Tuesday, May 4, 2010

ಕಾಡಿನ ಕಥೆ!!

ಇತ್ತೀಚಿಗೆ (ಏಪ್ರಿಲ್ ೨೯-೩೦)ರ ವಿಜಯ ಕರ್ನಾಟಕದಲ್ಲಿ ಒಂದು ಸುದ್ದಿ ನೋಡಿದೆ. ಅದೇನೆಂದರೆ ಸರ್ಕಾರ ಮರಗಳನ್ನ ಕಡಿಯಲು ಇನ್ನುಮುಂದೆ ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯುವ ಅವಶ್ಯಕತೆ ಇಲ್ಲ ಎಂದು ಕಾನೂನಿನಲ್ಲಿ ಬದಲಾವಣೆ ತರ ಹೊರಟಿದೆಯಂತೆ. ಆ ಕಾರಣದಿಂದ ಆ ವರಧಿಗಾರರಿಗೆ ಸಿಕ್ಕಾಪಟ್ಟೆ ಆಘಾತವಾಗಿದೆಯಂತೆ.ಇದರಿಂದ ಟಿಂಬರ್ ಲಾಬಿ ಸ್ಟ್ರಾಂಗ್ ಆಗುತ್ತೆ ಎಂಬುದು ಅವರ ಅಭಿಪ್ರಾಯ.ಅದು ಸ್ಟ್ರಾಂಗ್ ಆಗುತ್ತದೋ ಗೊತ್ತಿಲ್ಲ ಆದರೆ ಅರಣ್ಯ ಇಲಾಖೆಯ ಲಂಚದ ಲಾಭಿಯಂತೂ ವೀಕ್ ಆಗಲಿದೆ. ಆ ಕಾನೂನಿದೆ ಎಂಬ ಕಾರಣಕ್ಕೆ ಮರ ಕಡಿಯುವುದು ನಿಂತಿದಿಯೇ?,ಪ್ರತಿಯೊಂದು ಮರ ಕಡಿಯುವುದಕ್ಕೋ ಇಲಾಖೆಗೆ ಕಮಿಶನ್ ಕೊಡಬೇಕು.ಇಲ್ಲವೇ ಸಲಾಮು ಹಾಕಬೇಕು. ಅಷ್ಟಕ್ಕೋ ಅಸ್ತಿತ್ವಕ್ಕೆ ಬಂದಮೇಲೆ ಅರಣ್ಯ ಇಲಾಖೆಯ ಕೆಲಸ ನೀವು ನೋಡೇ ಇರುತ್ತೀರಿ. ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆ ಎಂಥಹಾ 'ಅಮೂಲ್ಯ'& 'ಬೆಲೆಬಾಳುವ' ಮರಗಳನ್ನು ನೆಟ್ಟಿದ್ದಾರೆ ಎಂದು ನಾವು ನೋಡಿದ್ದೇವೆ. ದರಿದ್ರ ಸುಬಾಬುಲ್,ನೀಲಗಿರಿ ಮತ್ತು ರೈನ್ತ್ರೀಗಳು!. ಆದರೆ ಯಾರಾದರು ಒಳ್ಳೆ ಮರ ನೆಟ್ಟು,ಆಮೇಲೆ ಅವನ್ನು  ಕಡಿಯುತ್ತಿವೆಂದರೆ ಇವುಗಳಿಗೆ ರಿಕ್ವೆಸ್ಟ್ ಮಾಡಿಕೊಳ್ಳಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಾಕುವುದಕ್ಕೆ ಈ ದೇಶದ ತೆರಿಗೆದಾರ ಲಕ್ಷಾಂತರ ರೂ ವ್ಯಯಿಸುತ್ತಾನೆ. ಐ ಎಫ್ ಎಸ್ ಅಧಿಕಾರಿಗಳಿಗೆ ಕೆಲಸ ನೀಡುವ ಮೊದಲು ಡೆಹ್ರಾಡೂನ್ ಮತ್ತು ಕೊಯಂಬತ್ತೂರುನಲ್ಲಿ ಎರಡು ವರ್ಷ ತರಬೇತಿ ನೀಡಲಾಗುತ್ತದೆ. ಇವರ ಬ್ಯಾಕ್ ಅಪ್ ಗಾಗಿ ಅಗ್ರಿಕಲ್ಚರ್ ಯುನಿವರ್ಸಿಟಿಗಳು ,ರಿಸರ್ಚ್ ಕೇಂದ್ರಗಳು ಇವೆ ಇಷ್ಟಾದರೂ ಇವರು ಮಾಡುವುದು ಹಳ್ಳಿಗರ ಮೇಲೆ,ಆದಿವಾಸಿಗಳ ಮೇಲೆ ದರ್ಪತೊರಿಸುವು,ಅರಣ್ಯ ಉತ್ಪನ್ನಗಳ ಏಕಮಾತ್ರ ಅನುಬೋಗಿಗಳೆ೦ದು ಸ್ವಯಂ ಘೋಶಿಸಿಕೊಂಡು,ನೆಂಟರು,ಮಿತ್ರರುಗಳಿಗೆ ಕಳಲೆ,ಜೇನು,ಕೊವ್ಜಲಹಕ್ಕಿ ಇತ್ಯಾದಿಗಳನ್ನು ಸರಬರಾಜುಮಾಡುವುದು!.ಆದರೆ ಈಗಾಗಲೇ ಇರುವ ಅಥವಾ ಅಕಸ್ಮಾತ್ ಉಳಿಯುವ ಕಾಡುಗಳನ್ನು,ಪ್ರಾಣಿಗಳನ್ನು ಜನರಿಂದ ರಕ್ಷಿಸುತ್ತಾರಂತೆ!. ಸರಿಯಪ್ಪಾ,ರಾಜ್ಯದಲ್ಲಿ  ಶೇಕಡಾ 19.96 ರಶ್ಟು ಕಾಡು ಪ್ರದೇಶ ಇದೆ.ಶೇಕಡಾ 30 ರಶ್ಟು ಇರಬೇಕು. ಹೆಚ್ಚಿಸಲು ಏನು ಕ್ರಮ ತಗೊಂಡಿದ್ದಿಯಾ ಅಂದ್ರೆ ಫಾರೆಸ್ಟ್ ಸೆಕ್ರೆಟರಿ ಸುಬಾಬುಲ್ ಮರ ತೋರಿಸ್ತಾನೆ!. ಇಷ್ಟೆಲ್ಲಾ ತರಬೇತಿ,ಶಿಕ್ಷಣ ಇರುವ ಬುದ್ದಿವಂತ ಅಧಿಕಾರಿಗಳೆ,ಏನಾದರೂ ವಿಬಿನ್ನ ಕ್ರಿಯಾತ್ಮಕ ಪ್ರಯೋಗ ಮಾಡಿ ಕಾಡು ಹೆಚ್ಚಿಸಬಾರದೆ ಎಂದರೆ 'ಸೋಶಿಯಲ್ ಫಾರೆಸ್ಟ್ರಿ 'ಎಂಬ ಓಬಿರಾಯನ ಕಾಲದ ಕಾನ್ಸೆಪ್ಟ್ ತೋರಿಸ್ತಾರೆ. ಒಟ್ಟಾರೆ ಹೇಳಬೇಕೆಂದರೆ  ಇದು ಹಳ್ಳಿ ಶಾಲೆಗಳಲ್ಲಿ ನಾವು,ನೀವು ನೋಡಿ ಅನುಬವಿಸಿದ್ದ ತಮಾಷೆಗಳೇ. ಶಾಲೆಯ ಎಲ್ಲಾ ವರ್ಗದ ವಿಧ್ಯಾರ್ಥಿಗಲನ್ನೂ ಒಂದುಕಡೆ ಬಿಸಿಲಿನಲ್ಲಿ ಗುಡ್ದೆಹಾಕಿರುತ್ತಾರೆ. ಅಲ್ಲಿಗೆ ನಮ್ಮ ಮುಖ್ಯೋಪಾದ್ಯಾಯರು ಬಂದು ಪ್ರಾರಂಬಿಕ ಭಾಷಣ ಮಾಡುತ್ತಾರೆ. ಆಮೇಲೆ ಏ ಸಿ ರೂಮಿನಲ್ಲಿ ಕೂರುವ,ಓ ಸಿ ಕಾರಿನಲ್ಲಿ ಓಡಾಡುವ 'ಸಾಹೇಬರು'ಈ ವಿಬಿನ್ನ ಪ್ರಯೋಗದ ಹರುಕು ಮುರುಕು ಕನ್ನಡದಲ್ಲಿ ಒಂದಿಷ್ಟು ಬಾಷಣ ಮಾಡುತ್ತಾನೆ/ಳೆ.(ನಮ್ಮ ಏರಿಯ DCF ಚೆನ್ನಾಗಿ  ವಚನ ಇತ್ಯಾದಿ ಸೇರಿಸಿ ಬಾಷಣ ಹೊಡಿಯುತಿದ್ದ)ಆಮೇಲೆ ನಮಗೆಲ್ಲರಿಗೂ ಒಂದು  ನೀಲಗಿರಿಗಿಡ ಕೊಟ್ಟು "ನೋಡ್ರಪ್ಪಾ ಇದನ್ನೆಲ್ಲಾ ನಿಮ್ಮ ಮನೆಹತ್ತಿರ ನೆಟ್ಟು ನೀರುಹಾಕಿ.ಇದು ನಿಮಗೆ ಒಳ್ಳೆ ಫಲ ಕೊಡುತ್ತೆ" ಅಂತಿದ್ದರು.. ಆದರೆ ಅವರು ಹಣ್ಣಿನ ಮರ ಕೊಟ್ಟದ್ದು ನಾನು/ನನ್ನ ಮಿತ್ರರು ನೋಡೇ ಇಲ್ಲ.ಬಹುಷ್ಹ ಸಿಟಿ ಹುಡುಗರಿಗೆ ಕೊಡುತ್ತಿದ್ರೋ ಏನೋ.2009-10 ರ ಸಾಲಿನಲ್ಲಿ 1.81 ಕೋಟಿ ಸಸಿಗಳನ್ನು ವಿತರಿಸಲಾಗಿದೆಯಂತೆ! . ಹೆಚ್ಚಿನವೆಲ್ಲವೂ ನೆಡುತೋಪುಗಳ ಸ್ಕೀಮುಗಳೇ. ಇದಕ್ಕೆ ಹಲವಾರು ಕೋಟಿ ವ್ಯಯಿಸಲಾಗುತ್ತದೆ.ಇದ್ದನ್ನು ನೋಡಿ ಹುಚ್ಚು ಮುಂಡೆಯ ಮದುವೆಯಲ್ಲಿ ಉಂಡವನೇ ಜಾಣ'ಎಂದು ಕೆಲವು ಸ್ವಾಮೀಜಿ ಗಳು ಸಹ ನಾವು ಮರ ನೆಡಿಸುತ್ತೇವೆ ಎಂದು ಹೇಳಿ ತೆರಿಗೆದಾರನ ಹಣವನ್ನ ಚೆನ್ನಾಗಿ ಮುಂಡಾಯಿಸಿದ್ದರು.(ಈ ಘಟನೆ ನಡೆದದ್ದು S.M.Krishna C.M.ಆಗಿದ್ದಾಗ).

"ನಾವೇ ಈ ಕೆಲಸ ಮಾಡಿದರೆ ನೀನೇನು ಆ ಪೋಸ್ಟ್ನಲ್ಲಿ  ಶಾಟಾ ತರಿಯಕ್ಕೆ ಕೂತಿದಿಯಾ,ಸೂ... ಮಗನೇ" ..ಎಂದು ಕೇಳಬೇಕು ಅನ್ನಿಸಿದರೂ ,ಸಾಹೇಬರಿಗೆ ಗೌರವ ಕೊಡಬೇಕು ಎನ್ನುವ ಬ್ರಿಟಿಷರ ಕಾಲದ ಮೂಡನಂಬಿಕೆ ಕಟ್ಟುಬಿದ್ದು ಸುಮ್ಮನಿರುತ್ತಿದೆವು.(ಭಯ ಕೂಡಾ). ಆಮೇಲೆ ನಮ್ಮ ಸಹಪಾಟಿಗಳ ಪೋಷಕರು ಆಗಾಗ ಈ ಜನರ ಕಚೇರಿಗೆ ವಿವಿದ ಪರ್ಮಿಟ್ಗಳನ್ನು ತೆಗೆದುಕೊಳ್ಳಲು ಹೋಗಬೇಕಾದ ಅವಶ್ಯಕತೆ ಇದ್ದುದರಿಂದ ಈ "ಸಾಹೇಬ"ಗಳಿಗೆ ಸಲ್ಯೂಟ್ ಹೊಡೆಯಬೇಕಾದ ಅನಿವಾರ್ಯತೆ ಇತ್ತು. ಇದು ಅವರುಗಳಿಗೆ ತಮ್ಮ super man´ಇಮೇಜು  ಮೈನ್ಟೈನ್ ಮಾಡುವುದು ಸುಲಭವಾಗಿತ್ತು.  ನಮ್ಮ ದೇಶ ಪ್ರಜಾಪ್ರಬುತ್ವದ ಪಲ ಉಣ್ಣಬೇಕಾದರೆ ಎಲ್ಲಾ ರೀತಿಯ ಪರ್ಮೀಟ್ ವ್ಯವಸ್ತೆಯಿಂದ ಜನಕ್ಕೆ ಮುಕ್ತಿ ದೊರಕಿಸಿಕೊಡುವ ಅವಶ್ಯಕತೆ ಇದೆ. ಹಾಗೆ ಪರ್ಮೀಟ್ನ ಅವಶ್ಯಕತೆ ಇದ್ದೆ ಇದೆ ಎಂಬ ಕಡೆಯೆಲ್ಲಾ ಅಧಿಕಾರಶಾಹಿಯ ಹಸ್ತಕ್ಷೇಪವನ್ನು ಸಾಧ್ಯವಾದಷ್ಟು ಕಡಿಮೆಮಾಡಲು ಪ್ರಯತ್ನಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಸರಿ ಎಂದೆನಿಸುತ್ತದೆ. "ಹಾಗಾದರೆ ನಮ್ಮ ಅಧಿಕಾರಿಗಳೆಲ್ಲರೂ ಕಳ್ಳರೋ?"ಎಂದು ನೀವು ಕೇಳಬಹುದು.

ಆಗ ನಾನು "ಹಾಗಾದರೆ ನಮ್ಮ ಜನಗಳೆಲ್ಲರೂ ಕಳ್ಳರೋ? ಅವ್ರಿಗೆ ಸಾಮಾಜಿಕ ಜವಾಬ್ದಾರಿ ಇಲ್ಲವೂ?" ಎಂದು ಕೇಳಬಹುದು. ಏಕೆಂದರೆ ರಾಜರ ಕಾದಿಂದ ಹಿಡಿದು ಇಲ್ಲಿನವರೆಗೆ ಆಳುವವರು ಆಳಿಸಿಕೊಳ್ಳುವವರನ್ನು ಕಳ್ಳರಂತೆಯೇಕಂಡಿದ್ದರೆ. ಈ ಸಂಪ್ರದಾಯ ನಮ್ಮ ಸ್ವತಂತ್ರ ಭಾರತದ ಸಂವಿಧಾನದ ನೆರಳಿನಲ್ಲಾದರು ಬದಲಾಗಲಿ ಎಂಬುದು ಕೇಶವಪ್ರಸಾದ್ ಹಾರೈಕೆ. ಸಸಿಯನ್ನು ನೆಡುವಾಗ ಪಾತಿ ಮಾಡುತ್ತೇವೆ,ಬೇಲಿ ಹಾಕುತ್ತೇವೆ. ನಂತರ ಅದು ಬೆಳೆದು ದೊಡ್ಡದಾದ ನಂತರ ಬೇಲಿಯ ಅವಶ್ಯಕತೆ ಇರುವುದಿಲ್ಲ. ಆದೇ ರೀತಿ ಪ್ರಜಾಪ್ರಬುತ್ವ. ಜನ ಕ್ರಮೇಣ ಸ್ವಯಂ ನಿಯಂತ್ರಣ ಕಲಿಯುವಂತೆ ಉತ್ತೇಜಿಸುವ ಕಾರ್ಯಕ್ರಮಗಳು ರೂಪುಗೊಳ್ಳಬೇಕು. ಆಗ ಮಾತ್ರ ನಾವು ಸಂವಿಧಾನದ ಆಶಯಗಳಿಗೆ ನ್ಯಾಯ ದೊರಕಿಸಬಹುದು.  


No comments: