Sunday, January 30, 2011

ಈ ಜನ ಏರ್ರ್ ....

ಹೊಸಬರು ನಿಮ್ಮೊಂದಿಗೆ ಕಂಡುಬಂದರೆ ಅವರು ಯಾರೆಂದು ವಿಚಾರಿಸುವುದು ಒಂದು ಸಾಮಾನ್ಯ ವಿಷಯ. ಅದು ಮನುಷ್ಯಸಹಜ ಕುತೂಹಲ. ತುಳುನಾಡಿನಲ್ಲಿ  ನಿಮ್ಮೊಂದಿಗೆ ಯಾರಾದರು ಅಪರಿಚಿತರು ಇದ್ದರೆ ಪರಿಚಯಸ್ತರು ಈ 'ಜನ ಏರ್ರ್' ....ಎಂದು ಕೇಳುತ್ತಾರೆ. 'ಜನ' ಎಂದರೆ 'ಮನುಷ್ಯ' ಎಂಬ ಅರ್ಥ ತುಳುವಿನಲ್ಲಿಲ್ಲ. ಮಾತ್ರವಲ್ಲ .ಯಾವ ಭಾಷೆಯಲ್ಲಿಯೂ ಇಲ್ಲ. ಜನ ಎಂಬುದು ಸಂಸ್ಕೃತ ಶಬ್ದ. ಜನ ಎಂದರೆ ಒಂದು ಸಮೂಹ.ವೇದ ಕಾಲದ ಒಂದು ಸಾಮಾಜಿಕ ವಿಂಗಡನೆ. 'ಜನ' ಎಂದು ನಮ್ಮನ್ನು ಸಂಬೋದಿಸಿದಾಗ 'ಓಹೋ,ಪರವಾಗಿಲ್ಲ.ನಮಗೆ ಬಹಳ ಮರ್ಯಾದೆ ಕೊಡುತಿದ್ದಾರೆ,ಬಹುವಚನ ಉಪಯೋಗಿಸುತಿದ್ದಾರೆ" ಅಂತಾ ನಾವಂದುಕೊಳ್ಳಬಹುದು. ಆದರೆ ಅಸಲಿಗೆ ಇಲ್ಲಿ ಮುನುಷ್ಯನಿಗೆ ಮರ್ಯಾದೆಯೂ ಇಲ್ಲ,ಮಹತ್ವವೂ ಇಲ್ಲ. ಅದು ಸೂಚ್ಯವಾಗಿ "ಇವನು ಯಾವ ಜಾತಿ ?" ಎಂದು ಕೇಳುವ ಸ್ಟೈಲ್!. ನಾವು ಈಗ ಇದನ್ನು ಆ ಅರ್ಥದಲ್ಲಿ ಉಪಯೋಗಿಸುತ್ತಿಲ್ಲ.ಕೇವಲ ದೇಶಾವರಿಯಾಗಿ,ಲೋಕರೂಡಿಯಾಗಿ ಉಪಯೋಗಿಸುತಿದ್ದೇವಷ್ಟೇ. ಆದರೆ ಜಾತೀಯತೆ, ಸಂಶಯ ಇತ್ಯಾದಿಗಳು ಹೇಗೆ ಭಾಷೆಯ ಮೂಲಕವೂ ನಮ್ಮನ್ನು ವ್ಯಾಪಿಸಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ. In our society everything is interlinked.ಎಲ್ಲದಕ್ಕೂ ಒಂದಕ್ಕೊಂದು ಕನೆಕ್ಷನ್ ಇದೆ. ಏನಂತೀರಿ ?

No comments: