Tuesday, May 4, 2010

ಪರಿಸರದ ವ್ಯಥೆ

ಕಾನೂನೀನ ಪ್ರಕಾರ ನಾಯಿಗಳನ್ನು ಕೊಲ್ಲುವಂತಿಲ್ಲವಂತೆ. ಆದರೆ ಹೊಸಾ ಏರಿಯಗಳನ್ನು ಈ ನಾಯಿಗಳಿಂದ ಮುಕ್ತವಾಗಿಡುವ ಅವಶ್ಯಕಥೆ ಇದೆ .ಇದಕ್ಕೆ ಮುಖ್ಯ ಕಾರಣ ಎಂದರೆ ಜೈವಿಕ ಪ್ರಬೇದಗಳ ನಾಶ. ಒಂದು ಸಾರಿ ಕೇಶವಪ್ರಸಾದ್ ಕೃಷಿ ವಿಶ್ವವಿದ್ಯಾಲಯದ ಸರಹದ್ದಿನಲ್ಲಿ ಓಡಾಡುತ್ತಿರುವಾಗ ಒಂದು ಬೀದಿ ನಾಯಿ ಎಂತಹುದೋ ಒಂದು ಚಿಕ್ಕ ಪ್ರಾಣಿಯನ್ನು ಕಚ್ಚಿಕೊಂಡು ಓಡುವುದನ್ನುನೋಡಿದರಂತೆ. ಕಲ್ಲು ಹೊಡೆದಾಗ ಅದು ಆ ಶವವನ್ನು ಕೆಳಕ್ಕೆ ಬೀಳಿಸಿ ಓಡಿಹೋಯಿತು. ನೋಡಿದರೆ ಅದು ಅಳಿಲೂ ಅಲ್ಲ.ಇಲಿಯೂ ಅಲ್ಲ.ಉಡಾವೂ ಅಲ್ಲ. ಬಟ್, ದೂರದಿಂದ ಹಾಗೆ ಕಾಣುವ ಎಂತದೋ ಒಂದು ಪ್ರಾಣಿ. ಇದು ವರುಷಗಳ ಹಿಂದಿನ ಮಾತು. ಈಗ ಆ ಪ್ರಬೇದವೇ ನಶಿಸಿಹೊಗಿರಬಹುದು.
ಜನಸಂಖ್ಯೆ ಬೆಳೆದಾಗ ಜನ ದೂರದೂರ ಸೈಟ್ ತೆಗೆದುಕೊಂಡು ಮನೆ ಕಟ್ಟುತ್ತಾರೆ. ಊರುಗಳು ಬೆಳೆಯುತ್ತಾ ಹೋದಂತೆ ಅವು ಕಾಡುಗಳ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಬಾರತದಲ್ಲಿ ಪ್ರತಿಯೊಂದು ಭೂಪ್ರದೇಶವೂ ಒಂದಲ್ಲಾ ಒಂದು ಬಗೆಯ ಜೀವಜಂತು ಗಳಿಗೆ ಆವಾಸಸ್ಥಾನವಾಗಿದೆ.ಇದ್ದಕ್ಕೆ ಕಾರಣವಾಗಿರುವುದು ಇಲ್ಲಿನ ಉತ್ತಮ ಹವಾಗುಣ. ನಾವು ಹೋದೆಡೆಯೆಲ್ಲಾ ನಮ್ಮ ಸಾಕು ಪ್ರಾಣಿಗಳನ್ನು ಕರೆದೊಯ್ಯುತ್ತೇವೆ.ಮುನುಷ್ಯರಂತೂ ಒಂದಿಸ್ಟು ಜವಾಬ್ದಾರಿಯಿಂದ ವರ್ತಿಸುತ್ತೇವೆ. ಆದರೆ ನಮ್ಮ ನಾಯಿ ಬೆಕ್ಕುಗಳು ಹಾಗೆ ಮಾಡಬೇಕಲ್ಲ?.
