ಕನಕ ಜಯಂತಿಯನ್ನು ದಿ :24-11-1010 ರಂದು ರಾಜ್ಯಾದ್ಯಂತ ಆಚರಿಸಲಾಯಿತು. ಇದರ ಆಚರಣೆಯ ಸಂಭಂದವಾಗಿ ಹಾಕಲಾದ ಬಿತ್ತಿ ಫಲಕಗಳಲ್ಲಿ ಹಾಗು cut out ಗಳಲ್ಲಿ ಕುರುಬ ಜನಾಂಗದ ಹಿರಿ -ಕಿರಿ ನಾಯಕರುಗಳೇ ರಾರಾಜಿಸುತ್ತಿರುವುದನ್ನು ನಾವೆಲ್ಲರೂ ನೋಡಿದೆವು. ಯಾರಿಗೂ ಆಶ್ಚರ್ಯ ಆಗಲಿಲ್ಲ. ಕಾರಣ ಕನಕದಾಸ ಕೂಡ ಕುರುಬ ಜನಾಂಗದಲ್ಲಿ ಹುಟ್ಟಿದವನು. ಆದರೆ ಇಂದು ಕನಕದಾಸ ಕುರುಬ ಜನಾಗಕ್ಕೆ ಅಪ್ರಸ್ತುತ. ಆತನ ಹಿರಿಮೆ ಏನು? ಒಬ್ಬ ಕವಿ ಎಂದೆ?. ಹಾಡುಗಾರ ಎಂದೆ?.
ಶ್ರೀ ಕನಕದಾಸರು (೧೫೦೯-೧೬೦೯) ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪ೦ಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕವಿಗಳು.
ಕನಕದಾಸರು ಸುಮಾರು ೨೦೦ ಕೀರ್ತನೆಗಳನ್ನು ರಚಿಸಿ ಹಾಡಿದ್ದಾರೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:
ಮೋಹನತರ೦ಗಿಣಿ (ಕೃಷ್ಣ ಚರಿತೆ)
ನಳಚರಿತ್ರೆ
ರಾಮಧಾನ್ಯಚರಿತೆ
ಹರಿಭಕ್ತಿಸಾರ
ನೃಸಿ೦ಹಸ್ತವ (ಉಪಲಬ್ದವಿಲ್ಲ)
ಇವರಿಗೆ ಮಾದ್ವಾಚಾರ್ಯರ ಭೋಧನೆಯ ಯಾವ ಅಂಶ ಇಷ್ಟವಾಯಿತು ಗೊತ್ತಿಲ್ಲ. ಆದರೆ ಇವರು ಮಧ್ವ ಪರಂಪರೆಯ ಶ್ರೀ ವ್ಯಾಸರಾಯರನ್ನು ಗುರುವಾಗಿ ಸ್ವೀಕರಿಸಿದರೆಂದು ಚರಿತ್ರೆಯಲ್ಲಿ ಹೇಳಲಾಗಿದೆ.
ಕನಕದಾಸರು ಇಂದು ಪ್ರಚಾರಕ್ಕೆ ಬಂದಿರುವುದು ಆತ ಒಬ್ಬ ಸಂತ ಎಂಬ ಕಾರಣಕ್ಕೆ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಆತ ಎಲ್ಲಾ ಕುರುಬರಂತೆ ಇರಲಿಲ್ಲ ಎಂಬ ಕಾರಣಕ್ಕಾಗಿ. ಇಂದು ಅವನ ಜಯಂತಿಯ ಆಚರಣೆಯ cut out ನಲ್ಲಿ ಮಿಂಚುತ್ತಿರುವ ಜನಗಳ್ಯಾರೂ ಅವನಂತೆ "ದಾಸ"ನಾಗಿಲ್ಲ. ಹಾಗಾಗಿ ಒಂದರ್ಥದಲ್ಲಿ ಆತ converted ಕುರುಬ. ಆತನ ಬದುಕನ್ನು ಮತ್ತೆ ಮತ್ತೆ ಹೈ ಲೈಟ್ ಮಾಡುವ ಮೂಲಕ ಎಲ್ಲರೂ ಕನಕದಾಸ ನಂತಾಗಿ ಎಂಬ ಮೆಸೇಜ್ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ.
ಕನ್ನಡ ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ ನೀಡಿರುವ ಕನಕದಾಸ ಆದರಣೀಯರು ಎಂಬುದು ಸತ್ಯವಾದರೂ ಅವರು ಅನುಕರಣೀಯರಲ್ಲ ಎಂಬುದನ್ನು ನಾವು ಅರಿಯಬೇಕಾಗಿದೆ. ಆದರೆ ಈ ಸಮಾರಂಭದ ಅಧ್ಯಕ್ಷತೆ ವಹಿಸುವ ಪ್ರತಿಯೊಬ್ಬ ಗಣ್ಯರು ಕುರುಬರೆಲ್ಲಾ ಕನಕರನ್ನು ಅನುಕರಿಸುವಂತೆ ಕರೆ ನೀಡುತ್ತಾರೆ.!
"ಕುರುಬರೇ,ನಿಮ್ಮ ಲೈಫ್ ಸ್ಟೈಲ್ ಸರಿ ಇಲ್ಲ.ನಿಮ್ಮ ಆಹಾರ ಪದ್ಧತಿ ಸರಿ ಇಲ್ಲ. ನೀವೆಲ್ಲರೂ "ದಾಸ" ರಾಗಿ ಉದ್ದಾರವಾಗಿ"ಎಂಬರ್ಥದಲ್ಲಿ ಮಾತಾಡುವ ಸರ್ಕಾರದ ಹೆಡ್ ಎಡ್ಡಿ ಯೇ (ಯೆಡಿಯೂರಪ್ಪನೆ) ಕನಕ ಜಯಂತಿಯಂದು ದೆಹಲಿಯ ಪಾರ್ಟಿ ಮುಖ್ಯಸ್ತರ ಮುಂದೆ ಅಧಿಕಾರ ಉಳಿಸಿಕೊಳ್ಳಲು ತಿಪ್ಪರಲಾಗ ಹಾಕುತಿದ್ದ. ಗುರುಗಳ ಗುಲಾಮನಾಗುವ ತನಕ ದೊರೆಯದಲ್ಲ ಮುಕುತಿ ಎಂದು ಯಾರೋ ಹೇಳಿದ್ದಾರೆ,ಅದು ಕನಕರೋ,ಪುರಂದರರೋ,ಇನ್ನ್ಯಾರೋ ನನಗೆ ಗೊತ್ತಿಲ್ಲ.ಆದರೆ ಮಾಧ್ವರ ಮಠಕ್ಕೆ ಅಡ್ಡ ಬೀಳುವುದರಿಂದ ನಿತ್ಯನಾರಕಿಗಳ ಪಂಗಡಕ್ಕೆ ಯಾವ ರೀತಿ ಮುಕ್ತಿ ಸಿಗುತ್ತದೋ ಆ ಕಾಗಿನೆಲೆ ಆದಿಕೇಶವರಾಯನಿಗೇ ಗೊತ್ತು!.
ಇದ್ದುಬದ್ದುದನ್ನೆಲ್ಲ ಬಿಟ್ಟು ಉಡುಪಿ ಮಠಕ್ಕೆ ಅಡ್ಡ ಬಿದ್ದ ಕನಕದಾಸರ ಮಾದರಿಯನ್ನು ಯೆಡಿಯೂರಪ್ಪನೆ ಏಕೆ ಪಾಲಿಸಬಾರದಿತ್ತು?.
ಕನಕದಾಸರು ತನ್ನ ಶ್ರೀಮಂತಿಕೆಯನ್ನು ಬಿಟ್ಟು ದಾಸರಾದರು.ಆದರೆ ಯೆಡಿಯೂರಪ್ಪನವರು ಏನೇ ಆದರೂ ಅಧಿಕಾರ ತ್ಯಾಗಮಾಡುವುದಿಲ್ಲ ಎಂದು ಹೇಳಿದ್ದಾರೆ.ಇರಲಿ ,ಇವರದೊಂಥರಾ ಸೂ ಸೂ ....ಸೂ..ಸೂಯೋಧನನ ಛಲ!. very good.
ಹೀಗಂದಮಾತ್ರಕ್ಕೆ ಅವರು ಯಾವುದೇ ತ್ಯಾಗ ಮಾಡಿಲ್ಲ ಎಂದರ್ಥವಲ್ಲ. ಆತ ಬೇಕಾದಷ್ಟು ತ್ಯಾಗ ಮಾಡಿದ್ದಾರೆ. ಅಧಿಕಾರ ಕಿತ್ತುಕೊಳ್ಳಬೇಡಿ.ಬೇಕಾದರೆ ನನ್ನ ಮಕ್ಕಳನ್ನು,ಬಂಧು ಬಳಗವನ್ನು ದೂರ ಇಡುತ್ತೇನೆ ಎಂದು ಹೇಳಿದ್ದಾರೆ.ಇದೂ ಒಂದು ರೀತಿಯ ತ್ಯಾಗವೇ ತಾನೇ?. ಒಂದು ರೀತಿಯಲ್ಲಿ ಎಡ್ಡಿ ಕನಕದಾಸರನ್ತೆಯೇ ಎಂದಾಯಿತು. ಅಷ್ಟು ಅಧಿಕಾರ ಇದ್ದರೂ,ಲಿನ್ಗಾಯಿತರಾದರೂ ಎಡ್ಡಿ ಉಡುಪಿ ಮಠದ ಗುಲಾಮರಂತೆ ವರ್ತಿಸುತಿದ್ದಾರೆ. ಕನಕದಾಸರು ಕೂಡ ಅಷ್ಟೆಲ್ಲ ಜ್ಞಾನ ಸಂಪಾದಿಸಿದ್ದರೂ, ಸಾಕ್ಷಾತ್ಕಾರ(?) ಪಡೆದಿದ್ದರೂ ಉಡುಪಿ ಮಠಕ್ಕೆ ನಿಷ್ಠೆಯಿಂದ ನಡೆದು ಕೊಳ್ಳುತಿದ್ದರು. ಹುಟ್ಟಿನಿಂದ ಬ್ರಾಹ್ಮಣರಾಗಿರದ ಕನಕರು ನಿತ್ಯನಾರಕಿಗಳ ಕೆಟಗರಿಗೆ ಸೇರುತ್ತಾರಾ ಎಂಬುದು ಚರ್ಚಾರ್ಹ. ಒಟ್ಟಾರೆ ಇಬರಿಬ್ಬರ ನಡುವೆ ಇಷ್ಟು ವ್ಯತ್ಯಾಸ ಇದ್ದರೂ ಸಾಮ್ಯತೆಯ ಕೊ0ಡಿಯೊಂದು ಗೋಚರವಾಗುತ್ತದೆ.ಶ್ರೀ ರಾಮಕೃಷ್ಣರು ಹೇಳುವಂತೆ ಎಲ್ಲರೂ ಹುಚ್ಚರೆ. ಕೆಲವರಿಗೆ ಅಧಿಕಾರದ ಹುಚ್ಚು.ಕೆಲವರಿಗೆ ಹೆಣ್ಣಿನ ಹುಚ್ಚು.ಕೆಲವರಿಗೆ ಮಣ್ಣಿನ ಹುಚ್ಚು,ಕೆಲವರಿಗೆ ದೇವರ ಹುಚ್ಚು.". ಒಟ್ಟಾರೆ ಜಗತ್ತು ಹುಚ್ಚರ ಸಂತೆ. ಕನಕದಾಸರ ಹುಚ್ಚು ಸ್ವಲ್ಪ ಕಡಿಮೆ ಅಪಾಯಕಾರಿ.ಆ ಕಾರಣಕ್ಕಾಗಿಯೇ ಕನಕ ವಂದ್ಯಾರ್ಹ.ಎಡ್ಡಿ ನಿಂದ್ಯಾರ್ಹ!.
No comments:
Post a Comment