ಹಿಂದೆ ಕೋಳಿಜ್ವರ ಬಂದಾಗ ನಿಮಗೆ ನೆನಪಿರಬಹುದು. ಮೊದಲಿಗೆ ಒಂದಷ್ಟು ಕೊಳಿಗಳನ್ನು ಸಾಯಿಸಿ ಹೊಂಡ ತೋಡಿ ಹೂಳಲಾಯಿತು. ಸ್ವಲ್ಪ ದಿನ ಆದ ಮೇಲೆ ಕೋಳಿ ತಿಂದರೆ ಯಾವುದೇ ತೊಂದರೆ ಇಲ್ಲ ಎಂದು ಪೇಪರ್,ಟಿ.ವಿ. ರೇಡಿಯೋ ಮುಂತಾದ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಯಿತು. ಮೈಸೂರಿನಲ್ಲಿ ಕೋಳಿ ಸಾಕಣೆದಾರರ ಸಂಘದವರು ಕೋಳಿಯ ವಿವಿಧ ಭಕ್ಷ್ಯಗಳ ಮೇಳ ಏರ್ಪಡಿಸಿ ಪುಕ್ಸಟ್ಟೆ ಹಂಚಿದರು.ಆಗ ನೂಕು ನುಗ್ಗಲಾಗಿ,ಲಾಟಿಚಾರ್ಜ್ ಮಾಡಿ ಜನರನ್ನು ಚದುರಿಸಬೇಕಾಯಿತು.
ಆಶ್ಚರ್ಯವೆಂದರೆ ಸ್ವೈನ್ ಫ್ಲು ಬಂದು ಹೋಗಿ ಇಷ್ಟು ದಿನ ಆದರೂ ಪೋರ್ಕ್(ಹಂದಿ ಮಾಂಸ) ತಿನ್ನುವುದು ಸೇಫ್ ಅಂತಾ ಯಾರೂ ಪ್ರಚಾರ ಮಾಡುತಿಲ್ಲಾ ಯಾಕೆ?.ಕೊಡಗು,ಚಿಕ್ಕಮಗಳೂರು,ಹಾಸನ ಕಡೆಎಲ್ಲ ಬಹಳ ಹಿಂದಿನ ಕಾಲದಿಂದಲೂ ಜನ ಹಂದಿ ಮಾಂಸ ತಿನ್ನುತಾರೆ.(ಕಾಡ೦ದಿಯೋ,ಊರ೦ದಿಯೋ ಯಾವುದೂ ಒಂದು).
ಹಂದಿ ಮಾಂಸ ತಿನ್ನದೇ ಅದರ ಸ್ವಾದ ಸವೀ ಬೇಕಂದ್ರೆ ತೇಜಸ್ವಿಯವರ ಕೆಲವು ಕಥೆಗಳನ್ನೂ ಓದಬೇಕು.
ಕರ್ವಾಲೋ ದಲ್ಲಿ ಮಂದಣ್ಣ ‘ಚರ್ಬಿಯೇ ಕೊಬ್ಬರಿಯಷ್ಟು’ ದಪ್ಪವಿರುವ ‘ಪಿಗ್ಮಟನ್’ಅನ್ನು ಚೀಲದಲ್ಲಿ ಹಾಕಿಕಿಕೊಂಡು ತರುವ ದೃಶ್ಯ, ಪ್ಯಾರನಿಗೆ ಅದನ್ನು ನೋಡಿ ಆಸೆಯಾಗುವ ದೃಶ್ಯ ನೆನಪಿಗೆ ಬರುತ್ತದೆ.
ಇನ್ನು ಬೇರೊಂದು ಕಥೆಯಲ್ಲಿ ಶ್ರೀ ರಾಮ್ಅವರ ನಾನ್-ವೆಜ್ ಪ್ರಿಯತೆಯ ವರ್ಣನೆ ರಸವತ್ತಾಗಿದೆ.
ಈಗ ಕಾಡುಹಂದಿ ಎಲ್ಲಿ ಸಿಗುತ್ತೆ?,ಜನ ಊರ್ ಹಂದಿಗೆ ಶಿಫ್ಟ್ ಆಗಿದ್ದಾರೆ.ಹಂದಿ ಗಲೀಜು ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಫಾರಂ ಹಂದಿಗಳಿಗೆ ಗಲೀಜು ಸಿಗುವುದಿಲ್ಲ.ಅವು ಪಶು ಆಹಾರ ತಿಂದು ಚೆನ್ನಾಗಿ ಕೊಬ್ಬಿರುತ್ತದೆ. ಹಾಗೆ ನೋಡಿದರೆ ನಾವು ತಿನ್ನುವ ತರಕಾರಿ ಗಳಿಗೆ ಸಹ ಕೆಲವು ರೀತಿಯ ಗೊಬ್ಬರ ಹಾಕಿರುತ್ತಾರೆ. ಸಿಟಿಯಲ್ಲಿ ಸಿಗುವ ಸೊಪ್ಪನ್ನು ಸೀವೇಜ್ ನೀರಿನಲ್ಲಿ ಬೆಳೆದಿರುತ್ತಾರೆ. ಹ್ಯುಮನ್ ಕಾಂಪೋಸ್ಟ್ ಗೊಬ್ಬರದ ಬಗ್ಗೆಯೂ ಮೂಗುಮುರಿಯುವರಿದ್ದಾರೆ. ಕೆಲವರು ಕಾಡುಹಂದಿ ಯಾವಾಗಲು ಒಳ್ಳೆಯ ಆಹಾರವನ್ನೇ ಸೇವಿಸುತ್ತದೆ.ಒಳ್ಳೆ ಬತ್ತದ ಎಳೆ ಪೈರುಗಳನ್ನು ತಿನ್ನುತ್ತದೆ ಆದುದರಿಇಂದ ಅದು ಬಹಳ ಶುದ್ದ ವಾದದ್ದು ಅಂತಾ ವಾದಿಸುತ್ತಾರೆ.ಅಂದರೆ ಮಡಿಯಲ್ಲಿ ಇದ್ದವರೂ ಸಹ ಕಾಡುಹಂದಿ ತಿನ್ನಬಹುದು ಅಂತಾಯಿತು!!!.
ಅಷ್ಟಕ್ಕೂ ಪೋರ್ಕ್ ಬಹಳ ತಂಪು ಇರುತ್ತದಂತೆ.ಕುಡಿತ ಹೀಟ್ ಅಂತೆ!.ಒಂದಕ್ಕೊಂದು ಸಕ್ಕತ್ತಾಗಿ ಬ್ಯಾಲನ್ಸ್ ಆಗುತ್ತಂತೆ!.ಪೋರ್ಕ್ ಗೆ ಬ್ರಾಂಡಿ ಒಳ್ಳೆ ಕಾಂಬಿನೇಷನ್ ಅಂತೆ. ಯಾಕೆಂದರೆ ಬ್ರಾಂಡಿ ಸಿಕ್ಕಾಪಟ್ಟೆ ಹೀಟ್ ಅಂತೆ. ಅದಕ್ಕೆ ನೆಗಡಿ ಆದವರಿಗೆ ಒಂದೆರಡು ಚಮಚ್ ರಾ ಬ್ರಾಂಡಿ ಕುಡಿಸಿದರೆ ನೆಗಡಿ ಹೋಗುತ್ತದಂತೆ!. ಇಲ್ಲಿನ ಬಿಸಿ/ಉಷ್ಣ ಹವೆಗೆ,ಹೀಟು....ಹೀಟು ...ಅಂತಾ ಸಾಯುವರಿಗೆ ಪೋರ್ಕ್ ಒಳ್ಳೆ ಆಹಾರ.
ನನಗೆ ಇಂಟರ್ನೆಟ್ ನಲ್ಲಿ ಸರ್ಕುಲೇಟ್ ಆಗುತಿರುವ ಒಂದು ಇ-ಮೇಲ್ ಬಂದಿದೆ. ಅದರ ಪ್ರಕಾರ ಹಂದಿ ಮಾಂಸದಲ್ಲಿ ಹುಳವಿರುತ್ತದಂತೆ.ಹಸಿ ಮಾಂಸವನ್ನ ಕೋಕಾ ಕೋಲಾ ದಲ್ಲಿ ಮುಳುಗಿಸಿದರೆ ಹುಳಗಳು ತಕಪಕ ಅಂತಾ ಹೊರಗೆ ಬರುತ್ತವಂತೆ!. ಕೆಲವರು ‘ಅದೆಲ್ಲಾ ಸುಳ್ಳು’ಎಂದು ಎಂದು ಎಗ್ರಾಡಿದರು.ಇನ್ನು ಕೆಲವರು ಅದಕ್ಕೆ ಹೇಳುವುದು ಮಾಂಸವನ್ನು ಕ್ಲೀನಾಗಿ ತೊಳೆದು ಚೆನ್ನಾಗಿ ಬೇಯಿಸಬೇಕು,ಹಾಗು ಹೀಗೂ ಹುಳು ಹೊಟ್ಟೆ ಸೇರಿದ್ದರೆ ಏನೂ ಹೆದರಬೇಕಿಲ್ಲ. ಚೆನ್ನಾಗಿ ಎಣ್ಣೆ(Rum)ಹಾಕಿದರೆ ಮುಗಿಯಿತು,ವರ್ಮ್ಸ್ ಫಿನಿಶ್ ಎಂದರು.
ಗೋಹತ್ಯ ನಿಷೇದ ಕಾಯ್ದೆ ಬಂದರೆ ಬಡವರಿಗೆಲ್ಲಾ ಕಡಿಮೆ ಬೆಲೆಯ ಪೌಷ್ಟಿಕತೆ ಕೈಗೆಟುಕದಂತಾಗುತ್ತದೆ ಎಂದು ಕೆಲವು ಜೀನ್ಸ್ ಪ್ಯಾಂಟಿನವರು ಚೀರಾಡುತಿದ್ದಾರೆ. ಬಟ್, ಅವರಿಗೆ ಪೋರ್ಕ್ ನ ಸ್ವಾದಿಷ್ಟ ತಿನಿಸುಗಳ ಬಗ್ಗೆ ಪರಿಚಯ ಇದ್ದಂತಿಲ್ಲ. ಚೀಪ್& ಬೆಸ್ಟ್ !. ಎಲ್ಲಾ ಬಡವರಿಗೂ ಕೈಗೆಟುಕುತ್ತದೆ.ಅದರ ಸಾಕಾಣಿಕೆ ಬಗ್ಗೆ ಸರ್ಕಾರವೇ ಪ್ರಚಾರ ಮಾಡಬೇಕು. ಯಾಕೆ?,ಕೋಳಿಗೆ,ಮೊಟ್ಟೆಗೆ ಪ್ರಚಾರ ನೀಡಿಲ್ಲವೇ?
‘ಬುದ್ಧ’ಕೂಡ ಪೋರ್ಕ್ ಸೇವಿಸಿದ್ದ ಎಂದು ಪಾಲಿ ಪುಸ್ತಕಗಳು ಹೇಳುತ್ತವೆ. ಅದು ಪಾಲಿ ಪುಸ್ತಕಗಳಲ್ಲ.ಪೋಲಿ ಪುಸ್ತಕಗಳು ಎಂದು ಜಗಳಕ್ಕೆ ಬರಬೇಡಿ. ಪೋಲಿ ಪುಸ್ತಕಗಳಲ್ಲಿ ಹಂದಿ ಮಾಂಸದ ವರ್ಣನೆಯನ್ನ ನಾನು ನನ್ನ ಸರ್ವೀಸಿನಲ್ಲೇ ನೋಡಿಲ್ಲ. ಮೇಲಾಗಿ ಬುದ್ದನನ್ನು ಕೆಲವರು ಅವತಾರಗಳ ಲಿಸ್ಟ್ ಗೆ ಸೇರಿಸಿದ್ದಾರೆ. ಸೊ, ಅವನೇ ಪೋರ್ಕ್ ರೆಕಮೆಂಡ್ ಮಾಡಿದ್ದ ಅನ್ತಾಯಿತಲ್ಲಾ.(ಈ ಬಗ್ಗೆ ಇತಿಹಾಸತಜ್ನರಲ್ಲಿ ಸ್ವಲ್ಪ ಗಲಿಬಿಲಿ ಇದೆ,ಕೆಲವರು ‘ಶಕ್ರ ಮದ್ದವ’ಅಂದರೆ ಪೋರ್ಕ್ ಅಲ್ಲ.ಒಂದು ಬಗೆಯ ಅಣಬೆ ಎನ್ನುತ್ತಾರೆ).
ಈಗೀಗ ಉತ್ತರ ಬಾರತೀಯರು ಬೆಂಗಳೂರಿನಲ್ಲಿ ಹೆಚ್ಚಾಗಿರುವುದರಿಂದ ಹೋಟೆಲಿನಲ್ಲಿ ಪೋರ್ಕ್ ನ ರೇಟ್ ಹೆಚ್ಚಾಗಿದಿಯಂತೆ. ಅಂದಹಾಗೆ ಪೋರ್ಕ್ ಪೌಷ್ಟಿಕಾಂಶದ ಗಣಿಯಂತೆ.ಆದರೆ ಇದರಲ್ಲಿ ಕೊಲೆಸ್ತೋರಲ್ ಸ್ವಲ್ಪ ಹೆಚ್ಚು.ಇದರಲ್ಲಿ ತಿಯಮಿನ್ ಅಂಶ ಇತರ ಮಾಂಸಗಳಿಗಿಂಥಾ ಹೆಚ್ಚಿರುತ್ತದಂತೆ. ಸೊ, ದಪ್ಪಗಿರುವವರು ಇದರ ಚರ್ಬಿ ತಿನ್ನದಿರುವುದು ಒಳ್ಳೆಯದು.
ಅಷ್ಟಕ್ಕೋ ಇಷ್ಟ ಇಲ್ಲದವರಿಗೆ ತಿನ್ನಿ,ತಿನ್ನಿ ಅಂತಾ ಬಲವಂತ ಮಾಡಿ ತಿನ್ನಿಸಿ ಎಂದು ನಾನೇನು ಹೇಳುತ್ತಿಲ್ಲ.ನಾನು ಉಣ್ಣುವ ಮುನ್ನ ರಕ್ತಾಪಾತ ಆಗಲೇ ಬೇಕು..ನನಗೆ ಮಾಂಸವೇ ಬೇಕು,ಮಾಂಸ ಇಲ್ಲದಿದ್ದರೆ ನಾವು ಸತ್ತೆ ಒಗುತ್ತೇವೆ ಎಂದರೆ ತಗೊಳಪ್ಪಾ,ಇದನ್ನೂ ಟೇಸ್ಟ್ ನೋಡು ಎನ್ನಬಹುದಷ್ಟೇ.
ಸರ್ವಜ್ಞನೇ ಹೇಳಿಲ್ಲವೇ? “ಬಾಡು ತಿಂಬಾತಂಗೆ.......
ಹೆಚ್ಚು ರುಚಿ,ಕಡಿಮೆ ಬೆಲೆ(?) ಆದುದರಿಂದ ಇದು ಎಲ್ಲ ವರ್ಗಗಳ ಕೈಗೆಟುಕುತ್ತದೆ.ಮುಂದಿನದಿನಗಳಲ್ಲಿ ಪೋರ್ಕ್ ಎಲ್ಲಾ ಮಾಂಸಾಹಾರಿಗಳನ್ನು ಒಂದುಗೂಡಿಸುವ ವಾಹಕವಾಗಬಹುದು.ಮುಂದಿನದಿನಗಳಲ್ಲಿ ಇದರಿಂದಲೇ ರಾಷ್ಟ್ರೀಯ ಭಾವೈಖ್ಯ ಮೂಡಿದರೂ ಅಚ್ಚರಿಯಿಲ್ಲ!
ಪೋರ್ಕ್ ಹೇಗೆ ಮಾಡುವುದೆಂದು ಕೆಳುತ್ತಿರಾ..ಇಲ್ಲಿದೆ ನೋಡಿ ಕೆಲವು ಲಿಂಕ್ಗಳು ...ಜಾಣಮರಿ...ಮಾಡಿ ಸವಿ...
http://hubpages.com/hub/How-To-Make-Delicious-Indian-Pork-Vindaloo
http://www.astray.com/recipes/?show=Indian%20pork%20with%20honey
http://www.pigonaspit.com/india.php

1 comment:
ವಿಚಾರವಾದಿಗಳ ಇಸ್ಲಾಂ ಭಯ !
ಈಗ್ಗೆ ಕೆಲವುದಿನಗಳ ಹಿಂದೆ ವೇದಾಂತ ರೆಜಿಮೆಂಟ್ ಎಂಬ ಪುಸ್ತಕ ಓದಿದೆ. ಅದರಲ್ಲಿ ಬಿ.ವಿ. ವೀರಭದ್ರಪ್ಪನವರು " ಕಸಾಯಿಖಾನೆಯಲ್ಲಿ ಮಠಾಧೀಶರ ಮೂತಿ" ಎಂಬ ಲೇಖನ ಬರೆದಿದ್ದರು. ಅದರಲ್ಲಿ ಗೋ ವಧೆ ಸಮರ್ಥಿಸಿಕೊಂಡ ಲೇಖಕರು ಇದಕ್ಕೆ ಹಲವಾರು ಕಾರಣಗಳನ್ನೂ ನೀಡಿದ್ದಾರೆ. ಕೊನೆಗೊಂದು ಪ್ಯಾರ ಹೀಗಿದೆ
" ಕಸಾಯಿಖಾನೆಗಳ ಆದುನಿಕತೆಯನ್ನು ವಿರೋಧಿಸುವವರಲ್ಲಿ ಹಿಂದೂ ಸ್ವಾಮಿಗಳ ಜೊತೆಗೆ ಮುಸ್ಲಿಂ ಮುಲ್ಲಾಗಳೂ ಸೇರಿದ್ದಾರೆ. ಯಾಂತ್ರೀಕೃತ ಹತ್ಯೆ ಇಸ್ಲಾಂನ ’ಹಲಾಲ್’ಗೆ ಅಡ್ಡಿಯಾಗುವುದಂತೆ. ಪ್ರಾಣಿಯ ಕೊರಳಿನ ನರ ಕತ್ತರಿಸಿ ರಕ್ತ ಹರಿಯ ಬಿಟ್ಟು ನಂತರ ಕೊಂದು ಪ್ರಾಣಿಯ ಮಾಂಸ ಮಾತ್ರ ಮುಸ್ಲಿಮರಿಗೆ ಸ್ವೀಕಾರ ಯೋಗ್ಯವಾಗುತ್ತದೆ. ಇದರ ಉದ್ದೇಶ ಪ್ರಾಣ ಪ್ರಾಣಿಯನ್ನು ಎಚ್ಚರ ತಪ್ಪಿಸಿ ಸಾಯಿಸುವುದೇ ಆಗಿದೆ. ಇಸ್ಲಾಂ ಧರ್ಮ ಪ್ರಾಣಿದಯೆಗೆ ವಿಶೇಷ ಮಹತ್ವ ನೀಡುತ್ತದೆ. ’ಹಲಾಲ್’ ರೂಢಿಗೆ ಬಂದ ಕಾಲದಲ್ಲಿ ಪ್ರಾಣಿದಯೆಯನ್ನು ಅದಕ್ಕಿಂತ ಬೇರೆ ರೀತಿಯಿಂದ ತೋರಿಸುವುದು ಗೊತ್ತಿರಲಿಲ್ಲ. ಆಧುನಿಕ ವಿಜ್ಞಾನ ಅದಕ್ಕಿಂತ ಉತ್ತಮ ರೀತಿಯಲ್ಲಿ ನೋವಿಲ್ಲದೆ ಎಚ್ಚರ ತಪ್ಪಿಸುವ ವಿಧಾನವನ್ನು ಬಳಕೆಗೆ ತಂದಿದೆ. ಸೌದಿ ಅರೇಬಿಯಾ, ಕುವೈತ್‌ನಂತಹ ಅಪ್ಪಟ ಇಸ್ಲಾಮಿಕ್ ದೇಶಗಳಲ್ಲಿ ಆಧುನಿಕ ಕಸಾಯಿಖಾನೆಗಳು ಅಸ್ತಿತ್ವದಲ್ಲಿವೆ. ಹೀಗಿದ್ದೂ ಭಾರತೀಯ ಮುಲ್ಲಾಗಳು ಆಧುನಿಕ ಕಸಾಯಿ ಖಾನೆಗಳನ್ನು ವಿರೋಧಿಸುವುದು ವಿಚಿತ್ರವಾಗಿದೆ."
ಇಲ್ಲಿನ ವಿಪರ್ಯಾಸ ನೋಡಿ ....ಪ್ರಾಣಿಗಳ ನರ ಕತ್ತರಿಸಿದರೆ ರಕ್ತಸ್ರಾವವಾಗಿ ಪ್ರಾಣಿಗಳಿಗೆ ಎಚ್ಚರತಪ್ಪಬಹುದು .ಆದರೆ ರಕ್ತ ಹೋಗುವಾಗ ಪ್ರಾಣಿಗೆ ಹಿಂಸೆಯಾಗುವುದಿಲ್ಲವೇ?,...
ಇದರಲ್ಲಿ ಅತ್ಯಂತ ಹಾಸ್ಯಾಸ್ಪದವಾದ ವಾದವೆಂದರೆ "ಇಸ್ಲಾಂ ಧರ್ಮ ಪ್ರಾಣಿದಯೆಗೆ ವಿಶೇಷ ಮಹತ್ವ ನೀಡುತ್ತದೆ" ಎನ್ನುವುದು.ಹಾ ...ಹಾ .. ಇದರಬಗ್ಗೆ ನಾನೇನೂ ಟಿಪ್ಪಣಿ ಮಾಡಬೇಕಾದ್ದೆ ಇಲ್ಲ.
ದ್ಹುಕ್ಖದಾಯಕ ಸಂಗತಿ ಎಂದರೆ ಈ ವೀರಬದ್ರಪ್ಪ ನಂತವರಿಂದ ಹಿಡಿದು ಹೊರಗಿನ ನೋಂ ಚೋಮ್ಸ್ಕಿ ವರೆಗೆ ಎಲ್ಲ ಸ್ವಯಂಘೋಷಿತ ಚಿಂತಕರಲ್ಲಿ ಇಸ್ಲಾಂ ಭಯ ಎದ್ದು ಕಾಣುತ್ತದೆ. ನಿಜ ಇದು ಸಹಜವಾದದ್ದೇ. ಇವರ ಪ್ರಕಾರ H S ಶಿವಪ್ರಕಾಶ್,ಬಂಜಗೆರೆ ಜೈಪ್ರಕಾಶ್ ಮುಂತಾದವರು ಬಸವಣ್ಣ ನನ್ನು ಆಡಿಕೊಂಡರೆ ಸರಿ,ಖಲಿಲ್ ಗಿಬ್ರಾನ್ ಚರ್ಚನ್ನು ಆಡಿಕೊಂಡರೆ ಸರಿ , ತಸ್ಲೀಮ ನಸ್ರೀನ್ ,ಸಲ್ಮಾನ್ ರಶ್ದಿ ಮೋಹಮ್ಮದ್ದಿಯರನ್ನು ಆಡಿಕೊಂಡರೆ ತಪ್ಪು! ಆ ಸಮೂದಾಯದ ಹಿಂಸಾತ್ಮಕ ಕೃತ್ಯಗಳಿಂದ ಲೇಖಕರನ್ನು ಬರಹಗಾರರನ್ನು ರಕ್ಷಿಸಲು ಯಾವುದೇ framework ನಮ್ಮ ಸಮಾಜದಲ್ಲಿ ಇಲ್ಲ ನಿಜ....ಹಾಗಂತಾ ಅದನ್ನೇ ಹೊಗಳುತ್ತಾ ಅವನ್ನು ಪ್ರೋತ್ಸಾಹಿಸುವುದು ಎಷ್ಟು ಸರಿ?.......
ಇಲ್ಲಿ ದನ ಕಡಿಯುವ ಬಗ್ಗೆ ಇಷ್ಟೆಲ್ಲಾ ಬರೆಯುವ ಅವರು ಇರಾನ್,ಇರಾಕ್ ಅರೇಬಿಯಾ ದಲ್ಲಿ ಹಂದಿ ಸಾಕಾಣಿಕೆ ನಿಷೇಧವಿರುವ ಬಗ್ಗೆ ಯಾಕೆ ಬರೆಯಬಾರದು . ಅರೇಬಿಯದಲ್ಲಿ ಓಕೆ ...ಸುಭಿಕ್ಷೆ ಇದೆ. ಪೌಷ್ಟಿಕಾಂಶದ ಸಮಸ್ಯೆಯಿಲ್ಲ . ಆದರೆ ಆಫ್ರಿಕಾದ ಸುಡಾನ್ ,ಇಥಿಯೋಪಿಯದಂತಹ ಕಡೆ ಆಹಾರ ಕೊರತೆಯಿಲ್ಲವೇ .? ಅಂತ ಕಡೆ ಈ ಲೇಖನವನ್ನೇ ತೆಗೆದು 'ದನ' ಅನ್ನೋ ಕಡೆ 'ಹಂದಿ' ಅಂತಾ ಹಾಕಿ ಸ್ವಾಮೀಜಿ ಅನ್ನೂ ಕಡೆ ಮುಲ್ಲಾಗಳ ಹೆಸರನ್ನು ಸೇರಿಸಿ ಪ್ರಿಂಟ್ ಮಾಡಬಹುದಲ್ಲ. ಆಗ ಅದನ್ನು ನಮ್ಮ ಈ "ಬಾಂಧವರು" ಯಾವ ರೀತಿ ಸ್ವೀಕರಿಸಬಹುದು?...
ನಾನು ಹೇಳುವುದು ನಮ್ಮ ಮುಂದೆ ಇರುವ ಪ್ರತಿಯೊಬ್ಬರನ್ನು ಒಬ್ಬ ವ್ಯಕ್ತಿಯಾಗಿ ನೋಡಿ, ಒಂದು ಸಮೂಹವಾಗಿ ನೋಡಬೇಡಿ ಹಿಂದೂ ಆಗಿ ನೋಡಬೇಡಿ, ಮುಸ್ಲಿಂ ಆಗಿ ನೋಡಬೇಡಿ...
ಧರ್ಮ ಎಂಬ ಗಲೀಜು ಈ ಇಪ್ಪತೊಂದನೆ ಶತಮಾನದಲ್ಲದರೂ ಕ್ಲೀನ್ ಆಗಲಿ!
ಶ್ರೀ ಮೋಕ್ಷಕಾಮ
Post a Comment