ನೇತಾಜಿ ಎಸ್.ಸಿ.ಬೋಸ್. 1945ರ ವಿಮಾನ ಅಪಘಾತದಲ್ಲಿ ಮ್ರುತರಾದಬಗ್ಗೆ ತನಿಕೆ ನಡೆಸಲು ಈ ವರೆಗೆ ಮೂರು ಕಮೀಷನ್ನು ಗಳನ್ನು ರಚಿಸಲಾಗಿದೆ. ಈ ಕಮಿಶನ್ಗಳು ತೆರಿಗೆದಾರನ ಹಣದಲ್ಲಿ ಹಲವರು ವರುಷ ತನಿಕೆ ಮಾಡಿ ಹಲವು ವಿದೇಶಿ ಪ್ರವಾಸಗಳನ್ನುಮಾಡಿ ಮಜಾ ಉಡಾಯಿಸಿವೆ.ಆದರೆ ಫಲಶ್ರುತಿ ನಾಸ್ತಿ. ಈ ಕಮಿಶನ್ ಗಳ್ಯಾವುವೆಂದರೆ
1.) 1955-june 1956, ಷಾ ನವಾಜ್ ಖಾನ್ ಸಮಿತಿ. ಬೋಸ್ ರವರ ಅಣ್ಣ ಸುರೇಶ್ಚಂದ್ರ ಬೋಸ್ ರವರು ಸಹ ಈ ಸಮಿತಿಯ ಸದಸ್ಯರು. ಈ ಸಮಿತಿ ವ್ಯಯಿಸಿದ್ದು ಸುಮಾರು ಒಂದು ಕೋಟಿ.(ಆ ಕಾಲದಲ್ಲೇ).
2)1970-1974 ಜಿ .ಡಿ. ಖೋಸ್ಲ.(retd.supreme court judge)
30 1999-nov 2005 ಮನೋಜ್ ಮುಖರ್ಜಿ,retd retired spreme court judge.
ನಾನು ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಕೆಲವು ಕನ್ನಡದ ನಿಯತಕಾಲಿಕಗಳು ನೇತಾಜಿ ಕಥೆಬರೆದು ನೇತಾಜಿ ಬದುಕಿದ್ದಾರೆ ಎಂದೋ,ಅವರು ಇದ್ದಿದ್ದರೆ ಬಾರತವೇ ಬದಲಾಗುತ್ತಿತು ಅದಕ್ಕೆ ಅವರನ್ನು ಬಚ್ಚಿಡಲಾಯಿತು ಎಂದೋ ಬರೆದು ಗಾಯವನ್ನು ಕೆರೆಯುವ ಕೆಲಸ ಮಾಡುತ್ತಾರೆ.
೧೯೫೫ ರಲ್ಲೇ ಹುಡುಕಿದಾಗ ಸಿಗದ ನೇತಾಜಿ ಈಗ ಸಿಕ್ಕುವುದು ಸಾದ್ಯವೇ?
ಅವರು ಬದುಕಿ ರಾಜಕೀಯಕ್ಕೆ ಇಳಿದಿದ್ದರೂ ಅವರ ಗತಿ ಲೋಹಿಯಾ,ಜೆ.ಪಿ.ಯವರಂತಾಗುತಿತ್ತು ಅಷ್ಟೇ.
ಎಲ್ಲಿ ಬಿಂಕಿ ಬಿದ್ದರೂ ಆಯೋಗಗಳು ಚಳಿ ಕಾಯಿಸಿಕೊಳ್ಳುತ್ತವೆ,ಯಾವುದೇ ವಿಷಯಕ್ಕೆ ಆಯೋಗ ರಚಿಸಿದರೂ ನಮಗೆ ಮೆಮ್ಬೇರ್ ಮಾಡಿ,ಚೇರ್ಮೆನ್ ಮಾಡಿ ಎಂದು ಲಾಬಿ ಮಾಡುವ ದೊಡ್ಡ ದಂಡೆ ಇದೆ. ಇದರಲ್ಲಿ ಹಿರಿಯ ಜಡ್ಜುಗಳು, ನಿವೃತ್ತ ಅಧಿಕಾರಿಗಳು,ಪ್ರೊಫೆಸರ್ಗಳು ಮುಂಚೂಣಿಯಲ್ಲಿದ್ದಾರೆ.ಇಂತಹ ಲಾಭಕ್ಕಾಗಿ ಇವರೆಲ್ಲರೂ ರಾಜಕಾರಣಿಗಳಿಗೆ ಮಸ್ಕ ಹೊಡೆಯುವ ಪ್ರವೃತ್ತಿ ಬೆಳೆಸಿಕೊಂಡು ಆಡಳಿತವನ್ನು,ನ್ಯಾಯಾಂಗವನ್ನು ಹದೆಗೆಡಿಸಿಬಿಟ್ಟಿದ್ದಾರೆ. ಕೆಲವು ತೀರ್ಪುಗಳು ಹೀಗೆಕಿವೆ ಎಂದು ನೀವು ಸೋಜಿಗಪಟ್ಟಿರಬಹುದು. ಕಾರಣ ಸ್ಪಷ್ಟ.ಒಂದು ಆಯೋಗದಲ್ಲಿ ನಿವೃತ್ತನಾದವನನ್ನು ಇನ್ನೊಂದು ಆಯೋಗಕ್ಕೆ ನೇಮಿಸಿದ್ದು ಕಾನೂನು ಬಾಹಿರ ಎಂದು ಹಿಂದೆ ಯಾರೋ ಕೋರ್ಟ್ ಗೇ ಹೋಗಿದ್ದರು. ನ್ಯಾಯಾಲಯ ಅರ್ಜಿ ಹಾಕಿದವನಿಗೆ ದಂಡಹಾಕಿತು. ಕಳ್ಳರ ಗುಂಪು ಇವತ್ತು ಅಷ್ಟು ಸ್ಟ್ರಾಂಗ್ ಆಗಿದೆ. "ಆಯೋಗ" ಎಂದರೆ "ಅಯೋಗ್ಯ" ಎಂಬ ಶಬ್ದದ ಬಹುವಚನ ರೂಪ ಎಂಬಂತಾಗಿದೆ.
No comments:
Post a Comment