Thursday, April 1, 2010

ಗುರುಗಳೂ...ಡೈಲಾಗ್ ಗಳೂ ...



ಈ ಪ್ರಸಂಗವನ್ನ ನಾನು ಶಡಕ್ಷರಿಯವರ ಆಣಿಮುತ್ತಿನಲ್ಲಿ ನಾನು ಓದಿದ್ದು,” ಚಿನ್ಮಯಾನಂದರು ಮುಂಬೈಗೆ ಹೋಗಿದ್ದಾಗ ಅವರಿಗೆ ನೆಗಡಿಯಾಯಿತಂತೆ.ಅವರು ಅದಕ್ಕೆ ವೈದ್ಯನ ಬಳಿ ಮಾತ್ರೆ ತೆಗೆದುಕೊಳ್ಳುವುದನ್ನು ನೋಡಿ ಯಾರೋ ನನ್ನಂತಹ ಕಿಡಿಗೇಡಿ ಲಾಯರ್ ಒಬ್ಬ ಅವರನ್ನು ಕೇಳಿದನಂತೆ ‘ನೀವ್ಯಾಕೆ ದೇವರನ್ನು ಕೇಳಿ ನೆಗಡಿ ವಾಸಿಮಾಡಿಕೊಳ್ಳಬಾರದು’ ಅಂತ. ಅದಕ್ಕೆ ಅವರೆಂದರಂತೆ “ನಿನಗೆ ಏನಾದರೂ ವ್ಯಾಜ್ಯ ಇದ್ದಾರೆ ನೇರವಾಗಿ ಸುಪ್ರಿಂ ಕೋರ್ಟ್ಗೇ ಹೋಗುತ್ತಿಯಾ?,ಎಂಟಾಣೆ ಮಾತ್ರೆಯಲ್ಲಿ ಗುಣವಾಗುವ ಕಾಯಿಲೆಗೆ ಸರ್ವಶಕ್ತ ಬಗವಂತನನ್ನೇಕೆ ಕಾಡಬೇಕು?” ಇತ್ಯಾದಿ,ಇತ್ಯಾದಿ..........zzzzzzzzzz

ಅದೇನೋ ತರ್ಕಬದ್ದವಾದ ಮಾತೆ!...ಅದು ವಕೀಲನ ಬಾಯಿ ಮುಚ್ಚಿಸಿತು. ಆದರೆ ಕೇಶವಪ್ರಸಾದ್ ಬಾಯಿ?.


“ನೆಗಡಿಯೇನೋ ವಾಸಿ ಮಾಡಬಹುದು ಬಿಡಿ,ನಿಮ್ಮ ಖಾಯಿಲೆಗೆ ಎಂಟಾಣೆ ಮದ್ದಿನ ಪರಿಣಾಮ ಆಗದೆ ನೀವು ಪರಂಧಾಮವನ್ನೈಯುವ ಸ್ತಿತಿ ಬಂದಾಗಲಾದರೂ ಬಗವಂತನ ಮೊರೆ ಹೋಗಿ ಪ್ರಾಣ ಉಳಿಸಿಕೊಳ್ಬಹುದಲ್ಲ, ಭಕ್ತ ಮಾರ್ಕಂಡೆಯನಂತೆ. ಯಾಕೆಂದರೆ ಜಗತ್ತನ್ನೇ ಉದ್ದಾರ ಮಾಡುವ ಗುರುತರ ಜವಾಬ್ಧಾರಿ ಗುರುವಿನ ಮೇಲಿರುತ್ತದಲ್ಲಾ. ಸ್ವಲ್ಪ ಭಗವಂತನನ್ನು ಕೇಳಿ ನೋಡಿ ,ನಿಮಗಾಗಿ ಅಲ್ಲದಿದ್ದರೂ ನಮ್ಮಂತಹ ಶಿಷ್ಯಕೋಟಿ ಗಾಗಿಯಾದರೂ ..........

ಗುರುಗಳು ಹಾಗೆಲ್ಲಾ ಸ್ವಾರ್ಥಕ್ಕಾಗಿ ವರ ಬೇಡುವುದಿಲ್ಲ. ಅವರಲ್ಲಿ ಶತಾಯುಷಿಗಳಾದವರಿಗಿಂತಲೂ ಅರ್ಜೆಂಟ್ ಅರ್ಜೆಂಟ್ ಆಗಿ ಹೋದವರೇ ಹೆಚ್ಚು....,ಇದಕ್ಕೆ ಕಾರಣ ದೇವರಿಗೆ ಅವರ ಮೇಲಿನ ಪ್ರೀತಿ.ಅದಕ್ಕೆ ಅವರನ್ನು ಅಷ್ಟು ಬೇಗ ಕರೆಸಿಕೊಳ್ಳುತ್ತಾನೆ. ಈ ಅವಿವೇಕಿ ಕೇಶವಪ್ರಸಾದ್ ತಿಳಿಯದೆ ತಲೆಹರಟೆ ಮಾಡುತ್ತಾನೆ, ಕ್ಷಮಿಸಿಬಿಡಿ, ಪ್ಲೀಸ್.


ಗುರುವಿನ ‘ಪವರ್’ ಯಾವುದರಲ್ಲಿರುತ್ತದೆ ಗೊತ್ತಾ. ಸಮಯೋಚಿತ ಡೈಲಾಗ್ ಹೊಡೆದು ಶಿಷ್ಯನ ಬಾಯಿಮುಚ್ಚಿಸುವುದರಲ್ಲಿರುತ್ತದೆ.


ಹೀಗೊಂದು ಸಂಬಾಷಣೆ ಓದಿದ್ದು ನೆನಪಾಗುತ್ತಿದೆ.”ಒಂದು ದಿನ U.G.ಕೃಷ್ಣಮೂರ್ತಿ ರಮಣ ಮಹರ್ಷಿಯನ್ನ ನೋಡಲು ಹೋಗಿದ್ದರಂತೆ. ಯು.ಜಿ. ಕೇಳಿದರಂತೆ “ನಾನು ಕೇಳಿದ್ದನು ಕೊಡಬಲ್ಲಿರಾ?,


ರಮಣ-ನಾನು ಕೊಡಬಲ್ಲೆ. ನೀನು ತೆಗೆದು ಕೊಳ್ಳಬಲ್ಲೆಯಾ ?.... ಅಷ್ಟೇ ಸಂಭಾಷಣೆ ನಡೆದಿದ್ದು ಇವರಿಬ್ಬರ ಮಧ್ಯೆ. ಮರಳಿ ಬಂದು ಬಿಟ್ಟರಂತೆ ಯು.ಜಿ.


ಸರಿ ನನಗೆ ತೆಗೆದು ಕೊಳ್ಳುವ ಸಾಮರ್ಥ್ಯವನ್ನೇ ಕೊಡಿ ಎನ್ನಬಹುದಿತ್ತು. ಆದರೆ ಇವನು ಏನನ್ನು ಕೊಡಬಲ್ಲ ಎಂಬ ಅನುಮಾನ ಬಂದಿರಬೇಕು ಯು.ಜಿ ಗೆ.


ಬರಿ,ಅಸಂಬದ್ದ ಮಾತುಗಳು..ಒಗಟುಗಳು,ದಾರಿತಪ್ಪಿಸುವ ಲೆಚ್ಚರ್ ಗಳು.



ದೇಹದ ಅಜರಾಮರತೆಯ ಬಗ್ಗೆ ನಮ್ಮಲ್ಲಿ ಹಲವು ಕಲ್ಪನೆಗಳಿವೆ. ಈ ಕುರಿತು ಓಶೋ ಒಂದು ಕಡೆ ಬರೆದಿದ್ದು ನೆನಪಾಗುತ್ತಿದೆ.,ಅದನ್ನು ತುರ್ಜುಮೆ ಮಾಡದೆ cut & paste ಮಾಡಿದ್ದೇನೆ.

I know about Sri Aurobindo, because he himself was teaching his whole life that his special work was to give methods to people to attain physical immortality. All old teachers have taught you spiritual immortality; that's not a big problem, because the spiritual element in you is already immortal.
He used to say, "I am doing the real thing. The physical body, which is not immortal, I am going to make it immortal." And one day he died...

The chief disciple, "the Mother" of the Sri Aurobindo ashram, finally found a solution to it. She said, "He is not dead, he has gone into deep samadhi, the deepest that anyone has ever gone. He will wake up again - he is simply asleep."

So they made a marble grave for him, with all the comforts, because he was just sleeping and one day he was going to wake up...Then years passed, but he did not knock from the grave. People started suspecting, but the mother was over ninety, and she was still preaching physical immortality...



Then one day she died. And it was very difficult for the believers, because the believers had some investment; their investment was their own immortality...


I said, "But how long will it take? By that time you will all be dead! Even if they come.... You just go and open the grave, and you will know that it is no longer sleep. There are only skeletons, stinking of death, not the fragrance of immortality.


ಹಾಗೆಂದ ಮಾತ್ರಕ್ಕೆ ಇಂತಹಾ ಚೇಷ್ಟೆಗಳಲ್ಲಿ ಓಶೋ ಹಿಂದೆಬಿದ್ದಿಲ್ಲ.ಇವರ “ಫ್ರಂ ಸೆಕ್ಸ್ ಟು ಸೂಪರ್ಕಾಂಕ್ಶಿಯಸ್”ಎಂಬ ಪುಸ್ತಕದಲ್ಲಿ ಬ್ರಹ್ಮಚರ್ಯದ ಬಗ್ಗೆ ಸನಾತನಿಗಳ ನಂಬಿಕೆಯನ್ನ ಲೇವಡಿ ಮಾಡುವ ಈತ “ಬುಕ್ ಆಫ್ ಮೆಡಿಟೆಷನ್ “ನಲ್ಲಿ (ಇದು ವಿಜ್ಞಾನ ಭೈರವ ತಂತ್ರಕ್ಕೆ ಇವನ ಭಾಷ್ಯ) ಲೈಂಗಿಕ energy ಯಾವ ರೀತಿ ತಲೆಗೆ ಏರಿ ಓಜಸ್ ಆಗುತ್ತದೆ ಎಂಬುದನ್ನ ರಸವತ್ತಾಗಿ ವರ್ಣಿಸುತ್ತಾನೆ. ಯಾವುದು ಸರಿ?ಯಾವುದು ತಪ್ಪು?.

 
ಇಂತಹ ವಿರೋಧಾಭಾಸಗಳು ಹೆಚ್ಚಿನ ಸಂತರಲ್ಲಿ ಕಂಡುಬರುತ್ತದೆ. ಅವರನ್ನೇ ಕೇಳಿದರೆ ಏನಾದರೂ ಉಡಾಫೆ ಉತ್ತರ ಕೊಡುತ್ತಾರೆ.ಇವರು ಎನೆಂದರೂ ಅವರ ಶಿಷ್ಯರು ಚಪ್ಪಾಳೆ ಹೊಡೆಯುತ್ತಾರೆ.ನಂತರ ಶಿಷ್ಯರೇ ಅದಕ್ಕೊಂದು ಅರ್ಥ ಕಟ್ಟಿ ಭಾಷ್ಯ ಬರೆಯುತ್ತಾರೆ.


ಇವರ ಸಂಭಾಷಣೆಗಳು ಯಾವಾಗಲೂ ಅಸಂಬದ್ದವಾಗಿರುತ್ತವೆ. ಈ ತತ್ವಜ್ಞಾನಿಗಳು ಇನ್ನೂ ಚೊರೆ...ಅವರದು ತಲೆಕೆಡಿಸುವ ತಂತ್ರ.ಉದಾ:ನಿಷ್ಷ್ಯಬ್ದವನ್ನ ಆಲಿಸು....ಮೌನದೊಂದಿಗೆ ಮಾತನಾಡು...ಅಸ್ತಿತ್ವವೇ ದೇವರು...ಮುಂತಾದ ಅಪ್ರಾಯೋಗಿಕ ವಿಷಯಗಳ ಬಗ್ಗೆ ಪುಟಗಟ್ಟಲೆ ಬರೆಯುತ್ತಾರೆ....ಪುಸ್ತಕಕ್ಕೆ ಹಾಕಿದ ದುಡ್ಡು ಹೇಗೂ ವೇಷ್ಟಾಗೊದಲ್ಲದೆ ತಲೆನೋವಿನ ಮಾತ್ರೆಗೆ ಇನ್ನಷ್ಟು ಖರ್ಚಾಗುತ್ತದೆ. ಜೊತೆಗೆ ಇಂತಹ ಅಸಂಬದ್ದ ವಿಚಾರಗಳನ್ನು ಪರಸ್ಪರ ಕೊರೆದುಕೊಳ್ಳಲು “ಸತ್ಸಂಗಗಳು” ಎಂದು ಮಾಡಿಕೊಳ್ಳುತ್ತಾರೆ. ಬೇರೆ ಬೇರೆ ಗುರುಗಳದೂ ಬೇರೆ ಬೇರೆ ಸಂಘಗಳಿವೆ. ಇವರೆಲ್ಲರನ್ನೂ ಒಂದೇ ಸಂಘಕ್ಕೆ ಸೇರಿಸಿದರೆ ಹೊಡೆದಾಟವೇ ಆಗಬಹುದು!..ಯಾಕೆಂದರೆ ಎಲ್ಲರಿಗೂ ಅವರ ಮಾರ್ಗವೇ ಸರಿ ಅಲ್ಲವೇ. ಯೆಲ್ಲದಕ್ಕೋ ಇಲ್ಲಿ ಗುರು ಸಿಗುತ್ತಾರೆ. ಅವರ ಫಿ ಕಟ್ಟಲು ಮತ್ತು ನಂಬಿ ಕೆಡಲು ನೀವು ತಯಾರಿರಬೇಕಷ್ಟೇ.



ಹೌದು ಸ್ವಾಮೀ, ಕೆಲವು ಗುರುಗಳು ಬೋದಿಸುವ ವಿದ್ಯೆಗಳು ಒಂದೇ ,ಯರಡೆ?, ನಾನು ಚಿಕ್ಕವನಿದ್ದಾಗ ತುಂಬಾ ತೆಳ್ಳಗಿದೆ. ಯಾರೋ ಹೇಳಿದರು,ಹಠ ಯೋಗ ಮಾಡು, ಬರೀ ದಪ್ಪಗೆ ಆಗುವುದೇನು ಮಹಾ, ಅಷ್ಟ ಸಿದ್ದಿಗಳೂ ಸಿಗುತ್ತವೆ’ಎಂದರು. ಹಠ ಯೋಗ ಮಾಡಿ ಸಿದ್ದಿ ಪಡೆದರೆ ಚಠ ಬೋಗ ಗಳನ್ನೆಲ್ಲಾ ಸುಲಭವಾಗಿ ಈಡೇರಿಸಿಕೊಳ್ಳಬಹುದಲ್ಲಾ ಎಂದುಕೊಂಡು ಯೋಗ ಕ್ಲಾಸ್ ಸೇರಿದೆ. ಅಲ್ಲಿಯ ಗುರು ಯಾವಾಗ ನೋಡಿದರೂ ಬಲಕ್ಕೆ ವಾಲಿಕೊ೦ಡೋ,ಎಡಕ್ಕೆ ವಾಲಿಕೊಂಡೋ, ತಲೆಮೇಲೆ ನಿಂತುಕೊಂಡೋ ಇರುತಿದ್ದ. ಇವನು ಯೋಗ ಮಾಡುವ ಫೋರ್ಸ್ ನೋಡಿ, ಇವ ಕಮ್ಮಿಯೆಂದರೂ ಒಂದು ಸಾವಿರ ವರ್ಷ ಬದುಕುತ್ತಾನೆ ಎಂದುಕೊಂಡೆ. ಮೊನ್ನೆ ಪೇಪರ್ ನಲ್ಲಿ ನೋಡುತ್ತೇನೆ, ಅವನು ತೊಂಬತ್ತಕ್ಕೆ ಡಮಾರ್. ಅವನ ಪ್ರಾಯದ ಜಿಮ್ಮಿ ಕಾರ್ಟರ್ ವಿಸ್ಕಿ ಕುಡುಕೊಂಡು ಆರಾಮಾಗಿದ್ದಾನೆ.....


ಅಧ್ಯಾತ್ಮಿಕ ಜಗತ್ತಿನ ಮೇಲಿನ ನನ್ನ ಅಸಂಖ್ಯ ಆರೋಪಗಳು ಇನ್ನೂ ಅಪೂರ್ಣವಾಗಿರುವ ಕಾರಣ ಈ ಲೇಖನ ಇನ್ನೂ ಮುಂದುವರೆಯುತ್ತದೆ.


No comments: