Showing posts with label ಪರಿಸರ. Show all posts
Showing posts with label ಪರಿಸರ. Show all posts

Thursday, January 20, 2011

ಲೋ, ಮೇಯರ್ ನಟ್ರಾಜ.....ನಾಯಿಗಳಿಂದ ಕಾಪಾಡೋ



ಬೀದಿನಾಯಿಗಳು ಮತ್ತೊಮ್ಮೆ ಮಗುವೊಂದನ್ನು ಕಚ್ಚಿ ಕಚ್ಚಿ ಸಾಯಿಸಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಸರ್ಕಾರದ ಬೇರೆ ಬೇರೆ ಅಂಗಗಳಲ್ಲಿ ಗೊಂದಲ ಇದೆ. ನಾಯಿಗಳ ಸಂತಾನ ಹರಣ ಆಪರೇಶನ್ ಕೆಲಸ ತ್ವರಿತ ಗೊಳಿಸುವುದಾಗಿ ಬೀ.ಬೀ.ಎಂ ಪಿ ಆಯುಕ್ತ ಉಡಾಫೆ ಹೇಳಿಕೆ ಕೊಟ್ಟಿದ್ದಾನೆ. ಇಷ್ಟುವರ್ಷ ನಡೆದ ಸಂತಾನ ಹರಣ ಶಸ್ತ್ರ ಚಿಕಿತ್ತ್ಸೆಯಿಂದ ನಾವು ಸಾದಿಸಿರುವುದೇನು? ಮೊದಲಾದರೆ ವರ್ಷ ವರ್ಷ ಒಂದಷ್ಟು ನಾಯಿಗಳನ್ನು ಸಾಯಿಸುತಿದ್ದರು.ಈಗ ನಾಯಿ ಆಪರೇಶನ್ ಹೆಸರಲ್ಲಿ ಕೋಟ್ಯಾಂತರ ದರೋಡೆ ನಡೆದಿದೆ ಎಂಬುದಕ್ಕೆ ಬೀದಿಯಲ್ಲಿ ಓಡಾಡುತ್ತಿರುವ ನಾಯಿಗಳೇ ಸಾಕ್ಷಿ!. ನಾವು ಈಗ ಆಲೋಚಿಸಬೇಕಾದ್ದು ಎರಡು ಕಾಲಿನ ನಾಯಿಗಳ ಪ್ರಭೇದಗಳ ಬಗ್ಗೆ. ಇವು ನಾಯಿ ದಯಾ ಸಂಘಗಳು. ಇದರ ಸದಸ್ಯರು ಎರಡುಕಾಲಿನ ನರ ಭಕ್ಷಕ ನಾಯಿಗಳು ಎಂದರೆ ತಪ್ಪಾಗಲಾರದು.. ಯಾಕೆಂದರೆ ನಾಯಿಗಳನ್ನು  ಬಿಟ್ಟು ಇವರಿಗೆ ಬೇರೆ ಯಾವುದೇ ಪ್ರಾಣಿಗಳ ಬಗ್ಗೆ ಕಾಳಜಿ ಇಲ್ಲ.ನಾಯಿಗಳು ನಾನ್ ವೆಜ್ ಹೋಟೆಲ್ ಮಾಂಸ ತಿಂದು ಹುಲಿಗಳನ್ತಾಗಿವೆ. ಯಾವುದಾದರೂ ಒಂದು ಅಳಿಲು ಮರದಿಂದ ಕೆಳಗಿಳಿದರೆ ಬಿಟ್ಟ ಬಾಣದಂತೆ ನುಗ್ಗುವ ಈ ಬೀದಿ ನಾಯಿಗಳು ಅವನ್ನು ಹಿಡಿದು ಕೊಲ್ಲುತ್ತವೆ. ಇನ್ನು ಹಕ್ಕಿಮರಿಗಳು ಮರದಲ್ಲಿ ಕಟ್ಟಿದ ಗೂಡಿಂದ ಕೆಳಗೆ ಬಿತ್ತೋ ಅವು ನೇರವಾಗಿ  ಬೀದಿನಾಯಿಗಳ ಹೊಟ್ಟೆ ಸೇರುತ್ತವೆ. ಇನ್ನು ಬೆಕ್ಕಿನ ಮರಿಗಳ ಪಾಡಂತೂ ಹೇಳತೀರದು.ಇನ್ನು ಚಿಕ್ಕ ಮಕ್ಕಳ ಬಗ್ಗೆ ನಾವು ಮೊನ್ನೆ ಪೇಪರ್ನಲ್ಲಿ ಓದಿದ್ದೆವಲ್ಲ.
ಅವಕ್ಕೂ ಆಪರೇಶನ್ ಕಮಲ ಮಾಡಿ ,ಪ್ಲೀಸ್, ಅನ್ನಬಹುದು.ಆದರೆ ಇವರಿರುವ ವಿಧಾನ ಸೌದದ ಒಳಗೆಯೂ ಬೀದಿ ನಾಯಿಗಳ ಹಿಂಡೇ ಇದೆ. ಅಂದಮೇಲೆ ಈ ನಾಯಿಗಳಿಗೂ ಇವರಿಗೋ ಏನೋ ರಕ್ತ ಸಂಭಂದ ಇದೆ ಅಂತಾಯಿತಲ್ಲ!.ಈ ಬಗ್ಗೆ ಪಕ್ಷದ (ಏಕೈಕ?) ಸಂಭಾವಿತ ನಾಯಕ ಮತ್ತು ನಗಾರಾಭಿವೃದ್ದಿ ಸಚಿವ ಸುರೇಶಕುಮಾರ್ ಏನಂತಾರೂ ಗೊತ್ತಿಲ್ಲ.(ನಗರದಲ್ಲೇ ತಾನೇ ನಾಯಿ ಕಾಟ!). ಆಪರೇಶನ್ ಹೆಸರಲ್ಲಿ ನಾಯಿಗಳನ್ನು ಹೊತ್ತೊಯ್ಯುವ ಬೀ ಬೀ ಎಂ ಪಿ ಯವರು ಅದನ್ನು ಇನ್ನೊಂದು ಏರಿಯಾಗೆ ಬಿಡುತ್ತಾರೆ. ಸಂತಾನ ಹರಣ ಆಪರೇಶನ್ ಗಳು ಮನುಷ್ಯರಿಗೆ ಯಶಸ್ವಿಯಾಗಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಅಂದಮೇಲೆ ನಾಯಿಗಳ ಮೇಲೆ ಮಾಡಲು ಸಾಧ್ಯ ಆಗುತ್ತಾ ? ಈ ಚಿಕಿತ್ಸೆ ಭಾರತದಲ್ಲಿ ಯಶಸ್ವಿಯಾಗಿಲ್ಲಾ ಅಂತಾ ಬೆಂಗಳೊರಿನಲ್ಲಿ ತಿರುಗಾಡೋ ಯು.ಪಿ/ಬಿಹಾರಿ ಜನರನ್ನು ನೋಡಿದರೆ ಗೊತ್ತಾಗುತ್ತೆ.ಅದಕ್ಕಾಗಿಯೇ, ರೈಲ್ವೆ ಮಂತ್ರಿಯಾಗುವ ಉತ್ತರ ಭಾರತದ ಮಂದಿ ವರ್ಷಕ್ಕೆ ಹತ್ತು ರೈಲುಗಳನ್ನು ಆ ರಾಜ್ಯದ ಹಳ್ಳಿ,ಹಳ್ಳಿಗಳಿಂದ ದಕ್ಷಿಣ ಭಾರತದ ನಗರಗಳಿಗೆ ಹಾಕುತ್ತಾರೆ.  ಬೀ.ಬೀ ಎಂ ಪಿ ಕೂಡ ಅವರನ್ನೇ ನೋಡಿ ಕಲಿತಿರಬೇಕು.ಅವರು ಮನುಷ್ಯರಿಗೆ ಮಾಡುವುದನ್ನು ಇವರು ನಾಯಿಗಳಿಗೆ ಮಾಡುತ್ತಾರೆ!. ಸಧ್ಯ ,ನಾಯಿಗಳಿಗೆ ಮತದಾನದ ಹಕ್ಕನ್ನು ಕೊಡುವ೦ತೆ ಯಾರೂ ಆಗ್ರಹಿಸಿಲ್ಲ. ಅಂತ ಆಲೋಚನೆ ಮನೇಕಾ ಗಾಂಧೀ ತಲೆಯಲ್ಲಿ ಇರಬಹುದು.
 ಮನುಷ್ಯರ ಜನಸಂಖ್ಯೆ ಬೇಕಾದಷ್ಟಿದೆ ಹಾಳಾಗಿ ಹೋಗಲಿ ಅಂತಾ ಪ್ರಾಣಿಪ್ರಿಯರು ಉಲಿಯಬಹುದು.ಆದರೆ ಪ್ರಾಣಿಸಂಕುಲದ ಬಗ್ಗೆಯಾದರೂ ಈ  ‘ದಯಾಸಂಘ’ಗಳಿಗೆ ಕೊಂಚ ಕಾಳಜಿ ಬೇಡವೇ?.
ಈ ದೇಶದ  ಹಕ್ಕಿ, ಬೆಕ್ಕು,ಅಳಿಲುಗಳು ಪ್ರಾಣಿದಯಾ ಸಂಘದ ಕರುಣಾಮಯ ದೃಷ್ಟಿಗೆ ಬೀಳಲು ಏನು ಮಾಡಬೇಕು?  . ....

Monday, January 3, 2011

ಹಾಟ್,ಫ್ಲಾಟ್ ಅಂಡ್ ಕ್ರೌಡೆಡ್ (Part-2)

ಥಾಮಸ್ ಫ್ರೈಡ್ಮ್ಯಾನ್ ಎಂಬುವರು ಬರೆದಿರುವ "ಹಾಟ್,ಫ್ಲಾಟ್ ಅಂಡ್ ಕ್ರೌಡೆಡ್" ಈ ಪುಸ್ತಕವು ಪರಿಸರವಾದಕ್ಕೆ ಸಂಭಂಧಿಸಿದೆ. ಮಾಲಿನ್ಯ ಮುಂತಾದ ಸಮಸ್ಯೆಗಳಿಂದಾಗಿ ಭೂಮಿ ತೀವ್ರಗತಿಯಲ್ಲಿ ವಿನಾಶದ ಅಂಚಿಗೆ ಸಾಗುತ್ತಿದೆ ಎನ್ನುತ್ತಾರೆ ಲೇಖಕ ಫ್ರೈಡ್ಮ್ಯಾನ್. ನಮ್ಮ ಇಂಧನದ ಅಗತ್ಯಗಳು ಹೇಗೆ ನಮ್ಮ ಭೂಮಿಯನ್ನು ನಿಧಾನವಾಗಿ ಬಲಿತೆಗೆದುಕೊಳ್ಳುತ್ತಿವೆ,ಏಕೆ ಸರ್ಕಾರಗಳು ಪೆಟ್ರೋಲ್ನಂತಹ ಇಂಧನಗಳ ಉಪಯೋಗವನ್ನು ಕಡಿಮೆಮಾಡುವ ಬಗ್ಗೆ ಕ್ರಮ ಕೈಗೊಳ್ಳುತಿಲ್ಲ ಎಂಬ ವಿಷಯವನ್ನು ಕೂಲಂಕಷವಾಗಿ ಚರ್ಚಿಸುವ ಪುಸ್ತಕ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಭಿವೃದ್ದಿಯಲ್ಲಿ ಹಣ ತೊಡಗಿಸುವ ಅಗತ್ಯಗಳನ್ನು ಎತ್ತಿತೋರಿಸುತ್ತವೆ. ಆದರೆ ಈ ಪುಸ್ತಕ ಪದೇ ಪದೇ ಭೂಮಿ ನಾಶದ ಅಂಚಿನಲ್ಲಿದೆ ಎಂದು ಹುಯಿಲೆಬ್ಬಿಸಿರುವುದು ನನಗಂತೂ ಕಿರಿಕಿರಿ ಎನ್ನಿಸುತ್ತದೆ.ಏಕೆಂದರೆ ಭೂಮಿ ನಾಶ ಆಗುತ್ತದೆ, ಮನುಕುಲ ನಾಶ ಆಗುತ್ತದೆ ,ಪ್ರಳಯ ಆಗುತ್ತದೆ ಎಂದು ವರ್ಷವರ್ಷ ನಮ್ಮ ಲೋಕಲ್ ಜ್ಯೋತಿಷಿಗಳು ಹಾಗು ಪರಿಸರವಾದಿಗಳು ಬೊಬ್ಬೆ ಹಾಕುತ್ತಲೇ ಇರುವುದನ್ನು ಕೇಳಿ ಕೇಳಿ ತಲೆ ಚಿಟ್ಟು ಹಿಡಿದಿದೆ.ಭೂಮಿಯ ತಾಪಮಾನ ಏರಿಕೆಯಿಂದ,ಮಾಲಿನ್ಯದಿಂದ ಜನರು ಸಾಯುತ್ತಾರೆ ಎಂಬುದು ಇವರ ವಾದ. ಈಗೇನು ಯಾರೂ ಸಾಯುತಿಲ್ಲವೇ ? ವರ್ಷ ವರ್ಷ ಶೀತ ಗಾಳಿಯ ಬೀಸುವಿಕೆಯಿಂದ 200 -300 ಜನ ಸಾಯುತ್ತಲೇ ಇದ್ದಾರೆ. ವಿಶ್ವದಾದ್ಯಂತ ಈ ಸಂಖ್ಯೆ ಇನ್ನು ಹೆಚ್ಚು. ಇನ್ನು ಬರ,ನೆರೆ ,ಭೂಕಂಪ, ಅತಿವೃಷ್ಟಿ, ಅನಾವುಷ್ಟಿ ಇತ್ಯಾದಿಗಳಿಗೆ ಸಿಕ್ಕು ಇಲ್ಲಿಯವರೆಗೆ ವರ್ಶಾವರ್ಷ ಹಲವಾರು ಜನ ಸಾಯುತ್ತಲೇ ಇದ್ದಾರೆ, ಮುಂದೆಯೂ ಸಾಯುತ್ತಲೇ ಇದ್ದಾರೆ. ಇವುಗಳನ್ನು ತಡೆಯುತ್ತೆವೆಂದು ಸರ್ಕಾರಗಳು,ಸಂಘ ಸಂಸ್ಥೆಗಳು ಮಾಡುತ್ತಿರುವ ಬೂಟಾಟಿಕೆಯ ಪ್ರಯತ್ನಗಳು ಯಶಸ್ವಿಯಾಗಿರುವುದು ಅವರು ನೀಡುವ ಖೊಟ್ಟಿ ಅಂಕಿ ಅಂಶಗಳಲ್ಲಿ ಮಾತ್ರ!. ವಿಶ್ವದ ಜನಸಂಖ್ಯೆಯ ಶೇಕಡಾ ಎಂಬತ್ತು ಭಾಗ ಬಡಜನರಿಂದ ಕೂಡಿದೆ.'ಯುನಿಸೆಫ್' ಅಂಕಿ ಅಂಶದ ಪ್ರಕಾರ ಈ ಭೂಮಿಯ ಮೇಲೆ ಪ್ರತಿದಿನ 22,000 ಹಸುಳೆಗಳು ಹಸಿವಿನಿಂದ ಮರಣಹೊಂದುತ್ತವೆ.ಇಂತಹ ಸಾವುಗಳು ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು.ನಾವುಗಳು ಚಿಕ್ಕ ಮಕ್ಕಳನ್ನು ಸಾವು ಮುಟ್ಟುವುದಿಲ್ಲ,ದೇವರು ಕಾಪಾಡುತ್ತಾನೆ ಎಂದೆಲ್ಲ ಬುರುಡೆ ಬಿಡುತ್ತಾ ಜನಗಳಲ್ಲಿ ಮೂಡನಂಬಿಕೆ ಬಿತ್ತುತೇವೆ!,ಹೆಚ್ಚು ಹೆಚ್ಚು ಮಕ್ಕಳು ಹೆರಲು ಪ್ರೇರೆಪಿಸುತ್ತೇವೆ.(ಎಲ್ಲಾ ಧರ್ಮಕ್ಕೆ ಸೇರಿದ )ಖದೀಮ ಧರ್ಮಗುರುಗಳು ಸಾಮೂಹಿಕ ವಿವಾಹಗಳನ್ನು ಮಾಡಿಸುತ್ತಾರೆ. ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಮಕ್ಕಳುಗಳಲ್ಲಿ ಸುಮಾರು ಶೇಕಡಾ 27-28% ರಷ್ಟು ಮಂದಿಗೆ ಸರಿಯಾದ ಆಹಾರ ಇಲ್ಲ. ಈ ಸಂಖ್ಯೆ ದಕ್ಷಿಣ ಏಶಿಯ ಮತ್ತು ಆಫ್ರಿಕಾದ ರಾಷ್ಟ್ರಗಲ್ಲಿ ಹೆಚ್ಚು. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?
ಜನರು ಹೇಗೆ ನರಳುತಿದ್ದಾರೆ,ಕಷ್ಟಪಡುತಿದ್ದಾರೆ ಎಂಬುದನ್ನು ನಾವು ಕಣ್ಣು ಬಿಟ್ಟು ಸುತ್ತ ಮುತ್ತ ನೋಡಿದರೆ ತಿಳಿಯುತ್ತದೆ. ಈ ಚಳಿ ಶೀತಗಾಳಿಯಲ್ಲಿ ಎಷ್ಟುಜನಕ್ಕೆ ಬಟ್ಟೆಯಿಲ್ಲ,ಚರ್ಮ ಒಡೆಯುತ್ತದೆ,ಅದಕ್ಕೆ ಶೂರ್ಶುಷೆಯಿಲ್ಲ. ಚಳಿ ತಡೆಯಲು ಆಗದೆ ಅವನೇನಾದರೂ ಒಂದಿಷ್ಟು ಹೆಂಡ ಕುಡಿದನೋ ,ನಮ್ಮ ಧರ್ಮಗುರುಗಳಿಗೆ,ಸಾಮಾಜಿಕ ಕಳಕಳಿಯ ನಾಟಕವಾಡುವ ಸಜ್ಜನರಿಗೆ ಹೊಟ್ಟೆಯೆಲ್ಲಾ ಉರಿ ಆರಂಭವಾಗುತ್ತದೆ ಮನುಕುಲಕ್ಕೆ ಇಷ್ಟು ಸಮಸ್ಯೆಗಳು ಸಾಲದು ಎಂಬಂತೆ ಸಂಕ್ರಾಮಿಕ ರೋಗಗಳು ತಮ್ಮ ಕಬಂಧ ಬಾಹುಗಳನ್ನು ಚಾಚಿ ಜನರನ್ನು ಬಲಿತೆಗೆದುಕೊಳ್ಳುತ್ತಿದೆ.ಪ್ರಸ್ತುತ, ಅಂದಾಜು ನಾಲ್ಕು ಕೋಟಿ ಜನ AIDS ನಿಂದ ಬಲಳುತಿದ್ದಾರೆ.2004 ರಲ್ಲಿ 30 ಲಕ್ಷ ಜನರು AIDS ನಿಂದ ಸತ್ತೆ ಹೋಗಿದ್ದಾರೆ. ನಂತರದ ವರ್ಷಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಆದರೆ ಎಡ್ಸ್ ನಿರ್ಮೂಲನೆಗೆಂದು ಬಂದ ವಿದೇಶಿ ಹಣವನ್ನು ತೃತೀಯ ರಾಷ್ಟ್ರಗಳ ಅಧಿಕಾರಶಾಹಿಗಳು ನುಂಗಿ ನೀರುಕುಡಿದಿರುವುದರಿಂದ ನಮ್ಮಲ್ಲಿ AIDS ಸಂಬಂದಿ ಸಾವುಗಳು ಕಡಿಮೆಯಾಗಿವೆ ಎಂದು ಖೊಟ್ಟಿ ಅಂಕಿ-ಅಂಶಗಳನ್ನು ನೀಡುವುದರಲ್ಲಿ ಸಂದೇಹವಿಲ್ಲ.ಇನ್ನು ವಾರ್ಷಿಕ ಹತ್ತು ಲಕ್ಷ ಜನ ಮಲೇರಿಯಾದಿಂದ ಸಾಯುತ್ತಾರೆ.ಇದರಲ್ಲಿ ಶೇಕಡಾ 80% ರಷ್ಟು ಜನ ಆಫ್ರಿಕನ್ನರು. 64 ಕೋಟಿ ಜನಕ್ಕೆ ಸೂರು ಇಲ್ಲ.40 ಕೋಟಿ ಜನ ಶುದ್ದನೀರಿಗಾಗಿ ಪರದಾಡುತಿದ್ದಾರೆ.2003 ರಲ್ಲಿ ಹದಿನಾರು ಲಕ್ಷ ಮಕ್ಕಳು ಐದು ವರ್ಷ ವಯಸ್ಸು ತುಂಬುವ ಮೊದಲೇ ಸತ್ತುಹೋಗಿವೆ. ಇದೇ ವರ್ಷ 14 ಲಕ್ಷ ಜನರು ಕುಡಿಯಲು ಶುದ್ದ ನೀರು ಸಿಗದೇ ಕಲುಷಿತ ನೀರನ್ನು ಸೇವಿಸಿ ಅದರಿಂದ ಬಂದ ಖಾಯಿಲೆಗಳಿಂದ ಅಸುನೀಗಿದ್ದಾರೆ...ಹೀಗೆ ಬರೆಯುತ್ತಾ ಹೋದರೆ ಪೇಜ್ ಗಟ್ಟಲೆ ಬರೆಯಬಹುದು. ಒಟ್ಟಾರೆ ಈಗಾಗಲೇ ಜನರು ಭೂಮಿಯಲ್ಲಿ ಸಮಸ್ಯೆಗಳಿಂದ 'ಸಫರ್' ಆಗುತಿದ್ದಾರೆ ಎಂದಾಯಿತು. ಅಂದಮೇಲೆ ಥಾಮಸ್ ಫ್ರೈಡ್ಮ್ಯಾನ್ ತನ್ನ ಪುಸ್ತಕದಲ್ಲಿ ವರ್ಣಿಸಿರುವ ಮಾಲಿನ್ಯ ಸಂಭಂದಿ ಅಪಾಯಗಳಿಗೆ ಗುರಿಯಾಗುವವರು ಎಷ್ಟು ಜನ?, ಈ ಭೂಮಿಯ ಶೇಕಡಾ 20 % ಜನ!. ಇಷ್ಟು ಜನಕ್ಕಾಗಿ ಎಲ್ಲರೂ ೧೦೦% ಜನರೂ ಪರಿಸರ ಸ್ನೇಹಿ ಇಂಧನಗಳ ಉತ್ಪಾಧನೆಗೆ ಅಹೋರಾತ್ರಿ ಶ್ರಮಿಸಬೇಕೆ?,


ಅಷ್ಟಕ್ಕೂ ಈ ಪರಿಸರ ಸ್ನೇಹಿ ಇಂಧನ ಗಳೆಂದರೆ ಏನು ?

ಈ ಭೂಮಿಯ ಬಡ ಜನರ ರಕ್ತ ,ಬೆವರು ಹಾಗು ಕಣ್ಣೀರು?,

ಇಂದು ಪ್ಲಾಸ್ಟಿಕ್ ಚೀಲಗಳ ಬಳಕೆ ನಿಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಆದರೆ ಬೆಲೆಯಲ್ಲಿ,ಉಪಯೋಗದಲ್ಲಿ ಅದಕ್ಕೆ ಸಮಾನವಾದ ವಸ್ತುವನ್ನು ಉತ್ಪಾದಿಸಲು ಕ್ರಮ ಕೈಗೊಂಡಿಲ್ಲ. ಇಂದಿನ ಮಾಸ್ ಮಾರ್ಕೆಟಿಂಗ್ ಆರ್ಥಿಕತೆಯ ಯುಗದಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದರೆ ವಸ್ತುವಿನ ಕ್ರಯ ಹೆಚ್ಚುತ್ತದೆ.ಉದಾಹರಣೆಗೆ" ಫ್ಯಾಬ್ ಇಂಡಿಯಾ" (Fab India) ಸಂಸ್ಥೆಯಲ್ಲಿ ಶಾಪಿಂಗ್ ಮಾಡಿ ನೋಡಿ. ಅದು ಸಾಂಪ್ರದಾಯಿಕ ,ಪರಿಸರ ಸ್ನೇಹಿ ವಸ್ತುಗಳ ವಿಕ್ರಯಕ್ಕೆಂದೇ ಮೀಸಲಿಟ್ಟ ಮಳಿಗೆ. ಅಲ್ಲಿನ ವಸ್ತುಗಳ ಬೆಲೆ ನೋಡಿದರೆ ತಲೆ ಸುತ್ತುಬರುತ್ತೆ. ಯಾಕೆಂದರೆ ಅದೇ ಪದಾರ್ಥ ಹೊರಗೆ ಕಡಿಮೆ ಬೆಲೆಗೆ ಸಿಗುತ್ತೆ.

ಇನ್ನು, ನಮ್ಮ ಇಂಧನ ಮಂತ್ರಿ ಬಲ್ಬುಗಳನ್ನು ಬ್ಯಾನ್ ಮಾಡಿ ಬರೀ ಸಿ.ಎಫ್.ಎಲ್ ಟ್ಯೂಬ್ ಗಳ ಬಳಕೆ ಕಡ್ಡಾಯ ಮಾಡುತ್ತಾಳಂತೆ. ನಿಮ್ಮ ಮನೆ ಬಲ್ಬ್ ಹೋದರೆ ಸಾಯಂಕಾಲ ಮನೆಗೆ ಹೋಗುವಾಗ ಹತ್ತು ರೊಪಾಯಿ ಕೊಟ್ಟು ಒಂದು ಬಲ್ಬ್ ತಗೊಂಡು ಮನೆಗೆ ಹೋಗಬಹುದು.ಆದರೆ ನೀವು ಸಿ.ಎಫ್.ಎಲ್ ಟ್ಯೂಬ್ ಬೇಕೆಂದರೆ 150 -300 ರೂಪಾಯಿ ಕಕ್ಕಬೇಕು.ಹೇಗಿದೆ ಬಡವರನ್ನು ಉದ್ಧಾರ ಮಾಡಲೆಂದೇ ಇರುವ ಸರ್ಕಾರದ ಸ್ಕೀಮ್!, ಗುಜರಾತಿನ ಯಾವ ವರ್ತಕನನ್ನು ಉದ್ಧಾರ ಮಾಡುವ ಹುನ್ನಾರ?. ಇಂತಹುದೇ ಬೇರೆ ಬೇರೆ ಐಡಿಯಾಗಳು ಸರ್ಕಾರದ ತಲೆಯಲ್ಲಿದೆ. ನಾಳೆ ನಮ್ಮ ಸರ್ಕಾರ ಥಾಮಸ್ ಫ್ರೈಡ್ಮ್ಯಾನ್ ನನ್ನು ಪರಿಸರ ಸಲಹೆಗಾರನನ್ನಗಿ ನೇಮಿಸಿಕೊಂಡರೂ ಅಚ್ಚರಿಯಿಲ್ಲ. ಏಕೆಂದರೆ ಇದು ಭೂಮಿಯನ್ನು ,ಮನುಕುಲವನ್ನು ಕಾಪಾಡುವ ಪ್ರಶ್ನೆಯಲ್ಲವೇ... ಹಾಗಾಗಿ ಇಂತಹ ಒಳ್ಳೆ ಉದ್ದೇಶಗಳಿಗೆ ನಮ್ಮ ಜನರ ರಕ್ತ ,ಕಣ್ಣೀರು,ಬೆವರನ್ನು ನೀಡಲು ನಮ್ಮ ನಾಯಕರು ಸದಾ ಸಿದ್ದ. ಹಿಂದೆ ಸಹಾ 'ನಾಜಿ' ಗಳಿಂದ ಮನುಕುಲಕ್ಕೆ ಆಗಬಹುದಾದ ಅಪಾಯಗಳಿಂದ ಜಗತ್ತನ್ನು ರಕ್ಷಿಸಲು ನಮ್ಮ ಸೈನಿಕರನ್ನು ಸಹಾ ಬಳಸಿಕೊಳ್ಳಲಿ ಎಂದು ನಮ್ಮ ಯಾರೋ ಮಹಾನಾಯಕರು ಬ್ರಿಟಿಶ್ ಸರ್ಕಾರಕ್ಕೆ ಹೇಳಿದ್ದರು!

(ಮುಂದುವರೆಯುತ್ತದೆ)

Wednesday, December 29, 2010

ಹಾಟ್,ಫ್ಲಾಟ್ ಅಂಡ್ ಕ್ರೌಡೆಡ್" (part 1)

ನೀವು ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸುವಾಗ ಒಂದು ದೃಶ್ಯ ಗಮನಿಸಿರಬಹುದು,ಅದು ಕಡಿದಾದ ರಸ್ತೆಯಲ್ಲಿ ಕಷ್ಟಪಟ್ಟು ಸಂಚರಿಸುವ ವಾಹನಗಳು,ಪರದಾಡುವ ಪಾದಾಚಾರಿಗಳು ,ದೂಳು ಹೊಗೆಯನ್ನೇ ಉಸಿರಾಡುತ್ತಿರುವ ಮಹಾಜನತೆ. ಅವರ ಈ ಸ್ತಿತಿಗೆ ಕಾರಣ ಮೆಟ್ರೋ ಕಾಮಗಾರಿ. ಇದರ ಕೃಪೆಯಿಂದ ಅಗಲವಾದ ರಸ್ತೆಗಳು ಉಪಯೂಗವಿಲ್ಲದನ್ತಾಗಿವೆ. ಇಂದಿನ ಬೆಂಗಳೂರಿಗರಿಗೆ ಮೆಟ್ರೋ ಬೇಡವಾಗಿರಬಹುದು. ಆದರೆ ಮೆಟ್ರೋ ಸಜ್ಜಾಗುತ್ತಿರುವುದು ನಾಳಿನ ಬೆಂಗಳೂರಿಗರಿಗಾಗಿ. ಅಂದರೆ ನಾಳೆ ಇಲ್ಲಿಗೆ ಬರುವ ಸಹಸ್ತ್ರಾರು ವಲಸಿಗರಿಗೆ. ಬಿಹಾರಿನ ಬಡಗಿಗಳಿಗೆ ,ಒರಿಸ್ಸಾದ ಪೈಂಟರ್ ಗಳಿಗೆ,ಪಂಜಾಬಿನ ಕಮ್ಮಾರರಿಗೆ, ಅಂಗಡಿ ಮಾಡುವ ಮಾರವಾಡಿಗಳಿಗೆ,ಬಂಗಾರದ ಗಿರವಿ ಅಂಗಡಿ ಇಡುವ ಮಲೆಯಾಳಿಗಳಿಗೆ,ಧ್ವನಿಯಿಲ್ಲದ ಕನ್ನಡಿಗರ ಮೇಲೆ ಕರುಣೆ ತೋರಿ ಕನ್ನಡ ಚಿತ್ರಗಳಿಗೆ ಹಿನ್ನೆಲೆ ಧ್ವನಿ ನೀಡಲು ಬರುವ ಗಾಯಕರಿಗೆ,ಸುಲಭ ಶೌಚಾಲಯ ಕಾಯಲು ಬಂದು ಪಾನಿಪುರಿ ಅಂಗಡಿ ಇಡುವ ಉತ್ತರ ಪ್ರದೇಶದ ಭಯ್ಯಗಳಿಗೆ,ಬಾಂಬೆ, ದೆಹಲಿಗಳಲ್ಲಿ ಅಪರಾಧಗಳನ್ನೆಸಗಿ ಬೇoಗಲೂರಿನಲ್ಲಿ ತಲೆಮರೆಸಿಕೊಂಡಿರುವ ಕ್ರಿಮಿನಲ್ಗಳಿಗೆ,ಹೀಗೆ ಮುಂತಾದವರಿಗೆ ಸಾಕಷ್ಟು ಸ್ಸ್ಥಳಾವಕಾಶ ಮಾಡಿಕೊಡುವ ಉದ್ದೇಶದಿಂದ ಮೆಟ್ರೋ ಸಜ್ಜಾಗುತ್ತಿದೆ. ಇಂದು ಬೆಂಗಳೂರಿಗರು ಎಂದು ಕರೆಸಿಕೊಳ್ಳುತ್ತಿರುವ ಜನ ಅಂದು ದೂಳು ,ಹೊಗೆ ಕುಡಿದು ಸತ್ತೆ ಹೋಗಿರುತ್ತಾರೆ.ರಸ್ತೆಗಳನ್ನು ಅಗಲಮಾಡುವ ತರಾತುರಿಯಲ್ಲಿ. ಹೊಸ ಬಡಾವಣೆ ,ಫ್ಲಾಟ್ ಗಳನ್ನು ನಿರ್ಮಿಸುವ ಬರದಲ್ಲಿ ಹಲವಾರು ಬಡ ಬೆಂಗಳೂರಿಗರನ್ನು ಈಗಾಗಲೇ ಎತ್ತಂಗಡಿ ಮಾಡಲಾಗಿದೆ. ಬೆಂಗಳೂರಿಗರನ್ನು ಕಾಡುವ ಮುಖ್ಯ ಸಮಸ್ಯೆ ಎಂದರೆ ದೂಳು, ಹೊಗೆ ಮತ್ತು ಕಾನೂನು. ಎಷ್ಟೂ  ಜನ ಇಲ್ಲಿ ಮನೆಕಟ್ಟಿಕೊಂಡು ಆರಾಮವಾಗಿದ್ದರು. ಈಗ ಅವರು ಮನೆ ಮುಂದೆ ವಾಹನ ನಿಲ್ಲಿಸಿದರೆ ಟ್ರಾಫಿಕ್ ಪೊಲೀಸರು ಜುಲ್ಮಾನೆ ವಿಧಿಸುತ್ತಾರೆ. ಕೆಲವರ ಮನೆ ಮುಂದಿನ ರಸ್ತೆಗಳು ಒನ್ ವೇ ಆಗಿದೆ. ಆದುದರಿಂದ ಅವರು ಸ್ವಂತಮನೆಗಳಿಗೆ ಸುತ್ತಿಬಳಸಿ ಓಡಾಡಬೇಕು, ಪೆಟ್ರೋಲ್ ಉಳಿಸಬೇಕೆಂದರೆ ಕದ್ದೋಡಾಡಬೇಕು!. ನಮಗೆ ಗೊತ್ತಿಲ್ಲದಂತೆಯೇ ನಾವು ಕ್ರಮೇಣ ಅಪರಾಧಿಗಳಾಗುವ ಪ್ರಕ್ರಿಯೆಯೇ ಒಂದು ಸೋಜಿಗ. ಕೃಪೆ: ನಮ್ಮ ಸಂವಿಧಾನ!. ನಮ್ಮ ಊರುಗಳೇ ನಮಗೆ ಬಂಧನ."ತಿಲಕಾಷ್ಟ ಮಹಿಷ ಬಂಧನ" ಎಂಬಂತೆ ಇದು ಒಂಥರಾ ಬಂಧನ. ಹೇಳಿಕೊಳ್ಳಲು ಆದಾಗ ,ಬಿಡಲು ಆಗದ ವಿಚಿತ್ರ ಸ್ತಿತಿ. ಇಲ್ಲಿಗೆ ಬರುವ ವಿಭಿನ್ನ ಜನಸ್ತೋಮದ ನಿರ್ವಾಹಣೆಯ ಅನಿವಾರ್ಯತೆ ,ಹಾಗೂ ಆಡಳಿತಾತ್ಮಕ ಸಂಕೀರ್ಣತೆಗಳಿಂದಾಗಿ ಈ ನಗರವನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ತೀರ್ಮಾನ ಕೈಗೊಂಡರೂ ಅಚ್ಚರಿ ಇಲ್ಲ. ಇರಲಿ ಬಿಡಿ, ಆಡಳಿತಾತ್ಮಕ ಉದ್ದೇಶಗಳಿಗಾಗಿ ಹಾಗೂ ಜನರ ಒಳಿತಿಗಾಗಿ ಸರ್ಕಾರ ಕೈಗೊಳ್ಳುವ ಎಲ್ಲ ನಿರ್ಧಾರಗಳೂ ಸ್ವಾಗತಾರ್ಹವೇ. ಭಾಷೆ,ಬಣ್ಣ,ಜಾತಿ,ಧರ್ಮ  ..ಮುಂತಾದ ಕ್ಷುಲ್ಲಕ ಕಾರಣಗಳನ್ನು ಮುಂದೊಡ್ಡಿ ಬಹುಸಂಖ್ಯಾತರ ಇಚ್ಚೆಗೆ ವಿರುದ್ಧವಾಗಿ ಹೋಗುವುದು ತಪ್ಪು ಎಂದು ನನಗೂ ಗೊತ್ತಿದೆ. ಜನಮತದ ಮೇಲೆ ಹೋದರೆ ನಾವು ಬೆಂಗಳೂರನ್ನು ಕನ್ನಡ ಮಾತೃಭಾಷೆ ಹೊಂದಿರುವವರ ನೆಲೆಬೀಡು ಎಂದು ಪರಿಗಣಿಸುವಲ್ಲಿ ಕೆಲವು ತಾಂತ್ರಿಕ ದೋಷಗಳನ್ನು ಎದುರಿಸುತ್ತೇವೆ.ಈ ಭಾರಿ ಬೆಂಗಳೂರನ್ನು ವಿಧಾನಸಭೆಯಲ್ಲಿ ಮತ್ತು ಬಿಬಿಎಂಪಿ(ಮಹಾನಗರ ಪಾಲಿಕೆ)ಯಲ್ಲಿ ಪ್ರತಿನಿಧಿಸುವ ಚುನಾಯಿತ ಸದಸ್ಯರಲ್ಲಿ ಹೆಚ್ಚಿನವರು ಕನ್ನಡೇತರ ಮಾತೃಭಾಷೆಯವರು!. ಇರಲಿ, ಅದು ಜನಗಳ ಆಯ್ಕೆ, ಬೆಂಗಳೂರಿನ ಜನರ ಆಯ್ಕೆಯನ್ನು ಮೈಸೂರಿನಲ್ಲೋ ,ಮಂಗಳೂರಿನಲ್ಲೋ ಕುಳಿತಿರುವ ಬುದ್ಧಿಜೀವಿಗಳು ಟೀಕೆ ಮಾಡುವುದು ಅಧಿಕ ಪ್ರಸಂಗಿತನವಾಗುತ್ತದೆ. ನಾವು ಚರ್ಚಿಸುತ್ತಿರುವುದು ಜನರ ಬದುಕಿನ ಬಗ್ಗೆ, ಕೆಲವು ನಗರ ವಾಸಿಗಳು ಕಾಂಕ್ರೀಟ್ ನ ಚಕ್ರವ್ಯೂಹದಲ್ಲಿ ಬಂಧಿಯಾಗಿ ಸಾಯುತ್ತಿರುವ ಬಗ್ಗೆ. ಈ ದೇಶದ ಪ್ರಗತಿ ಕೇವಲ ಕೆಲವೇ ಊರುಗಳಲ್ಲಿ ಕೇಂದ್ರೀಕೃತವಾಗುತ್ತಾ ಅಲ್ಲಿ ಸ್ಥಳೀಯಯರು ವಿವಿಧ ರೀತಿಯ ಕಷ್ಟಗಳಿಗೀಡಾಗುವಂತಹಾ ಪ್ರಸಂಗದ ಬಗ್ಗೆ. ಈ ಬಗ್ಗೆ ಥಾಮಸ್ ಫ್ರೈಡ್ಮ್ಯಾನ್ ಎಂಬುವರು ಬರೆದಿರುವ "ಹಾಟ್,ಫ್ಲಾಟ್ ಅಂಡ್ ಕ್ರೌಡೆಡ್" ಎಂಬ ಪುಸ್ತಕ ನೆನಪಿಗೆ ಬರುತ್ತಿದೆ. ಈ ಬಗ್ಗೆ ಮುಂದಿನ ಭಾಗದಲ್ಲಿ ಬರೆಯುತ್ತೇನೆ. 

Tuesday, May 4, 2010

ಪರಿಸರದ ವ್ಯಥೆ

ಕಾನೂನೀನ ಪ್ರಕಾರ ನಾಯಿಗಳನ್ನು ಕೊಲ್ಲುವಂತಿಲ್ಲವಂತೆ. ಆದರೆ ಹೊಸಾ ಏರಿಯಗಳನ್ನು ಈ ನಾಯಿಗಳಿಂದ ಮುಕ್ತವಾಗಿಡುವ ಅವಶ್ಯಕಥೆ ಇದೆ .ಇದಕ್ಕೆ ಮುಖ್ಯ ಕಾರಣ ಎಂದರೆ ಜೈವಿಕ ಪ್ರಬೇದಗಳ ನಾಶ. ಒಂದು ಸಾರಿ ಕೇಶವಪ್ರಸಾದ್ ಕೃಷಿ ವಿಶ್ವವಿದ್ಯಾಲಯದ ಸರಹದ್ದಿನಲ್ಲಿ ಓಡಾಡುತ್ತಿರುವಾಗ ಒಂದು ಬೀದಿ ನಾಯಿ ಎಂತಹುದೋ ಒಂದು ಚಿಕ್ಕ ಪ್ರಾಣಿಯನ್ನು ಕಚ್ಚಿಕೊಂಡು ಓಡುವುದನ್ನುನೋಡಿದರಂತೆ. ಕಲ್ಲು ಹೊಡೆದಾಗ ಅದು ಆ ಶವವನ್ನು ಕೆಳಕ್ಕೆ ಬೀಳಿಸಿ ಓಡಿಹೋಯಿತು. ನೋಡಿದರೆ ಅದು ಅಳಿಲೂ ಅಲ್ಲ.ಇಲಿಯೂ ಅಲ್ಲ.ಉಡಾವೂ ಅಲ್ಲ. ಬಟ್, ದೂರದಿಂದ ಹಾಗೆ ಕಾಣುವ ಎಂತದೋ ಒಂದು ಪ್ರಾಣಿ. ಇದು ವರುಷಗಳ ಹಿಂದಿನ ಮಾತು. ಈಗ ಆ ಪ್ರಬೇದವೇ ನಶಿಸಿಹೊಗಿರಬಹುದು.
ಜನಸಂಖ್ಯೆ ಬೆಳೆದಾಗ ಜನ ದೂರದೂರ ಸೈಟ್ ತೆಗೆದುಕೊಂಡು ಮನೆ ಕಟ್ಟುತ್ತಾರೆ. ಊರುಗಳು ಬೆಳೆಯುತ್ತಾ ಹೋದಂತೆ ಅವು ಕಾಡುಗಳ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಬಾರತದಲ್ಲಿ ಪ್ರತಿಯೊಂದು ಭೂಪ್ರದೇಶವೂ ಒಂದಲ್ಲಾ ಒಂದು ಬಗೆಯ ಜೀವಜಂತು ಗಳಿಗೆ ಆವಾಸಸ್ಥಾನವಾಗಿದೆ.ಇದ್ದಕ್ಕೆ ಕಾರಣವಾಗಿರುವುದು ಇಲ್ಲಿನ ಉತ್ತಮ ಹವಾಗುಣ. ನಾವು ಹೋದೆಡೆಯೆಲ್ಲಾ ನಮ್ಮ ಸಾಕು ಪ್ರಾಣಿಗಳನ್ನು ಕರೆದೊಯ್ಯುತ್ತೇವೆ.ಮುನುಷ್ಯರಂತೂ ಒಂದಿಸ್ಟು ಜವಾಬ್ದಾರಿಯಿಂದ ವರ್ತಿಸುತ್ತೇವೆ. ಆದರೆ ನಮ್ಮ ನಾಯಿ ಬೆಕ್ಕುಗಳು ಹಾಗೆ ಮಾಡಬೇಕಲ್ಲ?.
 ತಮಗಿಂತ ಚಿಕ್ಕದಾದ ಯಾವುದೇ ಪ್ರಾಣಿ ಸಿಕ್ಕರೂ ಶಖ್ಯಾನುಸಾರ ಕೊಂದುತಿನ್ನುತ್ತವೆ. ಬೆಂಗಳೂರಿನಲ್ಲಿ ಹಲವು ಲೇಔಟ್ ವಿಸ್ತಾರಗೊಳ್ಳುತ್ತಿರುವ ಕಡೆ ಹಲವಾರು ಜೀವ ಪ್ರಬೇದಗಳಿವೆ.ಇಲ್ಲಿಯವರೆಗೆ ಹೇಗೋ ಅವು ರೈತನೊಂದಿಗೆ ಅಡ್ಜಸ್ಟ್ ಮಾಡಿಕೊಂಡು ಬದುಕುನೂಕುತ್ತಿದ್ದವು. ಆದರೆ ಅಲ್ಲಿ ಜನ ಮನೆಕಟ್ಟುತ್ತಿದ್ದಂತೆ ಅವುಗಳ ಭವಿಷ್ಯ ಕಾಂಕ್ರೀಟ್ ಕಾಡಿನಡಿ ಸಮಾಧಿಯಾಗುತ್ತವೆ. ಮುಂದೊಂದುದಿನ ಅವುಗಳ ಪಳೆಯುಳಿಕೆಗಳನ್ನು ಭವಿಷ್ಯದ ಮಾನವರು ನೋಡಬಹುದೇನೋ?!.ಇದರಲ್ಲಿ ಸೊಳ್ಳೆ ಮತ್ತು ಇಲಿಗಳನ್ನು ನಾಚಿಸುವಂತೆ ನಮ್ಮ ಜನ ಜನಸಂಖ್ಯೆ ಹೆಚ್ಚಿಸುತ್ತಿರುವುದು ಒಂದು ಕಾರಣವಾದರೂ ಜನಗಳನ್ನು ನಾಯಿಗಳಂತೆ ಟ್ರೀಟ್ ಮಾಡುವುದು ಸಾಧ್ಯವಿಲ್ಲವಲ್ಲ. ಅಷ್ಟಕ್ಕೂ ಜನರು ಎಲ್ಲಾ ಪ್ರಾಣಿಗಳಿಂದ ಒಂದು ಉಪಯೋಗ ಪಡಯುವ ಬುದ್ದಿವಂತಿಕೆ ತೋರುತ್ತಾರೆ.ಮೇನಕಾ ಊಳಿಡುತ್ತಾಳೆ ಎಂಬ ಏಕೈಕ ಕಾರಣಕ್ಕೆ,ಅಥವಾ ಕೆಲವು ಜನರಿಗೆ ನಾಯಿಯ ಬಗ್ಗೆ ಒಂದು ರೀತಿಯ ಅಸಹಜ ಒಲವಿದೆ ಎಂಬ ಕಾರಣಕ್ಕೆ ನಾವು ಈ ದೇಶದ ಜೈವಿಕ ಪ್ರಬೇದಗಳ ಅವನತಿಗೆ ಅಡಿಪಾಯಹಾಕಬೇಕಾಗಿಲ್ಲ.
 ಚಂದ್ರಾ ಲೇಔಟ್ ನಲ್ಲಿ ನಾಯಿಗಳು  ಮಗುವೊಂದನ್ನು ಕೊಂದಬಳಿಕ ಸರ್ಕಾರ ಎಚ್ಚೆತುಕ್ಕೊಂಡು ನಾಯಿಗಳನ್ನು ಕೊಲ್ಲಲು ಆರಂಬಿಸಿತು. ಆಮೇಲೆ ಕೆಲವು ಬ್ರಷ್ಟ್ರರು ಇದರಲ್ಲಿ ಹಣಮಾಡುವ ಅವಕಾಶವನ್ನೂ ಗುರುತಿಸಿ "ನಾಯಿಗಳಿಗೆ ಆಪರೇಶನ್" ಮಾಡುವ ಸ್ಕೀಮು ಆರಂಬಿಸಿದರು. ಆಪರೆಶನ್ನೇ ಮಾಡಿದರೋ,ಅಥವಾ ಹಿಡಿದ ನಾಯಿಗಳಿಗೆ ಇನ್ನೇನನ್ನೋ ಮಾಡಿದರೋ ಅವುಗಳ ಸಂಖ್ಯೆ ಮೊದಲಿಗಿಂತಲ್ಲೋ ಫಾಸ್ಟಾಗಿ  ದ್ವಿಗುಣಗೊಳ್ಳಲಾರಮ್ಬಿಸಿದವು. ಒಟ್ಟಾರೆ ಇದು 'ಆಪರೇಶನ್ ಕಮಲ'ದಷ್ಟು ಸಕ್ಸೆಸ್ಸ್ ಆಗಲಿಲ್ಲ.
ನಾಯಿಗಳಿಗೂ ಮನುಷ್ಯರಿಗೋ ಇರುವ ಅವಿನಾಭಾವ ಸಂಭಂದ ಏನೇ ಇರಲಿ ಕೊನೆಪಕ್ಷ ನಗರದ ಹೊರವಲದಲ್ಲಾದರೂ ನಾಯಿಗಳನ್ನು ಕಂಟ್ರೋಲ್ ಮಾಡಿದಲ್ಲಿ ಪರಿಸರಕ್ಕೆ ಒಂದಿಷ್ಟು ಉಪಯೋಗವಾಗಲಿದೆ.
ಈ ಹಿಂದೆ ಕಾಗೆಗಳ ಕುಲ ದೇಶದಲ್ಲಿ ಹೆಚುತ್ತಿರುವುದರ ಬಗ್ಗೆ ಪಕ್ಷಿಶಾಸ್ತ್ರಜ್ಞರು ಆತಂಕವ್ಯಕ್ತಪಡಿಸಿ ಇದರಿಂದ ಗುಬ್ಬಚ್ಚಿಗಳಂತಹ ಹಲವು ಚಿಕ್ಕ ಪಕ್ಷಿಗಳ ತಳಿಗೆ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇಂದು ನಾವು ಚಿಕ್ಕವರಿದ್ದಾಗ ಕಾಣುವಷ್ಟು ಗುಬ್ಬಚ್ಚ್ಚಿಗಳು ಕಂಡು ಬರುವುದಿಲ್ಲ. ಇನ್ನೂ ನಾವು ಕಥೆಗಳಲ್ಲಿ ಓದಿ ಬೆಚ್ಚಿಬೀಳುತಿದ್ದ ರಣಹದ್ದುಗಳು ವಿನಾಶದ ಅಂಚಿನಲ್ಲಿದೆ. ಇದನ್ನು ಉಳಿಸಲು ಪಂಜಾಬ್ನಲ್ಲಿ ಒಂದು ಇನ್ಸ್ಟಿಟ್ಯೂಟ್ ತೆರೆಯಲಾಗಿದೆ!. (Vulture Care Centre, Pinjore). ಇನ್ನು, ತಮ್ಮ ಆಸ್ತಿತ್ವಉಳಿಸಿಕೊಳ್ಳಲು ಬ್ರೀಟಿಶ್ಅಧಿಕಾರಿಗಳ ಕೈ,ಕಾಲು ಇತ್ಯಾದಿಗಳನ್ನು ನೆಕ್ಕುತಿದ್ದ ನಮ್ಮ ರಾಜರುಗಳು ಮೂಕಪ್ರಾಣಿಗಳನ್ನು ಕೊಂದು ಅವುಗಳ ಶವದೊಂದಿಗೆ ಫೋಟೋ ತೆಗೆಸಿಕೊಂಡು ಮೆರೆಯುತ್ತಿದ್ದುದು ಅಸಹ್ಯಹುಟ್ಟಿಸುತ್ತದೆ.