Thursday, May 13, 2010

ಅಕಾಡೆಮಿಕ್ ಮೆಂಟಾಲಿಟಿ !

ದಿನಾಂಕ:೧೩ ಏಪ್ರಿಲ್ ೧೦೧೦ ರ ವಿಜಯ ಕರ್ನಾಟಕದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಒಂದು ಲೇಖನ ಪ್ರಕಟವಾಗಿದೆ. ಅದರ ಪ್ರಕಾರ ೧೯೯೧ ರಿಂದ ೨೦೦೬ ರವರೆಗೆ ಸಿಬ್ಬಂದಿಗೆ ನೀಡಿರುವ ವೇತನ 2,03,03368-00 ರೂ ಗಳು. AG ವಸೂಲಿಗೆ ಸೂಚಿಸಿರುವ ಹಣ 1,70,97304 ರೂ ಗಳು. ಪ್ರಶ್ನಾರ್ಹ ವೆಚ್ಚ 16,98,24821 ರೂ ಗಳು.
ತಾಂತ್ರಿಕ  ವಿಭಾಗದ ಕಾಮಗಾರಿಗಳಲ್ಲಿ ನಾಲ್ಕು ಕೋಟಿ ಇಪ್ಪತೆಂಟು ಲಕ್ಷದ ಮೂವತ್ತೆಂಟು ಸಾವಿರದ ಎಪ್ಪತ್ತೇಳು ರೂಪಾಯಿ ದುರುಪಯೋಗವಾಗಿದೆಯಂತೆ.
ಹೀಗೆ ಕೋಟಿ ಕೋಟಿ ವ್ಯಯಿಸಿದ್ದರಿಂದ ಕನ್ನಡಕ್ಕೆ ಆದ ಲಾಭವೇನು?.ಇಂದು ಕರ್ನಾಟಕವನ್ನು ನಾವು ಆಂಧ್ರದ ರೆಡ್ಡಿಗಳಿಗೆ ಬಿಟ್ಟು ಕೊಟ್ಟಿದ್ದೇವೆ. ಈಗಿನ ಬೆಂಗಳೂರಿನ ಮೇಯರ್ ತೆಲುಗು ಮಾತೃಬಾಷೆಯವರು. ಇಂದು ಬೆಂಗಳೂರು ತೆಲುಗರ ಪಾಲಾಗುತ್ತಿದೆ ಎಂದು ಯಾರಾದರು ಆಕ್ಷೇಪಣೆ ಎತ್ತಿದರೆ ಅದು ತಮಿಳರು ಎತ್ತಬೇಕೆ ಹೊರತು ಕನ್ನಡಿಗರು ಎತ್ತುವುದಿಲ್ಲ. ಇಂದು ಬೆಂಗಳೂರಿನ ಮುಕ್ಕಾಲು ಪಾಲು ನೆಲದ ಒಡೆಯರು ತೆಲುಗರು. ಅವರೆ ಇಲ್ಲಿನ ಮಕ್ಕಳು. ಸೊ, ಕನ್ನಡಿಗ ಬಾಂಧವರೇ ,ಕರ್ನಾಟಕಕ್ಕೇ ಮರಳಿ.ಅಂದರೆ,ಮಂಡ್ಯ,ಶಿವಮೊಗ್ಗ,ಹಾಸನ ಮುಂತಾದೆಡೆಗೆ.
ಓಕೆ, ಶಟಪ್.ಅದು ರಾಜಕೀಯ . ನಾವು ಬುದ್ದಿಜೀವಿಗಳು. ನಮ್ಮ ಕೆಲಸ ನಮ್ಮ ಬಾಷೆಯನ್ನು ಸಮೃದ್ದಗೊಳಿಸುವುದಷ್ಟೇ.ನೀವು ಕರ್ನಾಟಕ ಉಳಿಸಿದರೆ ನಾವು ಕನ್ನಡ ಬೆಳೆಸುತ್ತೇವೆ ಅಂತಾ ಸರಿಯಾಗೇ ಉಗಿದರು ನನಗೆ. ಆದರೂ ನನಗನ್ನಿಸುತ್ತದೆ,ಈ ಪಂಡಿತರಿಗೆ ವ್ಯಯಿಸುವ ಹಣವನ್ನು ಪ್ರಾಥಮಿಕ ವಿದ್ಯಾಬ್ಯಾಸಕ್ಕೆ ಉಪಯೋಗಿಸಬಾರದೇಕೆ ಎಂದು?,  ಪಂಡಿತರು ಕನ್ನಡ ಉದ್ದಾರ ಮಾಡುವುದು ಅಷ್ಟಕ್ಕೇ ಇದೆ.ಈ ವಿಶ್ವವಿದ್ಯಾಲಯಗಳಂತೂ ನಿರುದ್ಯೋಗಿಗಳ ಫ್ಯಾಕ್ಟರಿ ಆಗಿದೆ.ಇದರ ಬದಲು ಕನ್ನಡಿಗರಿಗೆ ಹೊಟ್ಟೆ ತುಂಬಿಸಿಕೊಳ್ಳುವ ತಾಂತ್ರಿಕ ಶಿಕ್ಷಣ ಇಂಗ್ಲಿಷ್ನಲ್ಲೇ ಕೊಟ್ಟಿದ್ದರೆ ಅವರು ಬೇರೆ ಬೇರೆ ಕಡೆ ಹೋಗಿ ಅಲ್ಲೆಲ್ಲಾ  ಕನ್ನಡ ಬೆಳೆಸುತ್ತಿದ್ದರು. ಅದಲ್ಲದೇ ಈ ವಿಶ್ವವಿದ್ಯಾಲಯಗಳು ಹಲವು ಎಕರೆ ಜಮೀನು ಕೇಳುತ್ತವೆ. ಇವುಗಳಿಗೆ ಕೊಟ್ಟ ಜಮೀನು ಮತ್ತೆ ಯಾವುದೇ ಉಪಯೋಗಕ್ಕೆ ಸಿಗುವುದಿಲ್ಲ. ಈಗ ಸರ್ಕಾರ ಸಂಗೀತ ವಿ.ವಿ ರಚನೆಯಾಗುತ್ತಿದೆ. ಇದು ಕೂಡ ಹಲವು ಎಕರೆ ಜಮೀನು ಕೇಳುತ್ತಿದೆ. ಇವರಿಗೆ ಜಮೀನು ಕೊಡದೇ ಇರುವುದು ಒಂದು ಪಬ್ಲಿಕ್ ಇಂಟರೆಸ್ಟ್ ಸಮಸ್ಯೆ ಎಂಬ0ತೆ ಕೆಲವು ಪತ್ರಿಕೆಗಳಲ್ಲಿ ಬಿಂಬಿಸಲಾಗುತ್ತಿದೆ. ಈಗಾಗಲೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿರುವ ಲಲಿತಕಲೆಗಳ ಕೇಂದ್ರವೇ ವಿದ್ಯಾರ್ಥಿಗಳಿಲ್ಲದೆ ನೊಣಹೊಡೆಯುತ್ತಿವೆ. ಇವುಗಳನ್ನೇ ಉತ್ತಮಪಡಿಸಬಹುದಲ್ಲವೇ? ಸತ್ಯಾಂಶ ಏನೆಂದರೆ ಇವುಗಳನ್ನು ಉತ್ತಮಪಡಿಸಲು ಯಾವುದೇ ಸ್ಕೋಪ್ ಇಲ್ಲ. ವಿಧ್ಯಾರ್ಥಿಗಳಿಗೆ ಇಂತಹ ಸರ್ಟಿಫಿಕೆಟ್ ಕೋರ್ಸುಗಳಲ್ಲಿ ಆಸಕ್ತಿಯಿಲ್ಲ. ಆಸಕ್ತಿ ಇರುವುದು ಕೆಲವೇ ಕೆಲವೇ ಮಂದಿ ಸಂಗೀತಾಸಕ್ತರಿಗೆ,ಶಿಕ್ಷಕರಿಗೆ. ಇವುಗಳು ಶಿಷ್ಯರಿಲ್ಲದ ಗುರುಕುಲಗಳು. ಸರ್ಕಾರ ಸಂಬಳ ಕೊಡುತ್ತದೇ ಎಂದಮೇಲೆ ಶಿಷ್ಯರಿಲ್ಲದೇ ಇದ್ದರೆ ಒಳ್ಳೆಯದಲ್ಲವೇ?ಆರಾಮಾಗಿ ವಿವಿಧ ರೀತಿಯ ಸೆಮಿನಾರುಗಳನ್ನು ಆಯೋಜಿಸುತ್ತಾ,(ಯಾರೂ ಓದದ)ಪ್ರಬಂಧಗಳನ್ನು ಅಚ್ಚು ಹಾಕಿಸುತ್ತಾ,ರಾಜ್ಯದ ಸಂಗೀತ ಸುಧೆಯನ್ನು "ದೇಶವಿದೇಶ"ಗಳಲ್ಲಿ ಪಸರಿಸುವ ನೆಪದಲ್ಲಿ ಪ್ರಪಂಚ ಸುತ್ತಬಹುದಲ್ಲ!.ಆಮೇಲೆ ವಿ.ವಿ.ಅಂದರೆ ಶಿಕ್ಷಕರಷ್ಟೇ ಅಲ್ಲ.ಹಲವರು ಆಡಳತ ಸಿಬ್ಬಂದಿ ಬೇಕಾಗುತ್ತದೆ.ಅವರ ನೇಮಕಾತಿಗಳಲ್ಲಿ ರಾಜಕಾರಣಿಗಳಿಗೆ ಒಳ್ಳೆ ಅವಕಾಶ ಸಿಗುತ್ತದೆ.ಸ್ವಯುತ್ತ ಸಂಸ್ತೆಗಳಲ್ಲಿ ಅವ್ಯವಹಾರ ನಡೆಸಿದರೆ ಅದನ್ನು ಸುಲಭವಾಗಿ ಮುಚ್ಚಿ ಹಾಕಬಹುದು.ಇನ್ನು ವಿ.ವಿ.ಎಂದರೆ ಕಟ್ಟಡಗಳು ಬೇಕೇ ಬೇಕು. ಆಡಳಿತ ಕಟ್ಟಡಗಳು,ಗೆಸ್ಟ್ ಹೌಸ್ ಗಳು,ಸ್ಟಾಫ್ ಕ್ವಾಟರ್ಸ,ಅರಮನೆ ನಾಚಿಸುವಂತಹ ವಿ ಸಿ ಯ ನಿವಾಸ,ಕ್ರೀಡಾಂಗಣ,ಈಜುಕೊಳ,ಉದ್ಯಾನವನ (ಯಾಕೆ ಬೇಕು ಎಂದು ಕೇಳುವಂತೆ ಇಲ್ಲ) ಇವೆಲ್ಲಾ ಆಗಬೇಕು. ಆಗ ಹೊಸ ಆಟ ಆರಂಭ ಆಗುತ್ತದೆ. ಯಾವನಾದರೂ ಇಂಜಿನಿಯರ್ ಸಿಕ್ಕಾಬಟ್ಟೆ ಲಂಚ ಕೊಟ್ಟೋ,ಪ್ರಭಾವ ಬಳಸಿಯೋ ಪಿ.ಡಬ್ಲ್ಯೂ.ಡಿ.ಯಿಂದ ಎರವಲು ಸೇವೆಮೇಲೆ ಬರುತ್ತಾನೆ.ಇನ್ನೊಬ್ಬ ಕಂದಾಯ ಇಲಾಖೆಯಿಂದ ರಿಜಿಸ್ಟ್ರಾರ್ ಆಗಿ ಬರುತ್ತಾನೆ.ಆಮೇಲೆ ಇಲ್ಲಿ ಸಂಗೀತಕ್ಕೆ ಜಾಗ ಇಲ್ಲ.ನುಂಗಾಟ ಶುರು!. ವಿಶೇಷ ವಿ.ವಿ. ಎಂದರೆ ವಿಶೇಷ ರೀತಿಯ ಕಟ್ಟಡ ಬೇಕಲ್ಲ. ನಾದ ಮಂಟಪ,ವಿಶ್ವ ಮಟ್ಟದ ರೆಕಾರ್ಡಿಂಗ್ ಸೆಂಟರ್,ಮುಂತಾದವು ಕಟ್ಟಲು ಪ್ರೊಪೋಸಲ್ ಸರ್ಕಾರಕ್ಕೆ ಹೋಗುತ್ತದೆ.ಅವನ್ನು ಹೇಗೆ ಪಾಸು ಮಾಡಿಸಬೇಕು ಎಂದು ಇಂಜಿನೀಯರ್ ಹಾಗೂ ರಿಜಿಸ್ಟ್ರಾರ್ ಸಾಹೇಬರಿಗೆ ಗೊತ್ತು. ಅದಕ್ಕೆಂದೇ ಹಲವು ಸ್ವಯುತ್ತ ಸಂಸ್ಥೆಗಳಲ್ಲಿ,ಸಂಶೋದನ ಕೇಂದ್ರಗಳಲ್ಲಿ ಮಹಾ ನಿರ್ಧೆಶಕನ ಹುದ್ದೆಗೆ ಐ.ಎ.ಎಸ್.ಅಧಿಕಾರಿಗಳನ್ನು ನೇಮಿಸುತ್ತಾರೆ.ಏಕೆಂದರೆ ಸರ್ಕಾರದ ಮಟ್ಟದಲ್ಲಿ ಕೆಲಸ ಸಲಿಸಾಗಿ ಮೂವ್ ಆಗಬೇಕಲ್ಲ.ಕೇಂದ್ರ ಸರ್ಕಾರದ ಇಂತಹ ಎಷ್ಟೋ ಸಂಸ್ಥೆಗಳು ಇಂದು ಇಂತಾ ಅಧಿಕಾರಿಗಳ ಒಡ್ಡೋಲಗವಾಗಿದೆ. ಸರಿ,..... ಮಾಡಿಕೊಳ್ಳಲಿ ಬಿಡಿ,ನಿಮಗ್ಯಾಕೆ ಹೊಟ್ಟೆಕಿಚ್ಚು,ಈಗಾಗಲೇ ಎಲ್ಲೆಲ್ಲೋ,ಯಾವ್ಯಾವದಕ್ಕೋ ಸರ್ಕಾರಿ ಹಣ ಪೋಲಾಗುತ್ತಿಲ್ಲವೇ? ,ಇದಕ್ಕೂ ಕೊಡಲಿ ಬಿಡಿ. ಇದಕ್ಕೆ ಕೊಡಬೇಕು ಎಂದು ಯಡ್ಡಿಯೂರಪ್ಪ ಮಠಗಳಿಗೆ ಅನುದಾನ ಕೊಡೋದನ್ನು ನಿಲ್ಲಿಸ್ತಾನ?.ಇರುವ ಹಳೆ ತಿಮಿಂಗಿಲಗಳ ಜೊತೆ ಇವರು ಹೊಸ ತಿಮಿಂಗಿಲಗಳನ್ನು ಹುಟ್ಟಿಸುತ್ತಾರೆ.ಈ ತಿಮಿಂಗಿಲಗಳನ್ನು ಸಾಯಿಸುವುದು ಸಾಧ್ಯವಿಲ್ಲ. ಸಾಕಲೆಬೇಕಾಗುತ್ತದೆ.ಪ್ರವಾಹವಾದರೂ ಸರಿ,ಬರ ಬಂದರೂ ಸರಿ ಬಡ್ಜೆಟ್ ನಲ್ಲಿ ಇಂತಿಷ್ಟುಹಣ ನೀಡಲೇಬೇಕು.ಪರಿಣಾಮ ನೀವೇ ಊಹಿಸಬಹುದು. ಒಂದೋ, ನಮ್ಮ ಮೇಲೆ ತೆರಿಗೆ ಹೆಚ್ಚುತ್ತದೆ.ಅಥವಾ ರಾಜ್ಯ ಸಾಲ ಎತ್ತಬೇಕಾಗುತ್ತದೆ.ಹೇಗೇ ಆದರು ಇದರ ಭಾರವನ್ನು ಜನರೇ ಹೊರಬೇಕು.ಇಷ್ಟೇ ಅಲ್ಲ,ಇಲ್ಲಿ ಕಲಿತ ವಿಧ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಬೇಕಲ್ಲ.ಅದಕ್ಕೆಂದು ರಾಜ್ಯದ ಪ್ರತಿಯೊಂದು ಶಾಲೆಯಲ್ಲಿ ಸಂಗೀತ ಶಿಕ್ಷಕನ ಹುದ್ದೆ ಸೃಜಿಸಬಹುದು.ಆಗ ತೆರಿಗೆ ಹೆಚ್ಚಳ ಮಾತ್ರ ಅಲ್ಲ,ಈಗಿನ ಸಿಲಬಸ್ ಮ್ಯಾನೇಜ್ ಮಾಡಲು ಆಗದೆ ಒತ್ತಡದಿಂದ ಹುಡುಗರು ಸಾಯುತ್ತಿದ್ದಾರೆ.ಸಾಲದು ಅಂತಾ ಹೊಸ ಸಬ್ಜೆಟ್ ಸೇರಿಸುವುದು ಯಾವ ನ್ಯಾಯ?.ಹಾಳಾಗಿ ಹೋಗಲಿ ಬಿಡಿ,ಅವರಿಗೂ ಒಂದು ಲೈಫ್ ಸಿಗಲಿ ಅಂತಾ ನೀವು ಬಿಟ್ಟು ಬಿಡಬಹುದು.ಆದರೆ ಅವರು ನಿಮಗೆ ಏನನ್ನಾದರೂ ಬಿಟ್ಟುಕೊಡುತ್ತಾರೆಯೇ?.  ಈ ಅಕಾಡೆಮಿಕ್ ಜನಗಳ ನೀಚ ಮೆಂಟಾಲಿಟಿ ನನಗೆ ಅರ್ಥವಾದದ್ದು ಮೈಸೂರಿನ ಒಂದು ಘಟನೆಯಿಂದ. ಮೈಸೂರಿನ ರೈಲ್ವೆ ನಿಲ್ದಾಣದ ಮುಂದೆ ಒಂದು ಮೈದಾನವಿದೆ. ಅಲ್ಲಿ ಬಸ್ ನಿಲ್ದಾಣ ಆದರೆ ಬೆಂಗಳೂರಿನ ಮೆಜಾಸ್ಟಿಕ್ ತರ ಎಲ್ಲಾ ಸೌಲಬ್ಯ ಒಂದೇ ಕಡೆ ಆಗಿ ಮೈಸೂರಿನ ಜನಕ್ಕೆ ಅನುಕೂಲ ಆಗುತ್ತಿತ್ತು. ಆದರೆ ಆ ಜಾಗ ಮೆಡಿಕಲ್ ಕಾಲೇಜಿನ ಆಸ್ತಿ. ಆ ಆಸ್ತಿ ಉಳಿಸಿಕೊಳ್ಳುವ ಬಗ್ಗೆ ಅಕಾಡೆಮಿಕ್ ಸರ್ಕಲ್ ನಲ್ಲಿ ಬಹಳ ಚರ್ಚೆಯಾಯಿತು.ಹೋರಾಟಗಳಾಯಿತು!.ಕೊನೆಗೆ ಒಂದು ಐಡಿಯಾ ಮಾಡಿ  ಅಲ್ಲಿ ಒಂದು ಬಿಲ್ಡಿಂಗ್ ಕಟ್ಟಲಾಯಿತು. ಇಂದು ಈ ಕಟ್ಟಡ ಅವರುಗಳ ನೀಚ ಮನಸ್ತಿತಿಯ ಸ್ಮಾರಕವಾಗಿ ನಿಂತಿದೆ.
(ಮತ್ತೆ ಮನಬಂದಾಗ ಮುಂದುವರಿಸುತ್ತೇನೆ)

No comments: