ಈ ಮಾರ್ಚ್ ತಿಂಗಳು ಒಂದು ಆಧ್ಯಾತ್ಮಿಕ ಕ್ರಾಂತಿ ನಡೆದದ್ದು ನೋಡಿದೆವು. ಒಂದಲ್ಲ ಎರಡು !.ಒಂದನೆಯದು ಶ್ರೀ ಶ್ರೀ ಶ್ರೀ ನಿತ್ಯಾನಂದ ಎಂಬ ಜಗದ್ಗುರುವಿನಿಂದಾಗಿ ಸಾವಿರಾರು ಶಿಷ್ಯರಿಗೆ ಜ್ಞಾನೋದಯವಾಯಿತು.
ಇನ್ನೊಂದು ಉತ್ತರ ಪ್ರದೇಶದಲ್ಲಿ ಕೃಪಾಳು ಮಹಾರಾಜ್ ಎಂಬ ಸಂತನ ಆಶ್ರಮದಲ್ಲಿ ಪ್ರಸಾದ ಪಡೆಯಲು ಹೋಗಿ ,ಅಲ್ಲಿ ನೂಕುನುಗ್ಗಲು ಸಂಭವಿಸಿ ಆತನ ೬೫ ಭಕ್ತರು ಪರಂದಾಮ ಸೇರಿದರು. ಇಷ್ಟು ಜನ ಸತ್ತರೂ ಸಾರ್ವಜನಿಕರು ,ಮಾದ್ಯಮಗಳು ಕೃಪಾಳು ಮಹಾರಾಜನ ಬಗ್ಗೆಯಾಗಲ್ಲಿ,ಆಶ್ರಮ,ದೇವಾಲಯಗಳ mismanagement ಬಗ್ಗೆಯಾಗಲಿ ಸೊಲ್ಲೆತ್ತಲಿಲ್ಲ. ಅವರ ಕಣ್ಣು ಕುಕ್ಕಿದ್ದು ನಿತ್ಯಾನಂದನ ಆಸ್ತಿ ಹಾಗು ಆತನ ಪ್ರಣಯ ಪ್ರಸಂಗ. ಆದರೆ ಕೇಶವಪ್ರಸಾದ್ ಪ್ರಕಾರ ಇದು ನಿತ್ಯಾನಂದನ ವಿಫಲ್ಯವಲ್ಲ. ಇದು ಆತ ಬೋದಿಸುತಿದ್ದ ತತ್ವಗಳ ವಿಫಲ್ಯ.ದೇವರಾಗಿ ಕಾಣುತಿದ್ದ ನಿತ್ಯಾನಂದ ಈಗ ಮನುಷ್ಯನಂತೆ ಕಾಣುತಿದ್ದಾನೆ.ಜನರು ಒಳ್ಳೊಳ್ಳೆ ಬಕ್ಷ್ಯ ,ಬೋಜ್ಯಗಳನ್ನು ಗುರುವಿಗೆ ನೀಡುತ್ತಾರೆ.ಗುರುವಿಗೆ 'ಜಠರ'ಇದೆ ಎಂದು ಒಪ್ಪುವ ಜನ ಆತನಿಗೆ 'ಜನನಾಂಗವೂ' ಇದೆ ಎಂದು ಏಕೆ ಒಪ್ಪುವುದಿಲ್ಲ?!
ಸಾವಿರಾರು ವರ್ಷಗಳಿಂದ ಬೋದಿಸಲ್ಪಡುವ ತತ್ವಜ್ಞಾನವೆಂಬ ಸುಳ್ಳಿನ ಕಂತೆಗಳನ್ನು ಶ್ರೀ ಶ್ರೀ ಪರಮಹಂಸ ನಿತ್ಯಾನಂದ ತನ್ನದೇ ಆದ ರೀತಿಯಲ್ಲಿ ಪ್ಯಾಕೇಜ್ ಮಾಡಿ ಮಾರಿದ.ಯೆಶಸ್ವಿಯಾದ. ಆಸ್ತಿಮಾಡಿದ.ಮಜಾಮಾಡಿದ. ಅದನ್ನು ನಂಬಿದವರು ಎಂದಿನಂತೆ ಮಂಗಗಳಾದರು. ಈಗ ಮೈ ಪರಚಿಕೊಳ್ಳುತಿದ್ದಾರೆ.
ಈ ‘ಗುರುತ್ತ್ವ’ ಎಂಬ ಪರಿಕಲ್ಪನೆಯೇ ಅನೈತಿಕವಾದಂತಹುದು ಎನ್ನುತ್ತಾರೆ ಕೇಶವಪ್ರಸಾದ್ .ಮನುಷ್ಯನ ಮನಸಿನಲ್ಲಿ ಮೇಲು-ಕೀಳು ಎಂಬ ಭಾವನೆಯನ್ನು ಬಿತ್ತುವುದು,ಆ ಮೂಲಕ ಜನಕೋಟಿಯ ಶೋಷಣೆಗೆ ವೇದಿಕೆ ಸಿದ್ದಪಡಿಸುವುದು ಇದರ ಉದ್ದೇಶ. ನೀನು ದಡ್ಡ ,ನಾನು ತಿಳಿದವನು! ನನ್ನ ಸೇವೆ ಮಾಡಿ ಸಾರ್ಥಕತೆಯನ್ನು ಪಡೆ ಎನ್ನುತ್ತಾನೆ ಗುರು.
“ಶೋಷಣೆ”ಎಂದರೆ ಜನರ ಅಜ್ಞಾನವನ್ನ ತಮ್ಮ ಸ್ವಾರ್ಥಸಾದನೆಗೆ ಬಳಸಿಕೊಳ್ಳುವುದು. ಈ “ಗುರು ಪರಂಪರೆ”ಮಾಡುವುದು ಅದನ್ನೇ..ಆದುದರಿಂದಲೇ ಹಿಂದೆ ರಾಜ ಮಹಾರಾಜರು ಋಷಿಮುನಿಗಳನ್ನು ಉತ್ಸವ ಮೂರ್ತಿಗಳಾಗಿ ಜನರಿಗೆ ತೋರಿಸುತಿದ್ದುದು.ಅದಕ್ಕೆ ಪ್ರತಿಯಾಗಿ ಅವರು ರಾಜನ ಬಗ್ಗೆ ಜನರ ಮನಸ್ಸಿನಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುತಿದ್ದುದು.
“ಗುರುವನ್ನು ನಂಬಿ, ಗುರುವನ್ನು ನಂಬಿ ಎಂಬ ಕೂಗನ್ನು ಶತಮಾನಗಳಿಂದ ಬೇರೆಬೇರೆ ಬರಹಗಾರರ ,ಹಾಡುಗಾರರ ಮೂಲಕ ನಮ್ಮ ತಲೆಗೆ ವ್ಯವಸ್ತಿತವಾಗಿ ತುಂಬಲಾಗುತ್ತಿದೆ. ಉದಾ :“ಗುರುವಿನ ಗುಲಾಮನಾಗುವ ತನಕ....”ಹಿಂದೆ ಗುರುವಿದ್ದ... ಇತ್ಯಾದಿ .
ಒಟ್ಟಾರೆ, ಮೌಡ್ಯ ಬಿತ್ತುವ ಉದ್ಯಮ ಇಂದು ಒಬ್ಬ ಸಮರ್ಥ ಸೇಲ್ಸ್ ಮ್ಯಾನ್ ಒಬ್ಬನನ್ನು ,ಒಬ್ಬ ಸೇನಾನಿಯನ್ನ ಕಳೆದು ಕೊಂಡಿದೆ.ಇದು ಜನಸಾಮಾನ್ಯರ ವಿಜಯ. ಕೇಶವಪ್ರಸಾದ್ ಹೇಳುವಂತೆ ನಾವು ಅಸಹ್ಯ ಪಡಬೇಕಿರುವುದು ಶ್ರೀ ಶ್ರೀ ಶ್ರೀ ನಿತ್ಯಾನಂದನ ಬಗ್ಗೆಯಲ್ಲ. ನೂರಾರು ವರ್ಷಗಳ ಹಿಂದೆ ಇಂತಹಾ ಬೋದನೆಗಳನ್ನು ಮಾಡಿ ,ಯಾವುದೇ ಹಗರಣಗಳಲ್ಲಿ ಸಿಕ್ಕಿಬೀಳದೆ ,ಸತ್ತು ಗೋರಿಯಿಂದಲೇ ಜನರ ನಂಬಿಕೆಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವವರ ಬಗ್ಗೆ.
ಶ್ರೀ ಶ್ರೀ ಯವರಿಂದ ಆದ ಜ್ಞಾನೋದಯವನ್ನು ಜನ ಸರಿಯಾಗಿ ಬಳಸಿಕೊಂಡು ಮುಂದೆ ಬೇರೆ ಯಾವುದೇ ಗುರುವಿಗೆ ಮಣೆ ಹಾಕದೆ ಇರುವುದು ಒಳ್ಳೆಯದು.

No comments:
Post a Comment