Friday, March 26, 2010

ದಾಸರಿಂದ ಹರಿನಿಂದೆ !!!!

ಆರು ಬದುಕಿದರಯ್ಯ ಹರಿ ನಿನ್ನ ನಂಬಿ ll
ತೋರು ಈ ಜಗದೊಳಗೆ ಒಬ್ಬರನು ಕಾಣೆ ll
ಕರಪತ್ರದಿಂದ ತಾಮ್ರದ್ವಜನ ತಂದೆಯ l
ಕೊರಳ ಕೊಯ್ಸಿದೆ ನೀನು ಕುಂದಿಲ್ಲದೆ ll
ಮರುಳನಂದದಿ ಪೋಗಿ ಬ್ರುಗುಮುನಿಯ ಕಣ್ಣ ಒಡೆದೆ!
ಅರಿತು ತ್ರಿಪುರಾಸುರರ ಹೆಂಡಿರನು ಬೆರೆದೆ ll 1 ll 
ಕಲಹ ಬಾರದ ಹಾಗೇ ಕರ್ಣನನು ನೀ ಕೊಂದೆ l 
ಸುಲಭದಲಿ ಕೌರವರ ಮನೆಯ ಮುರಿದೆ ll
ನೆಲನ ಬೇಡುತ ಪೋಗಿ ಬಳಿಯ ತನುವನು ತುಳಿದೆ l
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ ll2ll
ತಿರಿದುಂಬ ದಾಸರ ಕೈಲಿ ಕಪ್ಪವನು ಕೊಂಬೆ l
ಗರುಡ ವಾಹನ ನಿನ್ನ ಚರಿಯವನರಿಯೇ ll
ದೊರೆ ಪುರಂದರ ವಿಠಲ ನಿನನ್ನು ನಂಬಿದರೆ l
ತಿರುಪೆಯೂ ಹುಟ್ಟಲೊಲ್ಲದು ಕೇಳೋ ಹರಿಯೆ  ll3ll  
                             -ಪುರಂದರದಾಸರು 

No comments: