Saturday, May 8, 2010

ಆತ್ಮಹತ್ಯೆಯೇ ಪಲಿತಾಂಶವೇ?

ನಿನ್ನೆ  S.S.L.C & P.U.C ಪರೀಕ್ಷೆಗಳ ಪಲಿತಾಂಶ ಹೊರಬಿದ್ದಿದೆ.ಆಗಲೇ ಯಾರೋ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಟಿ.ವಿ.ಯಲ್ಲಿ ಬರುತಿತ್ತು. ಇದಕ್ಕೆ ಯಾರು ಹೊಣೆ?. ಸರ್ಕಾರವೇನಾದರೂ ಇನ್ನೊಂದು ಆತ್ಮಹತ್ಯಾ ನಿರೋದಕ ಕಾನೂನು ಮಾಡಿದರೆ ಅದರಲ್ಲಿ ಈ ಮಕ್ಕಳ ಆತ್ಮಹತ್ಯೆಗೆ ಪೋಷಕರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ.ಜೊತೆಗೆ ಪೋಷಕರ ಸಹೂದ್ಯೋಗಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ನಾನು ನಿನ್ನೆ ನನ್ನ ಕಚೇರಿಯಲ್ಲಿ  ಗಮನಿಸುತ್ತಲೇ ಇದ್ದೆ. ಕೆಲವರು ಬೇರೆಯವರ ಮಕ್ಕಳ ರಿಸಲ್ಟ್ ಕೇಳುವುದಕ್ಕೆ,ತಿಳಿದುಕೊಳ್ಳುವುದಕ್ಕೆ ವಿಶೇಷ ಆಸಕ್ತಿ /ಪ್ರಯತ್ನ ಪಡುತಿದ್ದರು.ಈಗ result online ಆಗಿದೆಯಲ್ಲಾ,ಕೆಲವರಿಗೆ ಅವರ ನಂಬರ್ ಪಡೆದು ಚೆಕ್ ಮಾಡುವ ಆಸಕ್ತಿ. ನನ್ನ ರೈಲ್ವೆ ಟಿಕೆಟ್ ಬುಕ್ ಮಾಡಿದ್ದೇನೆ PNR status ಚೆಕ್ ಮಾಡು ಎಂದರೆ ಸಹಾಯ ಮಾಡುವ ವ್ಯವಧಾನ ಯಾವನಿಗೂ ಇರುವುದಿಲ್ಲ. ನಮ್ಮ ಅಧಿಕಾರಿಗಳ "ಪಿ ಎ" ಸುಕನ್ಯ ಅವರು, ತಾವು 'ಸರ್'ಮಗಳ ನಂಬರ್ ಪತ್ತೆ ಮಾಡಲು ಎಷ್ಟು ಬುದ್ದಿವಂತಿಕೆ ಉಪಯೋಗಿಸಿದರು ಎಂದು ವಿವರಿಸಿ  ತಾವೇ ಆ ರಿಸಲ್ಟ್ ಓಪನ್ ಮಾಡಿ ತೋರಿಸಿ ಗೆಲುವಿನ ನಗೆ ಬೀರಿದರು. ಅದೇ ಬೇರೇನಾದರೂ ಮಾಹಿತಿಯನ್ನು ಅಂತರ್ಜಾಲದಲ್ಲಿ ಹುಡುಕು ಎಂದು ಅದೇ "ಸರ್' ಹೇಳಿದ್ದರೆ ನನಗೆ ಇಂಟರ್ನೆಟ್ ಬರಲ್ಲ ಎಂದು ಹೇಳಿ ಜಾರಿಕೊಂಡು ಬಿಡುತ್ತಿದ್ದರು.
ಈ ವಿಷಯ ತಿಲಿದ್ಕೊಳ್ಳುವುದುಯಾವುದೇ ಸಹಾಯ ಮಾಡುವುದಕ್ಕಲ್ಲ.ಈ ವಿಷಯಗಳ ಬಗ್ಗೆ ಅವರ ಬೆನ್ನ ಹಿಂದೆ ಚರ್ಚೆಗಳಾಗುತ್ತವೆ..ಮುಂದುಗಡೆ ಅತ್ಯಂತ ಸಹಾನುಬೂತಿ ಪ್ರಕಟಿಸಿ ಬೆನ್ನ ಹಿಂದೆ  ಜೋಕ್ ಕಟ್ ಮಾಡುವವರೇ ಹೆಚ್ಚು ನಮ್ಮಲ್ಲಿ. ನಮ್ಮ ಅಧಿಕ ಪ್ರಸಂಗಿತನದಿಂದ ಹಲವರು ತೊಂದರೆಗೆ ಈಡಾಗುತ್ತಾರೆ ಎಂಬ ವಿವೇಚನೆ ನಮಗಿರುವುದಿಲ್ಲ. ಇದು ನಮ್ಮ ಬಾರತಿಯರ ಹುಟ್ಟುಗುಣ ಇರಬೇಕು. ಅಡಿಕಪ್ರಸಂಗಿತನಕ್ಕೆ ನಾವು socialising ಎಂಬ ವ್ಯಾಖ್ಯಾನ ಕೊಡುತ್ತೇವೆ.
(ಮುಂದುವರೆಯಲಿದೆ)  

No comments: