ನಿನ್ನೆ S.S.L.C & P.U.C ಪರೀಕ್ಷೆಗಳ ಪಲಿತಾಂಶ ಹೊರಬಿದ್ದಿದೆ.ಆಗಲೇ ಯಾರೋ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಟಿ.ವಿ.ಯಲ್ಲಿ ಬರುತಿತ್ತು. ಇದಕ್ಕೆ ಯಾರು ಹೊಣೆ?. ಸರ್ಕಾರವೇನಾದರೂ ಇನ್ನೊಂದು ಆತ್ಮಹತ್ಯಾ ನಿರೋದಕ ಕಾನೂನು ಮಾಡಿದರೆ ಅದರಲ್ಲಿ ಈ ಮಕ್ಕಳ ಆತ್ಮಹತ್ಯೆಗೆ ಪೋಷಕರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ.ಜೊತೆಗೆ ಪೋಷಕರ ಸಹೂದ್ಯೋಗಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ನಾನು ನಿನ್ನೆ ನನ್ನ ಕಚೇರಿಯಲ್ಲಿ ಗಮನಿಸುತ್ತಲೇ ಇದ್ದೆ. ಕೆಲವರು ಬೇರೆಯವರ ಮಕ್ಕಳ ರಿಸಲ್ಟ್ ಕೇಳುವುದಕ್ಕೆ,ತಿಳಿದುಕೊಳ್ಳುವುದಕ್ಕೆ ವಿಶೇಷ ಆಸಕ್ತಿ /ಪ್ರಯತ್ನ ಪಡುತಿದ್ದರು.ಈಗ result online ಆಗಿದೆಯಲ್ಲಾ,ಕೆಲವರಿಗೆ ಅವರ ನಂಬರ್ ಪಡೆದು ಚೆಕ್ ಮಾಡುವ ಆಸಕ್ತಿ. ನನ್ನ ರೈಲ್ವೆ ಟಿಕೆಟ್ ಬುಕ್ ಮಾಡಿದ್ದೇನೆ PNR status ಚೆಕ್ ಮಾಡು ಎಂದರೆ ಸಹಾಯ ಮಾಡುವ ವ್ಯವಧಾನ ಯಾವನಿಗೂ ಇರುವುದಿಲ್ಲ. ನಮ್ಮ ಅಧಿಕಾರಿಗಳ "ಪಿ ಎ" ಸುಕನ್ಯ ಅವರು, ತಾವು 'ಸರ್'ಮಗಳ ನಂಬರ್ ಪತ್ತೆ ಮಾಡಲು ಎಷ್ಟು ಬುದ್ದಿವಂತಿಕೆ ಉಪಯೋಗಿಸಿದರು ಎಂದು ವಿವರಿಸಿ ತಾವೇ ಆ ರಿಸಲ್ಟ್ ಓಪನ್ ಮಾಡಿ ತೋರಿಸಿ ಗೆಲುವಿನ ನಗೆ ಬೀರಿದರು. ಅದೇ ಬೇರೇನಾದರೂ ಮಾಹಿತಿಯನ್ನು ಅಂತರ್ಜಾಲದಲ್ಲಿ ಹುಡುಕು ಎಂದು ಅದೇ "ಸರ್' ಹೇಳಿದ್ದರೆ ನನಗೆ ಇಂಟರ್ನೆಟ್ ಬರಲ್ಲ ಎಂದು ಹೇಳಿ ಜಾರಿಕೊಂಡು ಬಿಡುತ್ತಿದ್ದರು. ಈ ವಿಷಯ ತಿಲಿದ್ಕೊಳ್ಳುವುದು ಯಾವುದೇ ಸಹಾಯ ಮಾಡುವುದಕ್ಕಲ್ಲ.ಈ ವಿಷಯಗಳ ಬಗ್ಗೆ ಅವರ ಬೆನ್ನ ಹಿಂದೆ ಚರ್ಚೆಗಳಾಗುತ್ತವೆ..ಮುಂದುಗಡೆ ಅತ್ಯಂತ ಸಹಾನುಬೂತಿ ಪ್ರಕಟಿಸಿ ಬೆನ್ನ ಹಿಂದೆ ಜೋಕ್ ಕಟ್ ಮಾಡುವವರೇ ಹೆಚ್ಚು ನಮ್ಮಲ್ಲಿ. ನಮ್ಮ ಅಧಿಕ ಪ್ರಸಂಗಿತನದಿಂದ ಹಲವರು ತೊಂದರೆಗೆ ಈಡಾಗುತ್ತಾರೆ ಎಂಬ ವಿವೇಚನೆ ನಮಗಿರುವುದಿಲ್ಲ. ಇದು ನಮ್ಮ ಬಾರತಿಯರ ಹುಟ್ಟುಗುಣ ಇರಬೇಕು. ಅಧಿಕಪ್ರಸಂಗಿತನಕ್ಕೆ ನಾವು socialising ಎಂಬ ವ್ಯಾಖ್ಯಾನ ಕೊಡುತ್ತೇವೆ. ಕೆಲವೊಮ್ಮೆ ಒಂದು ಮಾತನ್ನುಆಡುವುದರಿಂದ ,ಕೆಲವೊಮ್ಮೆ ಒಂದು ನಿಮಿಷ ಮೌನವಾಗಿರುವುದರಿಂದ ನಾವು ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ ನೀಡಬಹುದು. ಒಂದಿಷ್ಟು ಮೌನ ವಹಿಸಿದ್ದರೆ ಸಾಕು ,ಕಡಿಮೆ ಅಂಕ ಗಳಿಸಿದ ಮಗನ ತಂದೆ/ತಾಯಿ ಮನೋವೇದನೆ ಅನುಬವಿಸುವುದನ್ನು ತಪ್ಪಿಸಬಹುದು. ಚೆ, ಚೇ,ಸತ್ತೆ ಹೋದರಲ್ಲ,ಅದೇನು ಮಹಾ ವಿಷಯ ಅಂತಾ ಈಗಲ್ಲದಿದ್ದರೆ ಮುಂದಿನ ವರ್ಷ.....ಇತ್ಯಾದಿ ಲೋಚಗುಟ್ಟುವುದಕ್ಕಿಂತ ಅದೇನು ಮಹಾ ವಿಷಯವಲ್ಲಾ ಎಂಬ atitude ತೋರಿಸಿ ಸುಮ್ಮನಿದ್ದು ಬಿಡಬಹುದಲ್ಲವೇ? . ಹಿಂದೆ ಭೂಪಾಲದಲ್ಲಿ ಯುನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಆದ ದುರಂತದಲ್ಲಿ ಹಲವಾರು ಜನ ಸತ್ತಾಗ ಪತ್ರಿಕೆಗಳು ನೂರಾರು ಪುಟ ಬರೆದವು.ಹಲವು ವೇದಿಕೆಗಳಲ್ಲಿ ಚರ್ಚೆ ಆದವು.ಆಮೇಲೆ ಅದರ ಚೇರ್ಮೆನ್ ವಾರನ್ ಅಂಡರ್ಸನ್ಗೆ ಶಿಕ್ಷೆ ಆಗಲಿಲ್ಲ ಎಂದು ಬಾಯಿಬಡಿದು ಕೊಂಡೆವು. ನಾವು ಶೆಲ್ ಅಂಗಡಿಗೆ ಹೋದಾಗ 'ಒಂದೇ ಒಂದು ಶಬ್ದ "ಇದು ಬೇಡ" ಎಂದು ಪ್ರತಿಯೊಬ್ಬ ಬಾರತೀಯನೂ ಹೇಳಿದ್ದರೆ ಯುನಿಯನ್ ಕಾರ್ಬೈಡ್ ಎಕ್ಕ ಎದ್ದು ಹೋಗುತ್ತಿತ್ತು. ಕಂಪನಿಯವರೇ ವಾರನ್ಅಂಡರ್ಸನ್ ನನ್ನು ಉಗಿದೋಡಿಸುತಿದ್ದರು. ನಾವು ಚಿಲ್ಲರೆ ಕಾಸಿನಾಸೆಗೆ ಕಡಿಮೆ ಬೆಲೆ ಎಂದು ಆ ಕಂಪನಿ ವಸ್ತುಗಳನ್ನು ಕೊಂಡು ಕಂಪನಿ ಉಳಿಸಿದೆವು. ನ್ಯಾಯಾಂಗ ವ್ಯವಸ್ತೆಯನ್ನು ದೋಷಿಸಿ ಏನು ಫಲ. ಇನ್ನೊಬ್ಬರ ವಿಷಯದಲ್ಲಿ ತಲೆಹಾಕುವುದರ ಬದಲು ಅವರು ಮುಂದೆ ಬಂದಾಗ ಒಂದು ಮುಗುಳ್ನಗೆಯೋ ,ಸದ್ಭಾವನೆಯ ಮಾತೋ ನಮ್ಮ ಸಮಾಜವನ್ನು ಹತ್ತಿರ ತರಬಹುದು.ನಮ್ಮಲ್ಲಿಯ ಅಧಿಕಪ್ರಸಂಗತನ ಹಲವಾರು ಸಾರಿ ದ್ವೇಷ ಸಾಧನೆಗೆ ಕಾರಣ ವಾಗಬಹುದು."ಹೌದಾ, ಅವನ ರಿಸಲ್ಟ್ ಬಂದಾಗ ನನಗೆ ಹೇಳಲಿಲ್ಲ .ಈಗ ನಾನ್ಯಾಕೆ ಸಹಾಯ ಮಾಡಲಿ " ಎಂಬ atitude ಭಾರತದ 95% ಜನಗಳಿಗಿದೆ. ನನ್ನ ಸಹಾಯ ಬೇಕಾದರೆ ಅವನು ನನ್ನ ಮುಂದೆ humble ಆಗಬೇಕು,ನನ್ನ ಆಜ್ಞಾಧಾರಕನಾಗಬೇಕು ಎಂಬ ಆಸೆ ನಮ್ಮ ಒಳಮನಸಿನಲ್ಲಿದೆ. ಈ ರೀತಿಯ ತುಡಿತ ನಮ್ಮ ಸುಪ್ತ ಮನಸ್ಸಿನಲ್ಲಿರುವುದಕ್ಕೆ ಕಾರಣ ಏನು ಗೊತ್ತೇ?ನಮ್ಮ ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ class system,ವರ್ಗ ವ್ಯವಸ್ಥೆ.ಜಾತಿವಾದ. ಇಂತಹುದಕ್ಕೆ ವರ್ಷ ವರ್ಷವೂ ಮಕ್ಕಳನ್ನು ಬಲಿತೆಗೆದುಕೊಳ್ಳುವ ಈ ಸಂಸ್ಕೃತಿಯನ್ನು ನಾವು ಹೊರದೇಶದಲ್ಲಿ ಹೋಗಿ ನಾಚಿಕಇಲ್ಲದೆ ಹೊಗಳಿಕೊಳ್ಳುತ್ತೇವೆ .ಇನ್ನೊಬ್ಬರನ್ನು ನಮ್ಮ ಸಂಸ್ಕೃತಿಯಲ್ಲಿ ಅಂತರ್ಗತವಾದ ರಕ್ತ ಪಿಪಾಸು ತನದ ಅಂಶಗಳನ್ನು ಕಂಡು ಹಿಡಿದು ಸರಿಪಡಿಸಿಕೊಂಡು ಬದುಕುವುದನ್ನು ಬಿಟ್ಟು ಅವರಿವರ ಮೇಲೆ ದೋಷ ಹೊರಿಸಿ ಕೊಂಡು ತಿರುಗುತ್ತೇವೆ. ನಮ್ಮಲ್ಲಿ ಸಂಸ್ಕೃತಿ ಎಂದರೆ ಒಂದೇ. ಅದು ಹೆಣ್ಣು ಮಕ್ಕಳ ಸ್ವತಂತ್ರ. ನಮ್ಮ ಸಂಸ್ಕೃತಿಯ ವಕ್ತಾರರು ಯಾರು ಎಂದು ನೋಡಿದರೆ ನಿಮಗೆ ವಸ್ತುಸ್ತಿತಿ ತಿಳಿಯುತ್ತದೆ. ನಿಸರ್ಗಕ್ಕೆ ವ್ಯತಿರಿಕ್ತವಾದ ಜೀವನಶೈಲಿಯನ್ನು ಅನುಸರಿಸಲು ಹೋಗಿ ಸ್ವಯಂ ಸಂಕಷ್ಟದಲ್ಲಿ ಬದುಕುವ ಜನ. ಇವರ ಪ್ರಕಾರ ಸಂಸ್ಕೃತಿ ಎಂದರೆ ಲೈ೦ಗಿಕ ಜೀವನ. ಲೈ೦ಗಿಕ ಜೀವನವೇ ಸಂಸ್ಕೃತಿ.!. ಪೋಷಕರು ಸದಾ ವಿಧ್ಯಾರ್ಥಿಗಳನ್ನು ಓದು,ಓದು ಎಂದು ಹೇಳುತ್ತಾ ಅವರೇ ಅದರಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಾ ಅವರನ್ನು ಇನ್ನೊಬ್ಬರ ಜೊತೆ ಕಂಪೇರ್ ಮಾಡುತ್ತಲೇ ಇರುತ್ತಾರೆ.ಪೋಷಕರ ಒತ್ತಾಯ ಒತ್ತಟ್ಟಿಗಿರಲಿ, ವಿದ್ಯಾರ್ಥಿಗಳ ಮೇಲೆ ಸಮಾಜಕ ಒತ್ತಡ ಇವೆ. ಎಸ್.ಎಲ್.ಸಿ ವರೆಗೆ ಎಲ್ಲಾ ಒಂದೇ ಶಿಕ್ಷಣ ವ್ಯವಸ್ಥೆ.ಇಲ್ಲಿ ಆಯ್ಕೆ ಇಲ್ಲ.ಸ್ವತಂತ್ರವಾಗಿ,ಶಾಲೆಗೇ ಹೋಗದೆ ಪರೀಕ್ಷೆ ಬರೆಯುತ್ತೇವೆ ಎನ್ನುವ ಬಾಲಕರಿಗೆ ಉತ್ತೇಜನ ಇಲ್ಲ.ಎಲ್ಲರನ್ನು ಕುರಿಗಳಂತೆ ಒಂದೇ ಲೈನಲ್ಲಿ ಹೋಗುವಂತೆ ಪ್ರೇರೇಪಿಸುತ್ತೇವೆ. ಇಲ್ಲಿ ನಾವು ಕುರಿಗಳಿಗಿಂತ ಕಡೆ. ಅವಾದರೂ ಒಂದೇ ಹಿಂಡಿನಲ್ಲಿ ಸಾಗಿ ಗುರಿ ತಲುಪುತ್ತವೆ. ನಮಗೆ ನೀನು ಫಾಸ್ಟ್ ಹೋಗು,ಅವನನ್ನು ಹಿಂದೆ ಹಾಕು,ಬೇಗ ಹೋಗು ಎಂದೆಲ್ಲಾ ಹುರಿದುಂಬಿಸಲಾಗುತ್ತದೆ. ಅದುದರಿಂದ ಈ ಗುಂಪಲ್ಲಿ ಎಳೆದಾಟ ಆರಂಭವಾಗಿ ಕೆಲವರು ಉಸಿರುಗಟ್ಟಿ ಸಾಯುತಾರೆ!.ಎಲ್ಲರೂ ಈ ಸ್ಪರ್ದೆ ಬೆಮ್ಬಲಿಸುವುವವರೇ.ಗೆದ್ದವರಿಗೆ ಬಹುಮಾನ,ಸೋತವರಿಗೆ ಅವಮಾನ!.ಗೆಲ್ಲು ಅಥವಾ ಸಾಯಿ ಇದೆ ಸಮಾಜ ನಮಗೆ ನೀಡುವ ಆಯ್ಕೆ.ಸರಿ,ನಾನು ಈ ಗುಂಪಲ್ಲಿ ಬರುವುದಿಲ್ಲ. ಬೇರೇನನ್ನೋ ಮಾಡಿಕೊಂಡು ಆಮೇಲೆ ಬರುತ್ತೇನೆ ಎಂದು ಹೇಳಲೂಸಾಧ್ಯವಿಲ್ಲ. ಯಾಕೆಂದರೆ ಎಲ್ಲದಕ್ಕೂ ಏಜ್ ಲಿಮಿಟ್ ವಿಧಿಸಲಾಗಿದೆ. ಆ ವಯೋಮಿತಿಯೊಳಗೆ ಅವನು ಅಲ್ಲಿಗೆ ರೀಚ್ ಆಗದೆ ಹೋದರೆ ಸಮಾಜದಲ್ಲಿ ಕೆಲವು ವೃತ್ತಿಗಳನು ಕೈ ಗೊಳ್ಳುವ ಅವಕಾಶವೇ ಅವನಿಗೆ ಇಲ್ಲದನ್ತಾಗುತ್ತದೆ. ಏನೇನೋ ಕಟ್ಟುಪಾಡುಗಳು. ಒಬ್ಬ ಎಸ್.ಎಸ್.ಎಲ್.ಸಿ ದಾಟಬೇಕಾದರೆ ಅವನ ಬಳಿ ಹಲವಾರು ರೀತಿಯ ಕಾಗದಪತ್ರ ಇರಬೇಕಾಗುತ್ತದೆ. ನಾನು ಜನರನ್ನು mainstream ನಲ್ಲೇ ಇರಬೇಕೆಂದು ಬಯಸುತ್ತೇವೆ. ಯಾಕೆಂದರೆ ಇದರಲ್ಲಿ ನಮ್ಮ mutual ಸ್ವಾರ್ಥ ಅಡಗಿದೆ.ಅವನು ಅವನಷ್ಟಕ್ಕೆ ಇದ್ದರೆ ನಮಗೇನು ಲಾಭ ಎನ್ನುವ ದೋರಣೆ ಇದೆ. ಅಮೀರ್ ಖಾನ್ ನಟಿಸಿರುವ 3 idiot ಚಿತ್ರದಲ್ಲೂ ಇಂತಹ ಸಂದೇಶ ಇದೆ. ನಮ್ಮಲ್ಲಿ ಈ ಸ್ಪರ್ಧಾ ಮನೋಭಾವದ ಮನೋರೋಗಕ್ಕೆ ಇನ್ನೊಂದು ನೈಜ ಕಾರಣ ಇದೆ.ಇಲ್ಲಿ ಬಾಯಿ ಹೆಚ್ಚು. ಊಟ ಕಡಿಮೆ. ಸೊಳ್ಳೆಗಳಿಗಿಂತ ಫಾಸ್ಟ್ ಆಗಿ ಜನಸಂಖ್ಯೆಯ ಹೆಚ್ಚಳ ಆಗುತ್ತದೆ.ದಕ್ಷಿಣ ರಾಜ್ಯದ ಜನಸಂಖೆ ಕಡಿಮೆ ಯಾದರೆ ಅದರಿಂದ ಆ ರಾಜ್ಯಕ್ಕೆ ಸಿಗುವ ಸವಲತ್ತನ್ನು ವಲಸಿಗರು ಬಂದು ಕಿತ್ತುಕೊಳ್ಳುತ್ತಾರೆ(ಈ ಸಮಸ್ಯೆ ಬಗ್ಗೆ ಇನ್ನೊಂದು ಲೇಖನ ಬರೆಯಬಹುದು).......... ಬರೆಯಲು ಬೋರ್ ಆಗುತ್ತಿದೆ. ಯಾರಾದರೂ ಓದುತಿದ್ದಾರೆ ಅನ್ನೋ ಸುಳಿವು ಸಿಕ್ಕರೆ, ಇನ್ನು ಯಾವಾಗಲಾದರೂ ಮುಂದುವರಿಸುತ್ತೇನೆ) |
Monday, May 10, 2010
ಆತ್ಮಹತ್ಯೆಯೇ ಪಲಿತಾಂಶವೇ?(Full Version)
Subscribe to:
Post Comments (Atom)
No comments:
Post a Comment