ್ನು ಬಿಟ್ಟು!. ರಾಜ್ಯಗಳನ್ನು ಮಾಡಿದರೆ ಬೊಕ್ಕಸಕ್ಕೆ ಅಗಾಧ ಹೊರೆ ಆಗುತ್ತದಂತೆ!. ಈ ವರೆಗೆ ಪ್ರತ್ಯೇಕ ರಾಜ್ಯದ ಹೋರಾಟಗಳಲ್ಲಿ ಸಂಭವಿಸಿದ ದುರಂತಗಳಲ್ಲಿ ಆದ ನಷ್ಟ ಎಷ್ಟು. ವಲಸಿಗರು/ನೆರೆ ರಾಜ್ಯದವರು/ಪ್ರದೇಶದವರು  ಬಂದು ಕೊಳ್ಳೆ ಹೊಡೆದುದರಿಂದ ಆ ಪ್ರದೇಶಕ್ಕೆ ಆದ ನಷ್ಟ ಎಷ್ಟು?


ಆದರೆ ಆ ದೊಣ್ಣೆ ನಾಯಕರು ಪ್ರಥಿನಿದಿಸುವುದು ಅಖಂಡ ಆಂಧ್ರ ವನ್ನ ಉಳಿಸಿಕೊಳ್ಳಬೇಕು ಎಂದು ಬೊಬ್ಬೆ ಹೊಡೆಯುತ್ತಿರುವವರ ಮನಸ್ತಿತಿಯನ್ನು. “ನೀನು ಇದ್ದರೆ ನನ್ನ ಆಧೀನದಲ್ಲಿ ಇರಬೇಕು.ನೀನು ಸ್ವತಂತ್ರ ವನ್ನೂ ಅಪೇಕ್ಷಿಸಿದರೆ ನನ್ನ ಶತ್ರುತ್ವ ಕಟ್ಟಿಕೊಳ್ಳಬೇಕಾಗುತ್ತದೆ” ಎಂಬ ಮನಸ್ತಿತಿಯನ್ನು.


ಇದೇ ಮನಸ್ತಿತಿಯನ್ನು ಹಿಂದೆ ಬ್ರಿಟಿಷರೂ ತೋರಿಸಿದಕ್ಕೇ ನಾವು ಅಷ್ಟೆಲ್ಲಾ ಹೋರಾಟ ಮಾಡಬೇಕಾಯಿತು. “If you are not with me, then you are agnist me “ಎಂಬ ಪೂರ್ವಾಗ್ರಹ ಪೀಡಿತ ಚಿಂತನೆ ಇದರ ಹಿಂದಿದೆ. ಇವರು ಕೊಟ್ಟಂತೆ ನಟಿಸುತ್ತಾ,ತಾವೇ ಅದರ ಫಲವನ್ನೂ ಉಣ್ಣುತ್ತಿರಬೇಕೆಂದು ಬಯಸುತ್ತಾರೆ.ಆದುದರಿಂದಲೇ ಇನ್ನೊಬ್ಬರ ಸವಲತ್ತುಗಳಲ್ಲಿ ಯಾವುದೇ ಬದಲಾವಣೆ ಬರುವುದನ್ನು ಒಳಗೊಳಗೇ ವಿರೋಧಿಸ್ತಾರೆ.” ನಾನು ಕೊಟ್ಟಷ್ಟು ನೀನು ತೆಗೆದುಕೊಳ್ಳಬೇಕು ,ದೂಸರಾ ಮಾತಾಡಬಾರದು “ಎಂಬ ಹಿರಿಯಣ್ಣನ ವರ್ತನೆಯೇ ಈ ದೇಶದಲ್ಲಿ ಪ್ರತ್ಯೇಕತೆಯ ಕೂಗಿಗೆ ಕಾರಣವಾಗಿರುವುದು ಎಂಬುದು ಕೇಶವಪ್ರಸಾದ್ ಅಭಿಪ್ರಾಯ.


ಜನಮತಗಣನೆಯ ಆಧಾರದ ಮೇಲೆ ತೆಲಂಗಾಣ ರಾಜ್ಯ ಸೃಷ್ಟಿಸುವುದಾದರೆ ಕಾಶ್ಮೀರವನ್ನೂ ಪಾಕಿಸ್ತಾನಕ್ಕೆ ಸೇರಿಸುವ ಬಗ್ಗೆ ಏಕೆ ಜನಮತಗಣನೆ ನಡೆಸಬಾರದು ಎಂದು ವಾದಿಸುವರಿದ್ದಾರೆ.ಅದಕ್ಕೆ ಕೇಶವಪ್ರಸಾದ್ ನೀಡುವ ಸ್ಪಷ್ಟೀಕರಣ ಈ ಕೆಳಕಂಡಂತಿದೆ.
“ಕೆಲವು ತಾಂತ್ರಿಕ ಕಾರಣಗಳಿಂದ ಹಾಗೆ ಮಾಡಲು ಸಾಧ್ಯವಿಲ್ಲ.೧೯೪೭ರ ನಂತರ ಅಲ್ಲಿನ ಅಲ್ಪಸಂಖ್ಯಾತರನ್ನು ನಿರ್ನಾಮಮಾಡುವ, ಅಲ್ಲಿಂದ ಹೊರಹಾಕುವ ಕೆಲಸಗಳು ವ್ಯವಸ್ತಿತವಾಗಿ ನಡೆದಿದೆ. ಅಲ್ಲಿನ ಬಹುಸಂಖ್ಯಾತರ ಕಿರುಕುಳ ತಾಳಲಾರದೆ ಹಲವರು ಬೇರೆಡೆ ವಲಸೆಹೊಗಿದ್ದರೆ ಗಡಿಯಾಚೆಗಿನ ಪಾಕಿಸ್ತಾನಿಗಳು ಒಳನುಗ್ಗಿ ಸೆಟ್ಲ್ ಆಗಿದ್ದಾರೆ. ಆದುದರಿಂದ ಪಾಕಿಸ್ತಾನ್ ಎಂಬ ದೇಶ ಮತ್ತೆ ಹರಪ್ಪಾ,ಮೆಹೆಂಜೋದರೋ ಗಳಂತೆ ಮಣ್ಣಲಿ ಮುಚ್ಚಿ ಹೊಗೊವರ್ಗೆ ಬಾರತದಲ್ಲಿ ಮಾತ್ರವಲ್ಲ,ವಿಶ್ವದಲ್ಲೇ ಶಾಂತಿ ನೆಲೆಸಲು ಸಾಧ್ಯವಿಲ್ಲ. ತಮಾಷೆಯೆಂದರೆ ಈ ಬಗ್ಗೆ ಅಮೆರಿಕಾದಲ್ಲೇ ಕ್ರಮ ಕೈಗೊಳ್ಳುವ ಬದಲು ಅಮೆರಿಕನ್ನರು ಆಫ್ಘಾನಿಸ್ತಾನಕ್ಕೆ ಬಂದು ಪಾಕಿಸ್ತಾನಿಗಳ ಕೈಯಲಿ ಸಾಯುತಿದ್ದಾರೆ. ಅದರಬದಲು ಅಮೇರಿಕಾದಲ್ಲಿ ನಿಯಮಗಳನ್ನು ಬಿಗಿಮಾಡಿ ಪ್ರತಿಯೊಬ್ಬ ಪಾಕಿಸ್ತಾನಿಯರನ್ನು ಹಾಗೂ ಅವರ ಬೆಂಬಲಿಗರನ್ನು ಅಮೆರಿಕಾದಿಂದ ಓದ್ದೊಡಿಸಿದ್ದರೆ ಸಾಕಿತ್ತು. ಆದರೆ ಎಲ್ಲಾ ಭಯೋತ್ಪಾದಕರು breed ಆಗುವುದು ಉದಾತ್ತ ಧ್ಯೇಯಗಳನ್ನು ಸಾರುವ ನಾಡುಗಳಲ್ಲಿ. ನಮಗೆ ಆಶ್ಚರ್ಯ ವಾಗಬಹುದು... ಕೊಮೆನಿಯಂತಹ ಕ್ರಿಮಿ ಆಶ್ರಯ ಪಡೆದದ್ದು ಫ್ರಾನ್ಸ್ ನಲ್ಲಿ !.


ತಮಾಷೆಯೆಂದರೆ ಈ ಮಾವೋವಾದಿಗಳು/ಧಾರ್ಮಿಕ ಮೂಲಭೂತವಾದಿಗಳು ಗುಂಪು ಸೇರುವುದು ಉದಾರತೆಗೆ ಹೆಸರಾದ ದೇಶಗಳಲ್ಲೇ. ಅವರು ಕೊಲ್ಲುವುದೂ ಇಲ್ಲಿನ ಜನರನ್ನು.ಕೊನೆಗೆ ಸರ್ಕಾರ ಅವರನ್ನು ಕೊಲ್ಲಲು ಆರಂಬಿಸಿದ ಕೂಡಲೇ ಅವರು ಕದನ ವಿರಾಮ ಘೋಷಿಸುತ್ತಾರೆ. ಬಂಗಾಳದಲ್ಲಿ ಸರ್ಕಾರ ಆಪರೇಶನ್ ಗ್ರೀನ್ ಹಂಟ್ ಆರಂಬಿಸಿದ ಕೂಡಲೇ ಕಿಶನ್ ಜಿ ಎಂಬ ಮಾವೋವಾದಿ ನಾಯಕ ಕದನವಿರಾಮ ಘೋಷಿಸಿ “ಬುದ್ದಿಜೀವಿಗಳು ಮಾವೋವಾದಿಗಳ ಪರವಾಗಿ ಮಧ್ಯಸ್ತಿಕೆ ವಹಿಸಬೇಕು” ಎಂದು ಕರೆಕೊಡುತ್ತಾನೆ. ಒಂದು ವೇಳೆ ಮಾವೋವಾದಿಗಳ ಆಡಳಿತವೇ ದೇಶದಲ್ಲಿ ಇದ್ದಿದ್ದರೆ ತಮಗೆ ಚಪ್ಪಲಿ ಹೊಲಿಯುವ ಕೆಲಸವೂ ಸಿಕ್ಕುತ್ತಿರಲಿಲ್ಲ ಎಂಬುದನ್ನು “ಕೆಲಸಕ್ಕೆ ಬಾರದ ರಿಸರ್ಚ್ ಗಳ ಹೆಸರಲ್ಲಿ ಸರ್ಕಾರಿ ಹಣ ಮುಂಡಾಯಿಸುವ” ಬುದ್ದಿಜೀವಿಗಳು ತಿಳಿದುಕೊಳ್ಳಬೇಕು. ಮಾವೊವಾದಿಗಳನ್ನು ಬೆಂಬಲಿಸಿ ಚೆಡ್ಡಿಗಳ ಕೈಯಲ್ಲಿ ಉಗಿಸಿಕೊಲ್ಲುವುದಕ್ಕಿಂತಾ ತಮ್ಮ ಜಾತಿಯ ಯಾರಾದರು ಕವಿಯ ಹೆಸರಿಟ್ಟುಕೊಂಡು ಅವರ ಹೆಸರಿನಲ್ಲಿ ಪ್ರತಿಷ್ಠಾನ ಮಾಡಿ ಜಾತಿ ಯವರನ್ನು ಸೇರಿಸಿ ಅಕಾಡೆಮಿಕ್ ರಾಜಕೀಯಮಾಡಿ ಮಿ0ಚುವುದೇ ಬುದ್ದಿಜೀವಿಗಳಿಗೆ ಉಳಿದಿರುವ ಮಾರ್ಗ. ಹೀಗೆ ಮಾಡಿ ಉದ್ದಾರ ವಾಗಿರುವವರು ಒಬ್ಬರು ಇದ್ದಾರೆ. ಅವರು ಈ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ . ಬೆಸ್ಟ್ ಅಂದರೆ ಈ ದಾರಿ. ಆದರೆ ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಮಾವೊಗಳಿಗೆ ಪತ್ರಬರೆಯುತ್ತಿದ್ದ ವ್ಯಕ್ತಿಯೊಬ್ಬ ಹಾಗೆ ಮಾಡುತ್ತಲೇ ಚೆಡ್ಡಿಗಳ ಸರ್ಕಾರದಿಂದ ಒಳ್ಳೆ ಪೋಸ್ಟನ್ನು ಗಿಟ್ಟಿಸಿಕೊಂಡ ಬಗ್ಗೆ ಕೆಲವು ಪತ್ರಿಕೆಗಳು ಮೈಸೂರಿನಿಂದ ವರದಿ ಮಾಡಿವೆ. ರಾಮ ,ಶಂಕರರೆಲ್ಲರೂ ಹಗ್ಗ ಕಡಿಯುತ್ತಿರುವಾಗ ಮಾವೋ ಬೆಂಬಲಿಗನ ಕೊರಳಿಗೆ ಅಧಿಕಾರ ಬೀಳುತ್ತದೆ ಎಂದರೆ ಆ ಲಿಂಗ ದೇವರ ಮಹಿಮೆ ಅಪಾರ ಇರಲೇಬೇಕಲ್ಲವೇ..


ಇನ್ನೊಂದು ಕಾರಣ ಏನೆಂದರೆ ಹೆಚ್ಚು ಸರ್ಕಾರಗಳನ್ನು ಸಾಕುವುದು ಈ ದೇಶದ ಜನರಿಗೆ ಕಷ್ಟವಾಗುತ್ತದೆ ಎಂಬ ವಾದವಿದೆ. ಒಂದು ರೀತಿ ಇದು ಕೇಶವಪ್ರಸಾದ್ ಗೆ ಸರಿಎನ್ನಿಸುತ್ತಿದೆ. ನಮ್ಮ ಸ್ವತಂತ್ರ ಹೋರಾಟದಲ್ಲಿ ಖಾದಿ ಧರಿಸಿ ಬಾಗಿ ಯಾಗಿದ್ದವರೆಲ್ಲಾ ,ಸ್ವತಂತ್ರ ಸಿಕ್ಕ ಕೂಡಲೇ ದೊಡ್ಡ ದೊಡ್ಡ ಸದನ,ಭವನ ,ಮಹಲು ಗಳನ್ನು ಆಕ್ರಮಿಸಿಕೊಂಡಿದ್ದು, ದೇಶವು ವಿಭಜನೆ ಮತ್ತು ಬರಗಾಲದಂತಹಾ ಅಪತ್ತುಗಳನ್ನು ಎದುರಿಸುತಿದ್ದಾಗ ದೊಡ್ಡ ದೊಡ್ಡ ‘ಸೌಧ’ಗಳನ್ನು ಕಟ್ಟುವಲ್ಲಿ ಅತ್ಯಂತ ಕಾಳಜಿವಹಿಸಿದ್ದು ...ಒಂದೇ ಎರಡೇ ...


ಒಟ್ಟಾರೆಯಾಗಿ ಇತಿಹಾಸದ ಯಾವುದೇ ಹಂತದಲ್ಲಿ ನಮ್ಮ ಅಧಿಕಾರಶಾಹಿ ವ್ಯವಸ್ತೆಯ ಸದಸ್ಯರಾಗಿದ್ದವರಾರೂ ಸಾರ್ವಜನಿಕರ ಸ್ವತ್ತಿನ ಬಗ್ಗೆ ಜವಬಾರಿಯುತವಾಗಿ ವರ್ಥಿಸಿಯೇ ಇಲ್ಲ. ಅಲ್ಲೋ..ಇಲ್ಲೋ..ಕೆಲವು ನಾಯಕರು ವೈಯುಕ್ತಿಕವಾಗಿ ಕೆಲವು ಕಾರ್ಯವೆಸಗಿರಬಹುದು.ಅಥವಾ ಅವರ ಜಾತಿವಸ್ತರು,ಚೇಲಾ ಬರಹಗಾರರು ಅಂಥಹ ಕತೆಗಳನ್ನೂ ಹುಟ್ಟುಹಾಕಿರಬಹುದು ಅಷ್ಟೇ. ಇದ್ದರೂ ಅವು ಬರೀ ಅಪವಾದಗಳಷ್ಟೇ.


ತರ್ಕಗಳು..ತರ್ಕಗಳು...


ಸಧ್ಯಕ್ಕೆ ಇಷ್ಟು ಸಾಕು.


(ಇದು ಅಪೂರ್ಣ ಲೇಖನ .ಇಷ್ಟೊತ್ತಿಗಾಗಲೇ ನನ್ನ MOOD OFF ಆಗಿದೆ)