ಹರತಾಳು ಹಾಲಪ್ಪ ಎಂಬ ಭಾ.ಜ.ಪ. ಮಹಾರಥ ತಮ್ಮ ಸಹೋದ್ಯೋಗಿಗಳಿಗಿಂತಲೂ ನಾನೇನು ಕಮ್ಮಿ ಎಂಬಂತೆ ತಮ್ಮ ಪರಾಕ್ರಮ ಮೆರೆದಿದ್ದಾರೆ.ತನ್ಮೂಲಕ ಮುಖ್ಯಮಂತ್ರಿ ಗಾದಿಗೆ ರೇಣು’ಕಾಚಾ’ರ್ಯ ,ಮತ್ತು ರಘುಪತಿ ಭಟ್ಟರಿಗೆ ಸ್ಪರ್ಧೆ ನೀಡುವ ಅರ್ಹತೆ ದೊರಕಿಸಿಕೊಂಡಿದ್ದಾರೆ.ಇವರ ಕೃತ್ಯ ಮೆಚ್ಚಿರುವ ಹಾಲಿ ಮುಖ್ಯಮಂತ್ರಿ “ಹಾಲಪ್ಪ ಒಳ್ಳೆಯವನು’ಎಂದು ಸರ್ಟಿಫಿಕೇಟ್ ನೀಡಿದ್ದಾರೆ.
ಹಿಂದೆ ಯಾರೋ ಒಬ್ಬರು ಅರ್.ಎಸ್ಸ್.ಎಸ್ಸ್ ಮುಖಂಡರನ್ನು ಟೀಕಿಸಿ ಒಂದು ಪುಸ್ತಕ ಬರೆದಿದ್ದರು.ಬಹುಷ ಏ.ಕೆ. ಸುಬ್ಬಯ್ಯ ಇರಬೇಕು. ಅದರಲ್ಲಿ ನಾಯಕರು ತುರ್ತುಪರಿಸ್ತಿತಿ ವಿರೋಧಿಸುವ ನೆಪದಲಿ ಅವರಿವರ ಮನೆಯಲ್ಲಿ ಬಚ್ಚಿಟ್ಟುಕೊಂಡು ತಪಲೆ ತುಂಬಾ ಉಂಡು,ಅತಿಥೇಯರ ಮನೆಯಲ್ಲಿ ನೀರುಬರುತ್ತದೋ ಎಂಬುದನ್ನು ನೋಡದೆ ಹಂಡೆ ಖಾಲಿಯಾಗುವಂತೆ ಸ್ನಾನಮಾಡಿ ಅವರ ಮನೆ ಹೆಣ್ಣು ಮಕ್ಕಳನ್ನೇ ಕೆಡಿಸಿ ಓಡಿಹೊಗುತ್ತಿದ್ದರು” ಎಂದು ಬರೆದಿದ್ದಂತೆ ಅಸ್ಪಷ್ಟ ನೆನಪು.
ಯುದ್ದದಲ್ಲಿ ಗೆದ್ದವನು ಯದ್ದ ಮಾಡಿ ಶಸ್ತ್ರ ಕೆಳಗಿಡುವಂತೆ ಹಾಲಪ್ಪ ರಾಜಿನಾಮೆ ಕೊಟ್ಟಿದ್ದಾರೆ. ಬಾ.ಜ.ಪ.ದಲ್ಲಿ ರಾಜಿನಾಮೆ ಕೊಟ್ಟ ಗಂಡಸರಿಗೆಲ್ಲಾ ಒಳ್ಳೆ ಲಾಭದಾಯಕ ಸ್ಥಾನ ಸಿಕ್ಕಿದೆ.(ಬೆಳ್ಳುಬ್ಬಿಯನ್ನು ಹೊರತುಪಡಿಸಿ).ಹಾಗಾಗಿ ಮುಂದಿನದಿನಗಳಲ್ಲಿ ಹಾಲಪ್ಪನಿಗೆ ರಿವಾರ್ಡ ಖಚಿತ.ಆದರೆ ಪಕ್ಷದಲ್ಲಿ ಹೆಂಗಸರಿಗೆ ಅಷ್ಟು ಸುಖ ಇದ್ದಂತೆ ಕಂಡು ಬರುತ್ತಿಲ್ಲ. (ಹೆಂಗಸರಲಿ ರಾಜಿನಾಮೆ ಕೊಟ್ಟು ಮೂಲೆಸೇರಿದವರೇ ಹೆಚ್ಚು)ಆದರೆ ಪಕ್ಷದಲ್ಲಿನ ಗಂಡಸರಿಗೆ ಹೆಂಗಸರಿಂದಲೇ ಸುಖ!. ಅವರೇ ಆಗಾಗ ಹೇಳುವಿದಿಲ್ಲವೇ”ಯತ್ರ ನಾರ್ಯೇಶು ಪೂಜ್ಯಂತೆ....ಎಂದು.ಇವರು ಪೂಜೆ ಸಲ್ಲಿಸುವ ವಿಧಾನ ಬೇರೆ ಅಷ್ಟೇ.ಬಹುಷಃ ಇವರದು ‘ತಂತ್ರೋಕ್ತ ಪೂಜೆ”ಇರಬೇಕು.
ಪಕ್ಷ ರಿವಾರ್ಡ್ ಕೊಡದಿದ್ದರೂ ಜನರಂತೂ ಕಂಡಿತ ರಿವಾರ್ಡ್ ಕೊಟ್ಟೆ ಕೊಡುತ್ತಾರೆ. ಹೊರಗಿಂದ ಇವರ ಕ್ರುತ್ಯವನ್ನು ಬಯ್ದರೂ ಒಳಗಿಂದ ಇವರ ಬಗ್ಗೆ ಅಭಿಮಾನ!. ಆದುದರಿಂದಲೇ ಹೊನ್ನಳ್ಳಿಯ ಮಾಹಾಜನತೆ ರೇಣು’ಕಾಚಾ’ರ್ಯನನ್ನು ಬಹುಮತದಿಂದ ಆರಿಸಿದ್ದು.ಅವನೇನಾದರೂ ಜಯಲಕ್ಷಿ ಜೊತೆ ಚುಂಬನ ದೃಶ್ಯದಲ್ಲಿ ಮಿಂಚದಿದ್ದರೆ “ನೀನೆಂತಹ ಗಂಡಸು”ಅಂತಾ ಓಟೆ ಹಾಕುತ್ತಿರಲಿಲ್ಲವೇನೋ?. “ಥೋ...ಹೊನ್ನಾಳಿ ಜನ’ ಅಂತಾ ನೀವು ಜಸ್ಟ್ ಆ ಊರಿನವರು ಮಾತ್ರ ಅಂಥಹವರು ಎನ್ನಬಹುದು. ಆದರೆ ಕ್ಲಿಂಟನ್ ಕೂಡ ಇಂತಹ ಘನಕಾರ್ಯ ಮಾಡಿದಮೇಲೆ/ಮಾಡಿದ್ದರಿಂದಲೇ ಅಲ್ಲವೇ ಅಮೇರಿಕಾ ಅಧ್ಯಕ್ಷನಾಗಿ ಪುನರಾಯ್ಕೆ ಯಾದದ್ದು. ಕುಮಾರಸ್ವಾಮಿ ಬಗ್ಗೆಯೂ ಇಂಥ ಆರೋಪಗಳಿದ್ದವು.ಇವು ಅವರಿಗೆ ಹೆಚ್ಚಿನ ಮತ ಕೊಡಿಸಿದವು ಎಂದರೆ ತಪ್ಪಾಗಲಾರದು. ಈ ವರ್ಷದಲ್ಲಿ ರಾಜ್ಯದಲ್ಲಿ ಎರಡು ಪ್ರಮುಖ ಲೈ೦ಗಿಕ ಹಗರಣಗಳು ನಡೆದಿವೆ. ಒಂದು ತಮಿಳುನಾಡಿನ ಸ್ವಾಮೀ ನಿತ್ಯಾನಂದನದು,ಇನ್ನೊಂದು ಸೊರಬದ ಹೆಚ್.ಹಾಲಪ್ಪನದು.ಇವುಗಳಲ್ಲಿ ನಾವು ಜನರ ಪ್ರತಿಕ್ರಿಯೆ ಹ್ಯಾಗೇಗೆ ಇತ್ತು ಎಂಬುದನ್ನು ನೋಡಿದರೆ ಜನರ ಮನಸ್ತಿತಿ ಅರ್ಥ ಆಗುತ್ತದೆ. ಸ್ವಾಮಿಜಿಯ ಪ್ರಕರಣದಲ್ಲಿ ಇಬ್ಬರೂ ಸ್ವಇಚ್ಛೆಯಿಂದ ಆ ಕಾರ್ಯದಲ್ಲಿ ಪಾಲ್ಗೊಂಡವರು. ಆದರೆ ಹಾಲಪ್ಪ ಎದುರಿಸುತ್ತಿರುವುದು ಅತ್ಯಾಚಾರದ ಆರೋಪ.ತಮಾಷೆಯೆಂದರೆ ಹಾಲಪ್ಪನಿಗೆ ಹೆಚ್ಚಿನ ಸಹಾನುಬೂತಿ ವ್ಯಕ್ತವಾಗುತ್ತಿದೆ. ನಾನು ನೋಡಿದ ಒಂದೆರಡು ದೈವಿಭಕ್ತ ಗೃಹಿಣಿಯರು ಟಿ.ವಿ.ನೋಡಿ ಅಯ್ಯೋ,ಪಾಪ,ಹಾಲಪ್ಪ ನಿರಪರಾದಿಯಂತೆ ಕಾಣುತ್ತಾನೆ.ಅವಳನ್ನು ನೋಡು ಹೇಗಿದ್ದಾಳೆ,ಹೀಗೆಲ್ಲಾ ಟಿ.ವಿ.ಯ ಮುಂದೆ ಬರಲು ಅವಳಿಗೆ ನಾಚಿಕೆ ಇಲ್ವಾ?,ಮಾನಗೆಟ್ಟವಳು ಇತ್ಯಾದಿಯಾಗಿ ಮೂಗುಮುರಿದಿದ್ದಾರೆ. ಅಂದರೆ ನಮ್ಮ ಪದ್ದತಿಯ ಪ್ರಕಾರ ಅವಳು ಸುಮ್ಮನಿದ್ದು ಬಿಡಬೇಕಿತ್ತು. ಅಕೆಯ ಗಂಡನ ಬಗೆ “ಈ ಸಂದರ್ಬದಲ್ಲೂ ಫೋಟೋ ತೆಗೆದನಲ್ಲಾ’ ಅವನ ಉದ್ದೇಶ ಏನು ಎಂಬ ಪ್ರಶ್ನೆ ಎತ್ತುತ್ತಾರೆ.ನಮ್ಮ ಪದ್ದತಿಯ ಪ್ರಕಾರ ಅವನು ಅತ್ಯಾಚಾರಿಯನ್ನು ಕೊಂದು ಹಾಕಿ ಪೊಲೀಸರಿಗೆ ಶರಣಾಗಬೇಕಾಗಿತ್ತು.ಆಗ ನ್ಯಾಯಾಲಯ’ಕಾನೂನಿಗೆ ಗಂಟುಬಿದ್ದು’/’ಮನಸಿಲ್ಲದ ಮನಸ್ಸಿನಿಂದ’ ಅವನಿಗೆ ಶಿಕ್ಷೆ ವಿದಿಸುತ್ತಿತ್ತು.ಆ ನಂತರ ಆತ ಜೈಲಿಂದ ಹಿಂತುರಿಗಿದ ಮೇಲೆ ಸತಿಪತಿ ಅನೋನ್ಯವಾಗಿ ಬಾಳುವೆನಡೆಸಬೇಕಾಗಿತ್ತು. ಇದು ಸಮಾಜ ವಿದಿಸುವ ಅಲಿಖಿತ ಸತಿಪತಿಯ ಧರ್ಮ.(ಕರ್ಮ?). ಇದು ನಮ್ಮ ಸಮಾಜದ ನಿರೀಕ್ಷೆ. ಇಲ್ಲಿ ನಾನು ಗಮನಿಸಬೇಕಾದ ಇನ್ನೊಂದು ಅಂಶವಿದೆ.ಅದು ಸಮಾಜದ ನಿರೀಕ್ಷೆಗಳ ಬಗ್ಗೆ. ಯಾವುದೇ ಮನುಷ್ಯನ ಮುಂದೆ ಎರಡು ಆಯ್ಕೆಗಳಿವೆ.ಒಂದುವೇಳೆ ಅವುಗಳಲ್ಲಿ ಅವನಿಗೆ ಲಾಭದಾಯಕ ಎನ್ನುವುದನ್ನು ಆತ ಆಯ್ಕೆ ಮಾಡಿಕೊಂಡಾಗಳೆಲ್ಲಾ ಆತ ಅಪರಾಧಿ ಎನ್ನಿಸಿಕೊಳ್ಳುತ್ತಾನೆ.ಆತ ತನಗೆ ತಾನು ನಷ್ಟ ಮಾಡಿಕೊಂಡಾಗಲೆಲ್ಲ ದೊಡ್ಡಮನುಷ್ಯ ಎನ್ನಿಸಿಕೊಳ್ಳುತ್ತಾನೆ. ಸಮಾಜಕ್ಕೆ ಲಾಭ ಆಗಲಿ ಬಿಡಲಿ ಆದರೆ ಅದರ ಸದಸ್ಯ ನಷ್ಟವನ್ನೇ
ಮಾಡಿಕೊಳ್ಳಬೇಕೆಂದು ಸಮಾಜ ಬಯಸುತ್ತದೆ. ನಮ್ಮ ಸಮಾಜದಲ್ಲಿ ವ್ಯಕ್ತಿಯು ಕೆಲವು ಕ್ರಿಯಗಳನ್ನು ನೆರೆವೆರಿಸಬೇಕೆಂದು ಕೆಲವು ಕಟ್ಟಳೆಗಳನ್ನು ವಿಧಿಸಲಾಗಿದೆ. ಜನ,ಮರಣ ,ಮದುವೆ,ಸಾವು ಸುಡುಗಾಡು ಇತ್ಯಾದಿ ಕ್ರಿಯೆಗಳನ್ನು ಕಡ್ಡಾಯವಾಗಿ ನೆರವೆರಿಸಲೇ ಬೇಕು.ಹಾಗು ಇದಕ್ಕೆ ಬಂಧು ಮಿತ್ರರನ್ನು, ಜ್ಞಾನಿಗಳನ್ನು ಒಟ್ಟಾರೆ ಸಾಧ್ಯವಾದರೆ ಊರಿಗೆಊರನ್ನೇ ಕರೆದು ಉಪಚರಿಸಬೇಕೆಂದು ಅಲಿಖಿತ ನಿಯಮ. ‘ಇದರಿಂದ ಅಥಿತೇಯನ ಮನಸ್ಸಂತೋಷವಾಗುತ್ತದೆ’ ಎಂದು ನಮ್ಬಿಸಲಾಗಿದೆ. ಹೊರಗಿನಿಂದ ಇವು ಒಳ್ಳೆಯ ಉದ್ದೇಶಗಳಂತೆ ಕಂಡರೂ ನಿಜವಾಗಿ ಇದು ಜನರ ಕೈಯಲ್ಲಿ ಸಂಪತ್ತು ಕೂಡಬಾರದು ಎಂಬ ಕಾರಣಕ್ಕೆ ರಾಜರು ಮತ್ತು ಮಂತ್ರಿಗಳು ಕೂಡಿ ಮಾಡಿರುವ ಕಟ್ಟಳೆಗಳು. ಜನ ಸಿರಿವಂತರಾದರೆ ಎಲ್ಲಿ ನಮ್ಮ ಆಡಳಿತಕ್ಕೆ ಕುತ್ತು ತರುತ್ತಾರೋ ಎಂಬುದು ಆಳುವವರ ಭಯ!. ಮುರ್ಖರಾದ ನಾವು ಈ ದುರುದ್ದೇಶಪೂರಿತ ಆಚರಣೆ ಗಳನ್ನು ನಂಬಿ ಅವನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ. ಇತರರನ್ನೂ ಇದೆ ರೀತಿ ಮಾಡುವಂತೆ ಒತ್ತಾಯಿಸುತ್ತೆ ವೆ/ಪ್ರಚೋದಿಸುತ್ತೇವೆ. ನಮ್ಮ ಸಮಾಜದಲ್ಲಿ ಹೆಣ್ಣಿನ ಬಗ್ಗೆ ಗೌರವ ಕಡಿಮೆ.ಏಕೆಂದರೆ ‘ಹೆಣ್ಣು ಕಲಿತರೆ ಮನೆಯೇ ಕಲಿತಂತೆ” ಯಾಕೆಂದರೆ ಸಮಾಜದ ಪೊಳ್ಳುತನದ ಬಗ್ಗೆ ಕೇಶವಪ್ರಸಾದ್ ಗೆ ಗೊತ್ತಾದರೆ ಅವನೊಬ್ಬ ಎಗರಾದುತ್ತನಷ್ಟೇ.ಆದರೆ ಹೆಣ್ಣಿಗೆ ಗೊತ್ತಾದರೆ ಅವಳ ಮನೆ ಸ್ವತಂತ್ರವಾಗುತ್ತದೆ. ಪೂರಾ ದೇಶವೇ ಸ್ವತಂತ್ರವಾಗುತ್ತದೆ.(ಮಾನಸಿಕವಾಗಿ). ಆದುದರಿಂದ ಹೆಣ್ಣನ್ನು ತಾಳಿಯ ಬಂಧನದಲ್ಲಿ ಬಂಧಿಸಿ ಆಕೆಯನ್ನು ಗಂಡ,ಮಕ್ಕಳ ಲಾಲನೆ ಪೋಷನೆಗಷ್ಟೇ ಸೀಮಿತ ಗೊಳಿಸಿದರೆ ನಮ್ಮ ಪಟ್ಟಬದ್ರ ಹಿತಾಸಕ್ತಿಗಳು ಸೇಫ್! . ನಿತ್ಯಾನಂದ ಮತ್ತು ಅವನ ಪ್ರಿಯತಮೆಯದು ಸ್ವಇಚ್ಚೆಯಾದರೂ ಅದು ಸಮಾಜಕ್ಕೆ ನುಂಗಲಾರದ ತುತ್ತು. ಆದುದರಿಂದ ನಿತ್ಯಾ ವಿಲನ್,ಹಾಲಪ್ಪ ಹೀರೋ. ಅವನಿಗೆ ಮದುವೆಯಾಗಿರುವುದು ಗೊತ್ತಿದ್ದೂ ಇವಳು ಅವನ ಹಿಂದೆ ಯಾಕೆ ಹೋದಳು ಅವಳದೇ ತಪ್ಪು ಎಂದು ಜನ ಆಕೆಯನ್ನು ಜರಿಯುತ್ತಾರೆ. ಪಾಪ ಅವನದೇನು ತಪ್ಪಿಲ್ಲ ಎನ್ನುತ್ತಾರೆ. ಅಂದರೆ ಗಂಡಸು ಹಾದರ ಮಾಡುವುದು ನಿರೀಕ್ಷಿತ ಹಾಗು ಸಾಮಾನ್ಯ ಎಂಬುದು ಭಾರತದ ಸಾರ್ವರ್ತಿಕ ನಂಬಿಕೆ. ಆದುದರಿನ್ದಲೇ ಹೆಣ್ಣನ್ನು ತೆಗಳಲು ಸೂಳೆ ಎಂಬ ಪದವಿದೆ. ಅದಕ್ಕೆ ಸಮಾನಂತರ ಪದ ಪುಲ್ಲಿಂಗದಲ್ಲಿ ಇಲ್ಲ.ಅದುದರಿಂದ ಎಲ್ಲಾ ಪುರುಷರು ಅಂತಹವರೇ,ಕೆಲವು ಮಹಿಳೆಯರು ಮಾತ್ರ ಇಂತಹವರು ಎನ್ನುವ ಕಲ್ಪನೆ ಬಹಳ ಪ್ರಾಚೀನ ಕಾಲದಿಂದಲೂ ಇದ್ದಂತೆ ಕಂಡುಬರುತ್ತದೆ. ಅದಕ್ಕೆ ಪೂರಕವಾಗಿ ಪುರುಷರು ನಡೆದುಕೊಂಡಿದ್ದಾರೆ.ಕೃಷ್ಣ ,ಕೀಚಕ,ಅರ್ಜುನ ,ಜರಾಸಂಧ ಇತ್ಯಾದಿಗಳು ಮಾಡಿದ್ದು ಒಂದೇ ಕೆಲಸ ಆದರೂ ಆಪ್ಪ್ರೋಚ್ ಮಾತ್ರ ಬೇರೆ ತರಹ ಇತ್ತು.
ಅದೇನೇ ಇರಲಿ ಹಾಲಪ್ಪ ಸಿಕ್ಕಿಹಾಕಿಕೊಂಡ ವಿಧಾನ ಮಾತ್ರ ಬಹಳ ಚೆನ್ನಾಗಿತ್ತು. ಬೆಳಗ್ಗೆ ಎದ್ದು ವಿಜಯ ಕರ್ನಾಟಕ ಓದಿದರೆ ಅದರಲ್ಲಿ ‘ಕುಂಬಳಕಾಯಿ ಕಳುವಾಗಿದೆ’ಎಂದು ಮಾತ್ರ ಇತ್ತು. ಟಿ.ವಿ೯. ಹಾಕಿದರೆ ಅದರಲ್ಲಿ ಹಾಲಪ್ಪ ನಾ ಕದ್ದಿಲ್ಲ,ನಾ ಕದ್ದಿಲ್ಲ...ನಾನು ಕಳ್ಳ ಅಲ್ಲವೇ ಅಲ್ಲ ಎಂದು ಒತ್ತಿ ಒತ್ತಿ ಹೇಳುತಿದ್ದರು.
ಈ ಬಿ ಜೆ.ಪಿ ಯವರ ಸ್ಪೆಶಾಲಿಟಿ ಅಂದರೆ ಅವರು ಸಾರ್ವಜನಿಕರಿಗೆ ತೊಂದರೆ ಕೊಡುವುದಿಲ್ಲ. ಎಲ್ಲವನ್ನೂ ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಸರ್ಕಲ್ ನಲ್ಲೆ ಮಾಡುತ್ತಾರೆ. ಆದುದರಿಂದ ಸಾರ್ವಜನಿಕರು ಭಯ ಬೀಳುವ ಅಗತ್ಯ ಇಲ್ಲ.ಯಾರಿಗಾದರೂ ಆ ಪಕ್ಷದ ಮಿತ್ರ ಇದ್ದರೆ ಅಥವಾ ಯಾರಾದರೂ ಆ ಪಕ್ಷದವರಿಗೆ ಹೆಣ್ಣು ಕೊಡುವ ಆಲೋಚನೆ ಮಾಡುತಿದ್ದರೆ ಸ್ವಲ್ಪ ಹಿಂದೆ ಮುಂದೆ ನೋಡಬೇಕಷ್ಟೆ. ಅದು ಮನೆಯ ಹೆಣ್ಣು ಮಕ್ಕಳನ್ನು ಹಾಳು ಬಾವಿಗೆ ತಳ್ಳಿದಂತೆ ಆಗುತ್ತದೆ. ಈ ಗಾದೆಯನ್ನು ಬಿ ಜೆ ಪಿ ಯವರು ಅಕ್ಷರಶಃ ನಿಜವಾಗಿಸಿದ್ದಾರೆ. ಅಲ್ಲಿನ ನಾಯಕನೊಬ್ಬನ ಮೇಲೆ ಹೆಂಡತಿಯನ್ನು ಬಾವಿಗೆ ತಳ್ಳಿದ ಆರೋಪವಿದೆ!.
1 comment:
very good blog
Post a Comment