Friday, January 15, 2010

ಗ್ರಹಣದ ಹಿನ್ನೆಲೆಯಲ್ಲಿ......

ಇಂದು ಸೂರ್ಯಗ್ರಹಣ .ನಿನ್ನೆ ಮಕರ ಸಂಕ್ರಾಂತಿ .ಗ್ರಹಣ ಬಿಡುವ ಮುನ್ನ ಊಟ ಮಾಡಬೇಡಿರೆಂದು,ದೇವರ ಪೂಜೆ ಮಾಡಿ ,ಇಲ್ಲದಿದ್ದರೆ ಅಪಾಯವೆಂದು ಹಲವು ಜ್ಯೋತಿಷಿಗಳು ಟೀವಿ ಚಾನೆಲ್ಗಳ ಮೂಲಕ ಜನರಿಗೆ ಕರೆ ಕೊಡುತಿದ್ದಾರೆ. ಈ ಗ್ರಹಣದ ಹಿನ್ನೆಲೆಯಲ್ಲಿ ಒಂದಿಷ್ಟು ಬರೆಯಬೇಕು ಅನ್ನಿಸುತ್ತಿದೆ.
ಹಿಂದೆ ಬ್ರಾಹ್ಮಣರು/ಪಾದ್ರಿಗಳು/ಮುನಿಗಳು/ಸಂತರು ಅಕ್ಷರವನ್ನು ಕಲಿತು ತಾವು ಎಲ್ಲಾ ಬಲ್ಲವರೆಂದು ಮೆರೆಯುತ್ತಿದ್ದರು.ಆಗಲು ಕೆಲವು ಅಧಿಕಪ್ರಸಂಗಿಗಳು ಇವರಿಗೆ 'ಅದು ಹೇಗೆ''ಇದು ಹೇಗೆ'ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅದಕ್ಕೆ ಉತ್ತರ ನೀಡಲು ಈ ಅಕ್ಷರಪಟುಗಳು ಒಂದು ಐಡಿಯಾ ಮಾಡಿದರು.ಅದೇನೆಂದರೆ ಎಲ್ಲವನ್ನು ಬೇರೆ ಬೇರೆ ವಿಧ್ಯೆ ಎಂದು ವಿಂಗಡಣೆಮಾಡಿ ಅವುಗಳನ್ನು ಕ್ರಮಬದ್ದವಾದ ರೀತಿಯಲ್ಲಿ ,ನಂಬಲರ್ಹವಾಗುವಂತೆ ದಾಖಲಿಸುವುದು. ಅದು ಕ್ರಮಪ್ರಕಾರ ಇದೆ ಎಂದಾಗ ಜನ ನಂಬುತ್ತಾರೆ. ಆಗ ಸಂಶಯಗ್ರಸ್ತರಿಗೆ ನಂಬಲರ್ಹ ಸುಳ್ಳುಗಳನ್ನು ಹೇಳಿ ಒಪ್ಪಿಸಬಹುದು.
ಕಾಲ ಬದಲಾಯಿತು.ಜನ ಬ್ರಾಹ್ಮಣರ/ಪಾದ್ರಿಗಳ/ಮುಲ್ಲಾಗಳ ವಿರುದ್ದ ತಿರುಗಿ ಬೀಳುವ ಸೂಚನೆ ಬರತೊಡಗಿದ ಕೂಡಲೇ ಅವರೆಲ್ಲಾ ಇನ್ನೊಂದು ಐಡಿಯಾ ಮಾಡಿದರು. ವಿಶೇಷವಾದ ಜ್ಞಾನ ಭಂಡಾರವನ್ನು ಕಂಡುಹಿಡಿದ ಬ್ರಾಹ್ಮಣರು ಇದನ್ನು ಜನ ಸಾಮಾನ್ಯರಿಂದ ಮುಚ್ಚಿಟ್ಟಿದ್ದರು.ಇಂದು ಕೆಲವು ದಯಾಪರ ಮಹಾತ್ಮರು ಅವುಗಳನ್ನು ಜನರಿಗೆ ನೀಡುತಿದ್ದಾರೆ ಎಂದು ಪುಕಾರು ಹಬ್ಬಿಸಿದರು. ಹೀಗೆ ಅರ್ಧ ಸತ್ಯಗಳಾದ ವಾಸ್ತು, ಜ್ಯೋತಿಷ್ಯ ಮುಂತಾದವು ಜನರ ಮನ್ನಣೆ ಗಳಿಸತೊಡಗಿದವು.ಜನ ಇವುಗಳನ್ನು ವಿಜ್ಞಾನ ಎಂದು ನಂಬತೊಡಗಿದರು. ಕಾಲಕಾಲಕ್ಕೆ ಆಗುವ ವೈಜ್ಞಾನಿಕ ಅವಿಷ್ಕಾರಗಳನ್ನು ಬಹಳ ಜಾಣತನದಿಂದ ಇವುಗಳೊಂದಿಗೆ ಬೆರೆಸರಾಲಮ್ಬಿಸಿದರು. ಅದಕ್ಕೆಂದೇ ಪ್ರಾಚೀನ ಪುಸ್ತಕಗಳನ್ನು ಒಗಟುಗಳಂತೆ ರಚಿಸಲಾಗಿದೆ. ಸಿರಿಭೂವಲಯ ಎಂಬ ಅರ್ಥಹೀನ ಗ್ರಂಥವನ್ನು ಹಿಡಿದು ಕೊಂಡು ಕೆಲವರು ಎಷ್ಟೆಲ್ಲಾ ಆಟವಾಡಿದರು ಎಂದು ಗಮನಿಸಿದರೆ ನಿಮಗೆ ಈ ಪ್ರಾಚೀನ ಗ್ರಂಥಗಳ ಹಿಂದಿರುವ ಕಾರಸ್ಥಾನ ಅರ್ಥವಾಗುತ್ತವೆ.
ಕೊನೆಗೆ "ದೇವರು ಕಾಣುತ್ತಾನೋ"ಎಂಬ ಪ್ರಶ್ನೆ ನೀವೆಸೆದರೆ "ಹಾಗೆಂದಲ್ಲ,ದೇವರು ಎಲ್ಲೆಲೂ ಇದ್ದಾನೆ.ಆದರೆ ಅಲ್ಲಿನ ಶಾಂತಿಯುತ ಪರಿಸರ ನಿಮಗೆ ದೇವರನ್ನು ಫೀಲ್ ಮಾಡಲು ಸಹಾಯಕವಾಗುತ್ತದೆ ಎನ್ನುತ್ತಾರೆ.ಒಂದಿಷ್ಟು ರಂ ಕುಡಿದರೆ ಶಾಂತಿ ಸಿಕ್ಕುತಲ್ಲಾ ಎಂದರೆ ಅದು ತಪ್ಪು,ಅದರಿಂದ ಆರೋಗ್ಯ ,ಹಣ ಎಲ್ಲಾ ಹಾಳು ಎನ್ನುತ್ತಾರೆ. ಅತ್ತ ಉಜ್ಜನಿಯ ಕಾಲ ಬೈರವೇಶ್ವರನಿಗೆ ಹೆಂಡದ ನೈವೇದ್ಯ ನೀಡಲಾಗುತ್ತದೆ.ಅತ್ತ ವಾರಣಾಸಿಯ ದೇಗುಲಗಳ ಜಗಲಿಗಳಲ್ಲಿ ಭಕ್ತರು ಸಾಲಾಗಿ ಕುಳಿತು ಗಾಂಜಾ ಎಳೆಯುತ್ತಾ ದೇವರನ್ನು ಕಾಣುತ್ತಾರೆ. ಈ ಜ್ಞಾನಿಗಳು(?) ಅವೆಲ್ಲಕ್ಕೂ ಒಂದೊಂದು ಕಾರಣನೀಡುತ್ತಾರೆ.ನೀವು ಬೆಳಗ್ಗೆ ಯಾವುದಾದರು ಟೀವಿ ಚಾನೆಲ್ ಹಾಕಿ.ಅಲ್ಲಿ ಕುಳಿತ ದೈವಜ್ಞ ,ಪಂಡಿತ,ಸಂತರು ಅಮಾಯಕ ಜನ ಕೇಳುವ ಪ್ರಶ್ನೆಗಳಿಗೆ ಹೇಗೆ ನಾಚಿಕೆಯೇ ಇಲ್ಲದೆ ಸುಳ್ಳಿನ ಕಂತೆಗಳನ್ನು ಸೃಷ್ಟಿಸುತ್ತಾ ,ಶಾಸ್ತ್ರಗಳ ಉದಾಹರಣೆ ನೀಡುತ್ತಾ ಉತ್ತರ ನೀಡುತ್ತಾರೆ ಎಂಬುದನ್ನು ನೀವು ನೋಡಬೇಕು.
ಇನ್ನು ಕೆಲವರು ಇದ್ದಾರೆ.ಅವರು ಹೇಳುವುದು "ನಾನು ಅದನ್ನೆಲ್ಲಾ ನಂಬುತ್ತೇನೆ ಅಂತಾ ಅಲ್ಲಾ.ಆದರೆ ಸುಲಭವಾಗಿ ಪಾಲಿಸಲು ಸಾಧ್ಯವಾಗುವುದನ್ನು ಪಾಲಿಸುತ್ತೆನಷ್ಟೇ" ಎಂದು !. ಹೀಗೆ ಚಿಕ್ಕ ಚಿಕ್ಕ ಸಂಪ್ರದಾಯಗಳನ್ನು ಪಾಲಿಸುತ್ತಾ ಇರುವವನು ಕಾಲಕ್ರಮೇಣ ದೊಡ್ಡ ದೊಡ್ಡ ಸಂಪ್ರದಾಯಗಳನ್ನು ಪಾಲಿಸುವ ಅನಿವಾರ್ಯತೆಗೆ ಸಿಕ್ಕಿಕೊಳ್ಳುತ್ತಾನೆ.ಸ್ವಲ್ಪ ಸ್ವಲ್ಪ ವಿಷ ತಿನ್ನುವವನು ವಿಷಕ್ಕೆ immune ಆಗುವಂತೆ ಈತ ವಿಚಾರ ಮಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಆದುದರಿಂದ ನಾವು ಈ ಚಿಕ್ಕ ಚಿಕ್ಕ ಬೋನುಗಳಿಂದ ತಪ್ಪಿಸಿಕೊಳ್ಳುತ್ತಾ ಬದುಕಬೇಕಿದೆ, ಮಾತ್ರವಲ್ಲಾ, ಇತರರನ್ನು ಇಂತಹುದಕ್ಕೆ ಬಲಿಪಶುಗಳನ್ನಾಗಿ ಮಾಡುವ ಪ್ರಕ್ರಿಯೆಗೆ ಇಳಿಯದಂತೆ ನಮ್ಮನ್ನು ನಾವು ನಿಗ್ರಹಿಸಿಕೊಳ್ಳಬೇಕಿದೆ.ಕೆಲವು ಸಾರಿ ನಮಗೇ ತಿಳಿಯದಂತೆ ನಾವು ಎಷ್ಟೋ ಸಾರಿ ಈ ಮೂಡನಂಬಿಕೆಗಳ ಪ್ರಚಾರ ಮಾಡುತಿರುತ್ತೇವೆ. ಉದಾ:ಬೇರೆ ಊರಿನ್ದ ಬಂದವರಿಗೆ ನಮ್ಮ ಊರಿನ ಸ್ತಳ ಮಹಾತ್ಮೆ ಹೇಳುವಾಗ, ನಮ್ಮ ಪ್ರಾಚೀನ ದೇಗುಲಗಳ ಐತಿಹ್ಯಗಳನ್ನೂ ಹೇಳುವಾಗ.ನಮ್ಮ ಸಾಂಸ್ಕೃತಿಕ ಉತ್ಸವಗಳಲ್ಲಿ ಪಾರಂಪರಿಕ ಕಲೆಗಳನ್ನು ಪರಿಚಯಿಸುವಾಗ....ಇತ್ಯಾದಿ.
Bastards....ಹೇಗೆ ಎಲ್ಲದರ ಜೊತೆಗೆ ಮೌಡ್ಯವನ್ನು ಬೆರೆಸಿ ಕುಡಿಸಿದ್ದಾರೆ ನಮ್ಮ ಹಿಂದಿನವರು. ನಮ್ಮಲ್ಲಿ ಎಳ್ಳು ಬೀರುವ ,ಬೇವು ಬೆಲ್ಲ ಹಂಚುವ ಸಂಪ್ರದಾಯವಿದೆ.ಇದರಲ್ಲಿ ಮೂಡನಂಬಿಕೆ ಇಲ್ಲವೆಂದೂ, ಇವೆಲ್ಲವೂ ಬಹಳ ವೈಜ್ಞಾನಿಕವಾದ ಪದ್ಧತಿಗಳೆಂದೂ ನಮ್ಮ ಕೆಲವು ಸಂಪ್ರದಾಯಶರಣ ಶಿಕ್ಷಕರು ನಮಗೆ ಹೇಳುತ್ತಾ ಬಂದಿದ್ದಾರೆ. ಆಯಾ ಋತುಗಳಲ್ಲಿ ದೇಹಕ್ಕೆ ಆಯಾ ಪದಾರ್ಥಗಳ (ಉದಾ: ಎಳ್ಳು) ಅವಶ್ಯಕತೆ ಇರುತ್ತದೆಂದೂ ಅದನ್ನು ನಾವು ತೆಗೆದು ಕೊಳ್ಳುವಂತೆ ಮಾಡಲು ನಮ್ಮ ಹಿರಿಯರು ಹೀಗೆ ಬುದ್ದಿವಂತಿಕೆ ಉಪಯೂಗಿಸಿದ್ದಾರೆಂದೂ ಹೇಳುತ್ತಾರೆ. ಈ ಹಬ್ಬ ಗಳಲ್ಲಿ ತಿನ್ನುವ ಪದಾರ್ಥದ ಮೇಲೆ ಮಾಡುವ ಖರ್ಚುಗಳಲ್ಲದೆ ಇನ್ನೂ ಕೆಲವು hidden cost ಗಳಿವೆ. ಒಬ್ಬ ರೈತ ತಾನು ವ್ಯವಸಾಯಕ್ಕೆಂದು ಎತ್ತುವ ಸಾಲದಲ್ಲಿ ಮುಕ್ಕಾಲು ಬಾಗ ಈ ಹಬ್ಬ, ಹರಿದಿನ ,ಮದುವೆ,ಮುಂಜಿಗಳಿಗೇ ಖರ್ಚಾಗುತ್ತದೆ.ಕೊನೆಗೆ ಉಳಿದದ್ದು ನೇಣು ಹಗ್ಗಕೋ ,ವಿಷಕ್ಕೋ ಸಾಕಾಗುತ್ತದೆ.ಕೊನೆಗೆ 'ಅವನು (ಹೆಂಡ)ಕುಡಿದು,ಕುಡಿದು ಸತ್ತ ಎಂದು ಗುಲ್ಲೆಬ್ಬಿಸುತ್ತಾರೆ.ನಿಜವಾಗಲು ನಮ್ಮ ಸಂಪ್ರದಾಯಗಳ ಪಾಲನೆಯಿಂದ ಆಗುವ ಖರ್ಚಿಗಿಂತಾ ಹೆಂಡದ ಖರ್ಚು ತುಂಬಾ ಕಡಿಮೆ! ಇದು ನಮ್ಮ ಸನಾತನ ಹಿರಿಯರ ಬುದ್ದಿವಂತಿಕೆ.( ಆದುದರಿಂದ ನಾನು ಯಾವುದೇ ಹಬ್ಬ ಗಳಲ್ಲಿ ಬಾಗವಹಿಸದೆ ದೂರ ಉಳಿಯಲು ಇಷ್ಟಪಡುತ್ತೇನೆ. ಹಬ್ಬ ಮಾಡಿದರೆ ಮಾಡಿಕೊಳ್ಳಿ ,ನನ್ನನ್ನು ಮಾತ್ರ ಕರೆಯಬೇಡಿ,ಪ್ಲೀಸ್ ). ಇತ್ತೀಚೆಗಂತೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಎಣ್ಣೆ ಪಾರ್ಟಿ ಗಳನ್ನೂ ಇಟ್ಟುಕೊಳ್ಳುತ್ತಾರೆ.ಇದು ಒಂದು ರೀತಿಯ combo offer ಇದ್ದಂತೆ.ಸಾಂಪ್ರದಾಯಿಕ ಆಚರಣೆಗಳತ್ತ ಜನರನ್ನು ಸೆಳೆಯುವ ವಿನೂತನ ಪ್ರಯತ್ನ!. ಎಳ್ಳು,ಬೇವು ಬೀರುವ ನೆಪದಲ್ಲಿ ಅಕ್ಕ ಪಕ್ಕದವರ ಮನೆಗೆ ನುಗ್ಗಿ ಅವರಮನೆಯಲ್ಲಿ ಏನೇನು ಸಾಮಾನು ಇದೆ ಎಂದು ನೋಡಲೂ,ತಮ್ಮ ಹೊಸ ಬಟ್ಟೆ,ಆಭರಣಗಳನ್ನೂ ಅಕ್ಕ ಪಕ್ಕದವರಿಗೆ ಪ್ರದರ್ಶಿಸಿ ಎಲ್ಲರ ಹೊಟ್ಟೆಉರಿಸಲು ಹಬ್ಬಗಳು ಮಹಿಳೆಯರಿಗೆ ಸುವರ್ಣಾವಕಾಶ ಒದಗಿಸುತ್ತವೆ. ಜೊತೆಗೆ ಎಳ್ಳು ಕೊಟ್ಟರೆ "ಋಣ",ಆದುದರಿಂದ ಅವನ್ನು ವಾಪಾಸು ಕೊಡಬೇಕು ಎಂಬ ಪ್ರತೀತಿ ಹಬ್ಬಿಸಲಾಗಿದೆ..ಇದು ತಟಸ್ತ ರಾಗಿರುವವರನ್ನು ಈ ಮೂಡ ಆಚರಣೆಗಳ ಸುಳಿಯಲ್ಲಿ ಸಿಕ್ಕಿಸುವ ಹುನ್ನಾರ!.ಈ ಮೂರ್ಖರ ಮಾತು ಕೇಳಿ ನಾನು ಹಲವಾರು ವರ್ಷ ಚಳಿಗಾಲದಲ್ಲಿ ಎಳ್ಳು ಉಪಯೋಗಿಸಿ ನೋಡಿದ್ದೇನೆ,ಬೇರೆಯವರಿಗೂ ತಿನ್ನಿಸಿ ನೋಡಿದ್ದೇನೆ .ಇದರಿಂದ ಅಂತಹ ಪ್ರಯೋಜನವೇನೂ ಇಲ್ಲ.ಬೇಕಾದರೆ ನೀವು ಹಾಗೆ ಮಾಡಿ ನೋಡಿ.ನಂತರ ಮಾತಾಡಿ.

ಹೀಗೆ ಸಣ್ಣ ಸಣ್ಣ ಪದ್ದತಿಯನ್ನು ಒಪ್ಪಿಕೊಳ್ಳುವ ಮೂಲಕ ನಾವು ದೊಡ್ಡ ವಿಷವರ್ತುಲದಲ್ಲಿ ನಮಗರಿಯದಂತೆ ಪ್ರವೇಶ ಮಾಡುತ್ತೇವೆ.ದೊಡ್ಡ ಬಂಡಿಯನ್ನು ಇಳಿಜಾರಿನಲ್ಲಿ ಜಾರದಂತೆ ತಡೆಯಲು ಒಂದು ಚಿಕ್ಕ ಕಲ್ಲಿನ ತುಂಡು ಸಾಕು. ಹಾಗೆ ಒಂದು ಚಿಕ್ಕ ನಂಬಿಕೆ ನಮ್ಮ ವಿಚಾರ ಮಾಡುವ ಶಕ್ತಿಯನ್ನು ಸಂಪೂರ್ಣವಾಗಿ ನಾಶಮಾಡಬಹುದು. ಎಚ್ಚರಿಕೆ.










Thursday, January 14, 2010

ಸಂಕ್ರಾಂತಿಯ ಶುಭಾಶಯಗಳು

ಸಂಕ್ರಾಂತಿಯ ಶುಭಾಶಯಗಳು . ನಮ್ಮಲ್ಲಿ ಎಳ್ಳು ಬೆಲ್ಲ ಹಂಚುವ ಸಂಪ್ರದಾಯವಿದೆ.ಇದರಲ್ಲಿ ಮೂಡನಂಬಿಕೆ ಇಲ್ಲವೆಂದೂ, ಇವೆಲ್ಲವೂ ಬಹಳ ವೈಜ್ಞಾನಿಕವಾದ ಪದ್ಧತಿಗಳೆಂದೂ ನಮ್ಮ ಶಿಕ್ಷಕರು ನಮಗೇ ಹೇಳುತ್ತಾ ಬಂದಿದ್ದಾರೆ.ಆಯಾ ಋತುಗಳಲ್ಲಿ ದೇಹಕ್ಕೆ ಆಯಾ ಪದಾರ್ಥಗಳ (ಉದಾ: ಎಳ್ಳು) ಅವಶ್ಯಕತೆ ಇರುತ್ತದೆಂದೂ ಅದನ್ನು ನಾವು ತೆಗೆದು ಕೊಳ್ಳುವಂತೆ ಮಾಡಲು ನಮ್ಮ ಹಿರಿಯರು ಹೀಗೆ ಬುದ್ದಿವಂತಿಕೆ ಉಪಯೂಗಿಸಿದ್ದಾರೆಂದೂ ಹೇಳುತ್ತಾರೆ
ಬರೇ ಸುಳ್ಳು .ಈ ಮೂರ್ಖರ ಮಾತು ಕೇಳಿ ನಾನು  ಹಲವಾರು ವರ್ಷ ಚಳಿಗಾಲದಲ್ಲಿ ಎಳ್ಳು ಉಪಯೋಗಿಸಿ ನೋಡಿದ್ದೇನೆ,ಬೇರೆಯವರಿಗೂ ತಿನ್ನಿಸಿ ನೋಡಿದ್ದೇನೆ .ಇದರಿಂದ ಅಂತಹ ಪ್ರಯೋಜನವೇನೂ ಇಲ್ಲ.ಬೇಕಾದರೆ ನೀವು ಹಾಗೆ ಮಾಡಿ ನೋಡಿ.ನಂತರ ಮಾತಾಡಿ.
. ಈ ಹಬ್ಬ ಗಳಲ್ಲಿ ತಿನ್ನುವ ಪಾದರ್ಥದ ಮೇಲೆ ಮಾಡುವ ಖರ್ಚುಗಳಲ್ಲದೆ  ಕೆಲವು hidden cost ಗಳಿವೆ.ಒಬ್ಬ ರೈತ ತಾನು ವ್ಯವಸಾಯಕ್ಕೆಂದು ಎತ್ತುವ ಸಾಲದಲ್ಲಿ ಮುಕ್ಕಾಲು ಬಾಗ ಈ ಹಬ್ಬ ,ಹರಿದಿನ ,ಮದುವೆ,ಮುಂಜಿ ಗಳಿಗೇ ಖರ್ಚಾಗುತ್ತದೆ.ಕೊನೆಗೆ ಉಳ್ದದ್ದು ನೇಣು ಹಗ್ಗಕೋ ,ವಿಷಕ್ಕೋ ಸಾಕಾಗುತ್ತದೆ.ಕೊನೆಗೆ 'ಅವನು (ಹೆಂಡ)ಕುಡಿದು,ಕುಡಿದು ಸತ್ತ ಎಂದು ಗುಲ್ಲೆಬ್ಬಿಸುತ್ತಾರೆ.ನಿಜವಾಗಲು ನಮ್ಮ ಸಂಪ್ರದಾಯಗಳ ಪಾಲನೆಯಿಂದ ಆಗುವ ಖರ್ಚಿಗಿಂತಾ ಹೆಂಡದ ಖರ್ಚು ತುಂಬಾ ಕಡಿಮೆ! ಇದು ನಮ್ಮ ಸನಾತನ ಹಿರಿಯರ ಬುದ್ದಿವಂತಿಕೆ.( ಆದುದರಿಂದ ನಾನು ಯಾವುದೇ ಹಬ್ಬ ಗಳಲ್ಲಿ ಬಾಗವಹಿಸದೆ ದೂರ ಉಳಿಯಲು ಇಷ್ಟಪಡುತ್ತೇನೆ.ಹಬ್ಬ ಮಾಡಿದರೆ ಮಾಡಿಕೊಳ್ಳಿ ,ನನ್ನನ್ನು ಮಾತ್ರ ಕರೆಯಬೇಡಿ,ಪ್ಲೀಸ್ ). ಇತ್ತೀಚೆಗಂತೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಎಣ್ಣೆ ಪಾರ್ಟಿ ಗಳನ್ನೂ ಇಟ್ಟುಕೊಳ್ಳುತ್ತಾರೆ.ಇದು ಒಂದು ರೀತಿಯ combo offer ಇದ್ದಂತೆ.ಸಾಂಪ್ರದಾಯಿಕ ಆಚರಣೆಗಳತ್ತ ಜನರನ್ನು ಸೆಳೆಯುವ ವಿನೂತನ ಪ್ರಯತ್ನ!. ಎಳ್ಳು,ಬೇವು  ಬೀರುವ ನೆಪದಲ್ಲಿ ಅಕ್ಕ ಪಕ್ಕದವರ ಮನೆಗೆ ನುಗ್ಗಿ ಅವರಮನೆಯಲ್ಲಿ ಏನೇನು ಸಾಮಾನು ಇದೆ ಎಂದು ನೋಡಲೂ,ತಮ್ಮ ಹೊಸ ಬಟ್ಟೆ,ಆಭರಣಗಳನ್ನೂ  ಅಕ್ಕ ಪಕ್ಕದವರಿಗೆ ಪ್ರದರ್ಶಿಸಿ ಎಲ್ಲರ ಹೊಟ್ಟೆಉರಿಸಲು ಹಬ್ಬಗಳು ಸುವರ್ಣಾವಕಾಶ ಒದಗಿಸುತ್ತವೆ.ಜೊತೆಗೆ ಎಳ್ಳು ಕೊಟ್ಟರೆ "ಋಣ",ಆದುದರಿಂದ ಅವನ್ನು ವಾಪಾಸು ಕೊಡಬೇಕು ಎಂಬ ಪ್ರತೀತಿ ಹಬ್ಬಿಸಲಾಗಿದೆ..ಇದು ತಟಸ್ತ  ರಾಗಿರುವವರನ್ನು ಈ ಮೂಡ ಆಚರಣೆಗಳ ಸುಳಿಯಲ್ಲಿ ಸಿಕ್ಕಿಸುವ ಹುನ್ನಾರ!.
  ಸಂಕ್ರಾಂತಿಗೆ ದಿಕ್ಕಾರ!

Wednesday, January 13, 2010

ಕೋಪನ್ ಹೇಗನ್ ನಾಟಕ

ಕೋಪೆನ್ಹೇಗನ್ನಲ್ಲಿ ನಡೆದ ಶೃಂಗ ಸಭೆಯಲ್ಲಿ ಏನೂ ಹೊಸದಿಲ್ಲ.ಇಂತಹದು ಹಿಂದೆಯೂ ನಡೆದಿರುತ್ತದೆ. ಮುಂದೆಯೂ ನಡೆಯುತ್ತದೆ. ರಾಜಸ್ತಾನದಲ್ಲಿ "ರುಡಾಲಿ"ಎಂಬ ಜನಗಳಿದ್ದಾರೆ. ಸಾವು ಸಂಬವಿಸಿದ ಮನೆಗೆ ಹೋಗಿ ಅಳುವುದು ಇವರ ಕೆಲಸ. ಇವರ ಅಳು ಬಹಳ ನೈಜವಾಗಿ ಕಾಣುತ್ತದೆ. ಕೊಪೇನ್ಹೇಗನ್ ನಲ್ಲಿ ಇವರು ಮಾಡಿದ್ದೂ ಅದೇ ಕೆಲಸ.ಒಟ್ಟಿಗೆ ಸೇರಿ ಮೊಸಳೆ ಕಣ್ಣೀರು ಸುರಿಸುತ್ತ ಪರಸ್ಪರ ಆರೋಪ ಮಾಡುತ್ತಾ ಕಾಲಕ್ಷೆಪಮಾಡಿದ್ದು. 
ನಮ್ಮ ಸರ್ಕಾರದ ಸೆಕ್ರೆಟರಿಗಳು ನಾ ಮುಂದೆ ,ನೀ ಮುಂದೆ ಎನ್ನುತ್ತಾ ಲಾಬ್ಬಿ ಮಾಡಿಕೊಂಡು ವಿದೇಶಿ ಶ್ರುಂಗಸಬೆಗಳಿಗೆ ಹೋಗುತ್ತಾರೆ.ಸಕತ್ತಾಗಿ ಬಾಷಣ ಬಿಗಿಯುತ್ತಾರೆ,(ಹಿಂದೆ ಕೃಷ್ಣ ಮೆನನ್ ವಿಶ್ವ ಸಂಸ್ತೆಯಲ್ಲಿ ಮಾಡಿದಂತೆ).ಆದರೆ ಯಾವನಾದರೂ ನನಗೆ ಕಾರು ಬೇಡ ಅಂತಲೋ, ನಾವು ಇಲಾಖೆ ಎಲ್ಲರೂ ಸೇರಿ ಕಾರ್ ಪೂಲ್ ಮಾಡುತ್ತೇವೆ ಅನ್ತಲೋ ಹೇಳುವುದಿಲ್ಲ. ಒಬ್ಬೋಬನಿಗೂ ಕಾರು ಬೇಕು,ಹವಾನಿಯಂತ್ರಿತ ಕೋಣೆಯೇ ಬೇಕು!.ಇವರಿಂದ ತೃತೀಯ ಜಗತ್ತಿನ ಹಕ್ಕುಗಳ ಬಗ್ಗೆ ಪ್ರಚಂಡ ಪ್ರತಿಪಾದನೆ.ಹಿಂತಿರುಗಿದ ನಂತರ ಒಬ್ಬ ಪ್ರೊಫೆಸರ್ ನನ್ನು ಹಿಡಿದು ಒಂದು "ಬಿಲ್" ರೆಡಿ ಮಾಡುತ್ತಾರೆ.ಒಬ್ಬ ಮಂತ್ರಿಯನ್ನು ಒಪ್ಪಿಸಿ ಬಿಲ್ ಟೇಬಲ್ ಮಾಡಿಸುತ್ತಾರೆ.ಆಡಳಿತ ಪಕ್ಷದ ಕುರಿಗಳು ಬಿಲ್ಲನ್ನು ಯಾವುದೇ ತಕರಾರಿಲ್ಲದೆ ಪಾಸು ಮಾಡುತ್ತಾರೆ. ಆಮೇಲೆ ಪರಿಸರ ರಕ್ಷಣೆಗೆ ಬಜೆಟ್ ನಲ್ಲಿ ಹಣ ಬರುತ್ತದೆ. ಐ ಏ ಎಸ್ಸು ಗಳಿಗೆ,ಪ್ರೊಫೆಸರರುಗಳಿಗೆ ಮಜವೇ ಮಜಾ!...ವಿದೇಶಿ ಯಾತ್ರೆ...ಪೇಪರ್ ಮಂಡನೆ..ಇತ್ಯಾದಿ. ಇದರಿಂದ ಬರೊ  ಬತ್ಯೆಯಿಂದ ಒಂದು ಕಾರಂತೂ ಖರೀದಿ  ಮಾಡೋದು ಗ್ಯಾರೆಂಟಿ. ಪರಿಸರಕ್ಕೆ ಜೈ!.

