ಸಂಕ್ರಾಂತಿಯ ಶುಭಾಶಯಗಳು . ನಮ್ಮಲ್ಲಿ ಎಳ್ಳು ಬೆಲ್ಲ ಹಂಚುವ ಸಂಪ್ರದಾಯವಿದೆ.ಇದರಲ್ಲಿ ಮೂಡನಂಬಿಕೆ ಇಲ್ಲವೆಂದೂ, ಇವೆಲ್ಲವೂ ಬಹಳ ವೈಜ್ಞಾನಿಕವಾದ ಪದ್ಧತಿಗಳೆಂದೂ ನಮ್ಮ ಶಿಕ್ಷಕರು ನಮಗೇ ಹೇಳುತ್ತಾ ಬಂದಿದ್ದಾರೆ.ಆಯಾ ಋತುಗಳಲ್ಲಿ ದೇಹಕ್ಕೆ ಆಯಾ ಪದಾರ್ಥಗಳ (ಉದಾ: ಎಳ್ಳು) ಅವಶ್ಯಕತೆ ಇರುತ್ತದೆಂದೂ ಅದನ್ನು ನಾವು ತೆಗೆದು ಕೊಳ್ಳುವಂತೆ ಮಾಡಲು ನಮ್ಮ ಹಿರಿಯರು ಹೀಗೆ ಬುದ್ದಿವಂತಿಕೆ ಉಪಯೂಗಿಸಿದ್ದಾರೆಂದೂ ಹೇಳುತ್ತಾರೆ
ಬರೇ ಸುಳ್ಳು .ಈ ಮೂರ್ಖರ ಮಾತು ಕೇಳಿ ನಾನು ಹಲವಾರು ವರ್ಷ ಚಳಿಗಾಲದಲ್ಲಿ ಎಳ್ಳು ಉಪಯೋಗಿಸಿ ನೋಡಿದ್ದೇನೆ,ಬೇರೆಯವರಿಗೂ ತಿನ್ನಿಸಿ ನೋಡಿದ್ದೇನೆ .ಇದರಿಂದ ಅಂತಹ ಪ್ರಯೋಜನವೇನೂ ಇಲ್ಲ.ಬೇಕಾದರೆ ನೀವು ಹಾಗೆ ಮಾಡಿ ನೋಡಿ.ನಂತರ ಮಾತಾಡಿ.
. ಈ ಹಬ್ಬ ಗಳಲ್ಲಿ ತಿನ್ನುವ ಪಾದರ್ಥದ ಮೇಲೆ ಮಾಡುವ ಖರ್ಚುಗಳಲ್ಲದೆ ಕೆಲವು hidden cost ಗಳಿವೆ.ಒಬ್ಬ ರೈತ ತಾನು ವ್ಯವಸಾಯಕ್ಕೆಂದು ಎತ್ತುವ ಸಾಲದಲ್ಲಿ ಮುಕ್ಕಾಲು ಬಾಗ ಈ ಹಬ್ಬ ,ಹರಿದಿನ ,ಮದುವೆ,ಮುಂಜಿ ಗಳಿಗೇ ಖರ್ಚಾಗುತ್ತದೆ.ಕೊನೆಗೆ ಉಳ್ದದ್ದು ನೇಣು ಹಗ್ಗಕೋ ,ವಿಷಕ್ಕೋ ಸಾಕಾಗುತ್ತದೆ.ಕೊನೆಗೆ 'ಅವನು (ಹೆಂಡ)ಕುಡಿದು,ಕುಡಿದು ಸತ್ತ ಎಂದು ಗುಲ್ಲೆಬ್ಬಿಸುತ್ತಾರೆ.ನಿಜವಾಗಲು ನಮ್ಮ ಸಂಪ್ರದಾಯಗಳ ಪಾಲನೆಯಿಂದ ಆಗುವ ಖರ್ಚಿಗಿಂತಾ ಹೆಂಡದ ಖರ್ಚು ತುಂಬಾ ಕಡಿಮೆ! ಇದು ನಮ್ಮ ಸನಾತನ ಹಿರಿಯರ ಬುದ್ದಿವಂತಿಕೆ.( ಆದುದರಿಂದ ನಾನು ಯಾವುದೇ ಹಬ್ಬ ಗಳಲ್ಲಿ ಬಾಗವಹಿಸದೆ ದೂರ ಉಳಿಯಲು ಇಷ್ಟಪಡುತ್ತೇನೆ.ಹಬ್ಬ ಮಾಡಿದರೆ ಮಾಡಿಕೊಳ್ಳಿ ,ನನ್ನನ್ನು ಮಾತ್ರ ಕರೆಯಬೇಡಿ,ಪ್ಲೀಸ್ ). ಇತ್ತೀಚೆಗಂತೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಎಣ್ಣೆ ಪಾರ್ಟಿ ಗಳನ್ನೂ ಇಟ್ಟುಕೊಳ್ಳುತ್ತಾರೆ.ಇದು ಒಂದು ರೀತಿಯ combo offer ಇದ್ದಂತೆ.ಸಾಂಪ್ರದಾಯಿಕ ಆಚರಣೆಗಳತ್ತ ಜನರನ್ನು ಸೆಳೆಯುವ ವಿನೂತನ ಪ್ರಯತ್ನ!. ಎಳ್ಳು,ಬೇವು ಬೀರುವ ನೆಪದಲ್ಲಿ ಅಕ್ಕ ಪಕ್ಕದವರ ಮನೆಗೆ ನುಗ್ಗಿ ಅವರಮನೆಯಲ್ಲಿ ಏನೇನು ಸಾಮಾನು ಇದೆ ಎಂದು ನೋಡಲೂ,ತಮ್ಮ ಹೊಸ ಬಟ್ಟೆ,ಆಭರಣಗಳನ್ನೂ ಅಕ್ಕ ಪಕ್ಕದವರಿಗೆ ಪ್ರದರ್ಶಿಸಿ ಎಲ್ಲರ ಹೊಟ್ಟೆಉರಿಸಲು ಹಬ್ಬಗಳು ಸುವರ್ಣಾವಕಾಶ ಒದಗಿಸುತ್ತವೆ.ಜೊತೆಗೆ ಎಳ್ಳು ಕೊಟ್ಟರೆ "ಋಣ",ಆದುದರಿಂದ ಅವನ್ನು ವಾಪಾಸು ಕೊಡಬೇಕು ಎಂಬ ಪ್ರತೀತಿ ಹಬ್ಬಿಸಲಾಗಿದೆ..ಇದು ತಟಸ್ತ ರಾಗಿರುವವರನ್ನು ಈ ಮೂಡ ಆಚರಣೆಗಳ ಸುಳಿಯಲ್ಲಿ ಸಿಕ್ಕಿಸುವ ಹುನ್ನಾರ!.
ಸಂಕ್ರಾಂತಿಗೆ ದಿಕ್ಕಾರ!
No comments:
Post a Comment