Wednesday, May 12, 2010

ದೇವರು.

 

ವಿದೇಶಕ್ಕೆ ಹೋಗಿ ಸಾದನೆಗೈದ ನಮ್ಮವರು ಎಷ್ಟು ಕಷ್ಟಪಟ್ಟರು ಎಂಬುದನ್ನು ಕೆಲವರು ಆತ್ಮ ಚರಿತ್ರೆಯಲ್ಲಿ ಪುಟಗಟ್ಟಲೆ ಬರೆದುಕೊಂಡಿದ್ದಾರೆ .ಕೆಲವರು ಇದು ದೇವರ ಮಹಿಮೆ ಎಂದು ಕೊಂಡಾಡಿದ್ದಾರೆ. ಕೆಲವರು ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ನಿಯತಕಾಲಿಕಗಳಲ್ಲು ಬರೆಯುತ್ತಿರುತ್ತಾರೆ.

ಸಾವಿರಾರು ಮೈಲಿ ಸಮುದ್ರದಲ್ಲಿ ಪಯಣಿಸಿ ಬಾರತಕ್ಕೆ ಬಂದ ಯುರೋಪಿಯನ್ ಯೋಧರಿಗೆ /ನಾವಿಕರಿಗೆ ಸಮುದ್ರಕ್ಕೆ ಸಮುದ್ರವೇ ಮುಂದಿತ್ತು. ಅದನ್ನು ಎದುರಿಸಿ ಬಂದಾಗ ದೇವರು ಅವರನ್ನು ಕಾಪಾಡಿದನೆ? ಹೊಸ ಜಗತ್ತಿಗೆ ಹೊಸ ರೋಗಗಳನ್ನು ಕೊಂಡೊಯ್ಯುವ ,ಅದನ್ನು ದಬ್ಬಾಳಿಕೆಗೆ ದಾಸ್ಯಕ್ಕೆ ಒಳಪಡಿಸುವ ಇರಾದೆಯನ್ನು ದೇವರು ಬೆಂಬಲಿಸಿ ಅವರನ್ನು ದಡ ಸೇರಿಸಿದನೆ?,ಒಂದು ವೇಳೆ ದೇವರು ನಮ್ಮ ಶತ್ರುಗಳೊಂದಿಗಿದ್ದರೆ ಅದೇ ಸಮಯದಲ್ಲಿ ನಮ್ಮೊಂದಿಗೂ ಇರಲು ಹೇಗೆ ಸಾಧ್ಯ?

 


1 comment:

sudhakarvidyasandra said...

kallara sullara prathinidhi devaru