ಬೀದಿನಾಯಿಗಳು ಮತ್ತೊಮ್ಮೆ ಮಗುವೊಂದನ್ನು ಕಚ್ಚಿ ಕಚ್ಚಿ ಸಾಯಿಸಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಸರ್ಕಾರದ ಬೇರೆ ಬೇರೆ ಅಂಗಗಳಲ್ಲಿ ಗೊಂದಲ ಇದೆ. ನಾಯಿಗಳ ಸಂತಾನ ಹರಣ ಆಪರೇಶನ್ ಕೆಲಸ ತ್ವರಿತ ಗೊಳಿಸುವುದಾಗಿ ಬೀ.ಬೀ.ಎಂ ಪಿ ಆಯುಕ್ತ ಉಡಾಫೆ ಹೇಳಿಕೆ ಕೊಟ್ಟಿದ್ದಾನೆ. ಇಷ್ಟುವರ್ಷ ನಡೆದ ಸಂತಾನ ಹರಣ ಶಸ್ತ್ರ ಚಿಕಿತ್ತ್ಸೆಯಿಂದ ನಾವು ಸಾದಿಸಿರುವುದೇನು? ಮೊದಲಾದರೆ ವರ್ಷ ವರ್ಷ ಒಂದಷ್ಟು ನಾಯಿಗಳನ್ನು ಸಾಯಿಸುತಿದ್ದರು.ಈಗ ನಾಯಿ ಆಪರೇಶನ್ ಹೆಸರಲ್ಲಿ ಕೋಟ್ಯಾಂತರ ದರೋಡೆ ನಡೆದಿದೆ ಎಂಬುದಕ್ಕೆ ಬೀದಿಯಲ್ಲಿ ಓಡಾಡುತ್ತಿರುವ ನಾಯಿಗಳೇ ಸಾಕ್ಷಿ!. ನಾವು ಈಗ ಆಲೋಚಿಸಬೇಕಾದ್ದು ಎರಡು ಕಾಲಿನ ನಾಯಿಗಳ ಪ್ರಭೇದಗಳ ಬಗ್ಗೆ. ಇವು ನಾಯಿ ದಯಾ ಸಂಘಗಳು. ಇದರ ಸದಸ್ಯರು ಎರಡುಕಾಲಿನ ನರ ಭಕ್ಷಕ ನಾಯಿಗಳು ಎಂದರೆ ತಪ್ಪಾಗಲಾರದು.. ಯಾಕೆಂದರೆ ನಾಯಿಗಳನ್ನು ಬಿಟ್ಟು ಇವರಿಗೆ ಬೇರೆ ಯಾವುದೇ ಪ್ರಾಣಿಗಳ ಬಗ್ಗೆ ಕಾಳಜಿ ಇಲ್ಲ.ನಾಯಿಗಳು ನಾನ್ ವೆಜ್ ಹೋಟೆಲ್ ಮಾಂಸ ತಿಂದು ಹುಲಿಗಳನ್ತಾಗಿವೆ. ಯಾವುದಾದರೂ ಒಂದು ಅಳಿಲು ಮರದಿಂದ ಕೆಳಗಿಳಿದರೆ ಬಿಟ್ಟ ಬಾಣದಂತೆ ನುಗ್ಗುವ ಈ ಬೀದಿ ನಾಯಿಗಳು ಅವನ್ನು ಹಿಡಿದು ಕೊಲ್ಲುತ್ತವೆ. ಇನ್ನು ಹಕ್ಕಿಮರಿಗಳು ಮರದಲ್ಲಿ ಕಟ್ಟಿದ ಗೂಡಿಂದ ಕೆಳಗೆ ಬಿತ್ತೋ ಅವು ನೇರವಾಗಿ ಬೀದಿನಾಯಿಗಳ ಹೊಟ್ಟೆ ಸೇರುತ್ತವೆ. ಇನ್ನು ಬೆಕ್ಕಿನ ಮರಿಗಳ ಪಾಡಂತೂ ಹೇಳತೀರದು.ಇನ್ನು ಚಿಕ್ಕ ಮಕ್ಕಳ ಬಗ್ಗೆ ನಾವು ಮೊನ್ನೆ ಪೇಪರ್ನಲ್ಲಿ ಓದಿದ್ದೆವಲ್ಲ.
ಅವಕ್ಕೂ ಆಪರೇಶನ್ ಕಮಲ ಮಾಡಿ ,ಪ್ಲೀಸ್, ಅನ್ನಬಹುದು.ಆದರೆ ಇವರಿರುವ ವಿಧಾನ ಸೌದದ ಒಳಗೆಯೂ ಬೀದಿ ನಾಯಿಗಳ ಹಿಂಡೇ ಇದೆ. ಅಂದಮೇಲೆ ಈ ನಾಯಿಗಳಿಗೂ ಇವರಿಗೋ ಏನೋ ರಕ್ತ ಸಂಭಂದ ಇದೆ ಅಂತಾಯಿತಲ್ಲ!.ಈ ಬಗ್ಗೆ ಪಕ್ಷದ (ಏಕೈಕ?) ಸಂಭಾವಿತ ನಾಯಕ ಮತ್ತು ನಗಾರಾಭಿವೃದ್ದಿ ಸಚಿವ ಸುರೇಶಕುಮಾರ್ ಏನಂತಾರೂ ಗೊತ್ತಿಲ್ಲ.(ನಗರದಲ್ಲೇ ತಾನೇ ನಾಯಿ ಕಾಟ!). ಆಪರೇಶನ್ ಹೆಸರಲ್ಲಿ ನಾಯಿಗಳನ್ನು ಹೊತ್ತೊಯ್ಯುವ ಬೀ ಬೀ ಎಂ ಪಿ ಯವರು ಅದನ್ನು ಇನ್ನೊಂದು ಏರಿಯಾಗೆ ಬಿಡುತ್ತಾರೆ. ಸಂತಾನ ಹರಣ ಆಪರೇಶನ್ ಗಳು ಮನುಷ್ಯರಿಗೆ ಯಶಸ್ವಿಯಾಗಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಅಂದಮೇಲೆ ನಾಯಿಗಳ ಮೇಲೆ ಮಾಡಲು ಸಾಧ್ಯ ಆಗುತ್ತಾ ? ಈ ಚಿಕಿತ್ಸೆ ಭಾರತದಲ್ಲಿ ಯಶಸ್ವಿಯಾಗಿಲ್ಲಾ ಅಂತಾ ಬೆಂಗಳೊರಿನಲ್ಲಿ ತಿರುಗಾಡೋ ಯು.ಪಿ/ಬಿಹಾರಿ ಜನರನ್ನು ನೋಡಿದರೆ ಗೊತ್ತಾಗುತ್ತೆ.ಅದಕ್ಕಾಗಿಯೇ, ರೈಲ್ವೆ ಮಂತ್ರಿಯಾಗುವ ಉತ್ತರ ಭಾರತದ ಮಂದಿ ವರ್ಷಕ್ಕೆ ಹತ್ತು ರೈಲುಗಳನ್ನು ಆ ರಾಜ್ಯದ ಹಳ್ಳಿ,ಹಳ್ಳಿಗಳಿಂದ ದಕ್ಷಿಣ ಭಾರತದ ನಗರಗಳಿಗೆ ಹಾಕುತ್ತಾರೆ. ಬೀ.ಬೀ ಎಂ ಪಿ ಕೂಡ ಅವರನ್ನೇ ನೋಡಿ ಕಲಿತಿರಬೇಕು.ಅವರು ಮನುಷ್ಯರಿಗೆ ಮಾಡುವುದನ್ನು ಇವರು ನಾಯಿಗಳಿಗೆ ಮಾಡುತ್ತಾರೆ!. ಸಧ್ಯ ,ನಾಯಿಗಳಿಗೆ ಮತದಾನದ ಹಕ್ಕನ್ನು ಕೊಡುವ೦ತೆ ಯಾರೂ ಆಗ್ರಹಿಸಿಲ್ಲ. ಅಂತ ಆಲೋಚನೆ ಮನೇಕಾ ಗಾಂಧೀ ತಲೆಯಲ್ಲಿ ಇರಬಹುದು.
ಮನುಷ್ಯರ ಜನಸಂಖ್ಯೆ ಬೇಕಾದಷ್ಟಿದೆ ಹಾಳಾಗಿ ಹೋಗಲಿ ಅಂತಾ ಪ್ರಾಣಿಪ್ರಿಯರು ಉಲಿಯಬಹುದು.ಆದರೆ ಪ್ರಾಣಿಸಂಕುಲದ ಬಗ್ಗೆಯಾದರೂ ಈ ‘ದಯಾಸಂಘ’ಗಳಿಗೆ ಕೊಂಚ ಕಾಳಜಿ ಬೇಡವೇ?.
ಈ ದೇಶದ ಹಕ್ಕಿ, ಬೆಕ್ಕು,ಅಳಿಲುಗಳು ಪ್ರಾಣಿದಯಾ ಸಂಘದ ಕರುಣಾಮಯ ದೃಷ್ಟಿಗೆ ಬೀಳಲು ಏನು ಮಾಡಬೇಕು? . ....
No comments:
Post a Comment