ಬೆಳ್ಳಂಬೆಳಗ್ಗೆ ಮನೆಯ ಬಾಗಿಲು ತೆಗೆದು ಹೊರಗೆ
ಹೆಜ್ಜೆ ಇದುವಷ್ಟರಲ್ಲೇ ಮುಖಕ್ಕೆ ರಪ್ಪನೆ ಏನೋ ಬಡಿದಂತಾಯಿತು. ನೋಡಿದರೆ ಅವತ್ತಿನ ದಿನಪತ್ರಿಕೆ!.ನೋಡಿದರೆ
ಪೇಪರ್ ಹಾಕುವವ ಅಷ್ಟು ದೂರ ಹೋಗಿಯಾಗಿದೆ!,ಇದು ಇವತ್ತಿನ
ಕಥೆ ಮಾತ್ರವಲ್ಲ ಮಾರಾಯ್ರೇ ,ದಿನ ಹೀಗೆ. ಒಂದು ದಿನ ನೀರಲ್ಲಿ, ಇನ್ನೊಂದು ದಿನ ಸಜ್ಜೆಯ ಮೇಲೆ
ಎಲ್ಲೆಲ್ಲೋ ಬಿದ್ದಿರ್ತಿತ್ತು ನ್ಯೂಸ್ ಪೇಪರ್ .
ಮರುದಿನ ಆತನಿಗೆ ಕಾದು ಕುಳಿತು ಅವ ಬಂದಾಗ
ಕೇಳಿದೆ,”ಸ್ವಲ್ಪ ನೋಡ್ಕೊಂಡು ಎಸೆಯೋ ಮಾರಾಯ !
ಅವನಲ್ಲಿ ಅದೆಲ್ಲಿತ್ತೋ ರೋಷ ಅರಚಲು ಶುರು ಮಾಡಿದ “ಏನ್
ಸ್ವಾಮಿ , ನಮ್ಮ ಗಡಿಯಲ್ಲಿ ಸೈನಿಕರು ಇಂತಹಾ ಎಷ್ಟೋ ಕ್ಷಿಪಣಿ ಗಳನ್ನು ಎದುರಿಸುತ್ತಾರೆ ,ನಿಮಗೆ
ಒಂದು ದಿನ ಪೇಪರ್ ಬಿದ್ರೆ ತಡ್ಕೊಳ್ಳೋಕ್ಕಾಗಲ್ವಾ ? ..ನೀವೆಲ್ಲಾ ಮಲಗಿರುವಾಗ ನಾನು ನಾಲ್ಕು
ಘಂಟೆಗೆ ಎದ್ದು ಹತ್ತಾರು ಬೀದಿ ಸುತ್ತಿರುತ್ತೇನೆ ,ಪೇಪರ್ ಓದಿ ನೀವು ಒಂದಿಷ್ಟು ಬುದ್ದಿವಂತರಾಗಿ
ಅಂತಾ.ನಿಮಗಾಗಿ ನಾನು ಅಷ್ಟು ಕಷ್ಟ ಪಡುವಾಗ ನನ್ನ
ಮೇಲೆ ಜಗಳಕ್ಕೆ ಬರ್ತೀರಾ ? ಅನ್ನುತ್ತಾ ಹೊರಟೇ
ಹೋದ... ಸದ್ಯ ,ನನ್ನು “ದೇಶ ದ್ರೋಹಿ”
ಅಂತಾ ಕರಿಯಲಿಲ್ಲ .ಅದೇ ನನ್ನ ಪುಣ್ಯ !
ನವ್ಯಾಂತ
No comments:
Post a Comment