 ತಮಗಿಂತ ಚಿಕ್ಕದಾದ ಯಾವುದೇ ಪ್ರಾಣಿ ಸಿಕ್ಕರೂ ಶಖ್ಯಾನುಸಾರ ಕೊಂದುತಿನ್ನುತ್ತವೆ. ಬೆಂಗಳೂರಿನಲ್ಲಿ ಹಲವು ಲೇಔಟ್ ವಿಸ್ತಾರಗೊಳ್ಳುತ್ತಿರುವ ಕಡೆ ಹಲವಾರು ಜೀವ ಪ್ರಬೇದಗಳಿವೆ.ಇಲ್ಲಿಯವರೆಗೆ ಹೇಗೋ ಅವು ರೈತನೊಂದಿಗೆ ಅಡ್ಜಸ್ಟ್ ಮಾಡಿಕೊಂಡು ಬದುಕುನೂಕುತ್ತಿದ್ದವು. ಆದರೆ ಅಲ್ಲಿ ಜನ ಮನೆಕಟ್ಟುತ್ತಿದ್ದಂತೆ ಅವುಗಳ ಭವಿಷ್ಯ ಕಾಂಕ್ರೀಟ್ ಕಾಡಿನಡಿ ಸಮಾಧಿಯಾಗುತ್ತವೆ. ಮುಂದೊಂದುದಿನ ಅವುಗಳ ಪಳೆಯುಳಿಕೆಗಳನ್ನು ಭವಿಷ್ಯದ ಮಾನವರು ನೋಡಬಹುದೇನೋ?!.ಇದರಲ್ಲಿ ಸೊಳ್ಳೆ ಮತ್ತು ಇಲಿಗಳನ್ನು ನಾಚಿಸುವಂತೆ ನಮ್ಮ ಜನ ಜನಸಂಖ್ಯೆ ಹೆಚ್ಚಿಸುತ್ತಿರುವುದು ಒಂದು ಕಾರಣವಾದರೂ ಜನಗಳನ್ನು ನಾಯಿಗಳಂತೆ ಟ್ರೀಟ್ ಮಾಡುವುದು ಸಾಧ್ಯವಿಲ್ಲವಲ್ಲ. ಅಷ್ಟಕ್ಕೂ ಜನರು ಎಲ್ಲಾ ಪ್ರಾಣಿಗಳಿಂದ ಒಂದು ಉಪಯೋಗ ಪಡಯುವ ಬುದ್ದಿವಂತಿಕೆ ತೋರುತ್ತಾರೆ.ಮೇನಕಾ ಊಳಿಡುತ್ತಾಳೆ ಎಂಬ ಏಕೈಕ ಕಾರಣಕ್ಕೆ,ಅಥವಾ ಕೆಲವು ಜನರಿಗೆ ನಾಯಿಯ ಬಗ್ಗೆ ಒಂದು ರೀತಿಯ ಅಸಹಜ ಒಲವಿದೆ ಎಂಬ ಕಾರಣಕ್ಕೆ ನಾವು ಈ ದೇಶದ ಜೈವಿಕ ಪ್ರಬೇದಗಳ ಅವನತಿಗೆ ಅಡಿಪಾಯಹಾಕಬೇಕಾಗಿಲ್ಲ.
 ಚಂದ್ರಾ ಲೇಔಟ್ ನಲ್ಲಿ ನಾಯಿಗಳು  ಮಗುವೊಂದನ್ನು ಕೊಂದಬಳಿಕ ಸರ್ಕಾರ ಎಚ್ಚೆತುಕ್ಕೊಂಡು ನಾಯಿಗಳನ್ನು ಕೊಲ್ಲಲು ಆರಂಬಿಸಿತು. ಆಮೇಲೆ ಕೆಲವು ಬ್ರಷ್ಟ್ರರು ಇದರಲ್ಲಿ ಹಣಮಾಡುವ ಅವಕಾಶವನ್ನೂ ಗುರುತಿಸಿ "ನಾಯಿಗಳಿಗೆ ಆಪರೇಶನ್" ಮಾಡುವ ಸ್ಕೀಮು ಆರಂಬಿಸಿದರು. ಆಪರೆಶನ್ನೇ ಮಾಡಿದರೋ,ಅಥವಾ ಹಿಡಿದ ನಾಯಿಗಳಿಗೆ ಇನ್ನೇನನ್ನೋ ಮಾಡಿದರೋ ಅವುಗಳ ಸಂಖ್ಯೆ ಮೊದಲಿಗಿಂತಲ್ಲೋ ಫಾಸ್ಟಾಗಿ  ದ್ವಿಗುಣಗೊಳ್ಳಲಾರಮ್ಬಿಸಿದವು. ಒಟ್ಟಾರೆ ಇದು 'ಆಪರೇಶನ್ ಕಮಲ'ದಷ್ಟು ಸಕ್ಸೆಸ್ಸ್ ಆಗಲಿಲ್ಲ.
ನಾಯಿಗಳಿಗೂ ಮನುಷ್ಯರಿಗೋ ಇರುವ ಅವಿನಾಭಾವ ಸಂಭಂದ ಏನೇ ಇರಲಿ ಕೊನೆಪಕ್ಷ ನಗರದ ಹೊರವಲದಲ್ಲಾದರೂ ನಾಯಿಗಳನ್ನು ಕಂಟ್ರೋಲ್ ಮಾಡಿದಲ್ಲಿ ಪರಿಸರಕ್ಕೆ ಒಂದಿಷ್ಟು ಉಪಯೋಗವಾಗಲಿದೆ.
ಈ ಹಿಂದೆ ಕಾಗೆಗಳ ಕುಲ ದೇಶದಲ್ಲಿ ಹೆಚುತ್ತಿರುವುದರ ಬಗ್ಗೆ ಪಕ್ಷಿಶಾಸ್ತ್ರಜ್ಞರು ಆತಂಕವ್ಯಕ್ತಪಡಿಸಿ ಇದರಿಂದ ಗುಬ್ಬಚ್ಚಿಗಳಂತಹ ಹಲವು ಚಿಕ್ಕ ಪಕ್ಷಿಗಳ ತಳಿಗೆ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇಂದು ನಾವು ಚಿಕ್ಕವರಿದ್ದಾಗ ಕಾಣುವಷ್ಟು ಗುಬ್ಬಚ್ಚ್ಚಿಗಳು ಕಂಡು ಬರುವುದಿಲ್ಲ. ಇನ್ನೂ ನಾವು ಕಥೆಗಳಲ್ಲಿ ಓದಿ ಬೆಚ್ಚಿಬೀಳುತಿದ್ದ ರಣಹದ್ದುಗಳು ವಿನಾಶದ ಅಂಚಿನಲ್ಲಿದೆ. ಇದನ್ನು ಉಳಿಸಲು ಪಂಜಾಬ್ನಲ್ಲಿ ಒಂದು ಇನ್ಸ್ಟಿಟ್ಯೂಟ್ ತೆರೆಯಲಾಗಿದೆ!. (Vulture Care Centre, Pinjore). ಇನ್ನು, ತಮ್ಮ ಆಸ್ತಿತ್ವಉಳಿಸಿಕೊಳ್ಳಲು ಬ್ರೀಟಿಶ್ಅಧಿಕಾರಿಗಳ ಕೈ,ಕಾಲು ಇತ್ಯಾದಿಗಳನ್ನು ನೆಕ್ಕುತಿದ್ದ ನಮ್ಮ ರಾಜರುಗಳು ಮೂಕಪ್ರಾಣಿಗಳನ್ನು ಕೊಂದು ಅವುಗಳ ಶವದೊಂದಿಗೆ ಫೋಟೋ ತೆಗೆಸಿಕೊಂಡು ಮೆರೆಯುತ್ತಿದ್ದುದು ಅಸಹ್ಯಹುಟ್ಟಿಸುತ್ತದೆ.

No comments: