Wednesday, January 13, 2010

ಕೋಪನ್ ಹೇಗನ್ ನಾಟಕ

ಕೋಪೆನ್ಹೇಗನ್ನಲ್ಲಿ ನಡೆದ ಶೃಂಗ ಸಭೆಯಲ್ಲಿ ಏನೂ ಹೊಸದಿಲ್ಲ.ಇಂತಹದು ಹಿಂದೆಯೂ ನಡೆದಿರುತ್ತದೆ. ಮುಂದೆಯೂ ನಡೆಯುತ್ತದೆ. ರಾಜಸ್ತಾನದಲ್ಲಿ "ರುಡಾಲಿ"ಎಂಬ ಜನಗಳಿದ್ದಾರೆ. ಸಾವು ಸಂಬವಿಸಿದ ಮನೆಗೆ ಹೋಗಿ ಅಳುವುದು ಇವರ ಕೆಲಸ. ಇವರ ಅಳು ಬಹಳ ನೈಜವಾಗಿ ಕಾಣುತ್ತದೆ. ಕೊಪೇನ್ಹೇಗನ್ ನಲ್ಲಿ ಇವರು ಮಾಡಿದ್ದೂ ಅದೇ ಕೆಲಸ.ಒಟ್ಟಿಗೆ ಸೇರಿ ಮೊಸಳೆ ಕಣ್ಣೀರು ಸುರಿಸುತ್ತ ಪರಸ್ಪರ ಆರೋಪ ಮಾಡುತ್ತಾ ಕಾಲಕ್ಷೆಪಮಾಡಿದ್ದು. 
ನಮ್ಮ ಸರ್ಕಾರದ ಸೆಕ್ರೆಟರಿಗಳು ನಾ ಮುಂದೆ ,ನೀ ಮುಂದೆ ಎನ್ನುತ್ತಾ ಲಾಬ್ಬಿ ಮಾಡಿಕೊಂಡು ವಿದೇಶಿ ಶ್ರುಂಗಸಬೆಗಳಿಗೆ ಹೋಗುತ್ತಾರೆ.ಸಕತ್ತಾಗಿ ಬಾಷಣ ಬಿಗಿಯುತ್ತಾರೆ,(ಹಿಂದೆ ಕೃಷ್ಣ ಮೆನನ್ ವಿಶ್ವ ಸಂಸ್ತೆಯಲ್ಲಿ ಮಾಡಿದಂತೆ).ಆದರೆ ಯಾವನಾದರೂ ನನಗೆ ಕಾರು ಬೇಡ ಅಂತಲೋ, ನಾವು ಇಲಾಖೆ ಎಲ್ಲರೂ ಸೇರಿ ಕಾರ್ ಪೂಲ್ ಮಾಡುತ್ತೇವೆ ಅನ್ತಲೋ ಹೇಳುವುದಿಲ್ಲ. ಒಬ್ಬೋಬನಿಗೂ ಕಾರು ಬೇಕು,ಹವಾನಿಯಂತ್ರಿತ ಕೋಣೆಯೇ ಬೇಕು!.ಇವರಿಂದ ತೃತೀಯ ಜಗತ್ತಿನ ಹಕ್ಕುಗಳ ಬಗ್ಗೆ ಪ್ರಚಂಡ ಪ್ರತಿಪಾದನೆ.ಹಿಂತಿರುಗಿದ ನಂತರ ಒಬ್ಬ ಪ್ರೊಫೆಸರ್ ನನ್ನು ಹಿಡಿದು ಒಂದು "ಬಿಲ್" ರೆಡಿ ಮಾಡುತ್ತಾರೆ.ಒಬ್ಬ ಮಂತ್ರಿಯನ್ನು ಒಪ್ಪಿಸಿ ಬಿಲ್ ಟೇಬಲ್ ಮಾಡಿಸುತ್ತಾರೆ.ಆಡಳಿತ ಪಕ್ಷದ ಕುರಿಗಳು ಬಿಲ್ಲನ್ನು ಯಾವುದೇ ತಕರಾರಿಲ್ಲದೆ ಪಾಸು ಮಾಡುತ್ತಾರೆ. ಆಮೇಲೆ ಪರಿಸರ ರಕ್ಷಣೆಗೆ ಬಜೆಟ್ ನಲ್ಲಿ ಹಣ ಬರುತ್ತದೆ. ಐ ಏ ಎಸ್ಸು ಗಳಿಗೆ,ಪ್ರೊಫೆಸರರುಗಳಿಗೆ ಮಜವೇ ಮಜಾ!...ವಿದೇಶಿ ಯಾತ್ರೆ...ಪೇಪರ್ ಮಂಡನೆ..ಇತ್ಯಾದಿ. ಇದರಿಂದ ಬರೊ  ಬತ್ಯೆಯಿಂದ ಒಂದು ಕಾರಂತೂ ಖರೀದಿ  ಮಾಡೋದು ಗ್ಯಾರೆಂಟಿ. ಪರಿಸರಕ್ಕೆ ಜೈ!.

 ರಾಮನಗರದ ಕಲ್ಲುಗಳು ಲೋಡುಗಟ್ಟಲೆ ಬಂದು ವಿದಾನಸೌಧದ ಸುತ್ತ pavement  ಆದರೆ ಪರವಾಗಿಲ್ಲ. ಬಡ ಬೋರೆಗೌಡ ಮನೆಯ ನೆಲಕ್ಕೆಂದು ಒಂದು ಸೈಜುಗಲ್ಲು ಕಿತ್ತರೆ ಅವನಮೇಲೆ ಕೇಸು ಹಾಕುತ್ತಾರೆ. BBMP ಚುನಾವಣೆ ಬಂತೆಂದು ಬೆಂಗಳೊರಿನ  ಕಂಡ ಕಂಡ ರಸ್ತೆಗೆಲ್ಲಾ ಟಾರು ಹಾಕುತ್ತಿರುವಾಗ ,ಚೆನ್ನಾಗಿದ್ದ ಚರಂಡಿ ಕಿತ್ತು ಹೊಸ ಚಪ್ಪಡಿ ಹಾಕುವಾಗ ಪರಿಸರದ ನೆನಪು ಬರುವುದಿಲ್ಲ. ಮೈಸೂರಿನ ಲಲಿತಮಹಲ್ ರಸ್ತೆಯಲ್ಲಿ ಅಪಘಾತವಾಗುತ್ತಿರುವ ನೆಪವೊಡ್ಡಿ ಇಪ್ಪತೈದು ಮರ ಕಡಿದಾಗ ಪರಿಸರ ಏನು ಆಗುವುದಿಲ್ಲ.ಆದರೆ ಬಡ ಆಟೋರಿಕ್ಷದವನು ಮಾತ್ರ ಹಸಿರು ಬಣ್ಣ ಹಾಕಬೇಕು..ಜನರೆಲ್ಲಾ ಸೈಕಲ್ ನಲ್ಲಿ ಓಡಾಡಬೇಕು ! ಮರ ನೆಡಬೇಕು!.
ನಮ್ಮ ವಿಶ್ವವಿದ್ಯಾನಿಲಯದ "ವೀಸಿ"ಯೊಬ್ಬ  ಪರಿಸರದ ಬಗ್ಗೆ  ಬಾರಿ ಗಂಟಲು ಹರಿದುಕೊಳ್ಳುತಿದ್ದ. ಸರ್ಕಾರದಿಂದ ಅನುದಾನ ಬರುತ್ತಲೇ ಸುಮಾರು ಮರಗಳನ್ನು ಕಡಿಸಿ ಆಡಿಟೋರಿಯಂ ಕಟ್ಟಿಸಿದ. university ಸುತ್ತಾ ಹಲವಾರು ಕಿಲೋಮೀಟರು ಗಳಷ್ಟು ಕಂಪೌಂಡು ಕಟ್ಟಿಸಿದ.ಇವತ್ತು ಪರಿಸರ ಸಂಬಂಧಿ ಸಂವಾದಗಳನ್ನ ಉದ್ಗಾಟಿಸುವವರು ಇಂತಾ ಸೂಳೆಮಕ್ಕಳೇ. ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು ಯುವಜನತೆಗೆ ಸಂದೇಶ ನೀಡಲು ಹಾಜರಾಗಿಬಿಡುತ್ತಾರೆ!. ಇನ್ನೊಮ್ಮೆ ಯಾವನಾದರೂ ತಜ್ಞ ಪರಿಸರದ ಬಗ್ಗೆ ಹೇಳಕ್ಕೆ ಬಂದರೆ ನಾವು ಹೇಳಬೇಕಾದುದು ಇಷ್ಟೇ "@#%ಮಗನೆ..ನಿನ್ನ ಕೆಲಸ ನೋಡಿಕೋ ಹೋಗು".
ಇನ್ನೊಬ್ಬ ಬಂದ "ಪ್ಲಾಸ್ಟಿಕ್ ಉಪಯೋಗ ನಿಲ್ಲಿಸಿ .ಮುಂದಿನ ಪೀಳಿಗೆ ಉಳಿಸಿ!
ನಾನು ಹೇಳಿದೆ  "ನಿನಗೆ ಪ್ಲಾಸ್ಟಿಕ್ ನಿಂದ ತೊಂದರೆ ಅನ್ನಿಸಿದರೆ ರಬ್ಬರ್ (ಕಾಂಡೋಮ್) ಉಪಯೋಗಿಸು.ಆಗ ನಿನ್ನ ಮುಂದಿನ ಪೀಳಿಗೆಗೆ ತೊದರೆಯೇ ಇರುವುದಿಲ್ಲ!. 
ಗಾಂಧೀ ಹೇಳುತ್ತಿದ್ದರಂತೆ "ಪ್ರಕೃತಿ ಮನುಷ್ಯನ ಆಸೆಗಳನ್ನೆಲ್ಲಾ ಪೂರೈಸಬಲ್ಲದು ,ಆದರೆ ದುರಾಸೆಗಳನ್ನಲ್ಲ.
ಆದರೆ ಮನುಷ್ಯನ ಆಸೆಗಳು ಅವಶ್ಯಕತೆಗಳು ಬದಲಾಗಿವೆ. ಇಂದು ಯಾರೂ ಗಾಂಧಿಜಿಯವರಂತೆ ಬದುಕುತ್ತಿಲ್ಲ.(ಅದನ್ನು ಬದುಕು ಎಂದು ಕರೆಯುವುದು ಸಾಧ್ಯವಿಲ್ಲ)ಅವರ ಆಪ್ತರಾದ ನೆಹರೂ ರಂತವರಿಗೆ ಅದು ರುಚಿಸಲಿಲ್ಲ ಎಂದ ಮೇಲೆ ಅದು ಇಂದಿನವರಿಗೆ ರುಚಿಸೀತೆ?.
ಇಂದು ಮನುಷ್ಯನ ಅವಶ್ಯಕತೆಗಳು,ಆಕಾಂಕ್ಷೆಗಳು ಜಾಸ್ತಿಯಾಗಿವೆ. ಒಬ್ಬ ಮನುಷ್ಯ ಎಂದರೆ ಒಂದು ಮನೆ,ಒಂದು ಕಾರು,ಏ.ಸಿ .,ಫ್ರಿಡ್ಜು. ಇತ್ಯಾದಿ.ಜೊತೆಗೆ ಅವನ ಕಾರಿಗೆ ಪಾರ್ಕಿಂಗ್ ಸ್ಪೇಸು. ಮನುಷ್ಯ ಬೆಳೆದಿದ್ದಾನೆ.ಅವನ ಅವಶ್ಯಕತೆಗಳೂ ಬೆಳೆದಿದೆ.ಬೆಳೆಯುವುದು ಪ್ರಕೃತಿಯ ನಿಯಮ. ಆಕಾಶವನ್ನು ಮೇಲೆ ನೂಕ  ಬೇಕಾಗುತ್ತದೆ (ಗಗನಚುಂಬಿ ಕಟ್ಟಡದ ಮೂಲಕ),ಸಾಗರವನ್ನು ಹಿಂದಕ್ಕೆ ನೂಕಬೇಕಾಗುತ್ತದೆ. ಪ್ರಕೃತಿಗೇ ತೊಂದರೆಯಾಗುತ್ತದೆ ಎಂದು ಯಾರೂ ಸನ್ಯಾಸಿಯಾಗುವುದಿಲ್ಲ.ಹಾಗೆ ಸನ್ಯಾಸಿಗಲಾಗುವವರಿಂದ ಪರಿಸರಕ್ಕೆ ತೊಂದರೆ ಇನ್ನು ಹೆಚ್ಚು. ಖಾವಿ ಹಾಕಿದ ಮರುದಿನವೇ ನಾವು ಇಂಜಿನಿಯರಿಂಗು /ಮೆಡಿಕಲ್ಲು ಕಾಲೇಜು ಮಾಡುತ್ತೇವೆ ಎಂದು ನೂರಾರು ಎಕರೆ ಜಮೀನನ್ನು ಕಾಂಕ್ರೀಟ್ ಕಾಡು ಮಾಡುತ್ತಾರೆ.
ಆದುದರಿಂದ ನಾವು  ನಮ್ಮ ಸಾವನ್ನು ಒಪ್ಪಿಕೊಂಡಂತೆ ಬೂಮಿ ಅಂತ್ಯವಾಗುವ ಸಾಧ್ಯತೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ.ನಾವು ಮಾಲಿನ್ಯ ನಿಲ್ಲಿಸಿದರೆ ಅದು ನೂರು ವರ್ಷ ಹೆಚ್ಚು ಬಾಳಬಹುದು ಅಷ್ಟೇ,ಸಿಗರೇಟು ಸೇದುವವನು ಅದನ್ನು ಬಿಟ್ಟರೆ ಒಂದೆರಡು ವರ್ಷ ಹೆಚ್ಚು ದಿನ ಬಾಳುವಂತೆ!.ಬೂಮಿಯ ಅಂತ್ಯಕ್ಕೆ ಹೆದರಿ ಸಾಯುತ್ತಾ ಬದುಕುವುದಕ್ಕಿಂತಾ,ಒಮ್ಮೆ ಚೆನ್ನಾಗಿ ಬಾಳಿ ಸಾಯುವುದು ಲೇಸಲ್ಲವೇ?
ಬಡವರು ಐಶಾರಾಮಿ ವಸ್ತುಗಳ ವ್ಯಾಮೋಹ ತೊರೆಯಬೇಕು ,ಎಲ್ಲರೂ ಆಸೆಗಳನ್ನೆಲ್ಲಾ ತ್ಯಜಿಸಬೇಕು ಎಂದು ಪ್ರತಿಪಾದಿಸುವವರೆಲ್ಲಾ ಆ ಆಸೆಗಳನ್ನು ಪೂರೈಸಿಕೊಂಡವರೆ. ಅವರ ಹಿಂಬಾಲಕರು ಮಾತ್ರ ಬಡಜನ. ಎಲ್ಲರೂ ಅವರ ಸುತ್ತಲಿನ ಸಣ್ಣ ಪುಟ್ಟ ಆಸೆಗಳನ್ನು ನಿಗ್ರಹ ಮಾಡಿಕೊಂಡು ಬದುಕಬೇಕೆನ್ನುವ ಜನಕ್ಕೆ ಅವರ ಸ್ವಂತದ "ಪೀಳಿಗೆ" ಯ ಉಪಯೋಗಕ್ಕಾಗಿ ಭೂಮಿ ಅಜರಾಮರವಾಗಿ ಉಳಿಯಬೇಕೆಂಬ ದುರಾಸೆ ಏಕೆ?!. ಇಲ್ಲದೆ ಇರುವವರ  ಉಪಯೋಗಕ್ಕಾಗಿ ಇರುವವರ ಬದುಕನ್ನು ಕಿತ್ತುಕೊಳ್ಳಬೇಕೇ?

No comments: