ಹಿಂದೆ ಎಂಬತ್ತನೆಯ ದಶಕದ ಆದಿಯಲ್ಲಿ ಮತ್ತು ತೊಂಬತ್ತರ ಆರಂಬದಲ್ಲಿ ೧೦ನೆ ಯ ತರಗತಿಯ ವಿದ್ಯಾರ್ಥಿಗಳು ಹೆಚ್ಚಾಗಿ ಸಂಸ್ಕೃತವನ್ನ ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುತಿದ್ದರು .ಕಾರಣ,ಸಂಸ್ಕೃತ ಸ್ಕೋರಿಂಗ್ ಸಬ್ಜೆಕ್ಟ್ ಎಂದು.! ಮಾತ್ರುಬಾಷೆ ಅಂತ ಕನ್ನಡ ಬಾಷೆ ಆಯ್ಕೆ ಮಾಡಿಕೊಂಡವರಿಗೆ ಎಕ್ಷಮ್ನಲ್ಲಿ ಈ ಸೂಳೆಮಕ್ಕಳು ಸರಿಯಾಗಿ ಮಾರ್ಕ್ಸ್ ಕೊಡ್ತಿರಲಿಲ್ಲ. ಸಿಕ್ಕಾಪಟ್ಟೆ ಕರೆಕ್ಷುನ್ ಮಾಡಿ ಅಕ್ಷರ ಅಕ್ಷರಕ್ಕೆ ಮಾರ್ಕ್ಸ್ ಕಟ್ ಮಾಡುತ್ತಿದ್ದರು.ಆಮೇಲೆ ಜನ ಲಾಂಗ್ವೇಜ್ ನಲ್ಲಿ ಪಡೆದ ಮಾರ್ಕ್ಸ್ ಕೌಂಟ್ ಮಾಡೋದೇ ನಿಲ್ಲಿಸಿದಾಗ ಇವರ ತಿಕಾಕೊಬ್ಬು ಸ್ವಲ್ಪ ಕಮ್ಮಿಯಾಯಿತು. ಆದರು "ಬಾಷೆಯ ಕಲಿಕೆ ಜೀವನದಲ್ಲಿ ಬಹಳ ಮಹತ್ವವಾದದ್ದೆಂದೂ ,ಅದಕ್ಕೆ, ಅದನ್ನು ಕಂಪಲ್ಸರಿ ಮಾಡಬೇಕೆಂದೂ,ಸರ್ಕಾರದ ಕರ್ಚಿನಲ್ಲಿ ಸೆಮಿನಾರುಗಳನ್ನು ಮಾಡಿಕೊಂಡು ಓಡಾಡುತಿದ್ದಾರೆ. ಸರಿಯಾಗಿ ಇಂಗ್ಲೀಷು ಬಾರದೆ ಇರುವುದರಿಂದ ವಿದೇಶಿ ಜಾಬ್ ಮಾರ್ಕೆಟ್ನಲ್ಲಿ ಬಾರತೀಯ ವಿದ್ಯಾರ್ಥಿಗಳು ಹಿಂದೆಬೀಳುತಿದ್ದರೆಂದು ಗುಲ್ಲೆಬ್ಬಿಸಿ ತಾಂತ್ರಿಕ ಶಿಕ್ಷಣದಲ್ಲೂ "ಬಾಷೆ"ಯನ್ನ ತುರುಕುವ ಪ್ರಯತ್ನ ನಡೆದಿತ್ತು.
ನಾನು ಕಂಡಂತೆ ನಮ್ಮ ದೇಶದ ಹೆಚ್ಚಿನ ಭಾಷಾ ಶಿಕ್ಷಕರಿಗೆ ವಿಲಕ್ಷಣ ಚಟಗಳಿವೆ. ಒಂದನೆಯದು ನಮ್ಮ ಮಾತುಗಳನ್ನೂ ಕಿವಿಕೊಟ್ಟು ಕೇಳಿ ಅದರಲ್ಲಿ ನಮ್ಮ 'ಉಚ್ಚರಣೆ' ತಿದ್ದುವ ಪ್ರಯತ್ನ ಮಾಡುವುದು. ನಮ್ಮ ಬರಹಗಳಲ್ಲಿ ತಪ್ಪುಕಂಡು ಹಿಡಿದು ಅದನ್ನು ತಿದ್ದುವುದು.
ಹಿಂದೆ ನನಗೊಬ್ಬ ಮಾಸ್ತರನಿದ್ದ. ನಾನು ಏನು ಮಾತಾಡಿದರು ನನ್ನ ಉಚ್ಚರಣೆಯನ್ನು ತಿದ್ದುವ ಪ್ರಯತ್ನ ಮಾಡುತಿದ್ದ.ನಾನು ನನ್ನ ಮುಟ್ಟಾಳ ಮಾಸ್ತರರು ಮಾಡುವ ಪಾಠಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ,ಗ್ರಂಥಾಲಯದಿಂದಲೇ ಜ್ಞಾನ ವನ್ನ ಪಡೆಯುತಿದ್ದೆ.ಆದುದರಿಂದ ಕೆಲವು ಶಬ್ದಗಳ ಉಚ್ಚಾರ ಸರಿಯಾಗಿರುತ್ತಿರಲಿಲ್ಲ.(ಅಷ್ಟಕ್ಕೂ ಅದನ್ನು ಸರಿ ಮಾಡಿಕೊಳ್ಳಲು ಈ 'ಗುರು'ಗಳ ಗುಲಾಮಗಿರಿ ಬೇಕಿರಲಿಲ್ಲ .ಒಂದು ರೇಡಿಯೋ ಇದ್ದಾರೆ ಸಾಕಿತ್ತು.) ಆದರೆ ಗುರುವಿನ ಗುಲಾಮಗಿರಿಯನ್ನೇ ಆದರ್ಶವೆಂದು ಪ್ರತಿಪಾದಿಸಿಕೊಂಡು ಓಡಾಡುತಿದ್ದ ಈ ಓಲ್ಡ್ ಗ್ಯಾಂಗಿಗೆ ನನ್ನ attitude ಅಸಹನೀಯವಾಗಿತ್ತು.
ಈಗ ಹಲವು ವರ್ಷಗಳ ನಂತರ ನೋಡುತ್ತೇನೆ ,ಜಗತ್ತು ಬದಲಾಗಿದೆ!. ನಮ್ಮ ಯುವಜನಾಂಗ ನಾನು ನಡೆದು ಬಂದ ದಾರಿಯಲ್ಲೇ ನಡೆದು ಬರುತ್ತಿದೆ!.ಅವರು ಸುಲಭ & ಸರಳವಾದ ಬಾಷೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೇಕಾದರೆ ಅವರ SMS ಗಳನ್ನೇ ನೋಡಿ. ಟು ಎಂದು ಬರೆಯುವ ಬದಲು 2 ಎಂದೂ ,love ಗೆ Luv ಎಂದೂ ಫಾರ್ ಗೆ 4 ಎಂದೂ ಹೀಗೇ ಮುಂತಾಗಿ ಸುಲಭವಾಗಿ ಬರೆಯುತ್ತಾರೆ. ಆ SMS /Mail ಓದುಗರಿಗೆ ಅವು ಸುಲಭವಾಗಿ ಅರ್ಥವಾಗುತ್ತವೆ. ಅಂದು ನಮಗೆ ಅನಿವಾರ್ಯ ಎನಿಸಿದ್ದ ವ್ಯಾಕರಣ ಇಂದು ಕಸದ ಬುಟ್ಟಿ ಸೇರಿದೆ. ಈ ಸುಧಾರಣೆಗಳ್ಯಾವುವೂ ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಮುಕ್ಕುವ ಬಾಷಾ ಸಂಶೋಧನಾ ಸಂಸ್ಥೆಗಳೆಂಬ ಬಿಳಿಯಾನೆಗಳಿಂದ ಆದುವುಗಳಲ್ಲ. ಆ "ಸ್ವಚ್ಛ ಮತ್ತು ಶುದ್ದ" ಬಾಷೆ ಮುಂದೊಂದು ದಿನ ಇತಿಹಾಸದ ಗೋರಿ ಸೇರಿದರೆ ಆಶ್ಚರ್ಯವಿಲ್ಲ. ಗುಡ್ ಬೈ ಮಿಸ್ಟರ್ ಪಾಣಿನಿ.