Friday, February 11, 2011

ಡಬ್ಬಿಂಗ್ ಎಂಬ ವರದಾನ

ಎಫ್ ಎಂ ರೇಡಿಯೋ ಕೇಳ್ತಾ ಇದ್ವಿ. ನನ್ನ ಫ್ರೆಂಡ್ 94.3 Radio One ಹಾಕಿದ್ದ. ಥೂ ..ಬರೀ ಹಿಂದಿ ಹಾಡೇ. ಬೇರೆ ಹಾಕು ಎಂದೆ. 98.3 Radio Mirchi ಹಾಕಿದ. ಜಾಕಿ ಚಿತ್ರದ ಹಾಡು. ಎಕ್ಕಾ ,ರಾಜಾ ರಾಣಿ ಅಂತಾ ಯಾವನೂ ಮೂಗಿನಲ್ಲಿ ಹಾಡುತಿದ್ದ. ಇದು ಹಿಂದಿ ಸಿಂಗರ್ರೆ!. ಎಲ್ಲೋದ್ರು ಅಷ್ಟೇ ಕಣೋ... ಅಂದ .


ಯಾವನೋ ಅವ್ನು ಅಂದೆ...ಅದಕ್ಕೆ “ಕೈಲಾಶ್ ಖೇರ್ “ ಅಂದ. ಆ ಕುಳ್ಳಗಿದ್ದಾನಲ್ಲ ಅವನಾ ಅಂದೆ. ಯೇ...ಹುಡುಗೀರು ಅವನಿಗೆ ಸಾಯ್ತಾರೆ ಗೊತ್ತಾ ಅಂದ ಕಾಣಿಯ. ಅದೆಲ್ಲಾ ಓಕೆ ,ಆದರೆ ಅವರನ್ನು ಕರ್ಕೊಂಡು ಬಂದು ನಮ್ಮ ಹುಡಿಗಿಯರು ಅವರಿಗೆ ಸಾಯುವಂತೆ ಮಾಡುವ ನಮ್ಮ ನಿರ್ದೇಶಕರ ಕ್ವಾಲಿಟಿ ಕಂಡು ಮೂಖವಿಸ್ಮಿತನಾದೆ! ನಮ್ಮಲ್ಲಿ ಹಲವು ಟಿ.ವಿ.ಗಳವರು ಹಾಡಿನ ಸ್ಪರ್ಧೆ ಏರ್ಪಡಿಸುತ್ತಾರಲ್ಲ,ಅವರೇನಾದರೂ?,ಕಾಲೇಜುಗಳಲ್ಲಿ ಹಾಡುತ್ತಾರಲ್ಲಾ ,ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾರಲ್ಲ ಅವರೇನಾದರು? ಇತ್ಯಾದಿ ಪ್ರಶ್ನೆಗಳು ನನನ್ನು ಬಾಧಿಸತೊಡಗಿದವು. ಅವರ್ಯಾರಿಗೂ ಬೆಳ್ಳಿ ತೆರೆಯಮೇಲೆ ಹಾಡುವ ಯೋಗ್ಯತೆ ಇಲ್ಲ ಎಂದು ಆ ಚಿತ್ರಗಳ ನಿರ್ದೇಶಕರು ನಿರ್ಧರಿಸಿರಬಹುದು. ಅದೇ ರೀತಿ ಇಲ್ಲಿನ ನಟರಿಗೂ ವಿಲನ್ ಪಾತ್ರ ಮಾಡುವ ಯೋಗ್ಯತೆ ಇಲ್ಲಾ, ಇಲ್ಲಿ ಒಳ್ಳೇ ನಾಯಕಿಯರು ಇಲ್ಲಾ...ಎಂಬುದು ಅವರ ಅಭಿಪ್ರಾಯ ಎಂಬೋದು ಅವರ ಕೃತ್ಯಗಳಿ೦ದಲೇ ತಿಳಿಯುತ್ತದೆ. ಈಗ ಹೇಳಿ ಕನ್ನಡ ಚಿತ್ರರಂಗದಲ್ಲಿ ಕನ್ನಡಿಗರಿಗೆ ಕೆಲಸ ಸಿಗುತ್ತಾ...ಸಿಗುತ್ತೆ ...ಒಂದೆರಡು ಕುಟುಂಬದವರಿಗೆ ಮಾತ್ರ...ಆದರೂ ನಮಗೆ ಡಬ್ಬಿಂಗ್ ಚಿತ್ರ ಬೇಡ. ಬೇರೆ ಬಾಷೆಯಿಂದ ಎಗರಿಸಿ ಅದೇ ಕಥೆಗೆ ಒಬ್ಬ ಲೋಕಲ್ ನಾಯಕನ ಮೂತಿ ಸೇರಿಸಿ ಅದೇ ಕಥೆ,ಅದೇ ವಿಲನ್,ಅದೇ ಹೀರೋಯಿನ್,ಅದೇ ಪೋಷಕ ನಟರು.... ಆದರೂ ಅದು ನಮಗೆ ಪಥ್ಯ...ಡಬ್ಬಿಂಗ್ ಆಗಿ ಆ ಚಿತ್ರದ ಪಾತ್ರಗಳೆಲ್ಲಾ ಕಸ್ತೂರಿ ಕನ್ನಡದಲ್ಲೇ ಮಾತಾಡುವಂತಾದರೆ ಅದು ಅಪಥ್ಯ. ಹೇಗಿದೆ ನೋಡಿ ನಮ್ಮ ಕನ್ನಡ ಪ್ರೇಮ! ಇಷ್ಟಿದ್ದೂ ನಾವು ಹೇಳುತ್ತೇವೆ ಹೊರರಾಜ್ಯಗಳವರಿಗೆ ಕನ್ನಡ ಕಲಿಸಿ ಎಂದು !. ಕರ್ನಾಟಕಕ್ಕೆ ಡಬ್ಬಿಂಗ್ ಬಂದದ್ದೇ ಆದರೆ, ಕಸ್ತೂರಿ ಕನ್ನಡ ರಜನಿಕಾಂತ್,ಚಿರಂಜೀವಿ,ಅಮಿತಾಬ್ ಗಳ ತುಟಿಯಲ್ಲಿ ರಾರಾಜಿಸತೊಡಗಿದರೆ ಅವರ ಅಭಿಮಾನಿಗಳೂ ಕನ್ನಡ ಚಿತ್ರ ನೋಡುತ್ತಾರೆ,ಕನ್ನಡ ಕಲಿಯುತ್ತಾರೆ,ಆಗ ಅವರು ಆಡುವ ಕನ್ನಡ ಹಾಡುಗಳಿಗೆ ಒಂದು ಅರ್ಥ ಇರುತ್ತದೆ.

ಈ ಹಿಂದಿ,ತಮಿಳು,ತೆಲುಗು ಚಿತ್ರಗಳನ್ನು ನೋಡುವುದು ನಮಗೆ ಒಂದು ಅನಿವಾರ್ಯತೆಯಾಗಿಬಿಡುತ್ತೆ. ರೋಬೋಟ್ ನಲ್ಲಿ ರಜನಿ ಏನು ಮಾಡಿರಬಹುದು ಎಂಬ ಕುತೂಹಲ...ಕಮಲಹಾಸನ್ ಹೊಸ ಪ್ರಯೋಗಗಳ ಬಗ್ಗೆ ಅಚ್ಚರಿ ಇವೆಲ್ಲಾ ನಮ್ಮನ್ನು ಪರಬಾಷಾ ಚಿತ್ರಗಳತ್ತ ಎಳೆಯುತ್ತವೆ. ಚಿತ್ರ ನೋಡುತ್ತಾ ನೋಡುತ್ತಾ ನಮಗರಿವಿಲ್ಲದಂತೆ ಆ ಭಾಷೆ ಕಲಿತುಬಿಟ್ಟಿರುತ್ತೇವೆ.

ಇವೆಲ್ಲಾ ಪಾಲಿಸಿ ಮ್ಯಾಟರ್ಸ್. ಹೋಗಲಿ...ಕನ್ನಡ ದೊಡ್ಡ ಬಾಷೆ. ಹೇಗೋ ಉಳಿದುಕೊಳ್ಳುತ್ತೆ.ತುಳು,ಕೊಡವ ಇತ್ಯಾದಿ ಚಿಕ್ಕ ಭಾಷೆಗಳ ಬಗ್ಗೆ ಏನು ಮಾಡುವುದು ? ಅವರಾದರೂ ಅವರ ಬಾಷೆಯಲ್ಲಿ ಡಬ್ಬಿಂಗ್ ಆರಂಬಿಸಿ ಅವರ ನಶಿಸುತ್ತಿರುವ ಭಾಷೆಯನ್ನ ಕಾಪಾಡಿಕೊಳ್ಳಬಹುದು. ಯಾಕೆಂದರೆ ಅವರದು ವ್ಯವಹಾರದಲ್ಲಿ ಸಾರ್ವರ್ತಿಕವಾಗಿ ಉಪಯೋಗಿಸಲ್ಪಡುವ ಭಾಷೆಯಲ್ಲ. ಅದು ಕೇವಲ ಆಡು ಬಾಷೆಯಷ್ಟೇ. ಅದು ಅಲ್ಲಿನ ಜನರಿಗೆ ಮನರಂಜನೆಯ ವಾಹಕವಾಗಿ ಮಾತ್ರ ಉಪಯೋಗಕ್ಕೆ ಬರುತ್ತದೆ. ಅದುದರಿಂದ ಯಾರಾದರೂ ಮುಂದೆ ಬಂದು ತುಳು/ಕೊಡವ ಇತ್ಯಾದಿ ಭಾಷೆಗಳಿಗೆ ಇತರ ಭಾಷೆಯ ‘ಹಿಟ್’ ಚಿತ್ರಗಳನ್ನು ಡಬ್ ಮಾಡಿದರೆ ಈ ಭಾಷೆಗಳ ಉಳಿವಿಗೆ ತುಂಬಾ ಸಹಾಯವಾಗುತ್ತದೆ.

3 comments:

Unknown said...

kannadigarannu jnana padeyuvudarinda dooravagisuva unnaravaagide hegendare Animal planet discovery NG munthada channelgalalli bere bere bhashealli needutthiruvaaga aa janarige(jaathi yalla?)jnana siguvaaga kannadigarannu vanchisuvudu yaava nyaya thangalanna thandu chitranna maadi badisuva ee mandi yinda sukhavilla

sudhakarvidyasandra said...

kannadigarannu jnana padeyuvudarinda dooravagisuva unnaravaagide hegendare Animal planet discovery NG munthada channelgalalli bere bere bhashealli needutthiruvaaga aa janarige(jaathi yalla?)jnana siguvaaga kannadigarannu vanchisuvudu yaava nyaya thangalanna thandu chitranna maadi badisuva ee mandi yinda sukhavilla

ಅರುಣ್ ಜಾವಗಲ್ said...

ಡಬ್ಬಿಂಗ್ ಬೇಕು/ಬೇಡ ಅನ್ನೋದನ್ನ ಪ್ರೇಕ್ಷಕ ನಿರ್ಧಾರ ಮಾಡ್ಲಿ-http://arunaraaga.blogspot.com/2011/04/blog-post_19.html