 ರಾಮನಗರದ ಕಲ್ಲುಗಳು ಲೋಡುಗಟ್ಟಲೆ ಬಂದು ವಿದಾನಸೌಧದ ಸುತ್ತ pavement  ಆದರೆ ಪರವಾಗಿಲ್ಲ. ಬಡ ಬೋರೆಗೌಡ ಮನೆಯ ನೆಲಕ್ಕೆಂದು ಒಂದು ಸೈಜುಗಲ್ಲು ಕಿತ್ತರೆ ಅವನಮೇಲೆ ಕೇಸು ಹಾಕುತ್ತಾರೆ. BBMP ಚುನಾವಣೆ ಬಂತೆಂದು ಬೆಂಗಳೊರಿನ  ಕಂಡ ಕಂಡ ರಸ್ತೆಗೆಲ್ಲಾ ಟಾರು ಹಾಕುತ್ತಿರುವಾಗ ,ಚೆನ್ನಾಗಿದ್ದ ಚರಂಡಿ ಕಿತ್ತು ಹೊಸ ಚಪ್ಪಡಿ ಹಾಕುವಾಗ ಪರಿಸರದ ನೆನಪು ಬರುವುದಿಲ್ಲ. ಮೈಸೂರಿನ ಲಲಿತಮಹಲ್ ರಸ್ತೆಯಲ್ಲಿ ಅಪಘಾತವಾಗುತ್ತಿರುವ ನೆಪವೊಡ್ಡಿ ಇಪ್ಪತೈದು ಮರ ಕಡಿದಾಗ ಪರಿಸರ ಏನು ಆಗುವುದಿಲ್ಲ.ಆದರೆ ಬಡ ಆಟೋರಿಕ್ಷದವನು ಮಾತ್ರ ಹಸಿರು ಬಣ್ಣ ಹಾಕಬೇಕು..ಜನರೆಲ್ಲಾ ಸೈಕಲ್ ನಲ್ಲಿ ಓಡಾಡಬೇಕು ! ಮರ ನೆಡಬೇಕು!.
ನಮ್ಮ ವಿಶ್ವವಿದ್ಯಾನಿಲಯದ "ವೀಸಿ"ಯೊಬ್ಬ  ಪರಿಸರದ ಬಗ್ಗೆ  ಬಾರಿ ಗಂಟಲು ಹರಿದುಕೊಳ್ಳುತಿದ್ದ. ಸರ್ಕಾರದಿಂದ ಅನುದಾನ ಬರುತ್ತಲೇ ಸುಮಾರು ಮರಗಳನ್ನು ಕಡಿಸಿ ಆಡಿಟೋರಿಯಂ ಕಟ್ಟಿಸಿದ. university ಸುತ್ತಾ ಹಲವಾರು ಕಿಲೋಮೀಟರು ಗಳಷ್ಟು ಕಂಪೌಂಡು ಕಟ್ಟಿಸಿದ.ಇವತ್ತು ಪರಿಸರ ಸಂಬಂಧಿ ಸಂವಾದಗಳನ್ನ ಉದ್ಗಾಟಿಸುವವರು ಇಂತಾ ಸೂಳೆಮಕ್ಕಳೇ. ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು ಯುವಜನತೆಗೆ ಸಂದೇಶ ನೀಡಲು ಹಾಜರಾಗಿಬಿಡುತ್ತಾರೆ!. ಇನ್ನೊಮ್ಮೆ ಯಾವನಾದರೂ ತಜ್ಞ ಪರಿಸರದ ಬಗ್ಗೆ ಹೇಳಕ್ಕೆ ಬಂದರೆ ನಾವು ಹೇಳಬೇಕಾದುದು ಇಷ್ಟೇ "@#%ಮಗನೆ..ನಿನ್ನ ಕೆಲಸ ನೋಡಿಕೋ ಹೋಗು".
ಇನ್ನೊಬ್ಬ ಬಂದ "ಪ್ಲಾಸ್ಟಿಕ್ ಉಪಯೋಗ ನಿಲ್ಲಿಸಿ .ಮುಂದಿನ ಪೀಳಿಗೆ ಉಳಿಸಿ!
ನಾನು ಹೇಳಿದೆ  "ನಿನಗೆ ಪ್ಲಾಸ್ಟಿಕ್ ನಿಂದ ತೊಂದರೆ ಅನ್ನಿಸಿದರೆ ರಬ್ಬರ್ (ಕಾಂಡೋಮ್) ಉಪಯೋಗಿಸು.ಆಗ ನಿನ್ನ ಮುಂದಿನ ಪೀಳಿಗೆಗೆ ತೊದರೆಯೇ ಇರುವುದಿಲ್ಲ!. 
ಗಾಂಧೀ ಹೇಳುತ್ತಿದ್ದರಂತೆ "ಪ್ರಕೃತಿ ಮನುಷ್ಯನ ಆಸೆಗಳನ್ನೆಲ್ಲಾ ಪೂರೈಸಬಲ್ಲದು ,ಆದರೆ ದುರಾಸೆಗಳನ್ನಲ್ಲ.
ಆದರೆ ಮನುಷ್ಯನ ಆಸೆಗಳು ಅವಶ್ಯಕತೆಗಳು ಬದಲಾಗಿವೆ. ಇಂದು ಯಾರೂ ಗಾಂಧಿಜಿಯವರಂತೆ ಬದುಕುತ್ತಿಲ್ಲ.(ಅದನ್ನು ಬದುಕು ಎಂದು ಕರೆಯುವುದು ಸಾಧ್ಯವಿಲ್ಲ)ಅವರ ಆಪ್ತರಾದ ನೆಹರೂ ರಂತವರಿಗೆ ಅದು ರುಚಿಸಲಿಲ್ಲ ಎಂದ ಮೇಲೆ ಅದು ಇಂದಿನವರಿಗೆ ರುಚಿಸೀತೆ?.
ಇಂದು ಮನುಷ್ಯನ ಅವಶ್ಯಕತೆಗಳು,ಆಕಾಂಕ್ಷೆಗಳು ಜಾಸ್ತಿಯಾಗಿವೆ. ಒಬ್ಬ ಮನುಷ್ಯ ಎಂದರೆ ಒಂದು ಮನೆ,ಒಂದು ಕಾರು,ಏ.ಸಿ .,ಫ್ರಿಡ್ಜು. ಇತ್ಯಾದಿ.ಜೊತೆಗೆ ಅವನ ಕಾರಿಗೆ ಪಾರ್ಕಿಂಗ್ ಸ್ಪೇಸು. ಮನುಷ್ಯ ಬೆಳೆದಿದ್ದಾನೆ.ಅವನ ಅವಶ್ಯಕತೆಗಳೂ ಬೆಳೆದಿದೆ.ಬೆಳೆಯುವುದು ಪ್ರಕೃತಿಯ ನಿಯಮ. ಆಕಾಶವನ್ನು ಮೇಲೆ ನೂಕ  ಬೇಕಾಗುತ್ತದೆ (ಗಗನಚುಂಬಿ ಕಟ್ಟಡದ ಮೂಲಕ),ಸಾಗರವನ್ನು ಹಿಂದಕ್ಕೆ ನೂಕಬೇಕಾಗುತ್ತದೆ. ಪ್ರಕೃತಿಗೇ ತೊಂದರೆಯಾಗುತ್ತದೆ ಎಂದು ಯಾರೂ ಸನ್ಯಾಸಿಯಾಗುವುದಿಲ್ಲ.ಹಾಗೆ ಸನ್ಯಾಸಿಗಲಾಗುವವರಿಂದ ಪರಿಸರಕ್ಕೆ ತೊಂದರೆ ಇನ್ನು ಹೆಚ್ಚು. ಖಾವಿ ಹಾಕಿದ ಮರುದಿನವೇ ನಾವು ಇಂಜಿನಿಯರಿಂಗು /ಮೆಡಿಕಲ್ಲು ಕಾಲೇಜು ಮಾಡುತ್ತೇವೆ ಎಂದು ನೂರಾರು ಎಕರೆ ಜಮೀನನ್ನು ಕಾಂಕ್ರೀಟ್ ಕಾಡು ಮಾಡುತ್ತಾರೆ.
ಆದುದರಿಂದ ನಾವು  ನಮ್ಮ ಸಾವನ್ನು ಒಪ್ಪಿಕೊಂಡಂತೆ ಬೂಮಿ ಅಂತ್ಯವಾಗುವ ಸಾಧ್ಯತೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ.ನಾವು ಮಾಲಿನ್ಯ ನಿಲ್ಲಿಸಿದರೆ ಅದು ನೂರು ವರ್ಷ ಹೆಚ್ಚು ಬಾಳಬಹುದು ಅಷ್ಟೇ,ಸಿಗರೇಟು ಸೇದುವವನು ಅದನ್ನು ಬಿಟ್ಟರೆ ಒಂದೆರಡು ವರ್ಷ ಹೆಚ್ಚು ದಿನ ಬಾಳುವಂತೆ!.ಬೂಮಿಯ ಅಂತ್ಯಕ್ಕೆ ಹೆದರಿ ಸಾಯುತ್ತಾ ಬದುಕುವುದಕ್ಕಿಂತಾ,ಒಮ್ಮೆ ಚೆನ್ನಾಗಿ ಬಾಳಿ ಸಾಯುವುದು ಲೇಸಲ್ಲವೇ?
ಬಡವರು ಐಶಾರಾಮಿ ವಸ್ತುಗಳ ವ್ಯಾಮೋಹ ತೊರೆಯಬೇಕು ,ಎಲ್ಲರೂ ಆಸೆಗಳನ್ನೆಲ್ಲಾ ತ್ಯಜಿಸಬೇಕು ಎಂದು ಪ್ರತಿಪಾದಿಸುವವರೆಲ್ಲಾ ಆ ಆಸೆಗಳನ್ನು ಪೂರೈಸಿಕೊಂಡವರೆ. ಅವರ ಹಿಂಬಾಲಕರು ಮಾತ್ರ ಬಡಜನ. ಎಲ್ಲರೂ ಅವರ ಸುತ್ತಲಿನ ಸಣ್ಣ ಪುಟ್ಟ ಆಸೆಗಳನ್ನು ನಿಗ್ರಹ ಮಾಡಿಕೊಂಡು ಬದುಕಬೇಕೆನ್ನುವ ಜನಕ್ಕೆ ಅವರ ಸ್ವಂತದ "ಪೀಳಿಗೆ" ಯ ಉಪಯೋಗಕ್ಕಾಗಿ ಭೂಮಿ ಅಜರಾಮರವಾಗಿ ಉಳಿಯಬೇಕೆಂಬ ದುರಾಸೆ ಏಕೆ?!. ಇಲ್ಲದೆ ಇರುವವರ  ಉಪಯೋಗಕ್ಕಾಗಿ ಇರುವವರ ಬದುಕನ್ನು ಕಿತ್ತುಕೊಳ್ಳಬೇಕೇ?