ಜಾನಪದ ವಿಶ್ವವಿದ್ಯಾಲಯ ರಚನೆ ಸಂಬಂಧಿಸಿದ ವಿಷಯವನ್ನು ಸಚಿವ ಸಂಪುಟ ಸದಸ್ಯರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಇಂದು ಹಲವು ವಿಶ್ವವಿದ್ಯಾಲಯಗಳಲ್ಲಿ "ಜನಪದ"ವನ್ನು ಒಂದು ಸಬ್ಜೆಕ್ಟ್ ಆಗಿ ಬೋದಿಸಲಾಗುತ್ತಿದೆ. ಇದನ್ನು ಕಲಿಯಲು ಮೂರು ನಾಲ್ಕು ವರ್ಷ ವ್ಯಯ ಮಾಡುವ ವಿದ್ಯಾರ್ಥಿಗಳಿಗೆ ಏನು ಲಾಭವಾಗಿದೆಯೋ ಗೊತ್ತಿಲ್ಲ ಆದರೆ ಅದನ್ನು ಬೋದಿಸುವವರಿಗೆ ಒಳ್ಳೆ ಲಾಭವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಹೀಗೆ ಅವರ ಲಾಭಕ್ಕಾಗಿ ತೆರಿಗೆದಾರರ ಹಣವನ್ನು ನೀರಿನಂತೆ ವ್ಯಯಮಾಡುವುದು ಎಷ್ಟು ಸರಿ?. ಸಂಗೀತ ವಿ.ವಿ ಆದಮೇಲೆ ಈಗ ಜಾನಪದ ವಿ ವಿ ಯ ಸರದಿ ಬಂದಿದೆ,ಈ ವಿ ವಿ ಗಳ ಸ್ಥಾಪನೆಯಿಂದ ಆಗುವ ಪಜೀತಿಗಳನ್ನು ನಾನು ಹಿಂದೆ ಈ ಬ್ಲಾಗ್ ನಲ್ಲಿ ಬರೆದಿದ್ದೇನೆ.(http://navyanta.blogspot.com/2010/05/blog-post_13.html) ನಾನು ಈ ಹಿಂದೆ ರಾಮನಗರದ ಹತ್ತಿರ ಇರುವ ಜಾನಪದ ಲೋಕ ಎನ್ನುವ ವಸ್ತು ಸಂಗ್ರಹಾಲಯ ನೋಡಿದೆ.ಇದಕ್ಕೆ ಸರ್ಕಾರ ಅನುದಾನ ನೀಡುತ್ತದಂತೆ.ಸಾಲದಕ್ಕೆ ಇದಕ್ಕೆ ಪ್ರವೇಶ ಶುಲ್ಕ ಬೇರೆ ಇದೆ. ಇನ್ನು ಅದರಲ್ಲಿ ಇರುವ ವಸ್ತುಗಳೋ.... ಮರ...ಪೊರಕೆ...ಕಂಬಳಿ...ಶ್ಯಾವಿಗೆ ಒತ್ತುವ ಯಂತ್ರ..ಒಂದೆರಡು ಬುಡಕಟ್ಟು ಜನರ ಫೋಟೋಗಳು....ಹಳೆ ಕಾಲದ ಉಡುಗೆ ತೊಡುಗೆಗಳು ...ಆಹಾ. ಇವೆಲ್ಲ ನಮ್ಮೊರಿನ ಎಷ್ಟೋ ಮನೆಗಳಲ್ಲಿ ಈಗಲೂ ಉಪಯೋಗಿಸಲ್ಪಡುತ್ತವೆ. ನಮ್ಮನೆಯಲ್ಲೇ ಇದ್ದ ಕೆಲವು ವಸ್ತುಗಳು ಸ್ತಳದ ಅಭಾವದಿಂದ/ಅವುಗಳ ನಿರುಪಯುಕ್ತತೆಯಿಂದ ಒಲೆ ಸೇರಿದೆ. ಈಗಾಗಲೇ AICTE,UGC ಇತ್ಯಾದಿಗಳನ್ನು ಒಗ್ಗೂಡಿಸಿ ಒಂದೇ ಸಂಸ್ಥೆಯನ್ನು ರಚಿಸುವಂತೆ ಯಶಪಾಲ್ ಸಮಿತಿ ಶಿಫಾರಸ್ಸು ಮಾಡಿದೆ. ಆ ಸ0ಸ್ಥೆ ,ಈ ಸಂಸ್ಥೆ, ಆ ಪೀಠ,ಈ ಪೀಠ ಎಂದು ಮಾಡಿಕೊಂಡು ಈಗಾಗಲೇ ಹಲವು ಮುದಿಗೂಬೆಗಳು ಮಜಾ ಉಡಾಯಿಸುತ್ತಿವೆ. ಈಗಾಗಲೇ ಇರುವ ಸಂಸ್ಥೆಗಳಲ್ಲಿ ಜಾಗ ಗಿಟ್ಟಿಸಲಾರದ ಬುದ್ದಿಜೀವಿಗಳು ಹೊಸ ಹೊಸ ಸಂಸ್ಥೆಗಳು ಬೇಕೆಂದು ಆಗ್ರಹಿಸುತ್ತವೆ. ಎಕಾನಮಿಕ್ಸ್ ಗೆ ಒಬ್ಬ ಒಂದು ಸಂಸ್ಥೆ ಮಾಡಿಕೊಂಡರೆ ಅಪ್ಪ್ಲೈಡ್ ಎಕಾನಮಿಕ್ಸ್ ಗೆ ಇನ್ನೊದು ಸಂಸ್ಥೆ ಇದೆ. ಎಲಿಮೆಂಟರಿ ಎಕನಾಮಿಕ್ಸ್ ಗೂ ಒಂದು ಸಂಸ್ಥೆ ಬೇಕೆಂದು ಕೆಲವರು ಓಡಾಡುತಿದ್ದಾರೆ. ಮನಮೋಹನ್ ಸಿಂಗ್ ಒಬ್ಬ ಎಕಾನಮಿಸ್ಟ್ ಆಗಿರುವುದರಿಂದ ಇಂತಹ ಪ್ರಾಜೆಕ್ಟ್ ಗಳಿಗೆ ಹಣ ಮಂಜೂರುಮಾಡಿಸಿಕೊಳ್ಳುವುದು ತುಂಬಾ ಸುಲಭ ಎಂದು ಇವರುಗಳ ಅಭಿಪ್ರಾಯ. ಒಟ್ಟಾರೆ ನಮ್ಮಲ್ಲಿ ಇರುವ ಮಿತ ಸಂಪನ್ಮೂಲವನ್ನು ಇಂತಹ ಪ್ರಾಜೆಕ್ಟ್ ಗಳಿಗೆ ವ್ಯಯಿಸಿಬಿಟ್ಟರೆ ಮುಂದೆ ನಮ್ಮ ಜಗತ್ತಿನಲ್ಲಿ ಕರೆಂಟು ಇಲ್ಲದೆ, ಪೆಟ್ರೋಲೂ ಇಲ್ಲದೆ "ಜಾನಪದ ಜಗತ್ತು" ತನ್ನಿಂದ ತಾನೇ ಸೃಷ್ಟಿಯಾಗುವುದರಲ್ಲಿ ಅನುಮಾನವೇ ಇಲ್ಲ ! |
Monday, May 24, 2010
ಜಾನಪದ ವಿಶ್ವವಿದ್ಯಾಲಯ
Subscribe to:
Post Comments (Atom)
No comments:
Post a Comment