Monday, January 17, 2011

ಅಕಾಡೆಮಿಗಳ "ಒಳಗು ಹೊರಗು"

ಹಲವಾರು ಅಕಾಡೆಮಿಗಳ ರೆಜಿಸ್ಟ್ರಾರ್ ಆಗಿ ಕೆಲಸ ಮಾಡಿರುವ ಟಿ ಎಸ್ ದಕ್ಷಿಣಾಮೂರ್ತಿ ಬರೆದಿರುವ ಅಕಾಡೆಮಿಗಳ "ಒಳಗು ಹೊರಗು" (ಚಿರಂತನ ಪ್ರಕಾಶನ,ಬೆಂಗಳೂರು )ಎಂಬ ಕೃತಿಯಲ್ಲಿ ಸರ್ಕಾರ ರಚಿಸಿರುವ ವಿವಿಧ ಅಕಾಡೆಮಿಗಳ ಸಾಧಕ ಬಾಧಕ ಗಳನ್ನು ಚರ್ಚಿಸಲಾಗಿದೆ. ಇದನ್ನು ಓದಿದರೆ ಈ ನಾಡಿಗೆ ವಿವಿಧ ಅಕಾಡೆಮಿಗಳು ವ್ಯರ್ಥ ಎಂದು ನಮಗೆ ಅರ್ಥವಾಗುತ್ತದೆ. ಅಕಾಡೆಮಿಗಳು ಯಾವುದೇ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸದೆ ಕೇವಲ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ "ಅರ್ಥ"ಪೂರ್ಣವಾದ ಕಾರ್ಯಕ್ರಮಗಳನ್ನು ಮಾತ್ರ ನಡೆಸುತ್ತಿರುವಂತೆ ಕಂಡು ಬರುತ್ತದೆ. ಆಕಾಡೆಮಿಗಳು ವೇಸ್ಟ್ ಅದಕ್ಕೆ ಒಂದು ರೆಜಿಸ್ಟ್ರಾರ್ ಹುದ್ದೆ ಕೂಡ ವೇಸ್ಟ್ ಎಂದು ಈ ಬುಕ್ಕನ್ನು ಓದಿದರೆ ತಿಳಿದುಬರುತ್ತೆ. ಪುಸ್ತಕ ಕೊಂಚ ನೀರಸ ಅನಿಸುತ್ತದೆ. ಕೆಲವು ಪ್ರಮುಖ ವ್ಯಕ್ತಿಗಳ ಹೆಸರನ್ನು ಪೂರ್ತಿ ನೀಡದೆ ಬರಿ ಅಬ್ರಿವೇಶನ್ ನೀಡಲಾಗಿದೆ. ಇದು ಕೆಲವರಿಗೆ ಮಾತ್ರಾ ಅರ್ಥವಾಗಲು ಸಾಧ್ಯ. ಪಾತ್ರಪರಿಚಯದ ರೀತಿ ಸರಿಯಿಲ್ಲ. ಇಲ್ಲಿ ಕೆಲವರ ವಿಚಾರವನ್ನು ಲೇಖಕ ಸೂಚ್ಯವಾಗಿ ಬರೆದಿರುವರಾದರೂ ಆ ವ್ಯಕ್ತಿಗಳು ಯಾರು ಎಂದು ಊಹಿಸಬಹುದು. ಉದಾಹರಣೆಗೆ ಪಿ ಹೆಚ್ ಡಿ ವಿಧ್ಯಾರ್ಥಿನಿಯೊಂದಿಗೆ ರಾಸಲೀಲೆ ಹೋಗಿ ಗೂಸಾತಿಂದ ಹಾಸನ ಜಿಲ್ಲೆಯ ಪ್ರಾದ್ಯಾಪಕ "ಮ(ವ?)ಕು" ಮತ್ತು  ಒಂದಲ್ಲ ಒಂದು ಕಡೆ ಉಪಕುಲಪತಿ ಆಗಬೇಕೆಂದು ಅಥವಾ ಯಾವುದಾದರೂ ಅಕಾಡೆಮಿಯ ಅಧ್ಯಕ್ಷ ನಾಗಬೇಕೆಂದೂ ಆಸೆ ಹೊಂದಿರುವ ಹಾಗೂ ಶ್ರೀ  ರಾಮಮೋಹನ ಲೋಹಿಯಾ ಚಿಂತನೆಯಿಂದ ಪ್ರಬಾವಿತರಾಗಿರುವ(ಮೈಸೂರಿನ) "ಹೆಂಗರುಳಿನ ಜಾನಪದ ಚಿಂತಕ" ಯಾರು ಎಂಬುದನ್ನು ಊಹಿಸುವುದು ಸುಲಭ. ಆದರೆ ಈ codings ಕೆಲವರಿಗೆ ಮಾತ್ರ ಅರ್ಥವಾಗಬಲ್ಲದು.
ಈ ಪುಸ್ತಕ ಅರ್ಧ ಓದಿದ್ದಿನಷ್ಟೇ .ಓದಿಸಿಕೊಂಡು ಹೋಗುವ ಸೆಳೆತ ಈ ಪುಸ್ತಕದಲ್ಲಿಲ್ಲ. ಒಟ್ಟಾರೆ ಪುಸ್ತಕ ಬಹಳ ನೀರಸವಾಗಿದೆ. ಆದರೆ ಒಬ್ಬ ಸರ್ಕಾರಿ ಅಧಿಕಾರಿಯ ಮಟ್ಟಕ್ಕೆ ಈ ಪುಸ್ತಕ ಪರವಾಗಿಲ್ಲ ಎನ್ನಬಹುದು.

No comments: