Friday, October 29, 2010

ಸೂಫಿವಾದ

ಈ ಸೂಫಿ ಸಂತರ ಬಗ್ಗೆ ಪುಟಗಟ್ಟಲೆ ಗುಣಗಾನ ಮಾಡಲಾಗಿದೆ. ಅದರಲ್ಲಿ ಒಂದಿಷ್ಟು ಓದಿ ಆಮೇಲೆ ಅದನ್ನು “ನವ್ಯಾಂತ” ದೃಷ್ಟಿಕೋನದಿಂದ ಪರಿಶೀಲಿಸಿದ ನಂತರ ನನಗೆ ಸೂಫಿಗಳ ಬಗ್ಗೆ ಅನ್ನಿಸಿದ್ದನ್ನು ಒಂದೆರಡು ಲೈನಲ್ಲಿ ಬರೆಯಬೇಕು ಅನ್ನಿಸಿದೆ. ಭಾರತದಲ್ಲಿ ಬಿಟ್ಟರೆ ವಿಶ್ವದ ಇನ್ನ್ಯಾವುದೇ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಸೂಫಿಗಳಿಗೆ ಅಂತಹ ಗೌರವ ಇಲ್ಲ. ಕಟ್ಟಾ ಇಸ್ಲಾಮಿಕ್ ಆಚರಣೆಗಳಿಗೆ ಹೆಸರಾಗಿರುವ ದೇಶಗಳಲ್ಲಿ ಸೂಫಿ ಸಂತರಿಗೆ ನಾಲ್ಕಾಣೆ ಬೆಲೆ ಇಲ್ಲ. ಇವರ ಕಾರ್ಯಕ್ಷೇತ್ರವೇನಿದ್ದರೂ ಬಾರತ,ಉತ್ತರ ಆಫ್ರಿಕಾ ದಂತಹಾ ಬೆರಕೆ ಧಾರ್ಮಿಕ ನಂಬಿಕೆ ಹೊಂದಿರುವನ್ತಹಾ ದೇಶಗಳು. ಇದು(ಸೂಫಿವಾದ) ಕೂಡ ಬೆರಕೆ ವಿಚಾರಧಾರೆಯೇ. ಆದುದರಿಂದಲೇ ಇದನ್ನು ಚಿಂತಕರು ಹಾಡಿ ಹೊಗಳುವುದು.



ಆದರೆ ಇವರು ಇಸ್ಲಾಂನವರು ಎಂದು ಹೇಳಿಕೊಂಡು ಇಸ್ಲಾಮ್ಗೆ ಇಷ್ಟು ದೂರವಾದ ಬೆರಕೆ ಚಿಂತನೆಗಳನ್ನು ಏತಕ್ಕೆ ತಮ್ಮದಾಗಿಸಿಕೊಂಡರು?


ಸೂಫಿವಾದ ಎಂಬುದು ಭಾರತದಂತ ದೇಶಗಳಿಗೆ ಏಕೆ ಸೀಮಿತವಾಗಿದೆ? ಎಂಬ ಬಗ್ಗೆ ಚಿಂತಿಸುವ ಅನಿವಾರ್ಯತೆ ಇದೆ. ಸೂಫಿವಾದ ಇಸ್ಲಾಂಗಿಂತಾ ಹಿಂದಿನದು ಎಂದು ಕೆಲವರು ವಾಸಿಸುವುದುಂಟು.ಇಸ್ಲಾಂ ಹುಟ್ಟುವುದಕ್ಕೆ ಮುನ್ನ ಅರೇಬಿಯಾ,ಇರಾನ್ ಮುಂತಾದ ಕಡೆ ಬೌದ್ಧ,ಹಿಂದೂ,ಪಾರಸಿಕ ಮತ್ತಿತರ ಲೋಕಲ್ ನಂಬಿಕೆಗಳು ಪ್ರಚಲಿತವಾಗಿತ್ತು.ಇವುಗಳನ್ನು ಅನುಸರಿಸುವ ಸಾದು ಸಂತರು,ಬಿಕ್ಷುಗಳು,ಆರಾಧಕರು ಅಲ್ಲಿ ತಮ್ಮ ಸಾಧನೆ ಮಾಡಿಕೊಂಡಿದ್ದರು. ಇಸ್ಲಾಂ ಬಂದ ಮೇಲೆ ಎಲ್ಲರೂ ಮತಾಂತರ ಹೊಂದಿದಾಗ ಸಮಾಜದಿಂದ ಹೊರಗಿದ್ದ ಅವರು ಹೆಚ್ಚು ತಕರಾರು ಮಾಡದೆ ಮುಖ್ಯವಾಹಿನಿಯಲ್ಲಿ ಬೆರೆತು ತಮ್ಮ ಧಾರ್ಮಿಕ ಅಭ್ಯಾಸಗಳನ್ನು ಕೆಲವು ಬದಲಾವಣೆಗಳೊಂದಿಗೆ ಮುಂದುವರೆಸಿದರು. ನಂತರದ ದಿನಗಳಲ್ಲಿ ಅವರು ಸಂಪೂರ್ಣವಾಗಿ ಇಸ್ಲಾಂ ನ ಭಾಗವಾಗಿ ಹೋದರು. ಕ್ರಮೇಣ ಅದು ಅಲ್ಲಿ ಮಹತ್ವ ಕಳೆದುಕೊಳ್ಳುತ್ತಾ ಬಂತು. ಆ ನಂತರ ಭಾರತಕ್ಕೆ ದಾಳಿಕೋರರೊಂದಿಗೆ ಬಂದು ಇಲ್ಲೇ ಜಾಂಡ ಊರಿದ ಕೆಲವು ಮಂದಿ ಭಾರತದಲ್ಲಿ ಈ ನವ ಸೂಫಿವಾದದ ಪ್ರವರ್ತಕರಾದರು. ಇದರ ಮೂಲವನ್ನು ಅವರು ಅರೇಬಿಯಕ್ಕೆ,ಪ್ರವಾದಿಗೆ ಜೋಡಿಸುತ್ತಾರಾದರೂ ಅದು ಕಟ್ಟುಕತೆ ಎನಿಸುತ್ತದೆ. ಇದು ಭಾರತಕ್ಕಾಗೆ ತಯಾರಿಸಲಾದ ಸರಕು.ಅಲ್ಲಿ ಸಲ್ಲದ ಸೂಫಿಗಳು ಇಲ್ಲಿ ಸಂದರು.ಯಾಕೆಂದರೆ ಇಲ್ಲಿ ಅದರ ಪ್ರಚಾರಕ್ಕೆ ತಕ್ಕ ಪರಿಸರವಿತ್ತು. ಹನ್ನೊಂದನೇ ಶತಮಾನದಲ್ಲಿ ತುರ್ಕರು ಇಲ್ಲಿಗೆ ಬಂದಾಗ ಭಾರತೀಯ ಸಮಾಜ ಬಹಳ ಸಂಕೀರ್ಣವಾಗಿತು. ಈ ಸಮಾಜದೊಂದಿಗೆ ಸಂವಾದ ಬೆಳೆಸುವುದು ಅಷ್ಟು ಸುಲಭವಾಗಿರಲಿಲ್ಲ.ಅಲ್ಬೇರುನಿ ಹೇಳುವಂತೆ “ಭಾರತೀಯರು ಹೊರಗಿನವರೊಂದಿಗೆ ಸುಲಭವಾಗಿ ಯಾವುದೇ ವಿಚಾರವನ್ನು ಹಂಚಿಕೊಳ್ಳುವುದಿಲ್ಲ. ಇತರರನ್ನು ತಮ್ಮ ನಡುವೆ ಬರಗೊಡುವುದಿಲ್ಲ.”.....ಇತ್ಯಾದಿ.


ಆದರೆ ಬೈರಾಗಿಗಳು,ಸಾಧು ಸಂತರುಗಳಿಗೆ ಅವರು ಬಹಳ ಗೌರವ ನೀಡುತಿದ್ದರು. ಕೆಲವು ಬುದ್ದಿವಂತ ಮುಲ್ಲಾಗಳು ಇದನ್ನು ಅರಿತು ತಾವೂ ಕೂಡ ಇಸ್ಲಾಂ ಧರ್ಮಕ್ಕೆ ಸೇರಿದ್ದ ಬೈರಾಗಿಗಳು ಎಂಬ ಸೋಗು ಹಾಕಲಾರಮ್ಬಿಸಿದರು. ಲೋಕಲ್ ಸಂತರಂತೆ ನಕಲಿ ಪವಾಡಗಳನ್ನು ಮಾಡಿ ಜನರನ್ನು ಮರುಳುಗೊಳಿಸಲು ಆರಂಬಿಸಿದರು. ಇಲ್ಲಿನ ಲೋಕಲ್ ಸಂತರೊಂದಿಗೆ ಸೇರಿ ಅವರ ಟೆಕ್ನಿಕ್ ಗಳನ್ನು ಕರಗತ ಮಾಡಿಕೊಂಡರು. ಇವರುಗಳು ಭಕ್ತಿ ಸಂತರೊಂದಿಗೆ ಸಂವಾದಗಳನ್ನು ನಡೆಸಿದ್ದು, ಯೋಗಿಗಳೊಂದಿಗೆ ಸೇರಿ ಅವರ ಕೆಲವು ಅಭ್ಯಾಸಗಳನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿದ್ದು, ನಾಥಪಂಥದ ಸಂತರೊಂದಿಗೆ ಓಡಾಡಿದ್ದು...ಮುಂತಾದವು ನಮ್ಮ ಇತಿಹಾಸದಲ್ಲಿ ಬಹು ಚರ್ಚಿತವಾಗಿವೆ. ********ಎಂಬುವವನು ಕೃಷ್ಣನ ಆರಾಧಕನಂತೆ!.***೮***** ಪಂಥದವರು  ಪ್ರಾಣಾಯಾಮವನ್ನು ಹೋಲುವ ಉಸಿರಾಟದ ಕ್ರಿಯೆಗಳನ್ನು ತಮ್ಮ ಸಾಧನೆಯಲ್ಲಿ ಅಳವಡಿಸಿಕೊಂಡಿದ್ದರ೦ತೆ!. ಇನ್ನೊಬ್ಬ ಸೂಫಿ ಸಂತ ಹಲವು ದಿನ ತಲೆಕೆಳಗೆ ಕಾಲುಮೇಲೆ ಮಾಡಿ ಜಂತಿಗೆ ಕಟ್ಟಿಕೊಂಡು ಹಲವುದಿನ ತೂಗಾಡಿಸಿಕೊಂಡಿದ್ದನಂತೆ! (ಈ ವಿಧಾನವನ್ನು ಹಿಂದೂ ಅಧ್ಯಾತ್ಮಿಕ ಸಾಧನೆಯಲ್ಲಿ ಊರ್ಧ್ವಮುಖಿ ಯೋಗ ಎಂದು ಕರೆಯುತ್ತಾರೆ).ಇನ್ನೊಬ್ಬ ವೃತ್ತಿಯಿಂದ ಕಟುಕನಂತೆ. ಆದರೂ ಸಂತನಂತೆ ಜೀವನ ನಡೆಸುತಿದ್ದನಂತೆ!. ಚಿಸ್ತಿ ಪಂಥದವರು ಬಡತನವನ್ನು ಆಯ್ದು ಕೊಂಡರೆ ಸುಹಾರ್ವರ್ದಿ ಪಂಥದವರು ಬಹಳ ವೈಭವೋಪೇತ ಜೀವನ ಶೈಲಿಯನ್ನು ಆಯ್ದು ಕೊಂಡಿದ್ದರು. ಇವನೆಲ್ಲಾ  ಪಂಡಿತರು ಧಾರ್ಮಿಕ ಮಹಾಸಂಗಮವೆಂದು ವರ್ಣಿಸಿದ್ದಾರೆ. ವಾಸ್ತವವಾಗಿ ಇವರು ಸ್ಥಳೀಯ ಧಾರ್ಮಿಕ ಜಗತ್ತಿನೊಂದಿಗೆ ಸಂಬಂಧ ಬೆಳೆಸಿದ್ದು ಇವರ ವಂಚನೆಯ ವಿಧಾನಗಳನ್ನು ಕಲಿಯುವ ಉದ್ದೇಶಗಳಿಂದ. ಸಂತರ ಹಾವ ಭಾವಗಳು, ನಕಲಿ ಪವಾಡಗಳು, ಸ್ಥಳ ಮಹಾತ್ಮೆ ಗಳೆನ್ನುವ ಲೋಕಲ್ ಕಟ್ಟು ಕಥೆಗಳು, ಗಿಮಿಕ್ಕ್ ಗಳು, ದಾನ-ಧರ್ಮ ಮಾಡುವ ಶೈಲಿ,ಮೈ ಮೇಲೆ ದೇವರು ಬರಿಸಿಕೊಳ್ಳುವುದು, ಭಕ್ತಿ ಸಾಹಿತ್ಯದ ಮೂಲಕ ಮೌಡ್ಯ ಬಿತ್ತಿ ಬೆಳೆಸುವ ಕಲೆ ಇತ್ಯಾದಿಗಳನ್ನೆಲ್ಲಾ ಚೆನ್ನಾಗಿ ಅಧ್ಯಯನ ಮಾಡಿ ಅವನ್ನು ಅವರೂ ಶಕ್ಯಾನುಸಾರ ಉಪಯೋಗಿಸತೊಡಗಿದರು. ಇಸ್ಲಾಂನ ಖಡ್ಗ ಪ್ರವೇಶಿಸಲಾಗದ ಸ್ಥಳಗಳನ್ನು ಸೂಫಿಗಳು ಸುಲಭವಾಗಿ ತಲುಪಿದರು. ಇಲ್ಲಿನ ಮುಗ್ಧ ಗ್ರಾಮೀಣ ಜನತೆಯ ಮೇಲೆ ಬಹಳ ಗಾಡವಾಗಿ ಪ್ರಭಾವ ಬೀರಿದರು. ದುಡಿಯದೇ ಸುಲಭವಾಗಿ ಜೀವನ ನಡೆಸುವ ಉದ್ದೇಶದಿಂದ ಕೆಲವು ಬುದ್ದಿವಂತ ವಲಸಿಗರು ಈ ಕೆಲಸ ಆರಂಬಿಸಿದರೂ ರಾಜಾಶ್ರಯ ಪಡೆದನಂತರ “ಮತಾಂತರ” ಇವರ ಮುಖ್ಯ ಕೆಲಸ ವಾಯಿತು. “ದೇವರ ಸೈನ್ಯ” ಆ ಸ್ಥಳ ಪ್ರವೇಶಿಸುವ ಒಂದೆರಡು ವರುಷ ಮೊದಲು ಸೂಫಿಗಳು ಆ ಜಾಗದಲ್ಲಿ ಬಂದು ತಮ್ಮ “ಖಂಖಾ “ಗಳನ್ನು ತೆರೆಯುತಿದ್ದರು. ಉದಾಹರಣೆಗೆ ದಿಲ್ಲಿಯ ಸುತ್ತ ಮುತ್ತಲಿನ ಹಿಂದೂ ಸಾಂದ್ರತೆ ಇರುವ ಪ್ರದೇಶಗಳಲ್ಲಿ ಇವರುಗಳು ವಾಸಿಸತೊಡಗಿದರು. ನಂತರ ಮೆಲ್ಲನೆ ರಾಜಸ್ತಾನ್ ಪ್ರವೇಶಿಸಿದರು. (ರಾಜಸ್ತಾನವನ್ನು ತುರ್ಕರಿಗೆ ಪಶ್ಚಿಮದಿಂದ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಆದರೆ ದಿಲ್ಲಿ ಯಿಂದ ಪ್ರವೇಶಿಸಲು ಸುಲಭವಾದದ್ದು ಈ ಸಂತರ ಕರಾಮತ್ತಿನಿಂದಲೇ.) ಆ ನಂತರ ದಕ್ಷಿಣಕ್ಕೆ ಸೂಫಿವಾದವನ್ನ ತಂದವನು ಮೊಹಮ್ಮದ್ ಬಿನ್ ತೊಗಲಕ್. ಆತ ತನ್ನ ರಾಜಧಾನಿಯನ್ನು ದಕ್ಷಿಣಕ್ಕೆ ಸ್ಥಳಾಂತರಿಸುವ ಉದ್ದೇಶ ಇಟ್ಟುಕೊಂಡಿದ್ದರಿಂದ ದಿಲ್ಲಿಯಲ್ಲಿದ್ದ ಒಂದಿಷ್ಟು ಸೂಫಿಗಳನ್ನು ಹಿಡಿದುಕೊಂಡು ಬಂದು ಇಲ್ಲಿ ಬಿಟ್ಟ. ಇಲ್ಲಿ ಬಹುಮನಿ ಸಾಮ್ರಾಜ್ಯ ಸ್ಥಾಪನೆ ಯಾಗುವಲ್ಲಿ ಸೂಫಿಗಳ ಕೊಡುಗೆಯೂ ಇದೆ.


ಒಟ್ಟಾರೆ ಹೇಳುವುದಾದರೆ ಸೂಫಿವಾದದ ಮುಖ್ಯ ಉದ್ದೇಶ “ಮತಾಂತರ”. ಈ ಉದ್ದೇಶ ೧೦೦% ನೆರವೇರಿದ ಪ್ರದೇಶದಲ್ಲಿ ಸೂಫಿವಾದ ಮಾಯವಾಗುತ್ತದೆ ಎಂಬುದನ್ನು ನಾವು ಪಾಕಿಸ್ತಾನ್ ಮತ್ತು ಆಫ್ಘಾನಿಸ್ತಾನದ ಉದಾಹರಣೆಗಳಿಂದ ತಿಳಿಯಬಹುದು. ಒಟ್ಟಾರೆ ಈ ಪಂಥದ ಒಳ ಮರ್ಮವನ್ನು ಸರಿಯಾಗಿ ಗಮನಿಸದೆ ಮೇಲ್ಮುಖದಲ್ಲಿ ಕಂಡುಬರುವ ತತ್ವ ವಿಚಾರಗಳನ್ನೇ ಅಧ್ಯಯನ ಮಾಡಿ ಅವುಗಳನ್ನು ಉತ್ಪ್ರೇಕ್ಷೆ ಮಾಡಿ ಬರೆಯುವ ಮೂಲಕ ನಮ್ಮ ಚಿಂತಕರು ಮೂಡನಂಬಿಕೆಗಳ ಪ್ರಚಾರಕ್ಕೆ ಸಹಕಾರ ನೀಡುತ್ತಿರುವುದು ವಿಷಾದದ ಸಂಗತಿ.

No comments: