Tuesday, March 23, 2010

ಸದ್ಗುರುವಿಗೆ ಜೈ ಹೋ(Part-2)



ಕುವೆಂಪು ಸಾಹೇಬರು ಒಂದು ಕಡೆ ಈ quotation  ಹೇಳಿದ್ದಾರೆ " ಹಿಂದೆ ಗುರು ಇದ್ದ,ಮುಂದೆ ಗುರಿ ಇತ್ತು " ಅಂತ. ಆದರೆ ಅವರು ಇದನ್ನು ಯಾವರ್ಥದಲ್ಲಿ ಹೇಳಿದ್ದಾರೆ ಅನ್ನೋದನ್ನು ಅಡಿಟಿಪ್ಪಣಿಯಲ್ಲಿ ಹೇಳಿದ್ದರೆ ಚೆನ್ನಾಗಿತ್ತು.ಯಾಕೆಂದರೆ ಕೇಶವಪ್ರಸಾದ್ ಹೇಳುವುದು"ಮುಂದೆ 'ಉರಿ' ಇತ್ತು.ಹಿಂದೆ 'ಕುರು' ಇತ್ತು" ಅಂತ!.
ಯಾಕೆಂದ್ರೆ ಆ "ಹಿಂದೆ" ಎನ್ನಬಹುದಾದಂತಹ ಕಾಲಗಟ್ಟದಲ್ಲಿ ನಮ್ಮ ದೇಶದ ಸಹಸ್ತ್ರಾರು ಮಂದಿಗೆ ಇದ್ದದು ಬರೀ ಕಷ್ಟ ,ಕಾರ್ಪಣ್ಯಗಳೇ. ಈ ದೇಶದ ಸೆಕೆ,ಬರಗಾಲ,ಮಳೆಯ ಜೊತೆ ಸದಾ ಜೂಜಾಟದಂತಹ ರೈತಾಪಿ ಬದುಕಿನ 'ಉರಿ' ಒಂದೆಡೆಯಾದರೆ ಇತ್ತ ಜೀತಪದ್ದತಿ,ಜಾತಿಪದ್ದತಿ,ದೇವರು,ದಿಂಡರು ಎಂಬ 'ಕುರು' ಅವನನ್ನು ಕುಳಿತು ವಿಶ್ರಾಂತಿ ಪಡೆದು ಕೊಳ್ಳಲೂ ಬಿಡದಂತಹ ಸನ್ನಿವೇಶವಿತ್ತು. ಆ ದಾರಿಯಲ್ಲಿ ಹೋಗುವ ಪ್ರತಿಯೊಬ್ಬ ಆಕ್ರಮಣಕಾರರು,ರಾಜ ಮಹಾರಾಜರು,ಸಾಮಾನ್ಯರನ್ನು ಸುಲಿದು ಅವರ ಊರಿಗೆ,ಗುಡಿಸಲುಗಳಿಗೆ ಬೆಂಕಿ ಹೆಟ್ಟುತಿದ್ದರು. ಉಳಿದಿದ್ದನ್ನು ನಮ್ಮ ರಿಷಿ,ಮುನಿಗಳು ಬಿಕ್ಷೆಯ ಹೆಸರಲ್ಲಿ ದೊಚುತಿದ್ದರು. ಆ 'ಹಿಂದೆ' ಇದ್ದದು ಇದ್ದವರ ದಬ್ಬಾಳಿಕೆಯೇ ಹೊರತು ಗುರು ,ಗುರಿ ಯಾವುದೂ ಅಲ್ಲ. ಗುರುವನ್ನು ನಂಬಿ ಗುರಿ ಇಟ್ಟವನು ಹೆಬ್ಬೆಟ್ಟನ್ನೇ ಕಳೆದುಕೊಳ್ಳುತಿದ್ದ ಕಾಲವದು!(ಏಕಲವ್ಯ).ದ್ರೋಣ ಅಂದಿನ typical ಗುರು!. ಅತ್ತ ರಾಜ ಹಾಗೇ ದೋಚಿದರೆ ಇತ್ತ ದಟ್ಟ ಕಾನನಗಳ ನಡುವೆ ಪರ್ಣಕುಟಿಗಳಲ್ಲಿ ವಾಸಿಸುವ ರಿಷಿ,ಮುನಿಗಳು ಸುಮ್ಮನಿರುತ್ತಾರೆಯೇ?. ಅಕ್ಷರವೇ ಇವರ ಆಯುಧ.ಆಗಾಗ ರಾಜನ ಆಸ್ತಾನಕ್ಕೆ, ,ಉರು,ಕೇರಿಯ ಗುಡಿಗಳಿಗೆ ದಾಳಿಇಟ್ಟು ದೋಚುವುದೇ ಇವರ ಕೆಲಸ. ಹೊರಗಡೆ ಬ್ರಹ್ಮಚಾರಿಗಳಂತೆ ,ಸಿದ್ದರಂತೆ,ಸಂತರಂತೆ ಮಿಂಚುತಿದ್ದ ಇವರುಗಳಿಗೆ ಕಾಡಿನಲ್ಲಿ ಪರ್ಣಕುಟಿಗಳಲ್ಲಿ ಸಂಸಾರಗಳಿದ್ದವು!. ಆಗಾಗ ಇಲ್ಲಿಗೆ ಬಂದು ಹೋಗುವ ಇಂದ್ರನತಹವರು ಇದ್ದಾರೆ. ಮೈಯೆಲ್ಲಾ ಮೀನಿನ ವಾಸನೆ ಹೊಡಿಯುತಿದ್ದ ಹೆಣ್ಣಾದರೂ ಸರಿ,ದೋಣಿ ದಾಟಿಸುವಾಗ ಸಮಯ ನೋಡಿ ಗರ್ಬವನ್ನು ಅನುಗ್ರಹಿಸುವ ಸದ್ಬುದ್ದಿಯೂ ಪರಾಶರರಂತಹ  ಪರಮ ವಿರಕ್ತರಿಗಿತ್ತು!.
ಇವರುಗಳ ಬುದ್ದಿಶಕ್ತಿಗಳು,ಆತ್ಮಜ್ಞಾನ ಮುಂತಾದವು ಸಾಮಾನ್ಯಜನಗಲಿಗಿಂತ ಹೆಚ್ಚೇನೂ ಇರಲಿಲ್ಲ ಎಂಬುದು ಪುರಾಣ

 ಕಥೆಗಳನ್ನು ಓದಿದರೆ ತಿಳಿಯುತ್ತದೆ.ಋಷಿ ಗಲೆನ್ನಿಸಿಕೊಂಡ ಇವರು ಅರಿಷಡ್ವರ್ಗಗಳ ಮುಷ್ಟಿಯಲ್ಲಿ ಸಿಕ್ಕಿ ಬಾಧೆ ಪಡುತಿದ್ದವರೇ! .
 ರೇಣುಕಾ  "ಕಾಮ"ದಿಂದ ಪ್ರೇರೇಪಿತಳಾಗಿ  ತಪ್ಪು ಮಾಡಿದ್ದಾಳೆ ಎಂಬುದು "ಕ್ರೋಧ"ದಿಂದ ಪ್ರೇರೇಪಿತನಾಗಿರುವ
ಜಮದಗ್ನಿಯ ವಾದ. ತಾನೊಬ್ಬ ದೊಡ್ಡ ತಪಸ್ವಿ ಎಂಬ "ಮದ"ದಿಂದ ಆಕೆಗೆ ಮರಣದಂಡನೆ ವಿಧಿಸುತ್ತಾನೆ.ಅರಿಷಡ್ವರ್ಗಗಳ
ಮುಷ್ಟಿಯಲ್ಲಿ ಬಂಧಿತರಾಗಿದ್ದ ಜಮದಗ್ನಿ  ,ದೂರ್ವಾಸರಂತಹವರಿಗೆ ಮಹರ್ಷಿಗಳೆಂದು ಕರೆಸಿಕೊಳ್ಳುವ ಯೋಗ್ಯತೆ ಉಂಟೆ? ಎಂಬುದು ಕೇಶವ ಪ್ರಸಾದ್ ರ ಪ್ರಶ್ನೆ.

ಅಥವಾ ಇಂತಹಾ ಗುಣ ದೋಷಗಳನ್ನು ಹೊಂದಿದವರನ್ನು ಮಹರ್ಷಿಗಳೆಂಬ ಪಟ್ಟ ನೀಡಿರುವ ಲೇಖಕರ ಬುದ್ಡಿಮತ್ತೆ 
ಎಂತಹದು? ಒಂದೋ ಅವರುಗಳು ಅಜ್ಞಾನಿಗಳಾಗಿರಬೇಕು ಅಥವಾ ಪೂರ್ವಾಗ್ರಹಪೀಡಿಟರಾಗಿರಬೇಕು.ಒಟ್ಟಾರೆ ಇಷ್ಟೆಲ್ಲಾ 
ಐಬು ಗಳಿದ್ದರೂ ಋಷಿಗಳು ಪೂಜರ್ಹರು.ಒಳ್ಳೆಯ ಗುಣಗಳನ್ನು ಹೊಂದಿದ್ದ ಬಲಿ ಚಕ್ರವರ್ತಿ ಮಾತ್ರ ವಧೆಗೆ ಅರ್ಹ!. 
ಸಂಬೋಗಸುಖದಲ್ಲಿರುವ ಶಿವನೂ ಕೂಡಲೇ ಹಾಸಿಗೆಯಿಂದ ಓಡಿಬಂದು ನಮಸ್ಕರಿಸಬೇಕು ಎಂಬ ತೆವಲನ್ನು ಹೊಂದಿದ್ದ 
ದೂರ್ವಾಸ ಮಹಾ ಜ್ಞಾನಿ!.

ಒಟ್ಟಾರೆಯಾಗಿ ಈ ಗುರುಕುಲಗಳು ವಿಕೃತ ಮನಸ್ಸಿನ ಜನಗಳಿಂದ ತುಂಬಿ ತುಳುಕುತ್ತಿತ್ತು. ಇಂದು ಒಬ್ಬ ಮಾತ್ರ ನಿತ್ಯಾನಂದ 
ಅಂದು ಇದ್ದವರೆಲ್ಲ ನಿತ್ಯಾನಂದರೆ!!



ಆದುದರಿಂದಲೇ ಇರಬೇಕು ರಾಕ್ಷಸರು ಈ ಋಷಿಮುನಿಗಳ ಆಶ್ರಮಕ್ಕೆ ನುಗ್ಗಿ ಅವರನ್ನು ಅಟ್ಟಾಡಿಸಿ ಹೊಡೆಯುತಿದ್ದುದು!.
 ಈ ವಿದ್ಯೆ ಎಂಬ ಆಯುಧ ಹಿಡಿದು ಜಟಾಜೂಟದಾರಿಗಳಾಗಿದ್ದವರೆಲ್ಲಾ  ವೈರಾಗ್ಯದ ಮಾರ್ಗ ಹಿಡಿದವರಲ್ಲ. ಕಾಮಸೂತ್ರ 
ಬರೆದ ವಾತ್ಸಾಯನ,ನಾಟ್ಯಶಾಸ್ತ್ರ ಬರೆದ ಭರತ ಇವರ್ಯಾರೂ "ಮುನಿಗಳು" ಎಂಬುದಕ್ಕೆ ಇವರೇ ರಚಿಸಿರುವ ಪರಿಭಾಷೆಯೊಳಗೆ ಬರುವುದಿಲ್ಲ. ಈ ಕಾಡಿನಲ್ಲಿ ಅಡಗಿಕೊಂಡ ಒಬ್ಬೊಬ್ಬನದೂ ಒಂದೊಂದು ವೇಷ!. ಕುಣಿಯುವ ನವಿಲಿಗೆ ಯಾವ ಶಾಸ್ತ್ರ?,ಹಾಡುವ ಕೊಗಿಲಿಗೆ ಯಾವ ಶಾಸ್ತ್ರ?.ಆದರೆ  ಪ್ರಪಂಚದಲ್ಲಿರುವ ಎಲ್ಲ್ಲಾ ಮಾನವ ಚಟುವಟಿಕೆಯನ್ನೂ ತಮ್ಮ monopolyಮಾಡಿಕೊಳ್ಳಬೇಕು ಎಂಬ ಅದಮ್ಯ ತೆವಲು ಈ ಗುರು'ಕುಲ'ದ್ದು!. ಅದಕ್ಕಾಗೆ ಈ ಎಲ್ಲಾ ಶಾಸ್ತ್ರಗಳ ರಚನೆ.ಎಲ್ಲವು ನಮ್ಮ ಲೇಖನಿಯಿಂದಲೇ ಹುಟ್ಟಿದ್ದು.ಇವನ್ನೆಲ ದೇವರು ಕನಸಿನಲ್ಲ್ಲಿ ಬಂದು ಹೇಳಿದ ,ನಾವು ಬರೆದಿತ್ತೆವು ಎಂದು ಎಲ್ಲಾ  ವಿಷಯಗಳ ಮೇಲೆ copyright ಪಡೆಯುವ ಹುನ್ನಾರ.ಶಾಸ್ತ್ರಿಯ ಸಂಗೀತಕ್ಕೆ ಅಷ್ಟೊಂದು ಹೊತ್ತಿಗೆಗಳಿದ್ದರೂ  ಅದು ಜನರ ಮನಸನ್ನು ರಂಜಿಸುವುದಿಲ್ಲ.ತಾನಸೇನ ದೀಪ ಉರಿಸಿದ್ದ.ಇನ್ನೊಬ್ಬ ಮಳೆ ಬರಿಸಿದ್ದಾ ಎಂಬ ಎಸ್ಟೋ ಕಥೆಗಳನ್ನು ಕಟ್ಟಿದರೂ  ಜನರ ಮನಸ್ಸನ್ನು ರಂಜಿಸುವುದರಲ್ಲಿ ಇವು ಬಾವಗೀತೆ,ಜಾನಪದಗೀತೆ,ಕ್ಯಾಬರೆ ಹಾಡುಗಳಿಗಿಂತಲೂ ಹಿಂದೆ ಬಿದ್ದಿವೆ. ಈಗ ಈ ಶಾಸ್ರೀಯ ಸಂಗೀತದಿಂದ ರೋಗ ವಾಸಿಮಾಡಬಹುದು ಇದು ಬೇರೆ ಬೇರೆ ರೀತಿಯ "waves" create ಮಾಡುತ್ತವೆ ಎಂಬ ಪುಕಾರು ಹಬ್ಬಿಸಲಾಗುತ್ತಿದೆ!.ಜೊತೆಗೆ ಇದು 'scientific",ಇದನ್ನು ಪಾಶಿಮಾತ್ಯ ವಿಜ್ಞಾನಿಗಳು ಒಪ್ಪುತಾರೆ  ಎಂಬ ಪಿಳ್ಳೆನೆವ ಬೇರೆ!. actually  ಅಮೆರಿಕಾದಲ್ಲಿನ ಕಂಪೆನಿಯೊಂದು ಕ್ಲಾಸ್ಸಿಕಲ್  ಧ್ವನಿ ಸುರುಳಿಗಳ ಮಾರಾಟ ಹೆಚ್ಚಿಸಿಕೊಳ್ಳಲು ರೂಪಿಸಿದ ಪ್ರಚಾರ ತಂತ್ರವಿದು. wagner ನ ಸಂಗೀತ ಕೇಳಿದರೆ I Q ಉತ್ತಮ ಗೊಳ್ಳುತ್ತದೆ, ಬಾರೋಕ್ ನ  ಸಂಗೀತ ಕೇಳಿದರೆ ಏಕಾಗ್ರತೆ ಹೆಚ್ಚುತ್ತದೆ ಎಂಬ ಗಿಣಿ ಪಾಠವನ್ನೇ ನಮ್ಮ trainer ಗಳು ಹೇಳುತ್ತಾರೆ. ಮಕ್ಕಳನ್ನು ಮಾರ್ಕ್ಸ್ ನ  ಫ್ಯಾಕ್ಟರಿಗಳಂತೆ ಬೆಳೆಸುವ ಪೋಷಕರು Wagner,Boroque ಸಂಗೀತ ಕೇಳಿಸಿದ್ದೇ ಕೇಳಿಸಿದ್ದು!.ಸಾಲದು ಅಂತ ನಮ್ಮ ಕೊಳಲು,ತಂಬೂರಿ,ವೀಣೆಯ ಸಂಗೀತಗಾರರು ನಾವೇನು ಕಮ್ಮಿ ಎನ್ನುತ್ತಾ CD ಮಾರಿದ್ದೇ,ಮಾರಿದ್ದು!. ಈ ಬಾರೋಕ್ ,ವಾಗ್ನೆರ್ ಸಂಗೀತದ ಹಿಂದಿರುವ "ವೈಜ್ಞಾನಿಕ (!) ಸುಳ್ಳುಗಳನ್ನು ಹಲವು ಸಂಶೋದಕರು ಬಹಿರಂಗಪಡಿಸಿದ್ದಾರೆ. ಬೇಕೆಂದರೆ ಅಂತರ್ಜಾಲವನ್ನೊಮ್ಮೆ ಜಾಲಾಡಿ ನೋಡಿ.  ಈ ಶಾಸ್ತ್ರಿಯ ಸಂಗೀತದಿಂದ ಏನಿಲ್ಲವೆಂದರೂ ನಿದ್ದೆ ಒಂದು ಬರುತ್ತದೆ ಅಂತ ನಾನು ಗ್ಯಾರಂಟೀ ಕೊಡಬಲ್ಲೆ. "ನಿದ್ದೆ" ಅಂದರೆ ನಗಬೇಡಿ .ಇದು ನಮ್ಮ ದೇಶದ ಗುರುಗಳು ಮಾರುವ ಒಂದು ಯಶಸ್ವೀ product. . ಎಲ್ಲಾ ಗುರುಗಳು ಪಶಿಮಾತ್ಯರಿಗೆ ಹೇಳುವುದಿಷ್ಟೇ.' ನಿಮ್ಮಲ್ಲಿ ದುಡ್ಡು ಇದೆ,ಆದರೆ ನಿಮಗೆ ಮನಶಾಂತಿ ಇಲ್ಲ .ನಿಮಗೆ ತೃಪ್ತಿ ಇಲ್ಲ. ಅದನ್ನು ನಮ್ಮಿಂದ ಖರಿದಿಸಿ ಅಂತ. ಅವರು ಭಜನೆ ,ಧ್ಯಾನ ಮಾಡುತಾ ನಿದ್ದೆ ಹೋದ ಕೂಡಲೇ ಅವರ ಪರ್ಸ್ ಗಾಯಬ್!. ನಂತರ ಅವರೆಲ್ಲ ಬಂದು ಇಲ್ಲಿ ಪರಿಸರ ಹಾಳು ಮಾಡುತಾರೆ,ಸಂಸ್ಕೃತಿ ಕೆಡಿಸುತ್ತಾರೆ ಎಂದು ಹೇಳಿ ಅವರನ್ನು ಓದ್ದೊಡಿಸುವುದು ಇದ್ದೆ ಇದೆಯಲ್ಲಾ!  .ಕಬ್ಬನ್ನು ಚೆನ್ನಾಗಿ  ರಸತೆಗೆದು ಬಿಸಾಡುವುದು ಇದೇ ಗುರು ಮಹಿಮೆ! ಜೈ ಗುರುದೇವ.
ಅಂದು,ಇಂದು ಎಲ್ಲಾ ಕಾಲದಲ್ಲಿಯೂ ಬೆಲೆಬಾಳುವ ವಸ್ತು ಎಂದರೆ "ಸಮಯ".ಬಹುಶಃ ಎಲ್ಲಾ ಜನರಿಗೂ ಪ್ರಕೃತಿ ಸಮಾನವಾಗಿ ಹಂಚಿರುವ ವಸ್ತುವೆಂದರೆ ಈ ಸಮಯವೊಂದೇ. ಅದಕ್ಕೆ ಗುರುಗಳಿಗೆ ಹೊಟ್ಟೆಯುರಿ. ಅಮಾಯಕರಿಂದ ಈ ಸಮಯವನ್ನೂ ಹೊಡೆಯಲು ಹೊಂಚು ಹಾಕಿದರು ಗುರುರಾಯ &ಕಂಪನಿ. ಆಶ್ರಮ ಗಳಲ್ಲಿ ಕುಳಿತು ದೊಡ್ಡ ದೊಡ್ಡ ಗ್ರಂಥಗಳನ್ನು ಬರೆದರು. ಬೂಮಿಯ ಸಮಸ್ಯೆಗಳಿಗೆ ಸ್ವರ್ಗದಿಂದ ಮದ್ದು ತರಿಸಿದರು! ಪ್ರತಿಯೊಂದು ಕೃತಿ ಬರೆದಾಗ ಅದರ ಕೊನೆಗೆ 'ಪಲಶ್ರುತಿ' ಅಂತ ಒಂದನ್ನು ಸೇರಿಸುತ್ತಾರೆ. ಅದು ಆಗುತ್ತದೋ ಇಲ್ಲವೂ ಗೊತ್ತಿಲ್ಲ,ಆದರೆ ಗುರುವಿನ 'ಪಲಾಹಾರ' ಕ್ಕೆ ದಾರಿ ಮಾತ್ರ ಕಂಡಿತ ಆಗುತ್ತದೆ. ಎಲ್ಲಾ ದೇವರಿಗೂ ಸಹಸ್ತ್ರ ನಾಮಗಳಿವೆ .ಅವನ್ನು ಓದಿ ಮುಗಿಸುವಾಗ ಒಂದು ಗಂಟೆ ಆಗುತ್ತದೆ. ಅದನ್ನು "ತ್ರಿಸಂಧ್ಯ"ವೂ  ಓದಬೇಕಂತೆ!. (ಈ ನರಸಯ್ಯನೂ ಯಾವೂದೋ ಒಂದು ಸಹಸ್ರನಾಮ ಓದಿರಬೇಕು,ಕೊನೆಗೆ ವಾಗ್ದೇವಿ ತನಗೊಲಿದ್ದಿದ್ದಾಳೆ ಎಂಬ ಬ್ರಮೆಯಲ್ಲಿ ಬಾಯಿಗೆ ಬಂದಂತೆ ಮಾತಾಡಿ ತನ್ನ ಮಾತಿಗೆ ತಾನೇ ತಲೆದೂಗುತ್ತಾನೆ!) ಒಟ್ಟಾರೆ ಅವನಿಗೆ ೩ ಗಂಟೆ  ನಷ್ಟ!. ಶಿಸ್ಯನ ನಷ್ಟ ,ಗುರುವಿನ ಲಾಭ!. ಶಿಷ್ಯರನ್ನ ಸುಲಿಯುವ ಇನ್ನೊಂದು ಉಪಾಯವೆಂದರೆ ಅವರು ಒಳ್ಳೊಳೆ ದ್ರವ್ಯಗಳನ್ನು ಒಟ್ಟುಮಾಡುವಂತೆ  ಹೇಳುವುದು.ಅವರ ಮುಂದೆಯೇ ಏನೇನೂ ಅಸಂಬದ್ದ ಮಂತ್ರ ಹೇಳುತ್ತಾ ಅವುಗಳನ್ನೂ ಬೆಂಕಿಗೆ ಸುರಿದು ಬಿಡುವುದು. ಈ ಅನೈತಿಕ ಚಟುವಟಿಕೆಯನ್ನು ಅವರು 'ಯಜ್ಞ'ಎಂದು ಕರೆಯುತ್ತಾರೆ.ಒಟ್ಟಾರೆ ಶಿಸ್ಯರು ಬಲಶಾಲಿಗಳಾಗದಂತೆ ನೋಡಿಕೊಳ್ಳುವುದರಲ್ಲೇ  ಪ್ರಾಚಿನ ಗುರುವಿನ ಯಶಸ್ಸು ಅಡಗಿತ್ತು. ನೀನು ಫಸ್ಟ್ rank ಬರಬೇಕು ಎಂದರೆ ಒಂದೇ ಓದಬೇಕು ,ಅಥವಾ ಇನ್ನೊಬ್ಬ ಓದದಂತೆ ನೋಡಿಕೊಳ್ಳಬೇಕು.ನಮ್ಮ ಗುರು ಪರಂಪರೆ ಅನುಸರಿಸಿದ್ದು ಎರಡನೇ ಮಾರ್ಗ!.ಇದು ಇಲ್ಲಿನ bureaucracy ಯ 'ಗುರು' ಗಳಿಗೂ ಅನ್ವಯಿಸುತ್ತದೆ. 
 
ನಮ್ಮ  ಗುರುಗಳಿಗೆ  ಜ್ಞಾನೋದಯವಾದ ಕೂಡಲೇ ಅವರು ಮಾಡುವ ಕೆಲಸವೆಂದರೆ ಜನ ಸಮೂಹದತ್ತ  ಓಡುವುದು. ಇವರಿಗೆ ಎಲ್ಲಾ ಜನ ದಾರಿ ತಪ್ಪಿದಂತೆಯೇ ಕಾಣುತ್ತಾರೆ. ಅವರನ್ನು ಉದ್ದಾರ ಮಾಡಲು ಮಾರ್ಗ ವೆಂದರೆ  ಶಾಲೆ ತೆರೆಯುವುದು.ಅದೂ ಸರ್ಕಾರಿ ಸಿಲಬಸ್ ಪಾಲಿಸುವ ,ಅಂಗೀಕೃತ,ಅನುದಾನ ಸಹಿತವಾದ ಶಾಲೆಯೇ ಆಗಬೇಕು. ಅಲ್ಲಿ ಗುರುವಿನ ಬೊದನೆ ಊಟಕ್ಕೆ ಉಪ್ಪಿನ ಕಾಯಿ ಇದ್ದಂತೆ. ಮುಖ್ಯವಾದದ್ದು ಸಿಲಬಸ್!. ಪಾಪ ,ಗುರುವಿನ ಸಂದೇಶ ಸಾರಲು ಬೇರೆ ಮಾರ್ಗವೇ ಇಲ್ಲ. ಎಲ್ಲಾ ತೊರೆದೇವು ಎಂದು ಕಾವಿ ಹಾಕಿದವರು ಬಸವಳಿದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಸುತ್ತುವುದು ನೋಡಬೇಕು!. ಹಣದ ಬಗ್ಗೆ ಇವರ ವ್ಯಾಮೋಹ ಪ್ರಾಪಂಚಿಕರಿಗಿಂತಲೂ ಹೆಚ್ಚೇನೂ ಎನಿಸದಿರದು. ಮೆಡಿಕಲ್,ಇಂಜಿನೀರಿಂಗ್ ಕಾಲೇಜು ತೆಗೆಯದಿದ್ದರೆ ಅವನ ಗುರುಪೀಠಕ್ಕೆ ಅವಮಾನವಲ್ಲವೇ ?. ಅವರು ಜ್ನನೋದಯದಿಂದ ಪಡೆದ ಜ್ಞಾನ,ಗುರು ಮುಖೇನ ಪಡೆದ ಜ್ಞಾನ ಅವರ ಆಶ್ರಮದ ಬಚ್ಚಲ ಕಮೋಡ್ ಹಾಕುವಷ್ಟೂ ಬೆಲೆ ಬಾಳುವುದಿಲ್ಲ ಎಂಬ ಜ್ಞಾನೋದಯವೇ ನಮ್ಮ ಮಹಾಪುರುಷರ ಶಿಕ್ಷಣ ಮೇಧ ಯಜ್ನ್ನಕ್ಕೆ ಮುಖ್ಯಕಾರಣ.ಆದುದರಿಂದಲೇ ತಾಂತ್ರಿಕ ಶಿಕ್ಷಣದತ್ತ ದಾವಂತ. ಅದುದರಿನ್ದಲ್ಲೇ ಗುರುವಿನ ಮಾತು ಕೇಳಿ ಕಾಡಿಗೆ ಹೋಗಿ  ಅಲ್ಲಿ ಜ್ಞಾನೋದಯವಾಯಿತು ಎಂದು ಓಡಿ ಬಂದು ಸಮಾಜಕ್ಕೆ ಗಂಟು ಬೀಳುವುದು! 
ಇಲ್ಲಿ ನನಗೆ ಶಂಕರ ಮೊಕಾಶಿ ಪುಣೆಕರ್ ಅವರ "ಗುರು ವಿನ ಹಾಡು ನೆನಪಾಗುತ್ತದೆ.


"ಏನು ಬಣ್ಣಿಸಲಿ ಗುರುರಾಯನ ಮಹಿಮೆ ಏನು ಬಣ್ಣಿಸಲಿ



ನ್ಯಾಯ ಹಚ್ಚುತ ಪಾಲು ಕೊಡಿಸಿದನು ಗುರುರಾಯ


ಹುಚ್ಚು ಬಿಡಿಸುವ ದೆವ್ವ ಬಿಡಿಸಿದನು ಗುರುರಾಯ


ಪಾದ ತೊಳೆದಗೆ ಕೆಸರು ಸಿಡಿಸಿದನು ಗುರುರಾಯ.................etc etc


(ನಾನು "ಗುರು"ಎಂದು ಹೇಳಿರುವುದು ಬರಿ ಇಲ್ಲಿನ ಶಿಕ್ಷಕರನ್ನಲ್ಲ.ಈ ಮನೋರೋಗಿಗಳು ಎಲ್ಲಾ ಬೂಖಂಡದಲ್ಲೂ ಇದ್ದಾರೆ. ಇಉರೋಪಿನ ಪಾದ್ರಿಗಳೂ ,ಉತ್ತರ ಏಶಿಯಾದ ಸೂಫಿಗಳೂ ,ಆಫ್ರಿಕಾದ 'ಶಮನ್'ಗಳು ...ಅಷ್ಟೇ ಏಕೆ ..ನಮ್ಮ ಕೆಲವು  ಮೂರ್ಖ ಮೇಲಾಧಿಕಾರಿಗಳು...ಮೇಲ್ಕಂದವರನ್ನು ನಂಬುವ ಕೆಲ ಪೋಷಕರು....ಎಲ್ಲರೂ.
 ಅಂದರೆ ಬೋದಿಸುವ ತೆವಲಿರುವ ಎಲ್ಲಾ ಜನರನ್ನೂ ಈ ಪರಿಬಾಷೆ ಕವರ್ ಮಾಡುತ್ತದೆ."ನಾನು ಸರಿ ,ನೀನು ತಪ್ಪು" ಎಂಬ ಖಾಯಿಲೆ ಇರುವ ಹಳೆ XXರ್ಸಿ ಗಳೆಲ್ಲರೂ ಒಂದು ರೀತಿಯ "ಗುರು"ಗಳೇ. ಗುರುತ್ವ ಎಂದರೆ ಎಲ್ಲವನ್ನೂ ಇತರರ expense ನಲ್ಲಿ ಗಿಟ್ಟಿಸಿಕೊಳ್ಳ ಬೇಕೆನ್ನುವ ಒಂದು ಬ್ರಷ್ಟ ಮನಸ್ತಿತಿ.)


No comments: